Gold Rate India: ಜುಲೈ ಮೊದಲ ದಿನವೇ 24K ಚಿನ್ನದಲ್ಲಿ 11,400 ದುಬಾರಿ..22K, 18K ಚಿನ್ನದಲ್ಲಿ ಎಷ್ಟು ಏರಿಕೆ?

ಜೂನ್ 23ರಿಂದ ಚಿನ್ನದ ಬೆಲೆ ಕ್ರಮೇಣ ಇಳಿಕೆ ಕಂಡುಬಂದಿದ್ದರೂ, ಇಂದು ಶಾಕಿಂಗ್ ಸುದ್ದಿ ನೀಡಿದೆ. ಅದರಲ್ಲೂ ಜುಲೈ ಮೊದಲನೇ ದಿನದಲ್ಲೇ ಬಂಗಾರ ಪ್ರಿಯರ ನಿದ್ದೆಗೆಡಿಸಿದೆ ಇಂದಿನ ಬೆಲೆ. ಭಾರತದಲ್ಲಿ 24 ಕ್ಯಾರೆಟ್ ಬಂಗಾರದ ದರ ಪ್ರತಿ ಗ್ರಾಂಗೆ ಸುಮಾರು 114 ರೂ. ಏರಿಕೆಯಾಗಿದೆ. ಒಂದೇ ಗ್ರಾಂನಲ್ಲಿ 114 ರೂ. ಎಂದರೆ, ಇಂದು ಚಿನ್ನ ಕೊಳ್ಳುತ್ತಿರುವವರ ಜೇಬಿಗೆ ಹೆಚ್ಚಿನ ಪ್ರಮಾಣದಲ್ಲೇ ಕತ್ತರಿ ಬೀಳಲಿದೆ. ನೀವು ಇಂದು ನೂರು ಗ್ರಾಂ ಚಿನ್ನ ಕೊಳ್ಳಲು ಅಂಗಡಿಗೆ ಹೋದರೆ, ನಿನ್ನೆಗಿಂತ 11,400 ರೂ. ಹೆಚ್ಚು ಪಾವತಿ ಮಾಡಬೇಕಾಗುತ್ತದೆ.

ಜುಲೈ ಮೊದಲ ದಿನವೇ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ!

ಭಾರತೀಯ ಮಾರುಕಟ್ಟೆಯಲ್ಲಿಯೂ ಇದರ ಪರಿಣಾಮ ಸ್ಪಷ್ಟವಾಗಿದೆ. MCXನಲ್ಲಿ 500 ರೂ.ನಷ್ಟು ಏರಿಕೆ ಕಂಡುಬಂದಿದ್ದು, ಗ್ರಾಹಕರ ನೈಜ ಬೇಡಿಕೆ ಮತ್ತು ಹೂಡಿಕೆದಾರರ ಆಸಕ್ತಿಯೇ ಈ ಏರಿಕೆಗೆ ಕಾರಣವಾಗಿವೆ. ಇನ್ನು ಈ ಬೆಲೆ ಒಂದೊಂದು ನಗರದಲ್ಲೂ ಒಂದೊಂದು ರೀತಿಯಲ್ಲಿ ಇರುತ್ತದೆ. ಚೆನ್ನೈ, ಮುಂಬೈ, ದೆಹಲಿ, ಹೈದರಾಬಾದ್, ಪುಣೆ, ಕೋಲ್ಕತ್ತಾ, ಬೆಂಗಳೂರು, ಬರೋಡಾ, ಅಹಮದಾಬಾದ್ ಸೇರಿದಂತೆ ಒಂದೊಂದು ನಗರದಲ್ಲೂ ಒಂದೊಂದು ಬೆಲೆ ಇದೆ. ಹಾಗಾದ್ರೆ ಇಂದಿನ ಚಿನ್ನದ ಬೆಲೆ ಎಷ್ಟಿದೆ. ಎಲ್ಲೆಲ್ಲಿ ಎಷ್ಟು ವಹಿವಾಟು ನಡೆಯುತ್ತಿದೆ ಎಂದು ಇಲ್ಲಿ ತಿಳಿಯಿರಿ.

ಭಾರತದಲ್ಲಿ ಇಂದು ಚಿನ್ನದ ಬೆಲೆ:

24 ಕ್ಯಾರೆಟ್ ಚಿನ್ನದ ಬೆಲೆ:

ಇಂದು 24 ಕ್ಯಾರೆಟ್ ಪ್ರತಿ ಗ್ರಾಂ ಚಿನ್ನದಲ್ಲಿ 114 ರೂ ಏರಿಕೆ ಕಂಡುಬಂದಿದ್ದು, ಇಂದಿನ ಬೆಲೆ 9,840 ಎನ್ನಲಾಗಿದೆ. 10 ಗ್ರಾಂ ಚಿನ್ನಕ್ಕೆ 98,400 ಆದರೆ, 100 ಗ್ರಾಂ ಚಿನ್ನದ ಬೆಲೆ 9,84,000 ರೂ. ಆಗಿದೆ. ಪ್ರತಿ ಗ್ರಾಂ ಚಿನ್ನದ ಬೆಲೆಗೆ 114 ಏರಿಕೆಯಾಗಿದೆ ಎಂದಾದರೆ, 11,400 ರೂ. ಏರಿಕೆಯಾಗಿರುತ್ತದೆ.

ಇಂದು 22 ಕ್ಯಾರೆಟ್ ಚಿನ್ನದ ದರದ ಬದಲಾವಣೆ:

ಜುಲೈ 1ರಂದು 22 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ 105 ರೂ. ಹೆಚ್ಚಾಗಿ 9,020 ರೂ. ತಲುಪಿದ್ದು, 10 ಗ್ರಾಂಗೆ 1,050ರಷ್ಟು ಏರಿಕೆಯಾಗಿದೆ. 100 ಗ್ರಾಂ ದರ 10,500 ರೂ. ಹೆಚ್ಚಾಗಿ 9,02,000 ರೂ. ಆಗಿದೆ. ಇತ್ತೀಚಿನ ಇಳಿಕೆಯಿಂದ ಖರೀದಿ ಮುಂದೂಡಿದ್ದವರಿಗೆ ಇದು ಅಚ್ಚರಿ ತರುವ ಬೆಳವಣಿಗೆ.

18 ಕ್ಯಾರೆಟ್ ಚಿನ್ನದ ಬೆಲೆಯೂ ಏರಿಕೆ:

ಇಂದು 18 ಕ್ಯಾರೆಟ್ ಚಿನ್ನದ ದರವೂ ಚುರುಕಾಗಿ ಏರಿಕೆಯಾಗಿದೆ. 1 ಗ್ರಾಂ ದರ 7,380 ರೂ. ಆಗಿದ್ದು, ನಿನ್ನೆ 7,294 ರೂ. ಇತ್ತು. ಅಂದರೆ ಇಂದು 86 ಏರಿಕೆ. 10 ಗ್ರಾಂಗೆ 860 ರೂ. ಮತ್ತು 100 ಗ್ರಾಂಗೆ 8,600 ರೂ. ಹೆಚ್ಚಾಗಿದೆ. ಈ ದರ ಏರಿಕೆಯು ಹಬ್ಬದ ದಿನಗಳ ಮುನ್ನ ಬಂಗಾರ ಕೊಳ್ಳಲು ತಯಾರಿ ನಡೆಸುತ್ತಿರುವ ಗ್ರಾಹಕರಲ್ಲಿ ತುರ್ತು ನಿರ್ಧಾರಗಳನ್ನು ತೆಗೆದುಕೊಳ್ಳುವ ಪರಿಸ್ಥಿತಿ ನಿರ್ಮಾಣ ಮಾಡಿದೆ.

ಭಾರತದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ (1 ಗ್ರಾಂ)

ಚೆನ್ನೈ: ಚೆನ್ನೈನಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,764 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹8,950 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,370 ಆಗಿದೆ.

ಮುಂಬೈ: ಮುಂಬೈನಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,840 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,020 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,380 ಆಗಿದೆ.

ದೆಹಲಿ: ದೆಹಲಿಯಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,855 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,035 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,393 ಆಗಿದೆ.

ಕೋಲ್ಕತಾ: ಕೋಲ್ಕತ್ತಾದಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,840 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,020 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,380 ಆಗಿದೆ.

ಬೆಂಗಳೂರು: ಬೆಂಗಳೂರಿನಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,840 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,020 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,380 ಆಗಿದೆ.

ಹೈದರಾಬಾದ್: ಹೈದರಾಬಾದ್‌ನಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,840 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,020 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,380 ಆಗಿದೆ.

ಕೇರಳ: ಕೇರಳದಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,840 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,020 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,380 ಆಗಿದೆ.

ಪುಣೆ: ಪುಣೆಯಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,840 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,020 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,380 ಆಗಿದೆ.

ಬರೋಡಾ: ಬರೋಡಾದಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,845 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,025 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,384 ಆಗಿದೆ.

ಅಹಮದಾಬಾದ್: ಅಹಮದಾಬಾದ್‌ನಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,845 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,025 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,384 ಆಗಿದೆ.

ಭಾರತದಲ್ಲಿ ಇಂದು ಬೆಳ್ಳಿ ಬೆಲೆ:

ಇಂದು ಭಾರತದಲ್ಲಿ ಬೆಳ್ಳಿ ಬೆಲೆಯಲ್ಲೂ ಏರಿಕೆಯನ್ನು ನೋಡಬಹುದಾಗಿದೆ. ಪ್ರತಿ ಗ್ರಾಂ ಬೆಳ್ಳಿ ಬೆಲೆ ₹110 ಇದೆ. ನಿನ್ನೆಗಿಂತ ಇಂದು ₹2.30 ಏರಿಕೆಯಾಗಿದೆ. ಹತ್ತು ಗ್ರಾಂ ಬೆಳ್ಳಿ ಬೆಲೆ ಇಂದು ₹1,100 ಆಗಿದೆ. ಇದರ ಬೆಲೆ ನಿನ್ನೆ ₹1,077 ಆಗಿದ್ದು, ನೂರು ಗ್ರಾಂ ಬೆಳ್ಳಿ ಬೆಲೆ ಇಂದು ₹11,000 ಆಗಿದೆ. ಅಂದರೆ ನಿನ್ನೆಗಿಂತ ಇಂದಿಗೆ ₹230 ಏರಿಕೆಯಾಗಿದೆ. ಹಾಗೆಯೇ ಇಂದು ಒಂದು ಕೆ.ಜಿ ಬೆಳ್ಳಿ ಬೆಲೆ ₹1,10,000 ಆಗಿದೆ, ನಿನ್ನೆ ಈ ಬೆಲೆ ₹1,07,700 ಆಗಿದ್ದು, ನಿನ್ನೆಗಿಂತ ಇಂದಿಗೆ ₹2,300 ಏರಿಕೆಯಾಗಿದೆ.

ಸ್ಪಾಟ್ ಗೋಲ್ಡ್ ವಿವರ:

2025ರ ಜುಲೈ 1ರ ಮಂಗಳವಾರ ಬೆಳಿಗ್ಗೆ (0430 GMT), ಸ್ಫಾಟ್ ಗೋಲ್ಡ್ (ಸ್ಥಿರ ಚಿನ್ನ) ದರವು ಒಂದು ಔನ್ಸಿಗೆ $3,322.55ಕ್ಕೆ ಏರಿಕೆಯಾಗಿ 0.6%ರಷ್ಟು ಲಾಭ ದಾಖಲಿಸಿದೆ. ಇದು ಆ ದಿನದ ಆರ್ಥಿಕ ಬೆಳವಣಿಗೆಗೆ ಪ್ರಮುಖ ಪಲ್ಟಿ ನೀಡಿದ ಬೆಳವಣಿಗೆ ಎಂದು ಪರಿಗಣಿಸಲಾಗಿದೆ.

ಚಿನ್ನದ ಬೆಲೆ ಏರಿಕೆ-ಇಳಿಕೆಗೆ ಕಾರಣವೇನು?

ಚಿನ್ನದ ಬೆಲೆಯ ಏರಿಕೆ ಹಾಗೂ ಇಳಿಕೆಗೆ ನಾನಾ ಕಾರಣಗಳಿರುತ್ತವೆ. ಚಿನ್ನದ ಬೆಲೆಯಲ್ಲಿ ಏರಿಕೆ ವಿವಿಧ ಆರ್ಥಿಕ, ರಾಜಕೀಯ ಮತ್ತು ಜಾಗತಿಕ ಅಂಶಗಳಿಂದ ಪ್ರೇರಿತವಾಗಿರುತ್ತದೆ. ನಾಣ್ಯ ಮೌಲ್ಯ ಕುಸಿದಾಗ ಹೂಡಿಕೆದಾರರು ಚಿನ್ನವನ್ನು ಸುರಕ್ಷಿತ ಹೂಡಿಕೆ ಎಂದು ಪರಿಗಣಿಸುತ್ತಾರೆ. ಇದರ ಫಲಿತಾಂಶವಾಗಿ ಚಿನ್ನದ ಬೇಡಿಕೆ ಹೆಚ್ಚಾಗಿ ಬೆಲೆ ಏರುತ್ತದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+