Gold Rate Today: ನಗು ನೀಡಿದ ಬಂಗಾರ..ಭಾರತದಲ್ಲಿ ಚಿನ್ನದ ಬೆಲೆ ಭರ್ಜರಿ ಇಳಿಕೆ! 24K ಚಿನ್ನದಲ್ಲಿ ನಿಮಗೆ 6,000 ರೂ. ಉಳಿತಾಯ!

ಜುಲೈ ಆರಂಭದ ಮೂರು ದಿನಗಳಲ್ಲಿ ಶಾಕ್ ನೀಡಿದ್ದ ಬಂಗಾರದ ಬೆಲೆ, ಇಂದು ಸ್ವಲ್ಪ ಖುಷಿ ನೀಡಿದೆ. ಅಂದ್ರೆ ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಇಂದು ಚಿನ್ನದ ಬೆಲೆ ಇಳಿಕೆಯಾಗಿದೆ. 24, 22 ಮತ್ತು 18 ಕ್ಯಾರೆಟ್ ಚಿನ್ನದ ಎಲ್ಲಾ ಶ್ರೇಣಿಗಳಲ್ಲೂ ಇಂದು ಗಮನಾರ್ಹ ಇಳಿಕೆ ಕಂಡುಬಂದಿದೆ. ಈ ಇಳಿಕೆ ಜಾಗತಿಕ ಮಾರುಕಟ್ಟೆಯ ಬೆಳವಣಿಗೆಗಳು, ಡಾಲರ್ ದರ, ಮತ್ತು ದೇಶೀಯ ಬೇಡಿಕೆ ಹಾಗೂ ಪೂರೈಕೆ ಕಾರಣದಿಂದ ಸಂಭವಿಸಿರಬಹುದು.

ಭಾರತದಲ್ಲಿ 24K ಚಿನ್ನದಲ್ಲಿ ನಿಮಗೆ 6,000 ರೂ. ಉಳಿತಾಯ!

ಇನ್ನು ಇಂದಿನ ಚಿನ್ನದ ಬೆಲೆಯು ಇಳಿಕೆಯಾಗಿದ್ದರೂ, ಭಾರತದ ಎಲ್ಲಾ ನಗರಗಳಲ್ಲೂ ಒಂದೇ ರೀತಿಯ ಬೆಲೆ ಇಳಿಕೆಯಾಗಿದೆ. ಒಂದೊಂದು ನಗರದಲ್ಲೂ ಒಂದೊಂದು ಬೆಲೆಯಲ್ಲಿ ಚಿನ್ನದ ಮಾರಾಟವಿದೆ. ಚೆನ್ನೈ, ಮುಂಬೈ, ದೆಹಲಿ, ಕೋಲ್ಕತ್ತಾ, ಬೆಂಗಳೂರು, ಹೈದರಾಬಾದ್, ಪುಣೆ, ಕೇರಳ, ಬರೋಡಾ, ಅಹಮದಾಬಾದ್ ಸೇರಿ ಹಲವೆಡೆ ಚಿನ್ನದ ಬೆಲೆಯು ವಿಭಿನ್ನವಾಗಿದೆ. ಹಾಗಾದರೆ ಇಂದಿನ ಚಿನ್ನದ ಬೆಲೆ ಎಲ್ಲೆಲ್ಲಿ ಎಷ್ಟು ಇಳಿಕೆಯಾಗಿದೆ ಎಂಬುದರ ಮಾಹಿತಿ ಇಲ್ಲಿ ತಿಳಿಯಿರಿ.

ಭಾರತದಲ್ಲಿ ಇಂದಿನ ಚಿನ್ನದ ಬೆಲೆ:

24 ಕ್ಯಾರೆಟ್ ಚಿನ್ನದ ದರ ಇಳಿಕೆ:

ಇಂದು ಭಾರತದಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ದರ ಇಳಿಕೆಯು ಗಮನ ಸೆಳೆದಿದೆ. ನಿನ್ನೆ ಪ್ರತಿ ಗ್ರಾಂಗೆ 9,933 ರೂ. ಇದ್ದ ದರ, ಇಂದು 9,873 ರೂ. ಆಗಿದ್ದು, ಪ್ರತಿ ಗ್ರಾಂಗೆ 60 ರೂ. ಇಳಿಕೆಯಾಗಿದೆ. 10 ಗ್ರಾಂನಲ್ಲಿ 98,730 ರೂ. ಮಾತ್ರ ಖರ್ಚು ಮಾಡಬೇಕಾಗುತ್ತದೆ, ಇದು ನಿನ್ನೆಗಿಂತ 600 ರೂ. ಕಡಿಮೆಯಾಗಿದೆ. 100 ಗ್ರಾಂ ಚಿನ್ನದ ದರವು 9,93,300 ರೂ. ಯಿಂದ 9,87,300 ರೂ. ಆಗಿದ್ದು, ಖರೀದಿದಾರರಿಗೆ 6,000 ರೂ. ಉಳಿತಾಯವಾಗುತ್ತದೆ.

22 ಕ್ಯಾರೆಟ್ ಚಿನ್ನದ ದರದಲ್ಲಿಯೂ ಇಳಿಕೆ:

ಆಭರಣ ತಯಾರಿಕೆಗೆ ಸಾಮಾನ್ಯವಾಗಿ ಬಳಸುವ 22 ಕ್ಯಾರೆಟ್ ಚಿನ್ನದ ದರದಲ್ಲಿಯೂ ಇಳಿಕೆಯಾಗಿದ್ದು, ನಿನ್ನೆ ಪ್ರತಿ ಗ್ರಾಂಗೆ 9,105 ರೂ. ಇದ್ದ ದರ ಇಂದು 9,050 ರೂ. ಆಗಿದೆ. ಇದರ ಪರಿಣಾಮವಾಗಿ 10 ಗ್ರಾಂ ಚಿನ್ನದ ದರ 91,050 ರೂ. ಇಂದ 90,500 ರೂ.ಗೆ ಇಳಿದಿದ್ದು, 550 ರೂ. ಉಳಿತಾಯವಾಗುತ್ತದೆ. 100 ಗ್ರಾಂ ಚಿನ್ನದ ದರ ಈಗ 9,05,000 ರೂ. ಆಗಿದ್ದು, ನಿನ್ನೆಕಿಂತ 5,500 ರೂ. ಕಡಿಮೆಯಾಗಿದೆ.

18 ಕ್ಯಾರೆಟ್ ಚಿನ್ನದ ದರ ಕೂಡ ಇಳಿಕೆಯಲ್ಲಿ:

18 ಕ್ಯಾರೆಟ್ ಚಿನ್ನ, ಸಾಮಾನ್ಯವಾಗಿ ಫ್ಯಾಷನ್ ಅಥವಾ ಲೈಟ್‌ವೇಟ್ ಆಭರಣಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಇದರ ದರದಲ್ಲಿ ಸಹ ಇಳಿಕೆ ಕಂಡುಬಂದಿದ್ದು, ಪ್ರತಿ ಗ್ರಾಂಗೆ 7,450 ರೂ. ಇದ್ದ ದರ ಇಂದು 7,405 ರೂ. ಆಗಿದೆ. 10 ಗ್ರಾಂ ಚಿನ್ನದ ದರ 74,050 ರೂ. ಆಗಿದ್ದು, ನಿನ್ನೆಗಿಂತ 450 ರೂ. ಇಳಿದಿದೆ. 100 ಗ್ರಾಂಗೆ 7,40,500 ರೂ. ಕೇವಲವಾಗಿದೆ, ಇದು 4,500 ರೂ. ದರ ಇಳಿಕೆಯಾಗಿದೆ.

ಭಾರತದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ (1 ಗ್ರಾಂ)

ಚೆನ್ನೈ: ಚೆನ್ನೈನಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,873 ರೂ. ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,050 ರೂ. ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,470 ರೂ. ಆಗಿದೆ.

ಮುಂಬೈ: ಮುಂಬೈನಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,873 ರೂ. ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,050 ರೂ. ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,405 ರೂ. ಆಗಿದೆ.

ದೆಹಲಿ: ದೆಹಲಿಯಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,888 ರೂ. ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,065 ರೂ. ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,417 ರೂ. ಆಗಿದೆ.

ಕೋಲ್ಕತಾ: ಕೋಲ್ಕತ್ತಾದಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,873 ರೂ. ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,050 ರೂ. ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,405 ರೂ. ಆಗಿದೆ.

ಬೆಂಗಳೂರು: ಬೆಂಗಳೂರಿನಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,873 ರೂ. ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,050 ರೂ. ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,405 ರೂ. ಆಗಿದೆ.

ಹೈದರಾಬಾದ್: ಹೈದರಾಬಾದ್‌ನಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,873 ರೂ. ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,050 ರೂ. ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,405 ರೂ. ಆಗಿದೆ.

ಕೇರಳ: ಕೇರಳದಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,873 ರೂ. ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,050 ರೂ. ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,405 ರೂ. ಆಗಿದೆ.

ಪುಣೆ: ಪುಣೆಯಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,873 ರೂ. ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,050 ರೂ. ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,405 ರೂ. ಆಗಿದೆ.

ಬರೋಡಾ: ಬರೋಡಾದಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,878 ರೂ. ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,055 ರೂ. ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,409 ರೂ. ಆಗಿದೆ.

ಅಹಮದಾಬಾದ್: ಅಹಮದಾಬಾದ್‌ನಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,878 ರೂ. ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,055 ರೂ. ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,409 ರೂ. ಆಗಿದೆ.

ಭಾರತದಲ್ಲಿ ಇಂದಿನ ಬೆಳ್ಳಿ ಬೆಲೆ:

ಇಂದು ಭಾರತದಲ್ಲಿ ಬೆಳ್ಳಿಯ ದರದಲ್ಲಿ ಸಣ್ಣ ಮಟ್ಟದ ಇಳಿಕೆ ಕಂಡುಬಂದಿದ್ದು, ನಿನ್ನೆ ಪ್ರತಿ ಗ್ರಾಂ ಬೆಳ್ಳಿ 111 ರೂ. ಇದ್ದರೆ, ಇಂದು ಅದು 110 ರೂ. ಆಗಿದೆ. 10 ಗ್ರಾಂಗೆ 1,100 ರೂ., 100 ಗ್ರಾಂಗೆ 11,000 ರೂ. ಮತ್ತು 1 ಕಿಲೋಗೆ 1,10,000 ರೂ. ಆಗಿದ್ದು, ಕ್ರಮವಾಗಿ 10 ರೂ., 100 ರೂ. ಮತ್ತು 1,000 ರೂ. ಇಳಿಕೆಯಾಗಿದೆ.

ಸ್ಪಾಟ್ ಗೋಲ್ಡ್ ವಿವರ:

ರಾಯಿಟರ್ಸ್ ನೀಡಿರುವ ವರದಿ ಪ್ರಕಾರ ಇತ್ತೀಚೆಗಷ್ಟೆ ಜಾಗತಿಕ ಸ್ಪಾಟ್ ಚಿನ್ನದ ಬೆಲೆ ಪ್ರತಿ ಔನ್ಸ್‌ಗೆ 3,340.79 ಡಾಲರ್ ಗೆ ಏರಿಕೆಯಾಗಿದೆ. ಇದೊಂದು ದಿನದಲ್ಲಿ ಸುಮಾರು 0.4% ಏರಿಕೆ ಕಂಡಿದ್ದು, ಈ ವಾರದ ಮಟ್ಟಿಗೆ 2% ಕ್ಕೂ ಅಧಿಕ ಲಾಭ ದಾಖಲಿಸಿದೆ.

ಚಿನ್ನದ ಬೆಲೆ ಏರಿಕೆ-ಇಳಿಕೆಗೆ ಕಾರಣವೇನು?

ಚಿನ್ನದ ಬೆಲೆಯ ಏರಿಕೆ ಹಾಗೂ ಇಳಿಕೆಗೆ ನಾನಾ ಕಾರಣಗಳಿರುತ್ತವೆ. ಚಿನ್ನದ ಬೆಲೆಯಲ್ಲಿ ಏರಿಕೆ ವಿವಿಧ ಆರ್ಥಿಕ, ರಾಜಕೀಯ ಮತ್ತು ಜಾಗತಿಕ ಅಂಶಗಳಿಂದ ಪ್ರೇರಿತವಾಗಿರುತ್ತದೆ. ನಾಣ್ಯ ಮೌಲ್ಯ ಕುಸಿದಾಗ ಹೂಡಿಕೆದಾರರು ಚಿನ್ನವನ್ನು ಸುರಕ್ಷಿತ ಹೂಡಿಕೆ ಎಂದು ಪರಿಗಣಿಸುತ್ತಾರೆ. ಇದರ ಫಲಿತಾಂಶವಾಗಿ ಚಿನ್ನದ ಬೇಡಿಕೆ ಹೆಚ್ಚಾಗಿ ಬೆಲೆ ಏರುತ್ತದೆ. ಯುದ್ಧಗಳು, ವ್ಯಾಪಾರ ತಕರಾರುಗಳು, ಜಾಗತಿಕ ರಾಜಕೀಯ ಸಮಸ್ಯೆಗಳು ಚಿನ್ನದ ಬೆಲೆಯ ಮೇಲೆ ನೇರ ಪರಿಣಾಮ ಬೀರುತ್ತವೆ. ಹೂಡಿಕೆದಾರರು ಭದ್ರತೆಯ ಹೂಡಿಕೆ ಎಂದು ಚಿನ್ನವನ್ನು ಖರೀದಿಸುತ್ತಾರೆ, ಇದರಿಂದ ಬೇಡಿಕೆ ಹೆಚ್ಚಾಗಿ ಬೆಲೆ ಏರಿಕೆಯಾಗುತ್ತದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+