ಗುಡ್‌ನ್ಯೂಸ್..ಗುಡ್ ನ್ಯೂಸ್.. ಕೊನೆಗೂ ಇಳಿಕೆಯಾಯ್ತು ಭಾರತದಲ್ಲಿ ಚಿನ್ನದ ಬೆಲೆ. ಕಳೆದ ಎರಡು ದಿನಗಳಿಂದ ಚಿನ್ನದ ಬೆಲೆ ಏರಿಕೆ ನೋಡಿ ಗ್ರಾಹಕರು ಬೆಚ್ಚಿಬಿದ್ದಿದ್ದರು. ಅಯ್ಯೋ, ಹೇಗಪ್ಪಾ ಚಿನ್ನ ಖರೀದಿಸೋದು ಎಂಬ ಚಿಂತೆಯಲ್ಲಿದ್ದರು. ಆದ್ರೆ ಇದೀಗ ಕೊನೆಗೂ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದೆ. ಚಿನ್ನ ಪ್ರಿಯರ ಮುಖದಲ್ಲಿ ಕೊನೆಗೂ ಮಂದಹಾಸ ತರಿಸಿದೆ. ಹಾಗಿದ್ರೆ ಇಂದು ಚಿನ್ನದ ಬೆಲೆ (Today Gold Rate) ಎಷ್ಟು ಇಳಿಕೆಯಾಗಿದೆ? 10 ಗ್ರಾಂ ಚಿನ್ನದ ಬೆಲೆ ಇಂದು ಎಷ್ಟಾಗಿದೆ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಭಾರತದಲ್ಲಿ 24K ಚಿನ್ನದ ಬೆಲೆ:
24 ಕ್ಯಾರಟ್ ಚಿನ್ನದ ಬೆಲೆ ಕಳೆದೆರಡು ದಿನಗಳಿಂದ ಭಾರೀ ಏರಿಕೆ ಕಂಡಿತ್ತು. ಇದೀಗ ಕೊನೆಗೂ ಚಿನ್ನ ಪ್ರಿಯರಿಗೆ ಗುಡ್‌ನ್ಯೂಸ್ ಕೊಟ್ಟಿದೆ. 24K ಚಿನ್ನದ ಬೆಲೆಯಲ್ಲೂ ಇಂದು ಇಳಿಕೆ ಕಂಡಿದ್ದು, 1 ಗ್ರಾಂ ಬೆಲೆಯಲ್ಲಿ ₹33 ರೂ. ಇಳಿಕೆ ಕಂಡಿದೆ. ನಿನ್ನೆ ₹12,551 ರೂ ಇತ್ತು. ಇಂದು 12,584 ರೂ. ಆಗಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ಇಂದು ₹1,00,408 ರೂ. ಆಗಿದ್ದು, ನಿನ್ನೆ 1,00,672 ಇತ್ತು. ನಿನ್ನೆಗಿಂತ ಇಂದು ₹264 ರೂ. ಇಳಿಕೆಯಾಗಿದೆ. ಹಾಗೆಯೇ 10 ಗ್ರಾಂ ಚಿನ್ನದ ಬೆಲೆ ಇಂದು ₹1,25,510 ರೂ. ಆಗಿದ್ದು, ನಿನ್ನೆ 1,25,840 ರೂ. ಇತ್ತು. ಒಂದೇ ದಿನದಲ್ಲಿ 10 ಗ್ರಾಂ ಚಿನ್ನದಲ್ಲಿ ₹330 ರೂ. ಇಳಿಕೆ ಕಂಡಿದೆ. 100 ಗ್ರಾಂ ಚಿನ್ನದ ಒಟ್ಟು ಬೆಲೆ ₹12,55,100 ರೂ. ಆಗಿದ್ದು, ನಿನ್ನೆ 12,58,400 ರೂ. ಇತ್ತು.
ಭಾರತದಲ್ಲಿ 22K ಚಿನ್ನದ ಬೆಲೆ:
22K ಚಿನ್ನದ 1 ಗ್ರಾಂ ಬೆಲೆ 11,505 ರೂ. ಆಗಿದ್ದು, ನಿನ್ನೆ ₹11,535 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹30 ರೂ. ಇಳಿಕೆ ಕಂಡಿದೆ. ಹಾಗೆಯೇ 8 ಗ್ರಾಂ ಚಿನ್ನದ ಬೆಲೆ ಇಂದು 92,040 ರೂ. ಆಗಿದ್ದು, ನಿನ್ನೆ 92,280 ರೂ. ಇತ್ತು. ಒಂದೇ ದಿನದಲ್ಲಿ ₹240 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 1,15,050 ರೂ ಆಗಿದ್ದು, ನಿನ್ನೆ ₹1,15,350 ರೂ ಇತ್ತು. ಈ ಮೂಲಕ ₹300 ರೂ. ಇಳಿಕೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ ಇಂದು 11,50,500 ರೂ. ಆಗಿದ್ದು, ನಿನ್ನೆ 11,53,500 ರೂ. ಇತ್ತು. ನಿನ್ನೆಗಿಂತ ಇಂದು ಒಟ್ಟು 3,000 ರೂ. ಇಳಿಕೆಯಾಗಿದೆ.
ಭಾರತದಲ್ಲಿ 18K ಚಿನ್ನದ ಬೆಲೆ:
24K, 22K ಚಿನ್ನಕ್ಕೆ ಹೋಲಿಸಿದ್ರೆ 18K ಚಿನ್ನದ ಬೆಲೆ ಕಮ್ಮಿಯೇ ಇರುತ್ತದೆ. ಅದೇ ರೀತಿ ಇಂದು 1 ಗ್ರಾಂ ಬೆಲೆ ₹9,413 ರೂ. ಆಗಿದ್ದು, ನಿನ್ನೆ 9,438 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 25 ರೂ. ಇಳಿಕೆಯಾಗಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ಇಂದು ₹75,304 ರೂ. ಆಗಿದೆ. ನಿನ್ನೆ 75,504 ರೂ ಇತ್ತು. ನಿನ್ನೆಗಿಂತ ಇಂದು 200 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 94,130 ರೂ. ಆಗಿದ್ದು, ನಿನ್ನೆ 94,380 ರೂ. ಇತ್ತು. ಈ ಮೂಲಕ ಒಟ್ಟು 250 ರೂ. ಇಳಿಕೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ ನಿನ್ನೆಗಿಂತ ಇಂದು 2,500 ರೂ. ಇಳಿಯಾಗಿದ್ದು, ಒಟ್ಟು ಬೆಲೆ 9,41,300 ರೂ. ಆಗಿದೆ.
ಭಾರತದ ವಿವಿಧ ನಗರಗಳ ಚಿನ್ನದ ಬೆಲೆ ಇಂದು ಹೇಗಿದೆ?
ಚೆನ್ನೈ: 24K ರೂ. 12,656, 22K ರೂ. 11,600, 18K ರೂ. 9,665
ಮುಂಬೈ: 24K ರೂ. 12,551, 22K ರೂ. 11,505, 18K ರೂ. 9,413
ದೆಹಲಿ: 24K ರೂ. 12,566, 22K ರೂ. 11,520, 18K ರೂ. 9,428
ಕೋಲ್ಕತ್ತಾ: 24K ರೂ. 12,551, 22K ರೂ. 11,505, 18K ರೂ. 9,413
ಬೆಂಗಳೂರು: 24K ರೂ. 12,551, 22K ರೂ. 11,505, 18K ರೂ. 9,413
ಹೈದರಾಬಾದ್: 24K ರೂ. 12,551, 22K ರೂ. 11,505, 18K ರೂ. 9,413
ಕೇರಳ: 24K ರೂ. 12,551, 22K ರೂ. 11,505, 18K ರೂ. 9,413
ಪುಣೆ: 24K ರೂ. 12,551, 22K ರೂ. 11,505, 18K ರೂ. 9,413
ವಡೋದರಾ: 24K ರೂ. 12,556, 22K ರೂ. 11,510, 18K ರೂ. 9,418
ಅಹಮದಾಬಾದ್: 24K ರೂ. 12,556, 22K ರೂ. 11,510, 18K ರೂ. 9,418
ಸ್ಪಾಟ್ ಗೋಲ್ಡ್ ವಿವರ:
ನವೆಂಬರ್ 7ರ ರಾಯಿಟರ್ಸ್ ವರದಿ ಪ್ರಕಾರ, ಡಾಲರ್ ಮೌಲ್ಯದಲ್ಲಿ ಕುಸಿತ ಮತ್ತು ಅಮೆರಿಕ ಸರ್ಕಾರ ಮತ್ತೆ ಆರಂಭ, ಆರ್ಥಿಕ ದತ್ತಾಂಶಗಳ ಬಗ್ಗೆ ನಿರೀಕ್ಷೆಗಳಿಂದಾಗು ಬುಧವಾರ ಚಿನ್ನದ ಬೆಲೆ ಸತತ ನಾಲ್ಕನೇ ವಹಿವಾಟಿನಲ್ಲಿ ಏರಿಕೆ ಕಂಡಿದೆ. ಇನ್ನು ಅಕ್ಟೋಬರ್ 23ರ ನಂತರ ಗರಿಷ್ಠ ಮಟ್ಟವನ್ನು ತಲುಪಿದ ಚಿನ್ನದ ದರ, 0155 GMT ವೇಳೆಯಲ್ಲಿ ಸ್ಪಾಟ್ ಚಿನ್ನದ ದರವೂ ಪ್ರತೀ ಔನ್ಸ್‌ಗೆ 0.2% ಏರಿಕೆಯಾಗಿ $4,133.99 ಕ್ಕೆ ತಲುಪಿದೆ.
ಬೆಳ್ಳಿ ಬೆಲೆ ಹೇಗಿದೆ?
ಚಿನ್ನದ ಬೆಲೆಯಲ್ಲಿ ಇಳಿಕೆಯಾದರೂ, ಬೆಳ್ಳಿ ಬೆಲೆ ಮಾತ್ರ ಏರಿಕೆಯ ಹಾದಿಯಲ್ಲೇ ಇದೆ. ನಿನ್ನೆಯೂ ಬೆಳ್ಳಿ ಬೆಲೆಯಲ್ಲಿ ಏರಿಕೆ ಕಂಡಿತ್ತು. ಇದೀಗ ಮತ್ತಷ್ಟು ಹೆಚ್ಚಳವಾಗಿದೆ. 1 ಗ್ರಾಂ ಬೆಳ್ಳಿದರ ಇಂದು ₹162 ರೂ. ಆಗಿದ್ದು, ನಿನ್ನೆ ₹160 ರೂ. ಇತ್ತು. ಒಂದು ಗ್ರಾಂ ಬೆಳ್ಳಿದರ ಇಂದು ₹2 ರೂ. ಹೆಚ್ಚಳ ಕಂಡಿದೆ. ಅದೇ ರೀತಿ 8 ಗ್ರಾಂ ಬೆಳ್ಳಿ ಬೆಲೆ ₹1,296 ರೂ. ಆಗಿದ್ದು, ನಿನ್ನೆ ₹1,280 ರೂ. ಇತ್ತು. ನಿನ್ನೆಗಿಂತ ಇಂದು ₹16 ರೂ. ಹೆಚ್ಚಳವಾಗಿದೆ. ಹಾಗೆಯೇ 10 ಗ್ರಾಂ ಬೆಳ್ಳಿ ದರ ₹1,620 ರೂ. ಆಗಿದೆ. ನಿನ್ನೆ ₹1,600 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹20 ರೂ ಏರಿಕೆ ಕಂಡಿದೆ. ಹಾಗೆಯೇ 100 ಗ್ರಾಂ ಬೆಳ್ಳಿ ದರ ಇಂದು ₹16,200 ರೂ. ಮತ್ತು 1000 ಗ್ರಾಂ ಬೆಳ್ಳಿದರ ಇಂದು ₹1,62,000 ರೂ. ಆಗಿದೆ.
More From GoodReturns

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Silver Rate Today: ಒಂದೇ ದಿನ 10,000 ಇಳಿಕೆ ಕಂಡ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Silver Rate Kannada: ಬೆಳ್ಳಿ ದರದಲ್ಲಿ ಇಂದು ಭರ್ಜರಿ ಇಳಿಕೆ! ಒಂದೇ ದಿನ 20,000 ರೂ. ಕುಸಿತ

Gold Price India: ದಿಢೀರ್ ಏರಿಕೆ ಹಾದಿಯನ್ನೇ ಅನುಸರಿಸಿದ ಚಿನ್ನದ ಬೆಲೆ…25,100 ರೂ. ಏರಿಕೆ!

Gold Rate: ಚಿನ್ನ ಕೊಳ್ಳುವವರಿಗೆ ‘ಗುರುದೆಸೆ’…ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ 9,800 ರೂ. ಕುಸಿತ!

Gold Rate Today: ಶುಕ್ರವಾರ ಚಿನ್ನ ಪ್ರಿಯರಿಗೆ ಒಲಿದ ಲಕ್ಷ್ಮಿ! 7,000 ರೂ. ಇಳಿಕೆ

Gold Rate Today: ಭಾರತದಲ್ಲಿ ಚಿನ್ನದ ಬೆಲೆ ಭರ್ಜರಿ ಕುಸಿತ! ದಿಢೀರ್ 9,800 ರೂ. ಇಳಿಕೆ

India Oil: ಇಸ್ರೇಲ್, ಯುಎಸ್ ಮತ್ತು ಇರಾನ್ ನಡುವೆ ವಾರ್! ಭಾರತದ ಕಚ್ಚಾ ತೈಲದ ಮೇಲೆ ಪರಿಣಾಮ ಬೀರಿದ್ದು ಹೇಗೆ?

Gold Rate Down: ಚಿನ್ನ ಪ್ರಿಯರಿಗೆ ಜಾಕ್ಪಾಟ್! ದಿಢೀರ್ 3,110 ರೂ. ಇಳಿಕೆ

Bank Holidays: ಮಾರ್ಚ್ನಲ್ಲಿ ಬ್ಯಾಂಕ್ಗಳಿಗೆ 18 ದಿನ ರಜೆ! ಗ್ರಾಹಕರೇ ಇಲ್ಲಿ ಗಮನಿಸಿ

iPhone EMI: ಐಫೋನ್ EMIನಲ್ಲಿ ತಗೊಳೋದು ಎಷ್ಟು ಸೇಫ್? ಮಾಸಿಕ ಪಾವತಿ ಸುಲಭ, ಆದರೆ ನಿಮ್ಮ ಹಣಕಾಸು ಸುರಕ್ಷಿತವೇ?



Click it and Unblock the Notifications