ಬೆಂಗಳೂರಿನಲ್ಲಿ ಚಿನ್ನದ ಬೆಲೆ, ಜನವರಿ 27: 22k/100g ಚಿನ್ನದ ಬೆಲೆ 1,500 ರೂ. ಇಳಿಕೆ!

ಬೆಂಗಳೂರಿಗರಿನಲ್ಲಿ ಇಂದು ಚಿನ್ನದ ಬೆಲೆ ಇಳಿಕೆಯಾಗಿದೆ. ಬಹುದಿನಗಳಿಂದ ಕಾಯುತ್ತಿದ್ದ ಬೆಂಗಳೂರಿಗರಿಗೆ ಇಂದು ಸಿಹಿ ಸುದ್ದಿ ಸಿಕ್ಕಿದೆ. ಬಹುದಿನಗಳಿಂದ ಚಿನ್ನದ ಬೆಲೆ ಏರಿಕೆಯಿಂದ ನಿರಸೆಗೊಂಡಿದ್ದ ಜನರಿಗೆ ಶುಭ ಸುದ್ದಿ ಸಿಕ್ಕಿದೆ. ಇಂದು ಚಿನ್ನದ ದತ ಇಳಿಕೆಯಾಗಿರುವುದರಿಮದ ಚಿನ್ನದ ಖರೀದಿಗೆ ಇಂದೇ ಸೂಕ್ತ ದಿನವಾಗಿದೆ. ಯುಎಸ್‌ ಡಾಲರ್‌ ಬಲವರ್ಧನೆಯಿಂದಾಗಿ ಚಿನ್ನದ ಬೆಲೆ ಏರಿಕೆಯಾಗಿತ್ತು. ಇಂದು ಡಾಲರ್‌ ದರದಲ್ಲಿ ಏರಿಳಿತಗಳನ್ನ ಕಂಡ ನಂತರ ಇದು ಚಿನ್ನದ ದರದ ಮೇಲೂ ಕೂಡ ಪರಿನಾಮ ಬೀರಿದೆ.

ಜನವರಿ 27 ರಂದು, ಬೆಂಗಳೂರಿನಲ್ಲಿ ಚಿನ್ನದ ಬೆಲೆ ಇಳಿಕೆಯಾಗಿದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 150 ರೂ. ಇಳಿಕೆಯಾಗಿ 75,400 ರೂ. ಆಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 170 ರೂ. ಇಳಿಕೆಯಾಗಿ 82,250 ರೂ. ಆಗಿದೆ. ಬೆಂಗಳೂರಿನಲ್ಲಿ 18 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 130 ರೂ. ಇಳಿಕೆಯಾಗಿ 61,690ರೂ. ಆಗಿದೆ.

ಬೆಂಗಳೂಗರಿಗೆ ಸಿಹಿ ಸುದ್ದಿ! ಮತ್ತೆ ಚಿನ್ನದ ದರ ಇಳಿಕೆ!

ಹಾಗೆ 22 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ 1,500 ರೂ. ಇಳಿಕೆಯಾಗಿ 7,54,000 ರೂ. ಆಗಿದೆ. 24 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ 1,700 ರೂ. ಇಳಿಕೆಯಾಗಿ 8,22,500 ರೂ. ಆಗಿದೆ. 18 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ 1,300 ರೂ. ಇಳಿಕೆಯಾಗಿ 6,16,900 ರೂ. ಆಗಿದೆ.

ಬೆಂಗಳೂರಿನಲ್ಲಿ ಬೆಳ್ಳಿ ದರಗಳು

ಬೆಂಗಳೂರಿನಲ್ಲಿ ಬೆಳ್ಳಿ ಬೆಲೆಗಳು ಕೂಡ ಇಂದು ಇಳಿಕೆಯಾಗಿದೆ. ಚಿನ್ನದ ಬೆಲೆ ಜೊತೆ ಜೊತೆಗೆ ಬೆಳ್ಳಿ ಬೆಲೆ ಕೂಡ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿ ಬೆಲೆ 1 ರೂ. ಇಳಿಕೆಯಾಗಿ 96.50ರೂ. ಆಗಿದೆ. ಹಾಗೆ 1 ಕಿಲೋ ಗ್ರಾಂ ಬೆಳ್ಳಿ ಬೆಲೆ 1,000 ರೂ. ಇಳಿಕೆಯಾಗಿ 96,500ರೂ. ಆಗಿದೆ.

ಭಾರತದ ಪ್ರಮುಖ ನಗರಗಳಲ್ಲಿ ಇಂದು ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇಂದು ಇಳಿಕೆಯಾಗಿದೆ. 22k ಮತ್ತು 24k ಚಿನ್ನದ ಬೆಲೆಗಳು ಎಷ್ಟಿವೆ ಎಂದು ಇಲ್ಲಿ ತಿಳಿಯಿರಿ.

ಭಾರತದ ಕೆಲವು ಮೆಟ್ರೋಪಾಲಿಟನ್ ನಗರಗಳಲ್ಲಿನ ಚಿನ್ನದ ಬೆಲೆಗಳ ವಿವರ:

ನಗರಗಳು22ಕ್ಯಾರೆಟ್‌ 24ಕ್ಯಾರೆಟ್‌
ದೆಹಲಿ 75,550 82,400
ಮುಂಬೈ 75,400 82,250
ಚೆನ್ನೈ 75,400 82,250
ಕೋಲ್ಕತ್ತಾ 75,400 82,250

MCX ಗೋಲ್ಡ್ ಔಟ್‌ಲುಕ್ ಮತ್ತು ಸಿಲ್ವರ್‌ ಔಟ್‌ಲುಕ್

MCX ಚಿನ್ನದ ಬೆಲೆಗಳು ಮತ್ತು ಬೆಳ್ಳಿ ಬೆಲೆಗಳು ಇಳಿಕೆಯಾಗಿದೆ. ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX), ಫೆಬ್ರವರಿ 5, 2025 ರ ವಿತರಣೆಯ ಚಿನ್ನದ ಭವಿಷ್ಯ ನೋಡೋದಾದ್ರೆ, 10 ಗ್ರಾಂ ಚಿನ್ನಕ್ಕೆ 0.26% ನಷ್ಟು ಇಳಿಕೆಯಾಗಿ 79,820 ರೂ. ಆಗಿದೆ. ಮಾರ್ಚ್ 5, 2025ರ ಬೆಳ್ಳಿ ಭವಿಷ್ಯವು 1.01% ನಷ್ಟು ಇಳಿಕೆಯಾಗಿ 90,678 ರೂಪಾಯಿ ವಹಿವಾಟು ನಡೆಸುತ್ತಿದೆ. ಬೌಗೋಳಿಕ ಜಾಗತಿಕ ಉದ್ವಿಗ್ನತೆಗಳು, ಕರೆನ್ಸಿ ವಿನಿಮಯ ದರಗಳು ಮತ್ತು ದೇಶೀಯ ಮತ್ತು ಅಂತರರಾಷ್ಟ್ರೀಯ ಎರಡೂ ಅಸ್ಥಿರಗಳಿಂದ ಚಿನ್ನದ ಬೆಲೆಗಳು ಈ ತಿಂಗಳಿನಲ್ಲಿ ಏರಿಳಿತಗಳನ್ನ ಗಮನಿಸುವಂತಾಯಿತು. ಹಳದಿ ಲೋಹಕ್ಕೆ ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗ್ತಿದೆ.

ಸ್ಪಾಟ್‌ ಚಿನ್ನದ ಭವಿಷ್ಯ

ಸ್ಪಾಟ್‌ ಚಿನ್ನ ಮತ್ತು ಬೆಳ್ಳಿ ದರಗಳು ಇಂದು ಇಳಿಕೆಯಾಗಿವೆ. ವರದಿ ಪ್ರಕಾರ ಸ್ಪಾಟ್‌ ಚಿನ್ನದ ಬೆಲೆಯು ಪ್ರತಿ ಔನ್ಸ್‌ಗೆ 0.54% ಇಳಿಕೆಯಾಗಿ 2,756.45 ಡಾಲರ್‌ ತಲುಪಿದೆ. ಇತ್ತ ಸ್ಪಾಟ್ ಬೆಳ್ಳಿ ಭವಿಷ್ಯವು ಪ್ರತಿ ಔನ್ಸ್‌ಗೆ 1.05% ಇಳಿಕೆಯಾಗಿ 30.29 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದೆ. ಪ್ಲಾಟಿನಮ್‌ ಬೆಲೆಯು ಪ್ರತಿ ಔನ್ಸ್‌ಗೆ 0.11% ಇಳಿಕೆಯಾಗಿ 946.75 ಡಾಲರ್‌ ತಲುಪಿದೆ. ಪಲ್ಲಾಡಿಯಂ ಬೆಲೆಯು ಪ್ರತಿ ಔನ್ಸ್‌ಗೆ 1.22% ಇಳಿಕೆಯಾಗಿ 973.00 ಡಾಲರ್‌ ತಲುಪಿದೆ. ರಾಯಿಟರ್ಸ್‌ ವರದಿ ಪ್ರಕಾರ ಯುಎಸ್‌ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ವ್ಯಾಪಾರ ನೀತಿಗಳು ಮತ್ತು ಯುಎಸ್‌ ಡಾಲರ್‌ ಅನಿಶ್ಚಿತತೆಗಳ ನಡುವೆ ಚಿನ್ನದ ದರಗಳು ನಿನ್ನೆ ಸಾಕಷ್ಟು ಎರಿಕೆಯನ್ನ ಕಂಡಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+