ಬೆಂಗಳೂರಿನಲ್ಲಿ ಚಿನ್ನದ ಬೆಲೆ, ಜನವರಿ-28: ಗುಡ್‌ನ್ಯೂಸ್‌! ಬೆಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಇಳಿಕೆ!

ಇಂದು ಬೆಂಗಳೂರಿನಲ್ಲಿ ಮತ್ತೆ ಚಿನ್ನದ ಬೆಲೆ ಇಳಿಕೆಯಾಗಿದೆ. ತಿಂಗಳ ಆರಂಭದಿಂದ ಏರಿಕೆಯಾಗ್ತಾನೆ ಇದ್ದ ಚಿನ್ನದ ದರ ತಿಂಗಳ ಅಂತ್ಯದ ವೇಳೆಗೆ ಗ್ರಾಹಕರಿಗೆ ಸಿಹಿ ಸುದ್ದಿಯನ್ನ ನೀಡಿದೆ. ಇಂದೂ ಕೂಡ ಚಿನ್ನದ ಬೆಲೆ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ಚಿನ್ನದ ಕೊಳ್ಳುವವರಿಗೆ ಇಂದು ಸೂಕ್ತ ದಿನವಾಗಿದೆ. ವರ್ಷದ ಆರಂಭದಲ್ಲೇ ಚಿನ್ನದ ಬೆಲೆ ಕಂಡು ನಿರಾಸೆಯಾಗಿದ್ದ ಆಭರಣಪ್ರಿಯರಿಗೆ ಇಂದು ಚಿನ್ನದ ದರ ಸಂತಸ ತಂದಿದೆ. ಯುಎಸ್‌ ಡಾಲರ್‌ ದುರ್ಬಲತೆಯಿಂದಾಗಿ ಇಂದು ಚಿನ್ನದ ದರಗಳು ಕೂಡ ಇಳಿಕೆಯಾಗಿವೆ.

ಜನವರಿ 28 ರಂದು, ಬೆಂಗಳೂರಿನಲ್ಲಿ ಚಿನ್ನದ ಬೆಲೆ ಇಳಿಕೆಯಾಗಿದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 300 ರೂ. ಇಳಿಕೆಯಾಗಿ 75,100 ರೂ. ಆಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 320 ರೂ. ಇಳಿಕೆಯಾಗಿ 81,930 ರೂ. ಆಗಿದೆ. ಬೆಂಗಳೂರಿನಲ್ಲಿ 18 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 240 ರೂ. ಇಳಿಕೆಯಾಗಿ 61,450ರೂ. ಆಗಿದೆ.

ಬೆಂಗಳೂರಿನಲ್ಲಿ ಮತ್ತೆ ಇಳಿಮುಖವಾದ ಚಿನ್ನದ ಬೆಲೆ!

ಹಾಗೆ 22 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ 3,000 ರೂ. ಇಳಿಕೆಯಾಗಿ 7,51,000 ರೂ. ಆಗಿದೆ. 24 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ 3,200 ರೂ. ಇಳಿಕೆಯಾಗಿ 8,19,300 ರೂ. ಆಗಿದೆ. 18 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ 2,400 ರೂ. ಇಳಿಕೆಯಾಗಿ 6,14,500 ರೂ. ಆಗಿದೆ.

ಬೆಂಗಳೂರಿನಲ್ಲಿ ಬೆಳ್ಳಿ ದರಗಳು

ಬೆಂಗಳೂರಿನಲ್ಲಿ ಬೆಳ್ಳಿ ಬೆಲೆಗಳು ಸ್ಥಿರಾವಗಿದೆ. ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿ ಬೆಲೆ 96.50ರೂ. ಆಗಿದೆ. ಹಾಗೆ 1 ಕಿಲೋ ಗ್ರಾಂ ಬೆಳ್ಳಿ ಬೆಲೆ 96,500ರೂ. ಆಗಿದೆ. ಇಂದು ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ.

ಭಾರತದ ಪ್ರಮುಖ ನಗರಗಳಲ್ಲಿ ಇಂದು ಚಿನ್ನದ ಬೆಲೆ ಇಳಿಕೆಯಾಗಿದೆ. 22k ಮತ್ತು 24k ಚಿನ್ನದ ಬೆಲೆಗಳು ಎಷ್ಟಿವೆ ಎಂದು ಇಲ್ಲಿ ತಿಳಿಯಿರಿ.

ಭಾರತದ ಕೆಲವು ಮೆಟ್ರೋಪಾಲಿಟನ್ ನಗರಗಳಲ್ಲಿನ ಚಿನ್ನದ ಬೆಲೆಗಳ ವಿವರ:

ಕ್ರಮ
ಸಂಖ್ಯೆ
ನಗರಗಳು24 ಕ್ಯಾರೆಟ್22 ಕ್ಯಾರೆಟ್
1ದೆಹಲಿರೂ.82,080ರೂ.75,250
2ಮುಂಬೈರೂ.81,930ರೂ.75,100
3ಚೆನ್ನೈರೂ.81,930ರೂ.75,100
5ಕೋಲ್ಕತ್ತಾರೂ.81,930ರೂ.75,100

ಬೆಂಗಳೂರಿನಲ್ಲಿ ಚಿನ್ನದ ಬೆಲೆ, ಜನವರಿ 25: 22k ಮತ್ತು 24k ಚಿನ್ನದ ಬೆಲೆ ತಟಸ್ಥ!

MCX ಗೋಲ್ಡ್ ಔಟ್‌ಲುಕ್ ಮತ್ತು ಸಿಲ್ವರ್‌ ಔಟ್‌ಲುಕ್

MCX ಚಿನ್ನದ ಬೆಲೆಗಳು ಮತ್ತು ಬೆಳ್ಳಿ ಬೆಲೆಗಳು ಏರಿಕೆಯಾಗಿದೆ. ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX), ಫೆಬ್ರವರಿ 5, 2025 ರ ವಿತರಣೆಯ ಚಿನ್ನದ ಭವಿಷ್ಯ ನೋಡೋದಾದ್ರೆ, 10 ಗ್ರಾಂ ಚಿನ್ನಕ್ಕೆ 0.25% ನಷ್ಟು ಏರಿಕೆಯಾಗಿ 79,777 ರೂ. ಆಗಿದೆ. ಮಾರ್ಚ್ 5, 2025ರ ಬೆಳ್ಳಿ ಭವಿಷ್ಯವು 0.2% ನಷ್ಟು ಏರಿಕೆಯಾಗಿ 90,399 ರೂಪಾಯಿ ವಹಿವಾಟು ನಡೆಸುತ್ತಿದೆ. ಬೌಗೋಳಿಕ ಜಾಗತಿಕ ಉದ್ವಿಗ್ನತೆಗಳು, ಕರೆನ್ಸಿ ವಿನಿಮಯ ದರಗಳು ಮತ್ತು ದೇಶೀಯ ಮತ್ತು ಅಂತರರಾಷ್ಟ್ರೀಯ ಎರಡೂ ಅಸ್ಥಿರಗಳಿಂದ ಚಿನ್ನದ ಬೆಲೆಗಳು ಈ ತಿಂಗಳಿನಲ್ಲಿ ಏರಿಳಿತಗಳನ್ನ ಗಮನಿಸುವಂತಾಯಿತು. ಹಳದಿ ಲೋಹಕ್ಕೆ ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗ್ತಿದೆ ಹೀಗಾಗಿ ಬೆಲೆಗಳು ಇಳಕೆಯಾಗ್ತಿವೆ.

ಸ್ಪಾಟ್‌ ಚಿನ್ನದ ಭವಿಷ್ಯ

ಸ್ಪಾಟ್‌ ಚಿನ್ನ ಮತ್ತು ಬೆಳ್ಳಿ ದರಗಳು ಇಂದು ಇಳಿಕೆಯಾಗಿವೆ. ವರದಿ ಪ್ರಕಾರ ಸ್ಪಾಟ್‌ ಚಿನ್ನದ ಬೆಲೆಯು ಪ್ರತಿ ಔನ್ಸ್‌ಗೆ 0.01% ಇಳಿಕೆಯಾಗಿ 2,740.45 ಡಾಲರ್‌ ತಲುಪಿದೆ. ಇತ್ತ ಸ್ಪಾಟ್ ಬೆಳ್ಳಿ ಭವಿಷ್ಯವು ಪ್ರತಿ ಔನ್ಸ್‌ಗೆ 0.56% ಇಳಿಕೆಯಾಗಿ 30.06 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದೆ. ಪ್ಲಾಟಿನಮ್‌ ಬೆಲೆಯು ಪ್ರತಿ ಔನ್ಸ್‌ಗೆ 0.37% ಇಳಿಕೆಯಾಗಿ 946.75 ಡಾಲರ್‌ ತಲುಪಿದೆ. ಪಲ್ಲಾಡಿಯಂ ಬೆಲೆಯು ಪ್ರತಿ ಔನ್ಸ್‌ಗೆ 963.00 ಡಾಲರ್‌ನಲ್ಲಿ ಸ್ಥಿರವಾಗಿದೆ. ರಾಯಿಟರ್ಸ್‌ ವರದಿ ಪ್ರಕಾರ ಯುಎಸ್‌ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ವ್ಯಾಪಾರ ನೀತಿಗಳು ಮತ್ತು ಯುಎಸ್‌ ಡಾಲರ್‌ ಅನಿಶ್ಚಿತತೆಗಳ ನಡುವೆ ಚಿನ್ನದ ದರಗಳು ಈ ಬಾರಿ ಏರಿಳಿತಗಳನ್ನ ಅನುಭವಿಸುವಂತಾಗದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+