Gold Rate India: 2,500 ರೂ.ಗೆ ಕುಸಿದ 22 ಕ್ಯಾರಟ್‌ ಬಂಗಾರ...ಹಾಗಾದ್ರೆ 24K ಗೋಲ್ಡ್ ಬೆಲೆ ಎಷ್ಟು..?

ನಾರಿಮಣಿಯರಿಗೆ ಶಿವಾರಾತ್ರಿ ಸ್ಪೆಷಲ್ ಉಡುಗೊರೆ ಸಿಕ್ಕಿದೆ. ನಾರಿಮಣಿಯರಿಗೆ ಅತಿ ಇಷ್ಟವಾದ ಬಂಗಾರ ಇಂದು ಬೆಲೆಯಲ್ಲಿ ಇಳಿಮುಖ ಕಂಡಿದೆ. ಕಳೆದ ಎರಡ್ಮೂರು ದಿನಗಳಿಂದ ಏರಿಕೆಯಾಗಿದ್ದ ಚಿನ್ನದ ಬೆಲೆ, ಇಂದು ಇಳಿಕೆಯಾಗಿದ್ದು ಮಹಿಳೆಯರಿಗೆ ಶಿವರಾತ್ರಿ ಹಬ್ಬದ ದಿನ ಸಿಹಿ ಸುದ್ದಿ ಸಿಕ್ಕಂತಾಗಿದೆ. ನಾರಿಮಣಿಯರ ಪಾಲಿಗೆ ಅತ್ಯಂತ ಅಮೂಲ್ಯವಾದ ಉಡುಗೊರೆ ಅಂದರೆ ಅದು ಚಿನ್ನ..ಬಂಗಾರ ಒಂದು ದೊಡ್ಡ ಸಂಪತ್ತಿಗೆ ಸಮಾನವಾಗಿದೆ. ಸಭೆ, ಸಮಾರಂಭಗಳಲ್ಲಿ ಆಕರ್ಷಣೆ ಮಾಡುವುದೇ ಬಂಗಾರ. ಮಹಿಳೆಯರು ಬಂಗಾರ ತೊಡುವುದೇ ಒಂದು ಚಂದ. ಎಷ್ಟೇ ಏರಿಕೆಯಾದರೂ ಚಿನ್ನ ಖರೀದಿಸುವ ಆಸೆ ಮಾತ್ರ ಕಡಿಮೆಯಾಗಲ್ಲ. ಇನ್ನು ಚಿನ್ನದ ಬೆಲೆ ಇಳಿಕೆಯಾಗಿದೆ ಎಂದು ತಿಳಿದರೆ ಕೇಳೋದೇ ಬೇಡ. ಚಿನ್ನದಂಗಡಿಗೆ ಓಡೋಡಿ ಹೋಗಿ ಖರೀದಿಸುತ್ತಾರೆ. ಹಾಗೆಯೇ ಚಿನ್ನದ ಬೆಲೆಯಲ್ಲಿ ಇಂದು ಕೂಡ ಇಳಿಕೆಯಾಗಿದೆ.

ಇಂದು ಶಿವರಾತ್ರಿ ಹಬ್ಬ..ಮುಂದಿನ ಒಂದೆರಡು ತಿಂಗಳು ಮದುವೆ ಸೀಸನ್. ಹೀಗಾಗಿ ಮಹಿಳೆಯರು ಇಂದು ಚಿನ್ನ ಕೊಳ್ಳುವುದು ಶುಭವಾಗಲಿದೆ. ಇತ್ತೀಚಿನ ವರ್ಷಗಳಲ್ಲಿ ಚಿನ್ನ ದುಬಾರಿಯಾಗಿದೆ. ಇಂದು ಕೊಂಚ ಬೆಲೆ ಇಳಿಕೆಯಾಗಿದ್ದು, ಭಾರತದಲ್ಲಿ ಚಿನ್ನದ ಬೆಲೆ ಇಂದು ಹೇಗಿದೆ. ನಿನ್ನೆಗಿಂತ ಇಂದು ಎಷ್ಟು ಬೆಲೆ ಕಡಿಮೆಯಾಗಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಭಾರತದಲ್ಲಿ ಇಂದು 22 ಕ್ಯಾರಟ್‌ನ 100 ಗ್ರಾಂ ಚಿನ್ನ 2,500 ರೂ.ಗೆ ಕುಸಿ

ಭಾರತದಲ್ಲಿ ಚಿನ್ನದ ಬೆಲೆ

22 ಕ್ಯಾರಟ್ ಚಿನ್ನದ ಬೆಲೆ

ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಇಂದು ಚಿನ್ನದ ಬೆಲೆ ಇಳಿಕೆಯಾಗಿದ್ದು, 22 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆ 8,050 ರೂ. ಆಗಿದೆ. ನಿನ್ನೆ ಇದರ ಬೆಲೆ 8,075 ರೂ. ಆಗಿದ್ದು ನಿನ್ನೆಗಿಂತ ಇಂದು, 25 ರೂ. ಕುಸಿತ ಕಂಡಿದೆ. ಹಾಗೆಯೇ 22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ 80,500 ರೂ. ಆಗಿದೆ. ನಿನ್ನೆಯ ಬೆಲೆ 80,750 ರೂ. ಆಗಿದ್ದು ನಿನ್ನೆಗಿಂತ ಇಂದಿಗೆ 250 ರೂ. ಕಡಿಮೆಯಾಗಿದೆ. ಇನ್ನು 22 ಕ್ಯಾರಟ್‌ನ 100 ಗ್ರಾಂ ಚಿನ್ನದ ಬೆಲೆ ಇಂದು 8 ಲಕ್ಷದ 500 ರೂ. ಆಗಿದೆ. ನಿನ್ನೆಯ ಬೆಲೆ 8 ಲಕ್ಷದ 7,500 ರೂ. ಆಗಿದ್ದು ನಿನ್ನೆಗಿಂತ ಇಂದು 2,500 ರೂ. ಇಳಿಕೆಯಾಗಿದೆ.

24 ಕ್ಯಾರಟ್ ಚಿನ್ನದ ಬೆಲೆ

ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಇಂದು ಚಿನ್ನದ ಬೆಲೆ ಇಳಿಕೆಯಾಗಿದ್ದು, 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆ 8,782 ರೂ. ಆಗಿದೆ. ನಿನ್ನೆ ಇದರ ಬೆಲೆ 8,809 ರೂ. ಆಗಿದ್ದು ನಿನ್ನೆಗಿಂತ ಇಂದು, 27 ರೂ. ಕುಸಿತ ಕಂಡಿದೆ. ಹಾಗೆಯೇ 24 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ 87,820 ರೂ. ಆಗಿದೆ. ನಿನ್ನೆಯ ಬೆಲೆ 88,090 ರೂ. ಆಗಿದ್ದು ನಿನ್ನೆಗಿಂತ ಇಂದಿಗೆ 270 ರೂ. ಕಡಿಮೆಯಾಗಿದೆ. ಇನ್ನು 24 ಕ್ಯಾರಟ್‌ನ 100 ಗ್ರಾಂ ಚಿನ್ನದ ಬೆಲೆ ಇಂದು 8 ಲಕ್ಷ 78 ಸಾವಿರದ 200 ರೂ. ಆಗಿದೆ. ನಿನ್ನೆಯ ಬೆಲೆ 8 ಲಕ್ಷ 80 ಸಾವಿರದ 900 ರೂ. ಆಗಿದ್ದು ನಿನ್ನೆಗಿಂತ ಇಂದು 2,700 ರೂ. ಇಳಿಕೆಯಾಗಿದೆ.

18 ಕ್ಯಾರಟ್ ಚಿನ್ನದ ಬೆಲೆ

ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಇಂದು ಚಿನ್ನದ ಬೆಲೆ ಇಳಿಕೆಯಾಗಿದ್ದು, 18 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆ 6,587 ರೂ. ಆಗಿದೆ. ನಿನ್ನೆ ಇದರ ಬೆಲೆ 6,607 ರೂ. ಆಗಿದ್ದು ನಿನ್ನೆಗಿಂತ ಇಂದು, 20 ರೂ. ಕುಸಿತ ಕಂಡಿದೆ. ಹಾಗೆಯೇ 18 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ 65,870 ರೂ. ಆಗಿದೆ. ನಿನ್ನೆಯ ಬೆಲೆ 66,070 ರೂ. ಆಗಿದ್ದು ನಿನ್ನೆಗಿಂತ ಇಂದಿಗೆ 200 ರೂ. ಕಡಿಮೆಯಾಗಿದೆ. ಇನ್ನು 18 ಕ್ಯಾರಟ್‌ನ 100 ಗ್ರಾಂ ಚಿನ್ನದ ಬೆಲೆ ಇಂದು 6 ಲಕ್ಷ 58 ಸಾವಿರದ 700 ರೂ. ಆಗಿದೆ. ನಿನ್ನೆಯ ಬೆಲೆ 6 ಲಕ್ಷ ,60 ಸಾವಿರದ 700 ರೂ. ಆಗಿದ್ದು ನಿನ್ನೆಗಿಂತ ಇಂದು 2,000 ರೂ. ಇಳಿಕೆಯಾಗಿದೆ.

ವಿವಿಧ ನಗರಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ ಹೇಗಿದೆ

ನಗರಗಳು 22K 24K 18K
ಚೆನೈ ₹8,050 ₹8,782 ₹6,620
ಮುಂಬೈ ₹8,050 ₹8,782 ₹6,587
ದೆಹಲಿ ₹8,065 ₹8,797 ₹6,599
ಕೋಲ್ಕತಾ ₹8,050 ₹8,782 ₹6,587
ಬೆಂಗಳೂರು ₹8,050 ₹8,782 ₹6,587
ಹೈದರಾಬಾದ್ ₹8,050 ₹8,782 ₹6,587
ಕೇರಳ ₹8,050 ₹8,782 ₹6,587
ಪುಣೆ ₹8,050 ₹8,782 ₹6,587
ಬರೋಡಾ ₹8,055 ₹8,787 ₹6,591
ಅಹಮದಾಬಾದ್ ₹8,055 ₹8,787 ₹6,591

ಭಾರತದಲ್ಲಿ ಬೆಳ್ಳಿ ಬೆಲೆ ಹೇಗಿದೆ..?

ಶಿವರಾತ್ರಿ ಹಬ್ಬದ ದಿನವಾದ ಇಂದು, ಭಾರತದಲ್ಲಿ ಬೆಳ್ಳಿ ಬೆಲೆಯೂ ಇಳಿಮುಖವಾಗಿದೆ. ನಿನ್ನೆ ₹101 ಇದ್ದ ಪ್ರತಿ ಗ್ರಾಂ ಬೆಳ್ಳಿ ಬೆಲೆ ಇಂದು, ₹98 ಆಗಿದ್ದು ನಿನ್ನೆಗಿಂತ ₹3 ಇಳಿಕೆಯಾಗಿದೆ. ಹಾಗೆಯೇ ನಿನ್ನೆ ₹1,010 ಇದ್ದ 10 ಗ್ರಾಂ ಬೆಳ್ಳಿ ಬೆಲೆ ಇಂದು ₹980 ಆಗಿದ್ದು ನಿನ್ನೆಗಿಂತ ಇಂದು ₹30 ಇಳಿಕೆಯಾಗಿದೆ. ನಿನ್ನೆ ₹10,100 ಇದ್ದ 100 ಗ್ರಾಂ ಬೆಳ್ಳಿ ಬೆಲೆ ಇಂದು ₹9,800 ಆಗಿದ್ದು ನಿನ್ನೆಗಿಂತ ಇಂದು ₹300 ಇಳಿಕೆಯಾಗಿದೆ. ನಿನ್ನೆ ₹1,01,000 ಇದ್ದ 1 ಕೆ.ಜಿ ಬೆಳ್ಳಿ ಬೆಲೆ ಇಂದು ₹98,000 ಆಗಿದ್ದು ನಿನ್ನೆಗಿಂತ ಇಂದು ₹3,000 ಇಳಿಕೆಯಾಗಿದೆ.

ಸ್ಪಾಟ್ ಗೋಲ್ಡ್ ವಿವರ:

2025ರ ಫೆಬ್ರವರಿ 26ರಂದು ಸ್ಪಾಟ್ ಚಿನ್ನದ ದರವು ಒಂದು ವಾರದ ಕನಿಷ್ಠ ಮಟ್ಟದಿಂದ ಸ್ವಲ್ಪ ಪುನಶ್ಚೇತನಗೊಂಡಿದೆ. ಅಮೇರಿಕಾ ಸರ್ಕಾರದ ಹೊಸ ಸುಂಕ ನಿರ್ಧಾರಗಳ ಬಗ್ಗೆ ಇರುವ ಅನಿಶ್ಚಿತತೆ ಇದರ ಪ್ರಮುಖ ಕಾರಣವಾಗಿದೆ. ಪ್ರಸ್ತುತ, ಸ್ಪಾಟ್ ಚಿನ್ನವು ಪ್ರತಿ ಔನ್ಸ್‌ಗಾಗಿ ಅಂದಾಜು $2,916.84 ದರದಲ್ಲಿ ವಹಿವಾಟು ನಡೆಸುತ್ತಿದ್ದು, 0.1% ಏರಿಕೆ ಕಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+