ಇಂದು ಬೆಂಗಳೂರಿನಲ್ಲಿ ಚಿನ್ನದ ಬೆಲೆ ಸ್ಥಿರವಾಗಿದೆ. ತಿಂಗಳ ಆರಂಭದಿಂದ ಭರ್ಜರಿ ಓಟವನ್ನ ನಡೆಸುತ್ತಿದರುವ ಚಿನ್ನದ ದರ ನಿನ್ನೆ ಇಳಿಕೆಯಾಗಿತ್ತು. ಇನ್ನು ಇಂದು ಚಿನ್ನದ ಬೆಲೆ ಸ್ಥಿರವಾಗಿದೆ. ಬೆಂಗಳೂರಿಗರಿಗೆ ಈ ದಿನ ಚಿನ್ನ ಕೊಳ್ಳಲು ಸೂಕ್ತವಾಗಿದೆ. ಬಹುದಿನಗಳಿಂದ ಚಿನ್ನ ಕೊಳ್ಳಲು ಕಾಯುತ್ತಿದ್ದವರಿಗೆ ಇಂದು ಸಿಹಿ ಸುದ್ದಿ ಸಿಕ್ಕಿದೆ. ಇಂದು ಚಿನ್ನದ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ. ನಿನ್ನೆ ಚಿನ್ನದ ಬೆಲೆ ಇಳಿಕೆಯಾಗಿದ್ದರಿಂದ ಬೆಂಗಳೂರಿಗರು ನಿಟ್ಟುಸಿರು ಬಿಟ್ಟಿದ್ದರು. ಆದ್ರೆ ಇಂದು ಮತ್ತೆ ಚಿನ್ನದ ಬೆಲೆ ಸ್ಥಿರವಾಗಿದೆ.
ಜನವರಿ 19 ರಂದು, ಬೆಂಗಳೂರಿನಲ್ಲಿ ಚಿನ್ನದ ಬೆಲೆ ಸ್ಥಿರವಾಗಿದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 74,350ರೂ. ಆಗಿದೆ. ಮತ್ತು 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 81,110 ರೂ. ಆಗಿದೆ. ಬೆಂಗಳೂರಿನಲ್ಲಿ 18 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 60,830 ಆಗಿದೆ.

ಹಾಗೆ 22 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ 7,43,500 ರೂ. ಆಗಿದೆ. ಮತ್ತು 24 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ 8,11,100 ರೂ. ಆಗಿದೆ. 18 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ 6,08,300 ರೂ. ಆಗಿದೆ.
ಬೆಂಗಳೂರಿನಲ್ಲಿ ಬೆಳ್ಳಿ ದರಗಳು
ಇಂದು ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಕೂಡ ಸ್ಥಿರವಾಗಿದೆ . ಪ್ರಸ್ತುತ, ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿ ಬೆಲೆ 96.50 ರೂ. ಆಗಿದೆ. ಹಾಗೆ 1 ಕಿಲೋ ಗ್ರಾಂ ಬೆಳ್ಳಿ ಬೆಲೆ 96,500ರೂ. ಆಗಿದೆ. ಇಂದು ಬೆಳ್ಳಿ ಬೆಲೆ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ.
ಭಾರತದಲ್ಲೂ ಕೂಡ ಚಿನ್ನದ ದರ ಸ್ಥಿವಾಗಿರುವುದರಿಂದ ಭಾರತದ ಪ್ರಮುಖ ನಗೆಗಳಲ್ಲಿ ಚಿನ್ನದ ದರ ಇಂದು ಸ್ಥಿರವಾಗಿದೆ. ಜಾಗತಿಕ ಉದ್ವಿಗ್ನತೆಗಳು, ರಾಜಕೀಯ ಮತ್ತು ಆರ್ಥಿಕ ಬೆಳವಣಿಗೆಗಳಿಂದಾಗಿ ಇಂದು ಚಿನ್ನದ ಬೆಲೆಯಲ್ಲಿ ಇಂದು ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ.
ಭಾರತದ ಕೆಲವು ಮೆಟ್ರೋಪಾಲಿಟನ್ ನಗರಗಳಲ್ಲಿನ ಚಿನ್ನದ ಬೆಲೆಗಳ ವಿವರ:
| ಕ್ರಮ ಸಂಖ್ಯೆ | ನಗರಗಳು | 24 ಕ್ಯಾರೆಟ್ | 22 ಕ್ಯಾರೆಟ್ |
| 1 | ದೆಹಲಿ | ರೂ.81,260 | ರೂ.74,500 |
| 2 | ಮುಂಬೈ | ರೂ.81,110 | ರೂ.74,350 |
| 3 | ಚೆನ್ನೈ | ರೂ.81,110 | ರೂ.74,350 |
| 5 | ಕೋಲ್ಕತ್ತಾ | ರೂ.81,110 | ರೂ.74,350 |
ಬೆಂಗಳೂರಿಗರಿಗೆ ಸಿಹಿ ಸುದ್ದಿ! 22k ಮತ್ತು 24k ಚಿನ್ನದ ಬೆಲೆ ಇಳಿಕೆ! ಎಷ್ಟಿದೆ? ತಿಳಿಯಿರಿ
ಸ್ಪಾಟ್ ಚಿನ್ನದ ಭವಿಷ್ಯ
ಸ್ಪಾಟ್ ಚಿನ್ನದ ದರಗಳು ಇಂದು ಕೂಡ ಇಳಿಕೆಯಾಗಿದೆ. ಸ್ಪಾಟ್ ಚಿನ್ನದ ದರವು ಮುವತ್ತು ದಿನಗಳ ಹಿಂದೆ ಪ್ರತೀ ಔನ್ಸ್‌ಗೆ 0.60% ಇಳಿಕೆಯಾಗಿ 2,703.2 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿತ್ತು. ಹಾಗೆ ಸ್ಪಾಟ್ ಬೆಳ್ಳಿ ಬೆಲೆಯು ತಿಂಗಳ ಹಿಂದೆ ಪ್ರತೀ ಔನ್ಸ್‌ಗೆ 1.38% ಇಳಿಕೆಯಾಗಿ 30.4 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿತ್ತು. ವರದಿ ಪ್ರಕಾರ ಸ್ಪಾಟ್ ಚಿನ್ನದ ಬೆಲೆಯು ಪ್ರತಿ ಔನ್ಸ್‌ಗೆ 0.46% ಇಳಿಕೆಯಾಗಿ 2,702 ಡಾಲರ್‌ನಲ್ಲಿ ಸ್ಥಿರವಾಗಿದೆ. ಇತ್ತ ಸ್ಪಾಟ್ ಬೆಳ್ಳಿ ಭವಿಷ್ಯವು ಪ್ರತಿ ಔನ್ಸ್‌ಗೆ 1.45%% ಇಳಿಕೆಯಾಗಿ 30.31 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದೆ. ಪ್ಲಾಟಿನಮ್ ಬೆಲೆಯು ಪ್ರತಿ ಔನ್ಸ್‌ಗೆ 0.05% ರಷ್ಟು ಏರಿಕೆಯಾಗಿ 940.75 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದೆ. ಪಲ್ಲಾಡಿಯಂ ಬೆಲೆಯು ಪ್ರತಿ ಔನ್ಸ್‌ಗೆ 0.11% ರಷ್ಟು ಇಳಿಕೆಯಾಗಿ 950.00 ಡಾಲರ್ ತಲುಪಿದೆ.
MCX ಗೋಲ್ಡ್ ಔಟ್‌ಲುಕ್ ಮತ್ತು ಸಿಲ್ವರ್ ಔಟ್‌ಲುಕ್
ಇಂದು MCX ಚಿನ್ನದ ಬೆಲೆಗಳು ಹಾಗು ಬೆಳ್ಳಿ ಬೆಲೆ ಎರಡೂ ಕೂಡ ಇಳಿಕೆಯಾಗಿದೆ. ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX), ಫೆಬ್ರವರಿ 5, 2025 ರ ವಿತರಣೆಯ ಚಿನ್ನದ ಭವಿಷ್ಯ ನೋಡೋದಾದ್ರೆ, 10 ಗ್ರಾಂ ಚಿನ್ನಕ್ಕೆ 0.01% ನಷ್ಟು ಇಳಿಕೆಯಾಗಿ 79,019. ರೂ. ಆಗಿದೆ. ಮಾರ್ಚ್ 5, 2025ರ ಬೆಳ್ಳಿ ಭವಿಷ್ಯವು 0.11% ನಷ್ಟು ಇಳಿಕೆಯಾಗಿ 91,504 ರೂಪಾಯಿ ವಹಿವಾಟು ನಡೆಸುತ್ತಿದೆ. ಈ ತಿಂಗಳು ಚಿನ್ನದ ಬೆಲೆಗಳು ಸಾಕ್ಟು ಏರಿಳೀತಗಳನ್ನ ಕಂಡಿವೆ. ಇದು ಹೂಡಿಕೆದಾರರಿಗೆ ಆತಂಕವನ್ನ ಸೃಷ್ಟಿ ಮಾಡಿದೆ. ಬೌಗೋಳಿಕ ಜಾಗತಿಕ ಉದ್ವಿಗ್ನತೆಗಳು, ಬಡ್ಡಿ ದರಗಳು, ಸರ್ಕಾರಿ ನೀತಿಗಳು, ಕರೆನ್ಸಿ ವಿನಿಮಯ ದರಗಳು ಮತ್ತು ದೇಶೀಯ ಮತ್ತು ಅಂತರರಾಷ್ಟ್ರೀಯ ಎರಡೂ ಅಸ್ಥಿರಗಳಿಂದ ಚಿನ್ನದ ಬೆಲೆಗಳು ವರ್ಷದ ಮೊದಲ ತಿಂಗಳಿನಲ್ಲಿ ಸಾಕಷ್ಟು ಏರಿಳಿತಗಳನ್ನ ಗಮನಿಸುವಂತಾಯಿತು.


Click it and Unblock the Notifications