ಭಾರತೀಯರು ಚಿನ್ನ ಪ್ರಿಯರು. ಅದರಲ್ಲೂ ಬೆಂಗಳೂರಿನ ಜನರೂ ಚಿನ್ನದ ವ್ಯಾಮೋಹ ಹೊಂದಿದ್ದಾರೆ. ಇದೀಗ ಚಿನ್ನದ ಬೆಲೆ ಇಳಿಕೆಯಿಂದ (Gold Price Fall) ಬೆಂಗಳೂರಿನ ಜನರಿಗೂ ಸಿಹಿಸುದ್ದಿ ಸಿಕ್ಕಂತಾಗಿದೆ. ಕಳೆದೆರದು ದಿನದಿಂದ ಚಿನ್ನದ ಬೆಲೆ ಏರಿಕೆ ಕಂಡಿತ್ತು. ಆದ್ರೆ ಇಂದು ಬೆಂಗಳೂರಿನಲ್ಲಿ ಚಿನ್ನದ ಬೆಲೆ ಭಾರೀ (Bangalore Gold Rate) ಇಳಿಕೆಯಾಗಿದೆ. ಹಾಗಿದ್ರೆ ಇಂದು ಚಿನ್ನದ ಬೆಲೆ ಎಷ್ಟಿದೆ ಅನ್ನೋದರ ಮಾಹಿತಿ ಇಲ್ಲಿದೆ ಓದಿ.

ಬೆಂಗಳೂರಿನಲ್ಲಿ 24K ಚಿನ್ನದ ಬೆಲೆ:
ಬೆಂಗಳೂರಿನಲ್ಲಿ 24K ಚಿನ್ನದ 1 ಗ್ರಾಂ ಬೆಲೆ ಇಂದು ಒಂದು ಗ್ರಾಂ ಚಿನ್ನದ ಬೆಲೆ 12,508 ರೂ. ಆಗಿದೆ. ನಿನ್ನೆ 12,704 ರೂ. ಇತ್ತು. ನಿನ್ನೆಗಿಂತ ಇಂದು ₹196 ರೂ. ಇಳಿಕೆ ಕಂಡಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ 1,00,064 ರೂ. ಆಗಿದ್ದು, ನಿನ್ನೆ 1,01,632 ರೂ. ಇತ್ತು. ಈ ಮೂಲಕ ಒಂದೇ ದಿನ 1,568 ರೂ. ಇಳಿಕೆ ಕಂಡಿದೆ. ಇನ್ನು 10 ಗ್ರಾಂ ಚಿನ್ನದ ಬೆಲೆ ಇಂದು 1,25,080 ರೂ. ಆಗಿದ್ದು, 100 ಗ್ರಾಂ ಚಿನ್ನದ ಬೆಲೆ ಇಂದು 12,50,800 ರೂ. ಆಗಿದೆ.
ಬೆಂಗಳೂರಿನಲ್ಲಿ 22K ಚಿನ್ನದ ಬೆಲೆ:
22K ಚಿನ್ನದ ಇಂದು 1 ಗ್ರಾಂ ಬೆಲೆ 11,465 ರೂ. ಆಗಿದ್ದು, ನಿನ್ನೆ 11,645 ರೂ. ಇತ್ತು. ಒಟ್ಟು ₹180 ರೂ. ಇಳಿಕೆ ಕಂಡಿದೆ. ಇನ್ನು 8 ಗ್ರಾಂ ಚಿನ್ನದ ಬೆಲೆ ಇಂದು 91,720 ರೂ. ಆಗಿದ್ದು, ನಿನ್ನೆ 93,160 ರೂ. ಇತ್ತು. ಒಟ್ಟು 1,440 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ರೂ. 1,14,650 ನಷ್ಟು ಆಗಿದ್ದು, ನಿನ್ನೆಗಿಂತ ಇಂದು 1,800 ರೂ. ಇಳಿಕೆ ಕಂಡಿದೆ. 100 ಗ್ರಾಂ ಚಿನ್ನದ ಬೆಲೆ ಇಂದು 11,46,500 ರೂಪಾಯಿ ಆಗಿದ್ದು, ನಿನ್ನೆ 11,64,500 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ಒಟ್ಟು 18,000 ರೂ. ಇಳಿಕೆಯಾಗಿದೆ.
18K ಚಿನ್ನದ ಬೆಲೆ ಹೇಗಿದೆ?
ಬೆಂಗಳೂರಿನಲ್ಲಿ ಇಂದು 18K ಚಿನ್ನದ 1 ಗ್ರಾಂ ಬೆಲೆ 9,381 ರೂಪಾಯಿಯಾಗಿದೆ. ಅಂದರೆ ನಿನ್ನೆಗೆ ಹೋಲಿಸಿದ್ರೆ ಇಂದು ಕೇವಲ ₹147 ರೂ. ಇಳಿಕೆ ಕಂಡಿದೆ. ಹಾಗೆಯೇ 8 ಗ್ರಾಂ ಚಿನ್ನದ ಬೆಲೆ ಇಂದು 75,048 ರೂ. ಆಗಿದೆ. ಅದೇ ನಿನ್ನೆ 76,224 ರೂ. ಇತ್ತು. ಅದೇ ರೀತಿ 10 ಗ್ರಾಂ ಚಿನ್ನದ ಬೆಲೆ ಇಂದು 95,280 ರೂ. ಆಗಿದ್ದು, 100 ಗ್ರಾಂ ಚಿನ್ನದ ಬೆಲೆ 9,38,100 ರೂ. ಆಗಿದೆ.
ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ:
ಇನ್ನು ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಕೂಡಾ ಭಾರೀ ಇಳಿಕೆಯಾಗಿದೆ. ಅಂದರೆ ಇಂದು 1 ಗ್ರಾಂ ಬೆಳ್ಳಿದರ ₹169 ರೂ ಆಗಿದ್ದು, ನಿನ್ನೆ 173.10 ರೂ. ಇತ್ತು. ಈ ಮೂಲಕ ಒಂದೇ ದಿನ ಒಟ್ಟು 4.10 ರೂ. ಇಳಿಕೆಯಾಗಿದೆ. ಅದೇ ರೀತಿ 8 ಗ್ರಾಂ ಬೆಳ್ಳಿ ಬೆಲೆ ಇಂದು ₹1,352 ರೂ. ಆಗಿದ್ದು, ನಿನ್ನೆ ₹1,384.80 ರೂ. ಇತ್ತು. ಈ ಮೂಲಕ 32.80 ರೂ ಇಳಿಕೆಯಾಗಿದೆ. ಇನ್ನು 1 ಕಿಲೋ ಬೆಳ್ಳಿ ಬೆಲೆ ಇಂದು ಬೆಂಗಳೂರಿನಲ್ಲಿ ₹1,69,000 ರೂ ಆಗಿದ್ದು, ಒಟ್ಟು 4,100 ರೂ. ಇಳಿಕೆಯಾಗಿದೆ.
ಸ್ಪಾಟ್ ಗೋಲ್ಡ್ ವಿವರ:
ನವೆಂಬರ್ 14ರ ರಾಯಿಟರ್ಸ್ ವರದಿ ಪ್ರಕಾರ, ಚಿನ್ನದ ಬೆಲೆ ಇತ್ತೀಚೆ ಕಡಿಮೆಯಾಗಿದ್ದು, ಬೆಲೆ ಏರಿಕೆಯಿಂದಾಗಿ ಮಾರುಕಟ್ಟೆ ಬೆಳವಣಿಗೆ ಸ್ವಲ್ಪ ಕುಸಿತ ಕಂಡಿತ್ತು. ಭಾರತದಲ್ಲಿ ಇಳಿಕೆ ಪ್ರಮಾಣ 5 ತಿಂಗಳಲ್ಲಿ ಗರಿಷ್ಠ ಮಟ್ಟವನ್ನು ತಲುಪಿದೆ ಎನ್ನಲಾಗಿದೆ.
GMT 1933 ಮಧ್ಯಾಹ್ನ 02:33ರ ಹೊತ್ತಿಗೆ ಸ್ಪಾಟ್ ಚಿನ್ನದ ದರವೂ ಪ್ರತೀ ಔನ್ಸ್‌ಗೆ 1.9% ರಷ್ಟು ಕುಸಿದು $4,092.72 ಕ್ಕೆ ತಲುಪಿದೆ.


Click it and Unblock the Notifications