ಡಿಸೆಂಬರ್ 23ರಂದು, ಭಾರತದಲ್ಲಿ ಚಿನ್ನದ ದರ ಸ್ಥಿರವಾಗಿದೆ. ಸತತವಾಗಿ ಎರಡು ದಿನಗಳಿಂದ ಚಿನ್ನದ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ. ಡಿಸೆಂಬರ್ 21 ರಂದು 6,000 ರೂ. ಏರಿಕೆಯಾಗಿದ್ದ ಚಿನ್ನದ ದರ 22 ಮತ್ತು 23ರಂದು ಕೂಡ ಹಾಗೆ ಇದೆ. ಯಾವುದೇ ಬದಲಾವಣೆಯಾಗಿಲ್ಲ. ಜಾಗತಿಕವಾಗಿ ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಹಿನ್ನೆಲೆ ಭಾರತದಲ್ಲಿ ಚಿನ್ನದ ಬೆಲೆಗಳಲ್ಲಿ ವ್ಯತ್ಯಾಸವನ್ನ ಕಾಣುವಂತಾಗಿದೆ. ಫೆಡ್ ದರ ಇಳಿಕೆ ಮತ್ತು ಅದರ ಮುನದ್ಸೂಚನೆಗಳ ಹೊರತಾಗಿಯು ಕೂಡ ಎರಡು ದಿನಗಳಿಂದ ಚಿನ್ನದ ಬೆಲೆಗಳು ಒತ್ತಡದಲ್ಲಿದ್ದಂತಿವೆ. ಅಲ್ಲದೆ ಯುಎಸ್ ಹಣದುಬ್ಬರ ಹೆಚ್ಚಾಗಿ ನವೆಂಬರ್‌ನಲ್ಲಿ ಅನಿರೀಕ್ಷಿತತೆ ಉಂಟಾದ ಕಾರಣ ಚಿನ್ನದ ಬೆಲೆಯಲ್ಲಿ ಏರಿಳಿತವನ್ನ ಕಾಣುವಂತಾಯಿತು. ಡಾಲರ್ ತನ್ನ ಎರಡು ವರ್ಷಗಳ ಗರಿಷ್ಠ ಮಟ್ಟದಿಂದ ಹಿಂದೆ ಸರಿದಿದ್ದು, ಸ್ಪಾಟ್ ಚಿನ್ನದ ಬೆಲೆಗಳ ಮೇಲೆ ಗಮನಾರ್ಹ ಚೇತರಿಕೆ ಕಂಡಿತು.
ಭಾರತದದಲ್ಲಿ ಚಿನ್ನ ದರಗಳು
ಇಂದು ಭಾರತದಲ್ಲಿ ಚಿನ್ನದ ದರ ಸ್ಥಿರವಾಗಿದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 71,000 ರೂ. ಇದೆ. ಮತ್ತು 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 77,450 ರೂ. ಇದೆ. ಬೆಂಗಳೂರಿನಲ್ಲಿ 18 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 58,090 ರೂ. ಆಗಿದೆ. ಹಾಗೆ 22 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ 7,10,000 ರೂ. ಇದೆ. ಮತ್ತು 24 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ 7,74,500ರೂ. ಇದೆ.

ಭಾರತದಲ್ಲಿ ಬೆಳ್ಳಿ ದರಗಳು
ಇಂದು ಭಾರತದಲ್ಲಿ ಬೆಳ್ಳಿ ಬೆಲೆ ಇಳಿಕೆಯಾಗಿದೆ . ಪ್ರಸ್ತುತ, ಭರತದಲ್ಲಿ 1 ಗ್ರಾಂ ಚಿನ್ನದ ಬೆಲೆ 91.40 ರೂ ಇದೆ. ಹಾಗೆ 1 ಕಿಲೋ ಗ್ರಾಂ ಬೆಳ್ಳಿ ಬೆಲೆ 100 ರೂ ಇಳಿಕೆಯಾಗಿದೆ 91,400 ರೂ. ಆಗಿದೆ. ನಿನ್ನೆ 91,500 ರೂ ಇದ್ದ ಬೆಳ್ಳಿ ಬೆಲೆ ಇಂದು ಇಳಿಕೆಯಾಗಿದೆ. ಅದೇ ರೀತಿ ನಿನ್ನೆ 915ರೂ. ಇದ್ದ 100 ಗ್ರಾಂ ಬೆಳ್ಳಿಯ ಬೆಲೆ ಇಂದು 914 ರೂ. ಆಗಿದೆ.
ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರಗಳು
| ನಗರ | ಇಂದಿನ ಚಿನ್ನದ ಬೆಲೆ | ||
| ಚೆನ್ನೈ | 7,100 ರೂ | ||
| ಮುಂಬೈ | 7,100 ರೂ | ||
| ದೆಹಲಿ | 7,115 ರೂ | ||
| ಕೋಲ್ಕತ್ತಾ | 7,100 ರೂ | ||
| ಬೆಂಗಳೂರು | 7,100 ರೂ | ||
| ಹೈದರಾಬಾದ್ | 7,100 ರೂ | ||
MCX ಗೋಲ್ಡ್ ಔಟ್‌ಲುಕ್
ತಾಂತ್ರಿಕವಾಗಿ ದೈನಂದಿನ ಚಾರ್ಟ್‌ನಲ್ಲಿ ಬುಲಿಶ್ ಕ್ಯಾಂಡಲ್ ರಚನೆಯೊಂದಿಗೆ MCX ಗೋಲ್ಡ್ ಪ್ರಮುಖ ಮಟ್ಟವಾದ 76400 ಗೆ ಮುಕ್ತಾಯವಾಗಿ, 76350-76850ಮಟ್ಟಗಳಲ್ಲಿ ವಹಿವಾಟು ನಡೆಸುತ್ತಿದೆ. ದೇಶೀಯ ಸರಕು ದೈನಂದಿನ ಚಾರ್ಟ್‌ನಲ್ಲಿ ಬುಲಿಶ್ ಆಯತ ಚಾರ್ಟ್ ಮಾದರಿಯಿಂದ ಧನಾತ್ಮಕ ಬ್ರೇಕ್‌ಔಟ್‌ಗೆ ಸಾಕ್ಷಿಯಾಗಿದೆ. ಇದು ಮಾರುಕಟ್ಟೆಯಲ್ಲಿ ಭಾಗವಹಿಸುವವರಲ್ಲಿ ಅಸ್ಪಷ್ಟ ವರ್ತನೆಯನ್ನು ಸೂಚಿಸುತ್ತದೆ. ಸರಕು ಹಿಂದಿನ ದಿನದ ಗರಿಷ್ಠ ಮಟ್ಟವಾದ 76850ಮಟ್ಟದ ನಂತರ ಇದು 77200/77700 ಮಟ್ಟಗಳ ಕಡೆಗೆ ಮುನ್ನಡೆಯಬಹುದು. MCX ಗೋಲ್ಡ್‌ಗೆ ಪ್ರಮುಖ ಬೆಂಬಲ 76000/75450 ಮಟ್ಟದಲ್ಲಿ ಇದೆ, ಭೌಗೋಳಿಕ ರಾಜಕೀಯ ಸಮಸ್ಯೆಗಳಿಂದಾಗಿ ವ್ಯತ್ಯಾಸಗಳು ಹೆಚ್ಚಿರಬಹುದು ಎಂದು ವೇ2ವೆಲ್ತ್ ಬ್ರೋಕರ್ಸ್ ಪ್ರೈವೇಟ್ ಲಿಮಿಟೆಡ್‌ನ ತಾಂತ್ರಿಕ ಸಂಶೋಧನಾ ವಿಶ್ಲೇಷಕರು ತಿಳಿಸಿದ್ದಾರೆ.
ಸ್ಪಾಟ್ ಚಿನ್ನದ ಭವಿಷ್ಯ
ಸ್ಪಾಟ್ ಚಿನ್ನವು $2635 ರ ಸಮೀಪದಲ್ಲಿ ಅಡಚಣೆಯ ನಡುವೆ ಮತ್ತು ಡಾಲರ್ ಬಲವರ್ದನೆಯಿಂದಾಗಿ 2580 ಡಾಲರ್ ಕಡೆಗೆ ಕೆಳಕ್ಕೆ ಚಲಿಸುವ ನಿರೀಕ್ಷೆ ಇದೆ. ಈ ವಾರ ಯುಎಸ್ ಡಾಲರ್‌ನ ದುರ್ಬಲತೆಯಿಂದಾಗಿ ಸೋಮವಾರ ಚಿನ್ನದ ಬೆಲೆಯಲ್ಲಿ ಯಾವದೇ ವ್ಯತ್ಯಾಸ ಕಂಡುಬಂದಿಲ್ಲ.0313 GMT ಯಲ್ಲಿ ಸ್ಪಾಟ್ ಚಿನ್ನ ಪ್ರತಿ ಔನ್ಸ್‌ಗೆ 2,642.10 ಡಾಲರ್‌ನಂತೆ 0.4%ನಷ್ಟು ಏರಿಕೆಯಾಗಿದೆ. ಇನ್ನು ರಾಯಿಟರ್ಸ್ ವರದಿ ಪ್ರಕಾರ ಯುಎಸ್ ಚಿನ್ನದ ಭವಿಷ್ಯ 0.1%ನಷ್ಟು ಇಳಿಕೆಯಾಗಿ 2,642.10 ಡಾಲರ್ ಆಗಿದೆ. ಇತ್ತ ಸ್ಪಾಟ್ ಬೆಳ್ಳಿ ಪ್ರತೀ ಔನ್ಸ್‌ಗೆ ಶೇಕಡಾ 0.7% ರಷ್ಟು ಏರಿಕೆಯಾಗಿ 31.98 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದೆ. ಅಲ್ಲದೆ ಇನ್ನು ಮುಂಬರುವ ವರ್ಷದಲ್ಲಿ ಚಿನ್ನದ ಬೆಲೆಯಲ್ಲಿ ಸಾಕಷ್ಟು ಏರಿಳಿತಗಳು ಉಂಟಾಗಲಿದೆ ಎನ್ನಲಾಗ್ತಿದೆ.
ಅಂತರಾಷ್ಟ್ರೀಯ ಷೇಟು ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇಂದು ಸ್ವಲ್ಪ ಮಟ್ಟಿಗೆ ಅಧಿಕ ವಹಿವಾಟುಗಳನ್ನ ನಡೆಸುತ್ತಿವೆ. ಇದರ ಜೊತೆಗೆ ಚಿನ್ನ, ಬೆಳ್ಳಿ ಎರಡೂ ಲೋಹಗಳು ಹೆಚ್ಚಿನ ಪ್ರಮಾಣದಲ್ಲಿ ವ್ಯಾಪಾರ ಮಾಡುತ್ತವೆ ಎಂಬ ನಿರೀಕ್ಷೆ ಇದೆ.


Click it and Unblock the Notifications