ಗುಡ್‌ನ್ಯೂಸ್..ಭಾರತದಲ್ಲಿ ಇಂದು ಚಿನ್ನದ ಬೆಲೆ ಇಳಿಕೆ! 24K ಚಿನ್ನದಲ್ಲಿ ₹1,100 ಕುಸಿತ, ಹಾಗಾದ್ರೆ 22K ಗೋಲ್ಡ್‌ ಬೆಲೆ ಎಷ್ಟು..?

ಚಿನ್ನ ಕೊಳ್ಳುವುದಕ್ಕಿಂತ ಸೈಟ್ ಅಥವಾ ಮನೆ ಮೇಲೆ ಹೂಡಿಕೆ ಮಾಡುವುದೇ ಎಷ್ಟೋ ಉತ್ತಮ ಎಂಬಂತಾಗಿದೆ. ಏಕೆಂದರೆ ಚಿನ್ನದ ಬೆಲೆ ಒಮ್ಮೆ ಅಲ್ಪ ಪ್ರಮಾಣದಲ್ಲಿ ಇಳಿಕೆಯಾದರೆ, ದಿಢೀರ್ ಅಂತಾ ಗಗನಕ್ಕೇರುತ್ತದೆ. ಆದರೆ ಇಂದು ಮಹಿಳೆಯರಿಗೆ ಸ್ವಲ್ಪ ಖುಷಿ ಸುದ್ದಿ ಸಿಕ್ಕಿದೆ ಏಕೆಂದರೆ ಇಂದು ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿಕೆಯಾಗಿದೆ. ಇದರಿಂದ ಚಿನ್ನದ ಬೆಲೆ ಯಾವಾಗ ಇಳಿಕೆಯಾಗುತ್ತದೆ ಎಂದು ಕಾಯುತ್ತಿದ್ದ ಮಹಿಳೆಯರಿಗೆ ಸ್ವಲ್ಪ ನಿರಾಳವಾಗಿದೆ.

ಚಿನ್ನದ ಬೆಲೆ ಇಳಿಕೆ..24 ಕ್ಯಾರಟ್‌ ಚಿನ್ನದಲ್ಲಿ ₹1,100 ಕುಸಿತ..!

ಕಳೆದ ಐದಾರು ದಿನಗಳಿಂದ ಚಿನ್ನದ ಬೆಲೆಯಲ್ಲಿ ಏರಿಳಿತ ಕಂಡು ಬರುತ್ತಿದೆ. ಐವತ್ತು, ನೂರು ರೂಪಾಯಿಗಳನ್ನು ಏರಿಕೆ ನೋಡುತ್ತಿದ್ದ ಚಿನ್ನ ಇಂದು ಇಳಿಮುಖವಾಗಿದೆ. ಇದರಿಂದ ಭಾರತೀಯರು ಖುಷಿ ಪಡುವಂತದ್ದಾಗಿದೆ. ಚಿನ್ನದ ಬೆಲೆಯಲ್ಲಿ ಇಳಿಕೆಯಾದರೂ ಅಷ್ಟೇನು ಹೆಚ್ಚಾಗಿ ವ್ಯತ್ಯಾಸ ಕಂಡುಬಂದಿಲ್ಲ. ಆದರೆ ಬೆಲೆ ಏರಿಕೆಯಾಗಿಲ್ಲ ಎನ್ನುವುದು ಈ ಬೆಳವಣಿಗೆಯಿಂದ ಸಮಾಧಾನ ತಂದಿದೆ.

Take a Poll

ಚಿನ್ನದ ಬೆಲೆಯಲ್ಲಿನ ಬದಲಾವಣೆಗಳಿಗೆ ಸಾಕಷ್ಟು ಕಾರಣಗಳಿವೆ..ಅಂದರೆ ಜಾಗತಿಕ ಚಿನ್ನದ ಬೆಲೆಗಳು ಪ್ರಮುಖವಾಗಿ ಡಾಲರ್‌ನ ಬಲ, ತೈಲದ ಬೆಲೆಗಳು, ಮತ್ತು ಜಿಯೋಪಾಲಿಟಿಕಲ್ ಘಟನೆಗಳ ಮೇಲೆ ಅವಲಂಬಿತವಾಗಿರುತ್ತವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿದಿದ್ದರೆ, ಅದರ ಪರಿಣಾಮ ಭಾರತೀಯ ಮಾರುಕಟ್ಟೆಯಲ್ಲಿಯೂ ಕಾಣಬಹುದು.ಅಮೆರಿಕಾದ ಕೇಂದ್ರ ಬ್ಯಾಂಕ್ ಬಡ್ಡಿದರಗಳನ್ನು ಹೆಚ್ಚಿಸಿದರೆ, ಹೂಡಿಕೆದಾರರು ಚಿನ್ನದ ಬದಲು ಬಡ್ಡಿದರ ಹೊಂದಿರುವ ಆಸ್ತಿಗಳಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸುತ್ತಾರೆ, ಇದು ಚಿನ್ನದ ಬೇಡಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಬೆಲೆ ಇಳಿಕೆಗೆ ಕಾರಣವಾಗುತ್ತದೆ. ಹಾಗೆಯೇ ರೂಪಾಯಿ ಮೌಲ್ಯವು ಡಾಲರ್ ಎದುರು ಬಲವಾಗಿದ್ದರೆ, ಚಿನ್ನದ ಆಮದು ವೆಚ್ಚ ಕಡಿಮೆಯಾಗುತ್ತದೆ, ಇದು ಸ್ಥಳೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿಕೆಗೆ ಕಾರಣವಾಗಬಹುದು. ವಿವಿಧ ಹಬ್ಬಗಳು, ವಿವಾಹ ಸೀಸನ್ ಮುಂತಾದ ಸಂದರ್ಭಗಳಲ್ಲಿ ಚಿನ್ನದ ಬೇಡಿಕೆ ಹೆಚ್ಚಾಗುತ್ತದೆ. ಆದರೆ, ಇಂತಹ ಸಂದರ್ಭಗಳಿಲ್ಲದಿದ್ದಾಗ ಅಥವಾ ಆರ್ಥಿಕ ಸ್ಥಿತಿಯಿಂದ ಬೇಡಿಕೆ ಕಡಿಮೆಯಾದಾಗ, ಬೆಲೆ ಇಳಿಯಬಹುದು.

ಸಭೆ-ಸಮಾರಂಭಗಳಲ್ಲಿ ಅತ್ಯಂತ ಆಕರ್ಷಣೀಯವಾಗಿರುವ ಚಿನ್ನಕ್ಕೆ, ಈಗ ಎಲ್ಲಿಲ್ಲದ ಬೇಡಿಕೆ. ಅದರಲ್ಲೂ ಮಹಿಳೆಯರಿಗೆ ಏನೇ ಕೊಟ್ಟರೂ ಚಿನ್ನ ಕೊಟ್ಟಾಗ ಆಗುವ ಖುಷಿ ಮತ್ತೆಲ್ಲೂ ಸಿಗುವುದಿಲ್ಲ. ಅದರಲ್ಲೂ ಇದು ಬೆಲೆ ಜಾಸ್ತಿಯಾಗುತ್ತಿದ್ದು, ಚಿನ್ನವನ್ನೇ ಉಡುಗೊರೆಯಾಗಿ ಕೊಟ್ಟರೆ ಮಹಿಳೆಯರ ಸಂತೋಷ ಆಕಾಶಕ್ಕೆ ಹಾರಿರುತ್ತದೆ. ಇನ್ನು ಭಾರತದಲ್ಲಿ ಚಿನ್ನಕ್ಕೆ ಅದರದ್ದೇ ಆದ ಮಹತ್ವವಿದೆ. ನಮ್ಮ ಸಂಸ್ಕೃತಿಯಲ್ಲಿ ಚಿನ್ನಕ್ಕೆ ಒಂದು ಮಹತ್ವ ನೀಡಲಾಗಿದೆ. ಇದರ ಬೆಲೆ ಎಷ್ಟೇ ಹೆಚ್ಚಾದರೂ ಇದರ ಮೇಲಿನ ಪ್ರೀತಿ ಕಡಿಮೆಯಾಗುವುದಿಲ್ಲ. ಹಾಗಾದರೆ ಭಾರತದಲ್ಲಿ ಇಂದು ಚಿನ್ನದ ಬೆಲೆ ಎಷ್ಟಿದೆ ಎಂದು ನೋಡೋಣ ಬನ್ನಿ.

ಭಾರತದಲ್ಲಿ ಚಿನ್ನದ ಬೆಲೆ

22 ಕ್ಯಾರಟ್ ಚಿನ್ನದ ಬೆಲೆ:

ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಇಂದು ಚಿನ್ನದ ಬೆಲೆ ಇಳಿಕೆಯಾಗಿದ್ದು, 22 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆ ₹8,210 ಆಗಿದೆ. ನಿನ್ನೆ ಇದರ ಬೆಲೆ ₹8,220 ಆಗಿದ್ದು ನಿನ್ನೆಗಿಂತ ಇಂದು, ₹10 ಕುಸಿತ ಕಂಡಿದೆ. ಹಾಗೆಯೇ 22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ ₹82,100 ಆಗಿದೆ. ನಿನ್ನೆಯ ಬೆಲೆ ₹82,200 ಆಗಿದ್ದು ನಿನ್ನೆಗಿಂತ ಇಂದಿಗೆ ₹100 ಕಡಿಮೆಯಾಗಿದೆ. ಇನ್ನು 22 ಕ್ಯಾರಟ್‌ನ 100 ಗ್ರಾಂ ಚಿನ್ನದ ಬೆಲೆ ಇಂದು 8 ಲಕ್ಷದ 21 ಸಾವಿರ ರೂ. ಆಗಿದೆ. ನಿನ್ನೆಯ ಬೆಲೆ ₹8,22,000 ರೂ. ಆಗಿದ್ದು ನಿನ್ನೆಗಿಂತ ಇಂದು ₹1,000 ಇಳಿಕೆಯಾಗಿದೆ.

24 ಕ್ಯಾರಟ್ ಚಿನ್ನದ ಬೆಲೆ:

ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಇಂದು ಚಿನ್ನದ ಬೆಲೆ ಇಳಿಕೆಯಾಗಿದ್ದು, 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆ ₹8,956 ಆಗಿದೆ. ನಿನ್ನೆ ಇದರ ಬೆಲೆ ₹8,967 ಆಗಿದ್ದು ನಿನ್ನೆಗಿಂತ ಇಂದು, ₹11 ಕುಸಿತ ಕಂಡಿದೆ. ಹಾಗೆಯೇ 24 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ ₹89,560 ಆಗಿದೆ. ನಿನ್ನೆಯ ಬೆಲೆ ₹89,670 ಆಗಿದ್ದು ನಿನ್ನೆಗಿಂತ ಇಂದಿಗೆ ₹110 ಕಡಿಮೆಯಾಗಿದೆ. ಇನ್ನು 24 ಕ್ಯಾರಟ್‌ನ 100 ಗ್ರಾಂ ಚಿನ್ನದ ಬೆಲೆ ಇಂದು 8 ಲಕ್ಷ 95 ಸಾವಿರದ 600 ರೂ. ಆಗಿದೆ. ನಿನ್ನೆಯ ಬೆಲೆ 8 ಲಕ್ಷ 96 ಸಾವಿರದ 700 ರೂ. ಆಗಿದ್ದು ನಿನ್ನೆಗಿಂತ ಇಂದು ₹1,100 ಇಳಿಕೆಯಾಗಿದೆ.

18 ಕ್ಯಾರಟ್ ಚಿನ್ನದ ಬೆಲೆ:

ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಇಂದು ಚಿನ್ನದ ಬೆಲೆ ಇಳಿಕೆಯಾಗಿದ್ದು, 18 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆ ₹6,718 ಆಗಿದೆ. ನಿನ್ನೆ ಇದರ ಬೆಲೆ ₹6,726 ಆಗಿದ್ದು ನಿನ್ನೆಗಿಂತ ಇಂದು, 8 ರೂ. ಕುಸಿತ ಕಂಡಿದೆ. ಹಾಗೆಯೇ 18 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ ₹67,180 ಆಗಿದೆ. ನಿನ್ನೆಯ ಬೆಲೆ ₹67,260 ಆಗಿದ್ದು ನಿನ್ನೆಗಿಂತ ಇಂದಿಗೆ 80 ರೂ. ಕಡಿಮೆಯಾಗಿದೆ. ಇನ್ನು 18 ಕ್ಯಾರಟ್‌ನ 100 ಗ್ರಾಂ ಚಿನ್ನದ ಬೆಲೆ ಇಂದು 6 ಲಕ್ಷ 71 ಸಾವಿರದ 800 ರೂ. ಆಗಿದೆ. ನಿನ್ನೆಯ ಬೆಲೆ 6 ಲಕ್ಷ 72 ಸಾವಿರದ 600 ರೂ. ಆಗಿದ್ದು ನಿನ್ನೆಗಿಂತ ಇಂದು 800 ರೂ. ಇಳಿಕೆಯಾಗಿದೆ.

ಭಾರತದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ (1 ಗ್ರಾಂ)

ಚೆನ್ನೈ: ಚೆನ್ನೈನಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹8,210 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹8,956 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹6,775 ಆಗಿದೆ.

ಮುಂಬೈ: ಮುಂಬೈನಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹8,210 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹8,956 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹6,718 ಆಗಿದೆ.

ದೆಹಲಿ: ದೆಹಲಿಯಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹8,225 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹8,971 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹6,718 ಆಗಿದೆ.

ಕೋಲ್ಕತಾ: ಕೋಲ್ಕತ್ತಾದಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹8,210 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹8,956 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹6,726 ಆಗಿದೆ.

ಬೆಂಗಳೂರು: ಬೆಂಗಳೂರಿನಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹8,210 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹8,956 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹6,726 ಆಗಿದೆ.

ಹೈದರಾಬಾದ್: ಹೈದರಾಬಾದ್‌ನಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹8,210 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹8,956 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹6,726 ಆಗಿದೆ.

ಕೇರಳ: ಕೇರಳದಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹8,210 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹8,956 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹6,726 ಆಗಿದೆ.

ಪುಣೆ: ಪುಣೆಯಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹8,210 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹8,956 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹6,726 ಆಗಿದೆ.

ಬರೋಡಾ: ಬರೋಡಾದಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹8,215 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹8,961 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹6,722 ಆಗಿದೆ.

ಅಹಮದಾಬಾದ್: ಅಹಮದಾಬಾದ್‌ನಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹8,215 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹8,961 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹6,722 ಆಗಿದೆ.

ಭಾರತದಲ್ಲಿ ಇಂದಿನ ಬೆಳ್ಳಿ ಬೆಲೆ:

ಭಾರತದಲ್ಲಿ ಇಂದಿನ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದ್ದರೂ ಹೆಚ್ಚೇನು ವ್ಯತ್ಯಾಸ ಕಂಡುಬಂದಿಲ್ಲ. ಇಂದು ಪ್ರತಿ ಗ್ರಾಂ ಬೆಳ್ಳಿ ಬೆಲೆಯಲ್ಲಿ ₹0.10 ಇಳಿಕೆ ಕಂಡುಬಂದಿದೆ. ನಿನ್ನೆ ಒಂದು ಗ್ರಾಂ ಬೆಳ್ಳಿ ಬೆಲೆ ₹103 ಇತ್ತು. ಇಂದು ಇದರ ಬೆಲೆ ₹102.90 ಆಗಿದೆ. ಹಾಗೆಯೇ 10 ಗ್ರಾಂ ಬೆಳ್ಳಿ ಬೆಲೆ ನಿನ್ನೆ ₹1,030 ಆಗಿತ್ತು, ಇಂದು ಇದರ ಬೆಲೆ ₹1,029 ಆಗಿದ್ದು ನಿನ್ನೆಗಿಂತ 1 ರೂ. ಇಳಿಕೆಯಾಗಿದೆ. 100 ಗ್ರಾಂ ಬೆಳ್ಳಿ ಬೆಲೆ ನಿನ್ನೆ ₹10,300 ಆಗಿತ್ತು, ಇಂದು ಇದರ ಬೆಲೆ ₹10,290 ಆಗಿದ್ದು ನಿನ್ನೆಗಿಂತ ₹10 ರೂ. ಇಳಿಕೆಯಾಗಿದೆ. ಇನ್ನು ಒಂದು ಕೆ.ಜಿ ಬೆಳ್ಳಿ ಬೆಲೆ ನಿನ್ನೆ ₹1,03,000 ಆಗಿತ್ತು ಇಂದು ಇದರ ಬೆಲೆ ₹1,02,900 ಆಗಿದೆ. ಅಂದರೆ ನಿನ್ನೆಗಿಂತ ಇದರ ಬೆಲೆಯಲ್ಲಿ ₹100 ಇಳಿಕೆ ಕಂಡುಬಂದಿದೆ.

ಸ್ಪಾಟ್ ಗೋಲ್ಡ್ ವಿವರ:

ಇಂದಿನ (ಮಾರ್ಚ್ 17) ಸ್ಪಾಟ್ ಗೋಲ್ಡ್ ಬೆಲೆಯಲ್ಲಿ 0.1% ಏರಿಕೆ ಕಂಡುಬಂದಿದೆ. ಹಾಗೂ ಇದು $2,986.53ಕ್ಕೆ ವಹಿವಾಟು ನಡೆಸುತ್ತಿದೆ.. ಇದಕ್ಕೆ ಮುನ್ನ, ಮಾರ್ಚ್ 14, 2025 ರಂದು ಚಿನ್ನದ ಬೆಲೆ ಮೊದಲ ಬಾರಿಗೆ $3,000 ಪ್ರತಿ ಔನ್ಸ್ ಮೀರತ್ತು. ಹಾಗೆಯೇ ಇದು ಚಾರಿತ್ರಿಕ ಮೈಲಿಗಲ್ಲಾಗಿ ಬದಲಾಯಿತು.

ಈ ದರ ಏರಿಕೆಗೆ ಪ್ರಮುಖ ಕಾರಣಗಳೆಂದರೆ, ಪ್ರಸ್ತುತ ನಡೆಯುತ್ತಿರುವ ಜಿಯೋಪಾಲಿಟಿಕಲ್ ಉದ್ವಿಗ್ನತೆಗಳು, ವ್ಯಾಪಾರ ಯುದ್ಧದ ಭಯಗಳು ಮತ್ತು ಯುನೈಟೆಡ್ ಸ್ಟೇಟ್ಸ್ ಫೆಡರಲ್ ರಿಸರ್ವ್ ಶೀಘ್ರದಲ್ಲೇ ಬಡ್ಡಿದರ ಕಡಿತಗೊಳಿಸಬಹುದೆಂಬ ನಿರೀಕ್ಷೆಗಳು. ಈ ಎಲ್ಲಾ ಅಂಶಗಳು ಚಿನ್ನವನ್ನು ಸುರಕ್ಷಿತ ಹೂಡಿಕೆಯಾಗಿ ಮಾಡಿದ್ದು, ಆರ್ಥಿಕ ಅನಿಶ್ಚಿತತೆಯ ನಡುವೆ ಹೂಡಿಕೆದಾರರು ಹೆಚ್ಚಿನ ಪ್ರಮಾಣದಲ್ಲಿ ಚಿನ್ನ ಖರೀದಿಸಲು ಮುನ್ನಡೆಸಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+