ನಾರಿ ಮಣಿಯರ ಪಾಲಿಗೆ ಇದು ಅಂತಿಂಥಾ ಕಹಿಸುದ್ದಿಯಲ್ಲ. ನಿನ್ನೆ ಮೊನ್ನೆ ಚಿನ್ನದ ಬೆಲೆಯಲ್ಲಿ ಕೊಂಚವೇ ಇಳಿಕೆಯಾಗಿತ್ತು. ಇದನ್ನು ಗಮನಿಸಿ ಚಿನ್ನದ ಬೆಲೆ ಇನ್ನಷ್ಟು ಇಳಿಕೆಯಾಗಬಹುದು ಎಂದು ಕಾದು ಕುಳಿತಿದ್ದ ಮಹಿಳೆಯರಿಗೆ ಬಹುದೊಡ್ಡ ನಿರಾಸೆಯಾಗಿದೆ. ಯಾಕೆಂದರೆ ಇಂದು ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಭಾರಿ ಏರಿಕೆಯಾಗಿದೆ. ನಿನ್ನೆ ಮೊನ್ನೆ ಇಳಿಕೆಯಾಗಿದ್ದ ಬೆಲೆಗಿಂತ ದುಪ್ಪಟ್ಟು ಪ್ರಮಾಣದಲ್ಲಿ ಚಿನ್ನದ ಬೆಲೆ ಇಂದು ಒಂದೇ ದಿನ ಏರಿಕೆಯಾಗಿದೆ. ಷ್ಟು ದಿನ ಹತ್ತು, ಇಪ್ಪತ್ತು, ಐವತ್ತು, ನೂರು ರೂಪಾಯಿಗಳಲ್ಲಿ ಏರಿಕೆ-ಇಳಿಕೆಯಾಗುತ್ತಿದ್ದ ಚಿನ್ನ ಇಂದು ಮತ್ತಷ್ಟು ದುಬಾರಿಯಾಗಿದೆ. ಚಿನ್ನದ ಬೆಲೆ ಕಡಿಮೆಯಾಗಬಹುದು ಎಂದು ಕಾದು ಕುಳಿತಿದ್ದ ಮಹಿಳೆಯರಿಗೆ ಭಾರಿ ನಿರಾಸೆಯಾಗಿದೆ. ಚಿನ್ನದ ಬೆಲೆಯಲ್ಲಿ ಎಷ್ಟು ಏರಿಕೆಯಾಗಿದೆ ಎಂದು ತಿಳಿಯಲು ಹೋದರೆ ಸುಸ್ತಾಗಿಬಿಡುತ್ತದೆ. ಚಿನ್ನ ಕೊಳ್ಳೋದೇ ಬೇಡ, ಕೇವಲ ಚಿನ್ನದ ಬೆಲೆ ಕೇಳಿದ್ರೆನೆ ಬೆವರಿಳಿಯುತ್ತದೆ. ಅಷ್ಟಾಗಿದೆ ಇಂದಿನ ಚಿನ್ನದ ಬೆಲೆಯಲ್ಲಿ ಏರಿಕೆ.

ಇನ್ನು ಮಹಿಳೆಯರಿಗಂತೂ ಚಿನ್ನದ ಮೇಲಿರುವ ಪ್ರೀತಿ ಅಷ್ಟಿಷ್ಟಲ್ಲ. ಚಿನ್ನ ಎಂದರೆ ಪ್ರಾಣ ಬಿಡುತ್ತಾರೆ. ಸಭೆ ಸಮಾರಂಭಗಳಲ್ಲಿ ಪ್ರತಿಷ್ಠೆ ತಂದುಕೊಡುವುದೇ ಚಿನ್ನ. ಅತ್ಯಂತ ಆಕರ್ಷಣೀಯವಾಗಿರುವ ಚಿನ್ನಕ್ಕೆ, ಈಗ ಎಲ್ಲಿಲ್ಲದ ಬೇಡಿಕೆ. ಅದರಲ್ಲೂ ಮಹಿಳೆಯರಿಗೆ ಏನೇ ಕೊಟ್ಟರೂ ಚಿನ್ನ ಕೊಟ್ಟಾಗ ಆಗುವ ಖುಷಿ ಮತ್ತೆಲ್ಲೂ ಸಿಗುವುದಿಲ್ಲ. ಆಭರಣದ ರೂಪದಲ್ಲಿ ಮಹಿಳೆಯರಿಗೆ ಆಕರ್ಷಣೆ ನೀಡುವ ಈ ಚಿನ್ನಕ್ಕೆ ಭಾರತದಲ್ಲಿ ದಿನೇ ದಿನೆ ಡಿಮ್ಯಾಂಡ್ ಹೆಚ್ಚುತ್ತಲೇ ಇದೆ.
ಭಾರತದಲ್ಲಿ ಚಿನ್ನಕ್ಕೆ ಒಂದು ಮಹತ್ವವಾದ ಸ್ಥಾನವಿದೆ. ಚಿನ್ನವನ್ನು ಪ್ರತಿಷ್ಠೆಯ ಸಂಕೇತ ಎಂತಲೂ ಭಾರತದಲ್ಲಿ ಪ್ರತಿನಿಧಿಸಲಾಗುತ್ತದೆ. ಸಭೆ ಸಮಾರಂಭಗಳಲ್ಲಿ ಒಡವೆಯೇ ಆಕರ್ಷಣೆ. ಹೀಗಾಗಿ ಮಹಿಳೆಯರಿಗೆ ಅತಿ ಪ್ರಿಯಾವಾದುದ್ದು ಈ ಚಿನ್ನ. ಮಹಿಳೆಯರಿಗೆ ಏನೇ ಕೊಟ್ಟರೂ ಚಿನ್ನ ಕೊಟ್ಟಾಗ ಆಗುವ ಖುಷಿ ಮತ್ತೆಲ್ಲೂ ಸಿಗುವುದಿಲ್ಲ. ಅದರಲ್ಲೂ ಇದು ಬೆಲೆ ಜಾಸ್ತಿಯಾಗುತ್ತಿದ್ದು, ಚಿನ್ನವನ್ನೇ ಉಡುಗೊರೆಯಾಗಿ ಕೊಟ್ಟರೆ ಮಹಿಳೆಯರ ಸಂತೋಷ ಆಕಾಶಕ್ಕೆ ಹಾರಿರುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಚಿನ್ನಕ್ಕೆ ಒಂದು ಮಹತ್ವ ನೀಡಲಾಗಿದೆ. ಇದರ ಬೆಲೆ ಎಷ್ಟೇ ಹೆಚ್ಚಾದರೂ ಇದರ ಮೇಲಿನ ಪ್ರೀತಿ ಕಡಿಮೆಯಾಗುವುದಿಲ್ಲ. ಹಾಗಾದರೆ ಭಾರತದಲ್ಲಿ ಇಂದು ಚಿನ್ನದ ಬೆಲೆ ಎಷ್ಟಿದೆ ಎಂದು ನೋಡೋಣ ಬನ್ನಿ.
ಭಾರತದಲ್ಲಿ ಇಂದಿನ ಚಿನ್ನದ ಬೆಲೆ:
22 ಕ್ಯಾರಟ್ ಚಿನ್ನದ ಬೆಲೆ:
ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿಇಂದಿನ ಚಿನ್ನದ ಬೆಲೆ ಏರಿಕೆಯಾಗಿದೆ. 22 ಕ್ಯಾರಟ್‌ನ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,340 ಇದೆ. ಅಂದರೆ ನಿನ್ನೆ ₹8,235 ಆಗಿದ್ದು ಇಂದು ₹105 ಹೆಚ್ಚಳವಾಗಿದೆ. 22 ಕ್ಯಾರಟ್‌ನ ಚಿನ್ನದ ಬೆಲೆ 10 ಗ್ರಾಂಗೆ 83 ಸಾವಿರದ 400 ರೂ. ಇದೆ. ಅಂದರೆ ನಿನ್ನೆ 82 ಸಾವಿರದ 350 ರೂ. ಆಗಿದ್ದು ಇಂದು ₹1,050 ಹೆಚ್ಚಳವಾಗಿದೆ. ಹಾಗೆಯೇ 22 ಕ್ಯಾರಟ್‌ನ ಚಿನ್ನದ ಬೆಲೆ 100 ಗ್ರಾಂಗೆ 8 ಲಕ್ಷದ 34 ಸಾವಿರ ರೂ. ಆಗಿದೆ. ಅಂದರೆ ನಿನ್ನೆ 8 ಲಕ್ಷ 23 ಸಾವಿರದ 500 ರೂ. ಆಗಿದ್ದು ಇಂದು ₹10,500 ಹೆಚ್ಚಳವಾಗಿದೆ.
24 ಕ್ಯಾರಟ್ ಚಿನ್ನದ ಬೆಲೆ:
ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿಇಂದಿನ ಚಿನ್ನದ ಬೆಲೆ ಏರಿಕೆಯಾಗಿದೆ. 24 ಕ್ಯಾರಟ್‌ನ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9,098 ಇದೆ. ಅಂದರೆ ನಿನ್ನೆ ₹8,984 ಆಗಿದ್ದು ಇಂದು ₹114 ಹೆಚ್ಚಳವಾಗಿದೆ. 24 ಕ್ಯಾರಟ್‌ನ ಚಿನ್ನದ ಬೆಲೆ 10 ಗ್ರಾಂಗೆ 90 ಸಾವಿರದ 980 ರೂ. ಇದೆ. ಅಂದರೆ ನಿನ್ನೆ 89 ಸಾವಿರದ 840 ರೂ. ಆಗಿದ್ದು ಇಂದು ₹1,140 ಹೆಚ್ಚಳವಾಗಿದೆ. ಹಾಗೆಯೇ 24 ಕ್ಯಾರಟ್‌ನ ಚಿನ್ನದ ಬೆಲೆ 100 ಗ್ರಾಂಗೆ 9 ಲಕ್ಷದ 9 ಸಾವಿರದ 800 ರೂ. ಆಗಿದೆ. ಅಂದರೆ ನಿನ್ನೆ 8 ಲಕ್ಷ 98 ಸಾವಿರದ 400 ರೂ. ಆಗಿದ್ದು ಇಂದು ₹11,400 ಹೆಚ್ಚಳವಾಗಿದೆ.
18 ಕ್ಯಾರಟ್ ಚಿನ್ನದ ಬೆಲೆ:
18 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹6,824 ಇದೆ. ಅಂದರೆ ನಿನ್ನೆಯ ಬೆಲೆ ₹6,738 ಆಗಿದ್ದು ಇಂದು ಪ್ರತಿ ಗ್ರಾಂಗೆ ₹86 ಏರಿಕೆಯಾಗಿದೆ. 18 ಕ್ಯಾರಟ್‌ನ ಚಿನ್ನದ ಬೆಲೆ 10 ಗ್ರಾಂಗೆ 68 ಸಾವಿರದ 240 ರೂ. ಇದೆ. ಅಂದರೆ ನಿನ್ನೆಯ ಬೆಲೆ 67 ಸಾವಿರದ 380 ರೂ. ಆಗಿದ್ದು ಇಂದು ಪ್ರತಿ ಗ್ರಾಂಗೆ ₹860 ಏರಿಕೆಯಾಗಿದೆ. ಹಾಗೆಯೇ ಕ್ಯಾರಟ್‌ನ ಚಿನ್ನದ ಬೆಲೆ 100 ಗ್ರಾಂಗೆ 6 ಲಕ್ಷ 82 ಸಾವಿರದ 400 ರೂ. ಆಗಿದೆ. ಅಂದರೆ ನಿನ್ನೆಯ ಬೆಲೆ 6 ಲಕ್ಷದ 73 ಸಾವಿರದ 800 ರೂ. ಆಗಿದ್ದು ಇಂದು ₹8,600 ಏರಿಕೆಯಾಗಿದೆ.
ಭಾರತದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ (1 ಗ್ರಾಂ)
ಚೆನ್ನೈ: ಚೆನ್ನೈನಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹8,340 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹9,098 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹6,885 ಆಗಿದೆ.
ಮುಂಬೈ: ಮುಂಬೈನಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹8,340 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹9,098 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹6,824 ಆಗಿದೆ.
ದೆಹಲಿ: ದೆಹಲಿಯಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹8,355 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹9,113 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹6,836 ಆಗಿದೆ.
ಕೋಲ್ಕತಾ: ಕೋಲ್ಕತ್ತಾದಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹8,340 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹9,098 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹6,824 ಆಗಿದೆ.
ಬೆಂಗಳೂರು: ಬೆಂಗಳೂರಿನಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹8,340 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹9,098 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹6,824 ಆಗಿದೆ.
ಹೈದರಾಬಾದ್: ಹೈದರಾಬಾದ್‌ನಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹8,340 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹9,098 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹6,824 ಆಗಿದೆ.
ಕೇರಳ: ಕೇರಳದಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹8,340 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹9,098 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹6,824 ಆಗಿದೆ.
ಪುಣೆ: ಪುಣೆಯಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹8,340 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹9,098 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹6,824 ಆಗಿದೆ.
ಬರೋಡಾ: ಬರೋಡಾದಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹8,345 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹9,103 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹6,828 ಆಗಿದೆ.
ಅಹಮದಾಬಾದ್: ಅಹಮದಾಬಾದ್‌ನಲ್ಲಿ ಇಂದು 1 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹8,345 ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ ₹9,103 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹6,828 ಆಗಿದೆ.
ಭಾರತದಲ್ಲಿ ಇಂದು ಬೆಳ್ಳಿ ಬೆಲೆ:
ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಇಂದು ಬೆಳ್ಳಿ ಬೆಲೆಯಲ್ಲೂ ದಾಖಲೆ ಪ್ರಮಾಣದ ಏರಿಕೆಯಾಗಿದೆ. ಪ್ರತಿ ಗ್ರಾಂ ಬೆಳ್ಳಿ ಬೆಲೆಯಲ್ಲಿ ₹3 ರಷ್ಟು ಏರಿಕೆಯಾಗಿದೆ. ಅಂದರೆ ಇಂದಿನ ಬೆಳ್ಳಿ ಬೆಲೆ ಪ್ರತಿ ಗ್ರಾಂಗೆ ₹105 ಇದೆ. ನಿನ್ನೆ ಈ ಬೆಲೆ ₹102 ಇತ್ತು. ಹಾಗೆಯೇ ಪ್ರತಿ 10 ಗ್ರಾಂ ಬೆಳ್ಳಿ ಬೆಲೆ ₹1,050 ಆಗಿದೆ. ನಿನ್ನೆ ಈ ಬೆಲೆ ₹1,020 ಆಗಿದ್ದು ಇಂದು ₹30 ಏರಿಕೆಯಾಗಿದೆ. ಹಾಗೆಯೇ 100 ಗ್ರಾಂ ಬೆಳ್ಳಿ ಬೆಲೆ ಇಂದು, ₹10,500 ಆಗಿದೆ. ನಿನ್ನೆ ಈ ಬೆಲೆ ₹10,200 ಆಗಿತ್ತು. ಅಂದರೆ ಇಂದು ₹300 ಹೆಚ್ಚಾಗಿದೆ. ಇನ್ನು ಒಂದು ಕೆ.ಜಿ ಬೆಳ್ಳಿ ಬೆಲೆ ಇಂದು ₹1,05,000 ಆಗಿದೆ. ನಿನ್ನೆ ಈ ಬೆಲೆ ₹1,02,000 ಆಗಿದ್ದು ಇಂದು ₹3,000 ಏರಿಕೆಯಾಗಿದೆ.
ಸ್ಪಾಟ್ ಗೋಲ್ಡ್ ವಿವರ:
ಇಂದು (ಮಾರ್ಚ್ 28) ಸ್ಪಾಟ್ ಚಿನ್ನದ ಬೆಲೆಯಲ್ಲಿ 0.6% ಏರಿಕೆ ಕಂಡುಬಂದಿದೆ, ಇದು 0400 GMT ವೇಳೆಗೆ 3,074.31 ಡಾಲರ್ ಪ್ರತಿ ಔನ್ಸ್‌ಗೆ ವಹಿವಾಟು ನಡೆಸಿದೆ. ಚಿನ್ನದ ದರದ ಇತಿಹಾಸದಲ್ಲಿ ಮೊದಲು ಕಂಡು ಬಂದ ಗರಿಷ್ಠ ಬೆಲೆಯಾದ 3,077.44 ಡಾಲರ್ ಮಟ್ಟವನ್ನು ತಲುಪಿತು. ಈ ವಾರದಲ್ಲಿ ಚಿನ್ನದ ಬೆಲೆ ಒಟ್ಟು 1.7% ಹೆಚ್ಚಳವಾಗಿದೆ, ಇದರಿಂದಾಗಿ ಇದು ನಿರಂತರವಾಗಿ ನಾಲ್ಕನೇ ವಾರವೂ ಲಾಭ ಪಡೆಯುವ ಹಾದಿಯಲ್ಲಿ ಮುಂದುವರಿದಿದೆ.
ಚಿನ್ನದ ಬೆಲೆಯ ಏರಿಕೆ ಹಾಗೂ ಇಳಿಕೆಗೆ ನಾನಾ ಕಾರಣಗಳಿರುತ್ತವೆ. ಚಿನ್ನದ ಬೆಲೆಯಲ್ಲಿ ಏರಿಕೆ ವಿವಿಧ ಆರ್ಥಿಕ, ರಾಜಕೀಯ ಮತ್ತು ಜಾಗತಿಕ ಅಂಶಗಳಿಂದ ಪ್ರೇರಿತವಾಗಿರುತ್ತದೆ. ನಾಣ್ಯ ಮೌಲ್ಯ ಕುಸಿದಾಗ ಹೂಡಿಕೆದಾರರು ಚಿನ್ನವನ್ನು ಸುರಕ್ಷಿತ ಹೂಡಿಕೆ ಎಂದು ಪರಿಗಣಿಸುತ್ತಾರೆ. ಇದರ ಫಲಿತಾಂಶವಾಗಿ ಚಿನ್ನದ ಬೇಡಿಕೆ ಹೆಚ್ಚಾಗಿ ಬೆಲೆ ಏರುತ್ತದೆ. ಯುದ್ಧಗಳು, ವ್ಯಾಪಾರ ತಕರಾರುಗಳು, ಜಾಗತಿಕ ರಾಜಕೀಯ ಸಮಸ್ಯೆಗಳು ಚಿನ್ನದ ಬೆಲೆಯ ಮೇಲೆ ನೇರ ಪರಿಣಾಮ ಬೀರುತ್ತವೆ. ಹೂಡಿಕೆದಾರರು ಭದ್ರತೆಯ ಹೂಡಿಕೆ ಎಂದು ಚಿನ್ನವನ್ನು ಖರೀದಿಸುತ್ತಾರೆ, ಇದರಿಂದ ಬೇಡಿಕೆ ಹೆಚ್ಚಾಗಿ ಬೆಲೆ ಏರಿಕೆಯಾಗುತ್ತದೆ.
ಅಮೆರಿಕದ ಫೆಡೆರಲ್ ರಿಸರ್ವ್ ಅಥವಾ ಭಾರತದ RBI ಬಡ್ಡಿದರಗಳನ್ನು ಇಳಿಸಿದರೆ, ಹೂಡಿಕೆದಾರರು ಚಿನ್ನದತ್ತ ಮುಖ ಮಾಡುತ್ತಾರೆ. ಇದು ಚಿನ್ನದ ಬೆಲೆಯನ್ನು ಹೆಚ್ಚಿಸುತ್ತದೆ. ಚಿನ್ನದ ಉತ್ಪಾದನೆ ಕಡಿಮೆಯಾದರೆ ಅಥವಾ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಹೆಚ್ಚಾದರೆ, ಬೆಲೆ ತಾನಾಗಿಯೇ ಏರಿಕೆಯಾಗುತ್ತದೆ. ಚಿನ್ನದ ಬೆಲೆಯ ಏರಿಕೆ ಬಹುಪಾಲು ಆರ್ಥಿಕ ಅಸ್ಥಿರತೆ, ಇನ್‌ಫ್ಲೇಶನ್, ರಾಜಕೀಯ ಅಶಾಂತಿ, ಮಾರುಕಟ್ಟೆ ತಾಣಮೌಲ್ಯಗಳು, ಹಾಗೂ ಹೂಡಿಕೆದಾರರ ಮನೋಭಾವ ಇತ್ಯಾದಿ ಅಂಶಗಳಿಂದ ನಿರ್ಧಾರವಾಗುತ್ತದೆ. ಚಿನ್ನದ ಬೆಲೆಯ ಈ ಬದಲಾವಣೆಗಳಿಗೆ ಆಂತರಾಷ್ಟ್ರೀಯ ಮಾರುಕಟ್ಟೆಯ ಪ್ರಭಾವ, ಕರೆನ್ಸಿ ವಿನಿಮಯ ದರಗಳು, ದೇಶೀಯ ಬೇಡಿಕೆ, ಹೂಡಿಕೆದಾರರ ನಂಬಿಕೆ ಮತ್ತು ಆರ್ಥಿಕ ಪರಿಸ್ಥಿತಿಗಳು ಪ್ರಮುಖವಾಗಿರಬಹುದು.


Click it and Unblock the Notifications