ಅಬ್ಬಾ.. ಕೊನೆಗೂ ಚಿನ್ನ ಖರೀದಿದಾರರಿಗೆ ಸಿಹಿಸುದ್ದಿ ಸಿಕ್ಕಾಗಿದೆ. ಇಂದು ಭಾರತದಲ್ಲಿ ಚಿನ್ನದ ಬೆಲೆ (Gold Price) ಮತ್ತಷ್ಟು ಇಳಿಕೆಯಾಗಿದೆ. ದೀಪಾವಳಿ ನಂತರ ಚಿನ್ನ ಖರೀದಿದಾರರಿಗೆ, ಹೂಡಿಕೆದಾರರಿಗೆ ಗುಡ್ ನ್ಯೂಸ್ ಸಿಗುತ್ತಲೇ ಇದೆ. ಇದೀಗ ಇಂದು (ನ.05) ಚಿನ್ನದ ಬೆಲೆ ಇಳಿಕೆಯಾಗಿದ್ದು, ಎಷ್ಟು ಇಳಿಕೆಯಾಗಿದೆ ಎಂಬುದರ ಮಾಹಿತಿ ಇಲ್ಲಿದೆ.

ಭಾರತದಲ್ಲಿ 24K ಚಿನ್ನದ ಬೆಲೆ:
24 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಇಂದು ಭಾರೀ ಇಳಿಕೆಯಾಗಿದೆ. ನಿನ್ನೆಗಿಂತಲೂ ಇಂದು ಚಿನ್ನದ ದರದಲ್ಲಿ ಇಳಿಕೆ ಕಂಡಿದೆ. 24K ಚಿನ್ನದ 1 ಗ್ರಾಂ ಬೆಲೆ ₹12,148 ರೂ. ಆಗಿದೆ. ನಿನ್ನೆ ₹12,246 ರೂ ಇತ್ತು. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ಇಂದು ₹97,184 ರೂ. ಆಗಿದ್ದು, ನಿನ್ನೆ ₹97,968 ಇತ್ತು. 8 ಗ್ರಾಂ ಚಿನ್ನದಲ್ಲಿ ಒಂದೇ ದಿನ ₹784 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,21,480 ರೂ. ಆಗಿದೆ. ನಿನ್ನೆ 1,22,460 ರೂ. ಇತ್ತು. ಹತ್ತು ಗ್ರಾಂ ಚಿನ್ನದಲ್ಲಿ ₹980 ರೂ. ಇಳಿಕೆ ಕಂಡಿದೆ. ಹಾಗೆಯೇ 100 ಗ್ರಾಂ ಚಿನ್ನದ ಒಟ್ಟು ಬೆಲೆ ₹12,14,800 ರೂ. ಆಗಿದ್ದು, ಒಟ್ಟಿ 9,800 ರೂ.ನಷ್ಟು ಇಳಿಕೆಯಾಗಿದೆ.
ಭಾರತದಲ್ಲಿ 22K ಚಿನ್ನದ ಬೆಲೆ:
ಚಿನ್ನದ ಬೆಲೆಯಲ್ಲಿ ಇಂದು ಭಾರೀ ಕುಸಿತ ಕಂಡಿದ್ದು 22K ಚಿನ್ನದ 1 ಗ್ರಾಂ ಬೆಲೆ 11,135 ರೂ. ಆಗಿದ್ದು, ನಿನ್ನೆ ₹11,225 ರೂ. ಇತ್ತು. ಈ ಮೂಲಕ ಒಂದೇ ದಿನ ₹90 ರೂ. ಇಳಿಕೆಯಾಗಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ಇಂದು 89,080 ರೂ. ಆಗಿದ್ದು, ನಿನ್ನೆ 89,800 ರೂ. ಇತ್ತು. ಒಂದೇ ದಿನದಲ್ಲಿ ₹720 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,11,350 ರೂ ಆಗಿದ್ದು, ನಿನ್ನೆ ₹1,12,250 ರೂ ಇತ್ತು. ನಿನ್ನೆಗಿಂತ ಇಂದು ₹900 ರೂ. ಇಳಿಕೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ ಇಂದು 11,13,5000 ರೂ. ಆಗಿದ್ದು, ಒಟ್ಟು 9,000 ರೂ. ಇಳಿಕೆ ಕಂಡುಬಂದಿದೆ.
ಭಾರತದಲ್ಲಿ 18K ಚಿನ್ನದ ಬೆಲೆ:
24K, 22K ಚಿನ್ನಕ್ಕೆ ಹೋಲಿಸಿದ್ರೆ 18K ಚಿನ್ನ ಕಡಿಮೆ ಬೆಲೆಗೆ ಸಿಗುತ್ತದೆ. ಅದೇ ರೀತಿ 1 ಗ್ರಾಂ ಬೆಲೆ ಇಂದು ₹9,111 ರೂ. ಆಗಿದ್ದು, ನಿನ್ನೆ 9,184 ರೂ. ಇತ್ತು. ನಿನ್ನೆಗಿಂತ ಇಂದು ಕೇವಲ 73 ರೂ. ಇಳಿಕೆಯಾಗಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ಇಂದು ₹72,888 ರೂ. ಆಗಿದ್ದು, ನಿನ್ನೆ 73,472 ರೂ ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 584 ರೂ. ಇಳಿಕೆಯಾಗಿದೆ. ಇನ್ನು 10 ಗ್ರಾಂ ಚಿನ್ನದ ಬೆಲೆ ಇಂದು 91,110 ರೂ. ಆಗಿದ್ದು, ನಿನ್ನೆ 91,840 ರೂ. ಇತ್ತು. ಇಂದು ಇಟ್ಟು 730 ರೂ. ಇಳಿಕೆಯಾಗಿದೆ. ಅದೇ ರೀತಿ 100 ಗ್ರಾಂ ಚಿನ್ನದ ಬೆಲೆ ಇಂದು 9,11,100 ರೂ. ಆಗಿದ್ದು, ನಿನ್ನೆ 9,18,400 ರೂ. ಇತ್ತು. ಈ ಮೂಲಕ ಒಂದೇ ದಿನ 7,300 ರೂ. ಇಳಿಕೆ ಕಂಡುಬಂದಿದೆ.
ಭಾರತದ ವಿವಿಧ ನಗರಗಳ ಚಿನ್ನದ ಬೆಲೆ ಇಂದು ಹೇಗಿದೆ?
ಚೆನ್ನೈ: 24K ರೂ. 12,197, 22K ರೂ. 11,180, 18K ರೂ. 9,325
ಮುಂಬೈ: 24K ರೂ. 12,148, 22K ರೂ. 11,135, 18K ರೂ. 9,111
ದೆಹಲಿ: 24K ರೂ. 12,163, 22K ರೂ. 11,150, 18K ರೂ. 9,126
ಕೋಲ್ಕತ್ತಾ: 24K ರೂ. 12,148, 22K ರೂ. 11,135, 18K ರೂ. 9,111
ಬೆಂಗಳೂರು: 24K ರೂ. 12,148, 22K ರೂ. 11,135, 18K ರೂ. 9,111
ಹೈದರಾಬಾದ್: 24K ರೂ. 12,148, 22K ರೂ. 11,135, 18K ರೂ. 9,111
ಕೇರಳ: 24K ರೂ. 12,148, 22K ರೂ. 11,135, 18K ರೂ. 9,111
ಪುಣೆ: 24K ರೂ. 12,148, 22K ರೂ. 11,135, 18K ರೂ. 9,111
ವಡೋದರಾ: 24K ರೂ. 12,153, 22K ರೂ. 11,140, 18K ರೂ. 9,116
ಅಹಮದಾಬಾದ್: 24K ರೂ. 12,153, 22K ರೂ. 11,140, 18K ರೂ. 9,116
ಸ್ಪಾಟ್ ಗೋಲ್ಡ್ ವಿವರ:
ವರದಿ ಪ್ರಕಾರ, ಜಿಎಂಟಿ 0115 ರ ವೇಳೆ ಸ್ಪಾಟ್ ಚಿನ್ನವು ಪ್ರತೀ ಔನ್ಸ್‌ಗೆ ಶೇ. 0.3% ಪ್ರತಿಶತ ಏರಿಕೆಯಾಗಿದೆ. ಅಂದರೆ $3,941.92 ಕ್ಕೆ ತಲುಪಿದೆ. ಮಂಗಳವಾದ ಬುಲಿಯನ್ ಮಾರುಕಟ್ಟೆ ಶೇ.1.5% ಕ್ಕಿಂತ ಹೆಚ್ಚು ಕುಸಿತ ಕಂಡಿದ್ದು, ಡಾಲರ್ ಮೌಲ್ಯ ಸ್ಥಿರವಾದ ಕಾರಣ, ಬೆಲೆ ಇಳಿಕೆಯಾಗಿದೆ.
ಬೆಳ್ಳಿ ಬೆಲೆ ಹೇಗಿದೆ?
ಅತ್ತ ಚಿನ್ನದ ಬೆಲೆ ಭರ್ಜರಿಯಾಗಿ ಇಳಿಕೆ ಕಂಡಿದ್ದು, ಇತ್ತ ಬೆಳ್ಳಿ ಬೆಲೆ ಕೂಡಾ ಭಾರೀ ಇಳಿಕೆಯಾಗಿದೆ. ಕಳೆದೆರಡು ದಿನಗಳಿಂದ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿದ್ದು, ಹೂಡಿಕೆದಾರರಿಗೆ ಸಂತಸದ ಸುದ್ದಿಯಾಗಿದೆ. ಇದೀಗ ಭಾರತದಲ್ಲಿ ಬೆಳ್ಳಿ ಬೆಲೆ 1 ಗ್ರಾಂಗೆ ₹150.50 ರೂ. ಆಗಿದ್ದು, ನಿನ್ನೆ ₹151 ರೂ. ಇತ್ತು. ಈ ಮೂಲಕ ನಿನ್ನೆಗಿಂತ ಇಂದು ₹0.50 ರೂ. ಇಳಿಕೆಯಾಗಿದೆ. ಅದೇ ರೀತಿ 10 ಗ್ರಾಂ ಬೆಳ್ಳಿದರ ₹1,505 ರೂ. ಆಗಿದ್ದು, ನಿನ್ನೆ ₹1,510 ರೂ. ಇತ್ತು. ಒಟ್ಟು ₹5 ರೂ. ಇಳಿಕೆಯಾಗಿದೆ. 100 ಬೆಳ್ಳಿ ಬೆಲೆ ₹15,050 ರೂ. ಆಗಿದ್ದು, ನಿನ್ನೆ ₹15,100 ರೂ. ಇತ್ತು. ಅದೇ ರೀತಿ 1000 ಗ್ರಾಂ ಬೆಳ್ಳಿ ಬೆಲೆ ₹1,50,500 ರೂ. ಆಗಿದೆ.
More From GoodReturns

Silver Rate Today: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ಬೆಲೆ! ಎಷ್ಟಿದೆ ಇಂದಿನ ದರ?

Silver Rate Today: ಒಂದೇ ದಿನ 10,000 ಇಳಿಕೆ ಕಂಡ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

T20 World Cup: ಟಿ20 ವಿಶ್ವಕಪ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ 96 ರನ್ಗಳ ಗೆಲುವು...ತಂಡಕ್ಕೆ ಸಿಕ್ಕ ಬಹುಮಾನಗಳೇನು?

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

Gold Rate Today: ಶುಕ್ರವಾರ ಚಿನ್ನ ಪ್ರಿಯರಿಗೆ ಒಲಿದ ಲಕ್ಷ್ಮಿ! 7,000 ರೂ. ಇಳಿಕೆ

Gold Prices: ತೈಲ ಬೆಲೆ ಏರಿಕೆ ನಡುವೆಯೂ ಚಿನ್ನದ ಬೆಲೆ ಕುಸಿತ...ಭಾರತದಲ್ಲಿ ಹೂಡಿಕೆದಾರರನ್ನು ಆಘಾತ ನೀಡಿದ ಬೆಳವಣಿಗೆ

Bengaluru Gold Rate: ಸತತ ಮೂರನೇ ದಿನವೂ ಏರಿಕೆ ನೋಡಿದ ಚಿನ್ನದ ಬೆಲೆ..ಬೆಂಗಳೂರಲ್ಲಿ ಇಂದಿನ ರೇಟ್ ಎಷ್ಟು?

Gold Price Bengaluru: ಚಿನ್ನಪ್ರಿಯರಿಗೆ ಇಂದು ‘ಶುಕ್ರದೆಸೆ’…ಬಂಗಾರದ ದರದಲ್ಲಿ 7,700 ರೂ. ಕುಸಿತ!

Market Prediction: ನಾಳೆ ಹೇಗಿರಲಿದೆ ಷೇರು ಮಾರುಕಟ್ಟೆ? ಲಾಭವೋ? ನಷ್ಟವೋ? ಇಲ್ಲಿದೆ ಓದಿ



Click it and Unblock the Notifications