ಡಿಸೆಂಬರ್ 30ದು, ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆಯಾಗಿದೆ. ನಿನ್ನೆ ಇಳಿಕೆಯಾಗಿದ್ದ ಚಿನ್ನದ ದರ ಇಂದು ಮತ್ತೆ ಏರಿಕೆಯಾಗಿದೆ. ಬಹುದಿನಗಳಿಂದ ಏರಿಳತಗಳನ್ನ ಗಮನಿಸಿದ ನಂತರ ಮತ್ತೆ ಚಿನ್ನದ ದರ ಏರಿಕೆಯಾಗಿದೆ. ಇನ್ನು ಬೆಳ್ಳಿ ಬೆಲೆ ಮತ್ತೆ ಸ್ಥಿರವಾಗಿದೆ.
ಇಂದು ಚಿನ್ನದ ದರಗಳು ಏರಿಕೆಯಾಗಿವೆ. ಆದರೆ ಹೂಡಿಕೆದಾರರು ಯುಎಸ್ ಫೆಡರಲ್ ರಿಸರ್ವ್‌ನ ಬಡ್ಡಿದರದ ದೃಷ್ಟಿಕೋನ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕ ನೀತಿಗಳನ್ನ ಎದುರು ನೋಡುತ್ತಿದ್ದಾರೆ. ಇನ್ನು ಇದು 2025 ರಲ್ಲಿ ಚಿನ್ನದ ಪಥವನ್ನು ರೂಪಿಸುವ ನಿರೀಕ್ಷೆ ಇದೆ. ಅಲ್ಲದೆ ರಾಯಿಟರ್ಸ್ ವರದಿ ಪ್ರಕಾರ ಈ ವರ್ಷ ಚಿನ್ನದ ದರ 27%ನಷ್ಟು ಹೆಚ್ಚು ಗಳಿಸಿದೆ ಎನ್ನಲಾಗ್ತಿದೆ. ಬೌಗೋಳಿಕ ಹಾಗು ರಾಜಕೀಯ ಉದ್ವಿಗ್ನತೆಗಳು ಚಿನ್ನದ ದರದ ಮೇಲೆ ಪರಿಣಾಮ ಬೀರುತ್ತಿವೆ. ರಷ್ಯ ಉಕ್ರೇನ್‌ನ ಯುದ್ದ ಹಿನ್ನೆಲೆ ಜಾಗತಿಕ ಉದ್ವಿಗ್ನತೆಗಳಿಂದಾಗಿ ಚಿನ್ನದ ಬೆಲೆಯಲ್ಲಿ ಏರಿಳಿತಗಳನ್ನ ಕಾಣುವಂತಾಗಿದೆ.

ಚಿಲ್ಲರೆ ಮಾರುಕಟ್ಟೆಯಲ್ಲಿ ಚಿನ್ನಕ್ಕೆ ಹೆಚ್ಚಿದ ಬೇಡಿಕೆಯನ್ನು ನಾವು ಕಾಣಬಹುದು. ಇನ್ನು 2025 ರ ವೇಳೆಗೆ ಫೆಡರಲ್ ರಿಸರ್ವ್‌ನಿಂದ ಹಣಕಾಸು ನೀತಿ ಮುನ್ಸೂಚನೆಯ ಬಗ್ಗೆ ನಿಖರವಾದ ಸಂಕೇತಗಳನ್ನ ನಿರೀಕ್ಷಿಸಲಾಗಿದೆ. ಇದು ಸ್ಪಾಟ್ ಚಿನ್ನದ ಮೇಲೂ ಕೂಡ ಪರಿಣಾಮವನ್ನ ಬೀರಿದೆ.
ಬೆಂಗಳೂರಿನಲ್ಲಿ ಚಿನ್ನದ ದರಗಳು
ಡಿಸೆಂಬರ್ 28 ರಂದು, ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆಯಾಗಿದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 150 ರೂ. ಏರಿಕೆಯಾಗಿ 71,500ರೂ. ಆಗಿದೆ. ಮತ್ತು 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 160ರೂ. ಏರಿಕೆಯಾಗಿ 78,000ರೂ. ಆಗಿದೆ. ಬೆಂಗಳೂರಿನಲ್ಲಿ 18 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 120 ರೂ. ಏರಿಕೆಯಾಗಿ 58,500ರೂ. ಆಗಿದೆ.
ಹಾಗೆ 22 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ 1,500ರೂ. ಏರಿಕೆಯಾಗಿ 7,15,000ರೂ. ಆಗಿದೆ. ಮತ್ತು 24 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ 1,600 ರೂ. ಏರಿಕೆಯಾಗಿ 7,80,000 ರೂ. ಆಗಿದೆ.
18 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ 1,200 ಏರಿಕೆಯಾಗಿ 5,85,000ರೂ. ಆಗಿದೆ.
ಬೆಂಗಳೂರಿನಲ್ಲಿ ಬೆಳ್ಳಿ ದರಗಳು
ಇಂದು ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಸ್ಥಿರವಾಗಿದೆ . ಪ್ರಸ್ತುತ, ಬೆಂಗಳೂರಿನಲ್ಲಿ 1 ಗ್ರಾಂ ಚಿನ್ನದ ಬೆಲೆ 9,240 ರೂ ಇದೆ. ಹಾಗೆ 1 ಕಿಲೋ ಗ್ರಾಂ ಬೆಳ್ಳಿ ಬೆಲೆ 92,400ರೂ. ಇದೆ. ನಿನ್ನೆ ಬೆಳ್ಳಿ ಬೆಲೆ ಇಳಿಕೆಯಾಗಿತ್ತು, ಆದ್ರೆ ಇಂದು ಮಾತ್ರ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಭಾರತದ ಕೆಲವು ಮೆಟ್ರೋಪಾಲಿಟನ್ ನಗರಗಳಲ್ಲಿನ ಚಿನ್ನದ ಬೆಲೆಗಳ ವಿವರ:
| ನಗರಗಳು | 24ಕ್ಯಾರೆಟ್ | 22ಕ್ಯಾರೆಟ್ |
| ದೆಹಲಿ | 78,150 | 71,650 |
| ಮುಂಬೈ | 78,000 | 71,500 |
| ಚೆನ್ನೈ | 78,000 | 71,500 |
| ಕೋಲ್ಕತ್ತಾ | 78,000 | 71,500 |
ಸ್ಪಾಟ್ ಚಿನ್ನದ ಭವಿಷ್ಯ
ಸ್ಪಾಟ್ ಚಿನ್ನದ ಬೆಲೆ ಏರಿಕೆಯಾಗುವ ನಿರೀಕ್ಷೆ ಇದೆ. ಯುಎಸ್ ಡಾಲರ್ ಏರಿಕೆಯಿಂದಾಗಿ ಇದು ಸ್ಪಾಟ್ ಚಿನ್ನದ ಮೇಲೆ ಹೆಚ್ಚು ಪ್ರಭಾವ ಬೀರಲಿದೆ. ಇನ್ನು ರಾಯಿಟರ್ಸ್ ವರದಿ ಪ್ರಕಾರ 0318 GMT ಯಲ್ಲಿ ಸ್ಪಾಟ್ ಚಿನ್ನ 0.2% ನಷ್ಟು ಏರಿಕೆಯಾಗಿ ಪ್ರತಿ ಔನ್ಸ್‌ಗೆ 2,626.30 ಡಾಲರ್ ತಲುಪಲಿದೆ. ಯುಎಸ್ ಚಿನ್ನದ ಭವಿಷ್ಯವು 0.3%ನಷ್ಟು ಏರಿಕೆಯಾಗಿ 2,638.70 ಡಾಲರ್ ತಲುಪಿದೆ. ಬುಲಿಯನ್ ಈ ವರ್ಷ ಇಲ್ಲಿಯವರೆಗೆ 27% ಕ್ಕಿಂತ ಹೆಚ್ಚು ಗಳಿಸಿದೆ. ಇತ್ತ ಸ್ಪಾಟ್ ಬೆಳ್ಳಿ ಪ್ರತಿ ಔನ್ಸ್‌ಗೆ 0.1% ಏರಿಕೆಯಾಗಿ 29.40 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದೆ. ಮುಂಬರುವ ವರ್ಷದಲ್ಲಿ ಚಿನ್ನದ ಬೆಲೆಯಲ್ಲಿ ಸಾಕಷ್ಟು ಏರಿಳಿತಗಳು ಉಂಟಾಗಲಿದೆ ಎನ್ನಲಾಗ್ತಿದೆ. ಪ್ಲಾಟಿನಂ 0.2% ಏರಿಕೆಯಾಗಿ 921.45 ಡಾಲರ್ ತುಪಿದೆ. ಪಲ್ಲಾಡಿಯಮ್ 0.1% ಏರಿಕೆಯಾಗಿ 912.84 ಡಾಲರ್ ಆಗಿದೆ.
MCX ಗೋಲ್ಡ್ ಔಟ್‌ಲುಕ್
ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX), ಫೆಬ್ರವರಿ 5, 2025 ರ ವಿತರಣೆಯ ಚಿನ್ನದ ಭವಿಷ್ಯ ನೋಡೋದಾದ್ರೆ, 10 ಗ್ರಾಂ ಚಿನ್ನಕ್ಕೆ 0.09% ನಷ್ಟು ಏರಿಕೆಯಾಗಿ 76,614 ರೂ. ಆಗಿದೆ. ಅದೇ ರೀತಿ, ಮಾರ್ಚ್ 5, 2025ರ ಬೆಳ್ಳಿ ಭವಿಷ್ಯವು 0.16% ನಷ್ಟು ಏರಿಕೆಯಾಗಿ 89027 ರೂಪಾಯಿ ವಹಿವಾಟು ನಡೆಸುತ್ತಿದೆ. ಜಾಗತಿಕ ಬೇಡಿಕೆ, ಬಡ್ಡಿ ದರಗಳು, ಕರೆನ್ಸಿ ವಿನಿಮಯ ದರಗಳು, ಸರ್ಕಾರಿ ನೀತಿಗಳು ಮತ್ತು ಜಾಗತಿಕ ಘಟನೆಗಳಂತಹ ದೇಶೀಯ ಮತ್ತು ಅಂತರರಾಷ್ಟ್ರೀಯ ಎರಡೂ ಅಸ್ಥಿರಗಳಿಂದ ಚಿನ್ನದ ಬೆಲೆಗಳು ಹೆಚ್ಚು ಪರಿಣಾಮ ಬೀರಬಹುದು.
ಬುಲಿಯನ್ ಈ ವರ್ಷ ಇಲ್ಲಿಯವರೆಗೆ 27% ಕ್ಕಿಂತ ಹೆಚ್ಚು ಗಳಿಸಿದೆ. ಹಾಗೆ ಅಕ್ಟೋಬರ್ 31 ರಂದು 2,790.15 ಡಾಲರ್‌ನಷ್ಟು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. ಇನ್ನು ಹೊಸ ವರ್ಷದ ಆರಂಭದವರೆಗೆ, ಅಲ್ಪಾವಧಿಯ ದೃಷ್ಟಿಕೋನದಿಂದ, ನಾವು ಈ ರೀತಿಯ ಬೆಲೆಯ ಚಲನೆಯನ್ನು ನೋಡುವ ಸಾಧ್ಯತೆಯಿದೆ ಎಂದು ತಜ್ಞರು ಹೇಳಿದ್ದಾರೆ. ಹಾಗೆ ಚಿನ್ನದ ವ್ಯಾಪಾರ ಚಟುವಟಿಕೆಯು ಈ ವರ್ಷಾಂತ್ಯದಲ್ಲಿ ಶಾಂತವಾಗಿ ಉಳಿಯುವ ನಿರೀಕ್ಷೆಯಿದೆ. ಹೂಡಿಕೆದಾರರು 2025 ರ ಫೆಡರಲ್ ರಿಸರ್ವ್‌ನ ದರ ಕಾರ್ಯತಂತ್ರ ಹಾಗೆ ಸುಂಕದ ನೀತಿಗಳ ಬಗ್ಗೆ ನಿರೀಕ್ಷೆ ಮಾುತ್ತಿದ್ದಾರೆ. ಇನ್ನು ಇಂದು ಚಿನ್ನದ ಬೆಲೆಗಳು ರಜೆದಿನಗಳು ಇರುವುದರಿಂದ ಹೆಚ್ಚಿನ ವಹಿವಾಟನ್ನ ನಿರೀಕ್ಷಿಸಲಾಗಿದೆ. ಇದರ ಜೊತೆಗೆ ಚಿನ್ನ, ಬೆಳ್ಳಿ ಎರಡೂ ಲೋಹಗಳು ಹೆಚ್ಚಿನ ಪ್ರಮಾಣದಲ್ಲಿ ವ್ಯಾಪಾರ ಮಾಡುತ್ತವೆ ಎಂಬ ನಿರೀಕ್ಷೆ ಇದೆ.


Click it and Unblock the Notifications