ಮಹಿಳೆಯರಿಗೆ ಇದು ಖುಷಿಸುದ್ದಿ ಎನ್ನುವುದಕ್ಕಿಂತ, ಇದೊಂದು ಸಮಾಧಾನಕರ ಸುದ್ದಿ ಎನ್ನಬಹುದು. ಏಕೆಂದರೆ ಇಂದು ಚಿನ್ನದ ಬೆಲೆಯಲ್ಲಿ ಯಾವುದೇ ರೀತಿಯ ಬದಲಾವಣೆಗಳು ಕಂಡುಬಂದಿಲ್ಲ. ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ನಿನ್ನೆ ಎಷ್ಟಿತ್ತೋ ಇಂದು ಕೂಡ ಅಷ್ಟೇ ಇದೆ. ಚಿನ್ನದ ಬೆಲೆಯಲ್ಲಿ ಇಳಿಕೆಯೂ ಆಗಿಲ್ಲ ಏರಿಕೆಯೂ ಆಗಿಲ್ಲ. ಚಿನ್ನದ ಬೆಲೆ ಇಳಿಕೆಯಾಗಬಹುದು ಎಂದು ಕಾದಿದ್ದ ಮಹಿಳೆಯರಿಗೆ ಸ್ವಲ್ಪ ನಿರಾಸೆಯಾದರೂ, ಸದ್ಯ ಏರಿಕೆಯಾಗಿಲ್ಲ ಎಂಬ ಸಮಾಧಾನವೂ ಇದೆ.

ಇನ್ನು ಚಿನ್ನದ ಬೆಲೆಗಳಲ್ಲಿ ಇತ್ತೀಚೆಗೆ ಗಮನಾರ್ಹ ಏರಿಕೆ ಅಥವಾ ಇಳಿಕೆ ಕಾಣದಿರುವುದು, ಮಾರುಕಟ್ಟೆಯ ಸ್ಥಿರತೆಯನ್ನು ಸೂಚಿಸುತ್ತದೆ. ಇದು ಹೂಡಿಕೆದಾರರಿಗೆ ಚಿನ್ನವನ್ನು ಸುರಕ್ಷಿತ ಹೂಡಿಕೆ ಆಯ್ಕೆಯಾಗಿ ಪರಿಗಣಿಸಲು ಪ್ರೇರೇಪಿಸುತ್ತದೆ. ಇದರಿಂದ ಚಿನ್ನದ ಬೇಡಿಕೆ ಸ್ಥಿರವಾಗಿರುತ್ತದೆ, ಬೆಲೆಗಳಲ್ಲಿ ಹೆಚ್ಚಿನ ಬದಲಾವಣೆಗಳನ್ನು ತಡೆಯುತ್ತದೆ. ಚಿನ್ನದ ಬೆಲೆಗಳಲ್ಲಿ ಏರಿಕೆ ಅಥವಾ ಇಳಿಕೆ ಇಲ್ಲದಿರುವುದು, ಹೂಡಿಕೆದಾರರು ಮತ್ತು ಗ್ರಾಹಕರಿಗೆ ಚಿನ್ನದ ಮೌಲ್ಯದ ಸ್ಥಿರತೆಯನ್ನು ಸೂಚಿಸುತ್ತದೆ. ಇದು ಚಿನ್ನದ ಹೂಡಿಕೆಗಳನ್ನು ನಿರ್ವಹಿಸಲು ಅನುಕೂಲಕರ ಪರಿಸ್ಥಿತಿಯನ್ನು ಒದಗಿಸುತ್ತದೆ.
ಅಂದಹಾಗೆ ಭಾರತದಲ್ಲಿ ಚಿನ್ನ ಒಂದು ಪ್ರತಿಷ್ಠೆಯ ಸಂಕೇತವಾಗಿದೆ. ಹಾಗೂ ಭಾರತದಲ್ಲಿ ಚಿನ್ನಕ್ಕೆ ಅದರದ್ದೇ ಆದ ಮಹತ್ವವಾದ ಸ್ಥಾನವಿದೆ. ಇತ್ತೀಚಿನ ಚಿನ್ನದ ಬೆಲೆಯನ್ನು ಪರಿಗಣಿಸಿದರೆ, ಚಿನ್ನ ಕೊಳ್ಳುವುದಕ್ಕಿಂತ ಸೈಟ್ ಅಥವಾ ಮನೆ ಮೇಲೆ ಹೂಡಿಕೆ ಮಾಡುವುದೇ ಎಷ್ಟೋ ಉತ್ತಮ ಎಂಬಂತಾಗಿದೆ. ಮಹಿಳೆಯರಿಗಂತೂ ಚಿನ್ನದ ಮೇಲಿರುವ ಪ್ರೀತಿ ಅಷ್ಟಿಷ್ಟಲ್ಲ. ಚಿನ್ನ ಎಂದರೆ ಪ್ರಾಣ ಬಿಡುತ್ತಾರೆ. ಸಭೆ ಸಮಾರಂಭಗಳಲ್ಲಿ ಪ್ರತಿಷ್ಠೆ ತಂದುಕೊಡುವುದೇ ಚಿನ್ನ. ಅತ್ಯಂತ ಆಕರ್ಷಣೀಯವಾಗಿರುವ ಚಿನ್ನಕ್ಕೆ, ಈಗ ಎಲ್ಲಿಲ್ಲದ ಬೇಡಿಕೆ. ಅದರಲ್ಲೂ ಮಹಿಳೆಯರಿಗೆ ಏನೇ ಕೊಟ್ಟರೂ ಚಿನ್ನ ಕೊಟ್ಟಾಗ ಆಗುವ ಖುಷಿ ಮತ್ತೆಲ್ಲೂ ಸಿಗುವುದಿಲ್ಲ. ಆಭರಣದ ರೂಪದಲ್ಲಿ ಮಹಿಳೆಯರಿಗೆ ಆಕರ್ಷಣೆ ನೀಡುವ ಈ ಚಿನ್ನಕ್ಕೆ ಭಾರತದಲ್ಲಿ ದಿನೇ ದಿನೆ ಡಿಮ್ಯಾಂಡ್ ಹೆಚ್ಚುತ್ತಲೇ ಇದೆ.
ಇನ್ನು ಚಿನ್ನದ ಬೆಲೆಯ ಏರಿಕೆ ಹಾಗೂ ಇಳಿಕೆಯು ಒಂದೇ ಕಾರಣದಿಂದ ಆಗುವುದಿಲ್ಲ. ಹಲವಾರು ಕಾರಣಗಳಿಂದ ಚಿನ್ನದ ಬೆಲೆ ಇಳಿಕೆಯಾಗುತ್ತದೆ. ಅಂದರೆ ಜಾಗತಿಕ ಚಿನ್ನದ ಬೆಲೆಗಳು ಪ್ರಮುಖವಾಗಿ ಡಾಲರ್‌ನ ಬಲ, ತೈಲದ ಬೆಲೆಗಳು, ಮತ್ತು ಜಿಯೋಪಾಲಿಟಿಕಲ್ ಘಟನೆಗಳ ಮೇಲೆ ಅವಲಂಬಿತವಾಗಿರುತ್ತವೆ. ಅವುಗಳ ಆಧಾರದ ಮೇಲೆ ಚಿನ್ನದ ಬೆಲೆ ಇಳಿಕೆ ಅಥವಾ ಏರಿಕೆಯಾಗುತ್ತದೆ. ಹಾಗೆಯೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿದಿದ್ದರೆ, ಅದರ ಪರಿಣಾಮ ಭಾರತೀಯ ಮಾರುಕಟ್ಟೆಯಲ್ಲಿಯೂ ಕಾಣಬಹುದು.ಅಮೆರಿಕಾದ ಕೇಂದ್ರ ಬ್ಯಾಂಕ್ ಬಡ್ಡಿದರಗಳನ್ನು ಹೆಚ್ಚಿಸಿದರೆ, ಹೂಡಿಕೆದಾರರು ಚಿನ್ನದ ಬದಲು ಬಡ್ಡಿದರ ಹೊಂದಿರುವ ಆಸ್ತಿಗಳಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸುತ್ತಾರೆ, ಇದು ಚಿನ್ನದ ಬೇಡಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಬೆಲೆ ಇಳಿಕೆಗೆ ಕಾರಣವಾಗುತ್ತದೆ. ಹಾಗೆಯೇ ರೂಪಾಯಿ ಮೌಲ್ಯವು ಡಾಲರ್ ಎದುರು ಬಲವಾಗಿದ್ದರೆ, ಚಿನ್ನದ ಆಮದು ವೆಚ್ಚ ಕಡಿಮೆಯಾಗುತ್ತದೆ, ಇದು ಸ್ಥಳೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿಕೆಗೆ ಕಾರಣವಾಗಬಹುದು. ವಿವಿಧ ಹಬ್ಬಗಳು, ವಿವಾಹ ಸೀಸನ್ ಮುಂತಾದ ಸಂದರ್ಭಗಳಲ್ಲಿ ಚಿನ್ನದ ಬೇಡಿಕೆ ಹೆಚ್ಚಾಗುತ್ತದೆ. ಆದರೆ, ಇಂತಹ ಸಂದರ್ಭಗಳಿಲ್ಲದಿದ್ದಾಗ ಅಥವಾ ಆರ್ಥಿಕ ಸ್ಥಿತಿಯಿಂದ ಬೇಡಿಕೆ ಕಡಿಮೆಯಾದಾಗ, ಬೆಲೆ ಇಳಿಯಬಹುದು. ಹೀಗೆ ನಾನಾ ಕಾರಣಗಳಿಂದ ಚಿನ್ನದ ಬೆಲೆ ಇಳಿಕೆ ಅಥವಾ ಏರಿಕೆಯಾಗಬಹುದು. ಹಾಗಾದರೆ ಇಂದು ಭಾರತದಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯುವುದಾದರೆ.
ಚಿನ್ನದ ಬೆಲೆ ಎಷ್ಟೇ ಏರಿಕೆಯಾದರೂ ಮಹಿಳೆಯರಿಗೆ ಅದರ ಮೇಲಿನ ಆಸೆ ಸ್ವಲ್ಪವೂ ಕಡಿಮೆಯಾಗುವುದಿಲ್ಲ. ಇನ್ನು ಚಿನ್ನದ ಬೆಲೆ ಕಡಿಮೆಯಾಗಿದ್ದರೆ ಕೇಳೋದೇ ಬೇಡ. ಆದರೆ ಇಂದು ಚಿನ್ನದ ಬೆಲೆಯಲ್ಲಿ ಇಳಿಕೆಯೂ ಆಗಿಲ್ಲ ಏರಿಕೆಯೂ ಆಗಿಲ್ಲ. ಚಿನ್ನದ ಬೆಲೆ ಶನಿವಾರದಷ್ಟೇ ಕಾಯ್ದುಕೊಂಡಿದೆ. ಹಾಗಾದರೆ ಇಂದು ಚಿನ್ನದ ಬೆಲೆ ಎಷ್ಟಿದೆ ನೋಡೋಣ ಬನ್ನಿ.
ಭಾರತದಲ್ಲಿ ಚಿನ್ನದ ಬೆಲೆ:
22 ಕ್ಯಾರಟ್ ಚಿನ್ನದ ಬೆಲೆ:
ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಇಂದು ಕೂಡ ಚಿನ್ನದ ಬೆಲೆ ಏರಿಕೆಯಾಗಿಲ್ಲ. ಹಾಗೆಯೇ ಕಡಿಮೆಯೂ ಆಗಿಲ್ಲ ಇಂದಿನ ಮಾರುಕಟ್ಟೆಯ ಪ್ರಕಾರ 22 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 8,230 ರೂ. ಇದೆ. ಪ್ರತಿ ಹತ್ತು ಗ್ರಾಂಗೆ 82,300 ಇದೆ. ಹಾಗೆಯೇ 100 ಗ್ರಾಂ ಚಿನ್ನದ ಬೆಲೆ 8 ಲಕ್ಷದ 23,000 ಇದೆ. ಈ ಬೆಲೆ ನಿನ್ನೆ ಎಷ್ಟಿತ್ತೋ ಅಷ್ಟೇ ಕಾಯ್ದಿರಿಸಿಕೊಂಡಿದೆ.
24 ಕ್ಯಾರಟ್ ಚಿನ್ನದ ಬೆಲೆ:
ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಇಂದು 24 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 8,978 ರೂ. ಇದೆ. ಪ್ರತಿ ಹತ್ತು ಗ್ರಾಂಗೆ 89,780 ರೂ. ಇದೆ. ಹಾಗೆಯೇ ಪ್ರತಿ 100 ಗ್ರಾಂ ಚಿನ್ನದ ಬೆಲೆ 8 ಲಕ್ಷ 97 ಸಾವಿರದ 800 ಇದೆ. ಅಂದರೆ 24 ಕ್ಯಾರಟ್ ಚಿನ್ನದ ಬೆಲೆಯೂ ನಿನ್ನೆ ಎಷ್ಟಿತ್ತೋ ಅಷ್ಟೇ ಕಾಯ್ದಿರಿಸಿಕೊಂಡಿದೆ.
18 ಕ್ಯಾರಟ್ ಚಿನ್ನದ ಬೆಲೆ:
ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಇಂದು 18 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 6,734 ರೂ. ಇದೆ. ಪ್ರತಿ ಹತ್ತು ಗ್ರಾಂಗೆ 67,340 ರೂ. ಇದೆ. ಹಾಗೆಯೇ ಪ್ರತಿ 100 ಗ್ರಾಂ ಚಿನ್ನದ ಬೆಲೆ 6 ಲಕ್ಷ 73 ಸಾವಿರದ 400 ಇದೆ. ಅಂದರೆ 18 ಕ್ಯಾರಟ್ ಚಿನ್ನದ ಬೆಲೆಯೂ ನಿನ್ನೆ ಎಷ್ಟಿತ್ತೋ ಅಷ್ಟೇ ಕಾಯ್ದಿರಿಸಿಕೊಂಡಿದೆ.
ಭಾರತದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ (1 ಗ್ರಾಂ)
ಚೆನ್ನೈ: ಚೆನ್ನೈನಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹8,230 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹8,978 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹6,795 ಆಗಿದೆ.
ಮುಂಬೈ: ಮುಂಬೈನಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹8,230 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹8,978 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹6,734 ಆಗಿದೆ.
ದೆಹಲಿ: ದೆಹಲಿಯಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹8,245 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹8,998 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹6,746 ಆಗಿದೆ.
ಕೋಲ್ಕತಾ: ಕೋಲ್ಕತ್ತಾದಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹8,230 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹8,978 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹6,734 ಆಗಿದೆ.
ಬೆಂಗಳೂರು: ಬೆಂಗಳೂರಿನಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹8,230 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹8,978 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹6,734 ಆಗಿದೆ.
ಹೈದರಾಬಾದ್: ಹೈದರಾಬಾದ್‌ನಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹8,230 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹8,978 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹6,734 ಆಗಿದೆ.
ಕೇರಳ: ಕೇರಳದಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹8,230 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹8,978 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹6,734 ಆಗಿದೆ.
ಪುಣೆ: ಪುಣೆಯಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹8,230 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹8,978 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹6,734 ಆಗಿದೆ.
ಬರೋಡಾ: ಬರೋಡಾದಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹8,235 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹8,988 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹6,738 ಆಗಿದೆ.
ಅಹಮದಾಬಾದ್: ಅಹಮದಾಬಾದ್‌ನಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹8,235 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹8,988 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹6,738 ಆಗಿದೆ.
ಭಾರತದಲ್ಲಿ ಇಂದು ಬೆಳ್ಳಿ ಬೆಲೆ:
ಇನ್ನು ಭಾರತದಲ್ಲಿ ಬೆಳ್ಳಿ ಬೆಲೆಯಲ್ಲೂ ಯಾವುದೇ ಇಳಿಕೆಯಾಗಲಿ, ಏರಿಕೆಯಾಗಲೀ ಆಗಿಲ್ಲ. ಅಂದರೆ ಪ್ರತಿ ಗ್ರಾಂ ಬೆಳ್ಳಿಗೆ ₹101ಇದೆ. ಪ್ರತಿ ಹತ್ತು ಗ್ರಾಂ ಬೆಳ್ಳಿ ಬೆಲೆಗೆ ₹1,010 ಆಗಿದೆ. ಹಾಗೆಯೇ ಪ್ರತಿ 100 ಗ್ರಾಂ ಬೆಳ್ಳಿಗೆ ₹10,100 ಆಗಿದ್ದು, ಒಂದು ಕೆ.ಜಿ ಬೆಳ್ಳಿಗೆ ₹1,01,000 ಆಗಿದೆ. ಬೆಳ್ಳಿ ಬೆಲೆಯಲ್ಲೂ ಯಾವುದೇ ಬದಲಾವಣೆಯಾಗಿಲ್ಲ.
ಸ್ಪಾಟ್ ಗೋಲ್ಡ್ ವಿವರ:
ಮಾರ್ಚ್ 21, 2025ರ ಪ್ರಕಾರ ಸ್ಪಾಟ್ ಗೋಲ್ಡ್ ಬೆಲೆಯು ಪ್ರತಿ ಔನ್ಸ್‌ಗೆ $3,034.09 ವಹಿವಾಟು ನಡೆಸಿದೆ. ಹಿಂದಿನ ದಿನದೊಂದಿಗೆ ಹೋಲಿಸಿದರೆ 0.3% ಇಳಿಕೆಯನ್ನು ಸೂಚಿಸುತ್ತದೆ. ಇದು ಚಿನ್ನದ ದರವು ಹಿಂದಿನ ದಿನದ ದಾಖಲೆಯ ಗರಿಷ್ಠ ದರವಾದ $3,057.21 ರಿಂದ ಸ್ವಲ್ಪ ಇಳಿಕೆಯಾಗಿರುವುದನ್ನು ತೋರಿಸುತ್ತದೆ.
ಇನ್ನು ಅಮೇರಿಕಾದ ಫೆಡರಲ್ ರಿಸರ್ವ್ ಬಡ್ಡಿದರಗಳನ್ನು ಸ್ಥಿರವಾಗಿರಿಸಿದ್ದು, ಮುಂದಿನ ದಿನಗಳಲ್ಲಿ ಬಡ್ಡಿದರ ಕಡಿತದ ನಿರೀಕ್ಷೆಗಳನ್ನು ಹುಟ್ಟಿಸಿದೆ, ಇದು ಚಿನ್ನದ ದರ ಏರಿಕೆಗೆ ಮತ್ತೊಂದು ಕಾರಣವಾಗಿದೆ.


Click it and Unblock the Notifications