ಚಿನ್ನದ ಮೇಲಿನ ಹೂಡಿಕೆ (Gold Investment) ಸುರಕ್ಷಿತ ಎಂದು ಹಲವರು ಭಾವಿಸುತ್ತಾರೆ. ಆದ್ರೆ ಇತ್ತೀಚಿನ ಬೆಲೆ ಏರಿಕೆಯಿಂದಾಗಿ ಮಧ್ಯಮ ವರ್ಗದ ಜನ ಅಂತೂ ಚಿನ್ನ ಖರೀದಿಸೋದೆ ಕಷ್ಟವಾಗಿಬಿಟ್ಟಿದೆ. ನಿನ್ನೆಯಂತೂ ಚಿನ್ನ ಮತ್ತು ಬೆಳ್ಳಿ ದರ ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಇಂದೂ ಕೂಡಾ ಭಾರತದಲ್ಲಿ ಚಿನ್ನದ ಬೆಲೆ (Gold Rate India) ಭಾರೀ ಏರಿಕೆ ಕಂಡಿದ್ದು, ಎಷ್ಟಿದೆ ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಭಾರತದಲ್ಲಿ 24K ಚಿನ್ನದ ಬೆಲೆ:
24K ಚಿನ್ನದ ಒಂದು ಗ್ರಾಂ ಬೆಲೆ 14,978 ರೂ. ಆಗಿದ್ದು, ನಿನ್ನೆ 14,624 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ದಿಢೀರ್ ಪ್ರತೀ ಗ್ರಾಂ ಚಿನ್ನದ ಬೆಲೆ ₹354 ರೂ. ಹೆಚ್ಚಳವಾಗಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ಇಂದು 1,19,824 ರೂ. ಆಗಿದ್ದು, ನಿನ್ನೆ 1,16,992 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 2,832 ರೂ. ಏರಿಕೆ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,49,780 ರೂ. ಆಗಿದ್ದು, ನಿನ್ನೆ 1,46,240 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 3,540 ರೂ. ಹೆಚ್ಚಳವಾಗಿದೆ. 100 ಗ್ರಾಂ ಚಿನ್ನದ ಬೆಲೆ ಇಂದು ₹14,97,800 ರೂ. ಆಗಿದ್ದು, ನಿನ್ನೆ 14,62,400 ರೂ. ಇತ್ತು. ಒಂದೇ ದಿನದಲ್ಲಿ 35,400 ರೂ. ಹೆಚ್ಚಳವಾಗಿದೆ.
ಭಾರತದಲ್ಲಿ 22K ಚಿನ್ನದ ಬೆಲೆ:
22K ಚಿನ್ನದ 1 ಗ್ರಾಂ ಬೆಲೆ ಇಂದು 13,730 ರೂ. ಆಗಿದ್ದು, ನಿನ್ನೆ 13,405 ರೂ. ಇತ್ತು. ನಿನ್ನೆಗಿಂತ ಇಂದು ₹325 ರೂ. ಏರಿಕೆ ಕಂಡಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 1,09,840 ರೂ. ಆಗಿದ್ದು, ನಿನ್ನೆ 1,07,240 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 2,600 ರೂ. ಹೆಚ್ಚಳ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,37,300 ರೂ. ಆಗಿದ್ದು, ನಿನ್ನೆ 1,34,050 ರೂ. ಇತ್ತು. ಒಟ್ಟು 3,250 ರೂ. ಏರಿಕೆ ಕಂಡಿದೆ. ಅದೇ ರೀತಿ 100 ಗ್ರಾಂ ಚಿನ್ನದ ದರ ಇಂದು 13,73,000 ರೂ. ಆಗಿದ್ದು, ನಿನ್ನೆ 13,40,500 ರೂ. ಇತ್ತು. ನಿನ್ನೆಗಿಂತ ಇಂದು ಒಟ್ಟು ₹32,500 ರೂ. ಹೆಚ್ಚಳವಾಗಿದೆ.
ಭಾರತದಲ್ಲಿ 18K ಚಿನ್ನದ ಬೆಲೆ:
18K ಚಿನ್ನದ 1 ಗ್ರಾಂ ಬೆಲೆ ಇಂದು 11,234 ರೂ. ಆಗಿದ್ದು, ನಿನ್ನೆ 10,968 ರೂ. ಇತ್ತು. ನಿನ್ನೆಗಿಂತ ಇಂದು ₹266 ರೂ. ಏರಿಕೆ ಕಂಡಿದೆ. 8 ಗ್ರಾಂ ಚಿನ್ನದ ಬೆಲೆ ಇಂದು ₹89,872 ರೂ. ಆಗಿದ್ದು, ನಿನ್ನೆ 87,744 ರೂ. ಇತ್ತು. ನಿನ್ನೆಗಿಂತ ಇಂದು 2,128 ರೂ. ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 1,12,340 ರೂ. ಆಗಿದ್ದು, ನಿನ್ನೆ 1,09,680 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 2,660 ರೂ. ಏರಿಕೆಯಾಗಿದೆ. ಇನ್ನು 100 ಗ್ರಾಂ ಚಿನ್ನದ ಬೆಲೆ ಇಂದು 11,23,400 ರೂ. ಆಗಿದ್ದು, ನಿನ್ನೆ 10,96,800 ರೂ. ಇತ್ತು. ಒಟ್ಟು 26,000 ರೂ. ಹೆಚ್ಚಳ ಕಂಡಿದೆ.
ಭಾರತದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ ಎಷ್ಷಿದೆ?
ಚೆನ್ನೈ: 24K ರೂ. 15,164, 22K ರೂ. 13,900, 18K ರೂ. 11,590
ಮುಂಬೈ: 24K ರೂ. 14,978, 22K ರೂ. 13,730, 18K ರೂ. 11,234
ದೆಹಲಿ: 24K ರೂ. 14,991, 22K ರೂ. 13,745, 18K ರೂ. 11,247
ಕೋಲ್ಕತ್ತಾ: 24K ರೂ. 14,978, 22K ರೂ. 13,730, 18K ರೂ. 11,234
ಬೆಂಗಳೂರು: 24K ರೂ. 14,978, 22K ರೂ. 13,730, 18K ರೂ. 11,234
ಹೈದರಾಬಾದ್: 24K ರೂ. 14,978, 22K ರೂ. 13,730, 18K ರೂ. 11,234
ಕೇರಳ: 24K ರೂ. 14,978, 22K ರೂ. 13,730, 18K ರೂ. 11,234
ಪುಣೆ: 24K ರೂ. 14,978, 22K ರೂ. 13,730, 18K ರೂ. 11,234
ವಡೋದರಾ: 24K ರೂ. 14,981, 22K ರೂ. 13,735, 18K ರೂ. 11,237
ಅಹಮದಾಬಾದ್: 24K ರೂ. 14,981, 22K ರೂ. 13,735, 18K ರೂ. 11,237
ಬೆಳ್ಳಿ ಬೆಲೆ:
ಇದೀಗ 1 ಗ್ರಾಂ ಬೆಳ್ಳಿ ಬೆಲೆ ₹320 ರೂ. ಆಗಿದ್ದು, ನಿನ್ನೆ ₹305 ರೂ. ಇತ್ತು. ಒಂದೇ ದಿನದಲ್ಲಿ ದಿಢೀರ್ ₹15 ರೂ. ಏರಿಕೆ ಕಂಡಿದೆ. ಇನ್ನು 8 ಗ್ರಾಂ ಬೆಳ್ಳಿ ದರ ಇಂದು ₹2,560 ರೂ. ಆಗಿದ್ದು, ನಿನ್ನೆ ₹2,440 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹120 ರೂ. ಹೆಚ್ಚಳ ಕಂಡಿದೆ. ಇನ್ನು 10 ಗ್ರಾಂ ಬೆಳ್ಳಿ ದರ ₹3,200 ರೂ., 100 ಗ್ರಾಂ ಬೆಳ್ಳಿ ಬೆಲೆ ₹32,000 ರೂ., 1000 ಗ್ರಾಂ ಬೆಳ್ಳಿ ದರ ₹3,20,000 ರೂ. ಆಗಿದೆ.
ಸ್ಪಾಟ್ ಗೋಲ್ಡ್ ವಿವರ:
ಜನವರಿ 20ರ ಬ್ಯುಸಿನೆಸ್ ಸ್ಟ್ಯಾಂಡರ್ಡ್ ಪ್ರಕಾರ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗ್ರೀನ್‌ಲ್ಯಾಂಡ್ ಬೇಡಿಕೆ ಹೆಚಾಗಿದ್ದರಿಂದ, ಭೌಗೋಳಿಕ ಉದ್ವಿಗ್ನತೆ ಹೆಚ್ಚಾಗಿದೆ. ಆದ್ದರಿಂದ ಸುರಕ್ಷಿತ ಹೂಡಿಕೆಗಳ ಮೇಲೆ ಹೆಚ್ಚಿನವರು ಗಮನ ಹರಿಸಿದ್ದಾರೆ. ಹಿಂದಿನ ವಹಿವಾಟಿನಲ್ಲಿ ಸಾರ್ವಕಾಲಿಕ ಗರಿಷ್ಠ $4,689.39 ರಷ್ಟು ಏರಿಕೆ ಕಂಡ ನಂತರ, ಸ್ಪಾಟ್ ಚಿನ್ನದ ದರವು GMT 0336ರ ವೇಳೆಗೆ ಪ್ರತೀ ಔನ್ಸ್‌ಗೆ 0.1% ಏರಿಕೆಯಾಗಿ $4,675.32 ಕ್ಕೆ ತಲುಪಿದೆ.


Click it and Unblock the Notifications