Gold Rate India: 24 ಕ್ಯಾರೆಟ್ ಚಿನ್ನ ₹8,738ಕ್ಕೆ ಕುಸಿದಿದೆ...ಹಾಗಾದರೆ 22K ಚಿನ್ನದ ಬೆಲೆ ಎಷ್ಟು..?

ಭಾರತದಲ್ಲಿ ಮಹಿಳೆಯರಿಗೆ ಗುಡ್‌ನ್ಯೂಸ್ ಸಿಕ್ಕಿದೆ. ನಿನ್ನೆ ಶಿವರಾತ್ರಿ ಮಾರನೇ ದಿನವಾದ ಇಂದು ಕೂಡ ಚಿನ್ನದ ಬೆಲೆ ಇಳಿಕೆಯಾಗಿದೆ. ಇದರಿಂದ ಮಹಿಳೆಯರಿಗೆ ಸಿಹಿಸುದ್ದಿ ಸಿಕ್ಕಂತಾಗಿದೆ. ಮಹಿಳೆಯರಿಗೆ ಅತಿಹೆಚ್ಚು ಪ್ರಿಯವಾದ ಉಡುಗೊರೆ ಎಂದರೆ ಬಂಗಾರ. ಚಿನ್ನವೇ ದೊಡ್ಡ ಸಂಪತ್ತಿಗೆ ಸಮಾನವಾಗಿದೆ. ಸಭೆ, ಸಮಾರಂಭಗಳಲ್ಲಿ ಆಕರ್ಷಣೆ ಮಾಡುವುದೇ ಬಂಗಾರ. ಮಹಿಳೆಯರು ಬಂಗಾರ ತೊಡುವುದೇ ಒಂದು ಚಂದ. ಎಷ್ಟೇ ಏರಿಕೆಯಾದರೂ ಚಿನ್ನ ಖರೀದಿಸುವ ಆಸೆ ಮಾತ್ರ ಕಡಿಮೆಯಾಗಲ್ಲ. ಇನ್ನು ಚಿನ್ನದ ಬೆಲೆ ಇಳಿಕೆಯಾಗಿದೆ ಎಂದು ತಿಳಿದರೆ ಕೇಳೋದೇ ಬೇಡ. ಚಿನ್ನದಂಗಡಿಗೆ ಓಡೋಡಿ ಹೋಗಿ ಖರೀದಿಸುತ್ತಾರೆ. ಹಾಗೆಯೇ ಚಿನ್ನದ ಬೆಲೆಯಲ್ಲಿ ಇಂದು ಕೂಡ ಇಳಿಕೆಯಾಗಿದೆ.

ಭಾರತದಲ್ಲಿ ಇಂದು 24 ಕ್ಯಾರಟ್‌ನ ಪ್ರತಿ ಗ್ರಾಂ ಬಂಗಾರ ₹8,738 ಆಗಿದೆ..

ಭಾರತದಲ್ಲಿ ಚಿನ್ನಕ್ಕೆ ತನ್ನದೇ ಆದ ಮಹತ್ವವಿದೆ. ಸಾಂಪ್ರದಾಯಕ ಸಮಾರಂಭಗಳಲ್ಲಿ ಚಿನ್ನವು ಬಹಳ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಅಲ್ಲದೇ ಎಲ್ಲಾ ಸಂದರ್ಭದಲ್ಲೂ ಚಿನ್ನವನ್ನು ಪ್ರತಿಷ್ಠೆಯ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಮಹಿಳೆಯರು ಚಿನ್ನವನ್ನು ಅತಿಹೆಚ್ಚು ಇಷ್ಟ ಪಡುತ್ತಾರೆ. ಅಲ್ಲದೇ ಮನೆಯಲ್ಲಿ ಚಿನ್ನ ಇದ್ದವರಿಗೆ ಯಾವತ್ತಿಗೂ ಆರ್ಥಿಕ ಕೊರತೆ ಬರುವುದಿಲ್ಲ. ಏಕೆಂದರೆ ಎಂಥದ್ದೇ ಸಂದರ್ಭದಲ್ಲಿ ತ್ವರಿತವಾಗಿ ಸಹಾಯಕವಾಗುತ್ತಿದೆ ಚಿನ್ನ. ಇದಕ್ಕೆ ಬೆಲೆಯಲ್ಲಿ ಏರಿಳಿತವಾದರೂ ಬೇಡಿಕೆ ಯಾವತ್ತಿಗೂ ಕಡಿಮೆಯಾಗುವುದಿಲ್ಲ. ಹಾಗಾದರೆ ಭಾರತದಲ್ಲಿ ಚಿನ್ನದ ಬೆಲೆ ಇಂದು ಇಷ್ಟಿದೆ ಎಂದು ನೋಡುವುದಾದರೆ..

ಭಾರತದಲ್ಲಿ ಚಿನ್ನದ ಬೆಲೆ

22 ಕ್ಯಾರಟ್ ಚಿನ್ನದ ಬೆಲೆ:

ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಇಂದು ಚಿನ್ನದ ಬೆಲೆ ಇಳಿಕೆಯಾಗಿದ್ದು, 22 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆ 8,010 ರೂ. ಆಗಿದೆ. ನಿನ್ನೆ ಇದರ ಬೆಲೆ 8,050 ರೂ. ಆಗಿದ್ದು ನಿನ್ನೆಗಿಂತ ಇಂದು, 40 ರೂ. ಕುಸಿತ ಕಂಡಿದೆ. ಹಾಗೆಯೇ 22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ 80,100 ರೂ. ಆಗಿದೆ. ನಿನ್ನೆಯ ಬೆಲೆ 80,500 ರೂ. ಆಗಿದ್ದು ನಿನ್ನೆಗಿಂತ ಇಂದಿಗೆ 400 ರೂ. ಕಡಿಮೆಯಾಗಿದೆ. ಇನ್ನು 22 ಕ್ಯಾರಟ್‌ನ 100 ಗ್ರಾಂ ಚಿನ್ನದ ಬೆಲೆ ಇಂದು 8 ಲಕ್ಷದ 1,000 ರೂ. ಆಗಿದೆ. ನಿನ್ನೆಯ ಬೆಲೆ 8 ಲಕ್ಷದ 5,000 ರೂ. ಆಗಿದ್ದು ನಿನ್ನೆಗಿಂತ ಇಂದು 4,000 ರೂ. ಇಳಿಕೆಯಾಗಿದೆ.

24 ಕ್ಯಾರಟ್ ಚಿನ್ನದ ಬೆಲೆ:

ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಇಂದು ಚಿನ್ನದ ಬೆಲೆ ಇಳಿಕೆಯಾಗಿದ್ದು, 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆ 8,738 ರೂ. ಆಗಿದೆ. ನಿನ್ನೆ ಇದರ ಬೆಲೆ 8,782 ರೂ. ಆಗಿದ್ದು ನಿನ್ನೆಗಿಂತ ಇಂದು, 44 ರೂ. ಕುಸಿತ ಕಂಡಿದೆ. ಹಾಗೆಯೇ 24 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ 87,380 ರೂ. ಆಗಿದೆ. ನಿನ್ನೆಯ ಬೆಲೆ 87,820 ರೂ. ಆಗಿದ್ದು ನಿನ್ನೆಗಿಂತ ಇಂದಿಗೆ 440 ರೂ. ಕಡಿಮೆಯಾಗಿದೆ. ಇನ್ನು 24 ಕ್ಯಾರಟ್‌ನ 100 ಗ್ರಾಂ ಚಿನ್ನದ ಬೆಲೆ ಇಂದು 8 ಲಕ್ಷ 73 ಸಾವಿರದ 800 ರೂ. ಆಗಿದೆ. ನಿನ್ನೆಯ ಬೆಲೆ 8 ಲಕ್ಷ 78 ಸಾವಿರದ 200 ರೂ. ಆಗಿದ್ದು ನಿನ್ನೆಗಿಂತ ಇಂದು 4,400ರೂ. ಇಳಿಕೆಯಾಗಿದೆ.

18 ಕ್ಯಾರಟ್ ಚಿನ್ನದ ಬೆಲೆ:

ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಇಂದು ಚಿನ್ನದ ಬೆಲೆ ಇಳಿಕೆಯಾಗಿದ್ದು, 18 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆ 6,554 ರೂ. ಆಗಿದೆ. ನಿನ್ನೆ ಇದರ ಬೆಲೆ 6,587 ರೂ. ಆಗಿದ್ದು ನಿನ್ನೆಗಿಂತ ಇಂದು, 33 ರೂ. ಕುಸಿತ ಕಂಡಿದೆ. ಹಾಗೆಯೇ 18 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ 65,540 ರೂ. ಆಗಿದೆ. ನಿನ್ನೆಯ ಬೆಲೆ 65,870 ರೂ. ಆಗಿದ್ದು ನಿನ್ನೆಗಿಂತ ಇಂದಿಗೆ 330 ರೂ. ಕಡಿಮೆಯಾಗಿದೆ. ಇನ್ನು 18 ಕ್ಯಾರಟ್‌ನ 100 ಗ್ರಾಂ ಚಿನ್ನದ ಬೆಲೆ ಇಂದು 6 ಲಕ್ಷ 55 ಸಾವಿರದ 400 ರೂ. ಆಗಿದೆ. ನಿನ್ನೆಯ ಬೆಲೆ 6 ಲಕ್ಷ 58 ಸಾವಿರದ 700 ರೂ. ಆಗಿದ್ದು ನಿನ್ನೆಗಿಂತ ಇಂದು 3,300 ರೂ. ಇಳಿಕೆಯಾಗಿದೆ.

ವಿವಿಧ ನಗರಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ ಹೇಗಿದೆ..?

ನಗರಗಳು 22K 24K 18K
ಚೆನೈ ₹8,050 ₹8,782 ₹6,620
ಮುಂಬೈ ₹8,050 ₹8,782 ₹6,587
ದೆಹಲಿ ₹8,065 ₹8,797 ₹6,599
ಕೋಲ್ಕತಾ ₹8,050 ₹8,782 ₹6,587
ಬೆಂಗಳೂರು ₹8,050 ₹8,782 ₹6,587
ಹೈದರಾಬಾದ್ ₹8,050 ₹8,782 ₹6,587
ಕೇರಳ ₹8,050 ₹8,782 ₹6,587
ಪುಣೆ ₹8,050 ₹8,782 ₹6,587
ಬರೋಡಾ ₹8,055 ₹8,787 ₹6,591
ಅಹಮದಾಬಾದ್ ₹8,055 ₹8,787 ₹6,591

ಭಾರತದಲ್ಲಿ ಬೆಳ್ಳಿ ಬೆಲೆ ಹೇಗಿದೆ..?

ಬೆಳ್ಳಿ ಬೆಲೆಯಲ್ಲಿ ನಿನ್ನೆಗಿಂತ ಇಂದು ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ. ನಿನ್ನೆ ಒಂದು ಗ್ರಾಂ ಬೆಳ್ಳಿ ಬೆಲೆ ₹98, ಹತ್ತು ಗ್ರಾಂ ಬೆಳ್ಳಿ ಬೆಲೆ ₹980, 100 ಗ್ರಾಂ ಬೆಳ್ಳಿ ಬೆಲೆ ₹9,800 ಹಾಗೂ 1 ಕೆ.ಜಿ ಬೆಳ್ಳಿ ಬೆಲೆಯಲ್ಲಿ ₹98,000 ಆಗಿತ್ತು. ಇಂದು ಕೂಡ ಇದೇ ಬೆಲೆ ಕಾಯ್ದಿರಿಸಿಕೊಂಡಿದೆ.

ಭಾರತದ ವಿವಿಧ ನಗರಗಳಲ್ಲಿ ಬೆಳ್ಳಿ ದರ ( 1 Kg )

ಚೆನೈ ₹1,06,000
ಮುಂಬೈ ₹98,000
ದಹಲಿ ₹98,000
ಕೋಲ್ಕತಾ ₹98,000
ಬೆಂಗಳೂರು ₹98,000
ಹೈದರಾಬಾದ್ ₹1,06,000
ಕೇರಳ ₹1,06,000
ಪುಣೆ ₹98,000
ಬರೋಡಾ ₹98,000
ಅಹಮದಾಬಾದ್ ₹98,000

ಸ್ಪಾಟ್ ಗೋಲ್ಡ್ ವಿವರ:

ಫೆಬ್ರವರಿ 27ರಂದು ಸ್ಪಾಟ್ ಚಿನ್ನದ ಬೆಲೆ ಸಹ 0.1% ಕಡಿಮೆಯಾಗಿದ್ದು, $2,927.20 ಪ್ರತಿ ಔನ್ಸ್ ದರದಲ್ಲಿ ವಹಿವಾಟು ನಡೆಯುತ್ತಿದೆ. ಅಮೆರಿಕನ್ ಡಾಲರ್ ಸೂಚ್ಯಂಕ 0.2% ಏರಿಕೆ ಕಂಡಿದ್ದು, ಕಳೆದ 11 ವಾರಗಳ ಕನಿಷ್ಟ ಮಟ್ಟದಿಂದ ಸ್ವಲ್ಪ ದೂರ ಸರಿದಿದೆ. ಸಾಮಾನ್ಯವಾಗಿ, ಚಿನ್ನದ ಬೆಲೆ ಮತ್ತು ಅಮೆರಿಕನ್ ಡಾಲರ್ ಮಧ್ಯೆ ವಿರುದ್ಧ ಸಂಬಂಧ ಇರುತ್ತದೆ. ಡಾಲರ್ ಬೆಲೆ ಹೆಚ್ಚಾದಾ ಚಿನ್ನದ ಬೆಲೆ ಸಾಮಾನ್ಯವಾಗಿ ಕುಸಿಯುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+