Today's Gold Price: ಭಾರತದಲ್ಲಿ ಇಂದೂ ಚಿನ್ನದ ಬೆಲೆ ಇಳಿಕೆ..24K ಚಿನ್ನದಲ್ಲಿ ನಿನ್ನೆಗಿಂತ ₹1,100 ಇಳಿಕೆ!

ಜೂನ್ 10, ಭಾರತದಲ್ಲಿ ಚಿನ್ನದ ಬೆಲೆ: ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಜೂನ್ ಎರಡನೇ ವಾರ ಶುಭ ಎನ್ನಬಹುದು. ಏಕೆಂದರೆ ಹತ್ತು ಲಕ್ಷ ಗಡಿಯಲ್ಲಿದ್ದ ಚಿನ್ನದ ಬೆಲೆ ದಿನೇ ದಿನೆ ಇಳಿಕೆಯಾಗುತ್ತಿದೆ. ಇದು ಚಿನ್ನ ಖರೀದಿದಾರರಿಗೂ ಹೂಡಿಕೆದಾರರಿಗೂ ಶುಭ ಸಂದರ್ಭವಾಗಿದೆ. ಜೂನ್ ಮೊದಲ ವಾರದಲ್ಲಿ ಇಳಿಕೆಯನ್ನೇ ನೋಡಿರದ ಚಿನ್ನ ಈ ವಾರದ ಆರಂಭದಿಂದ ಭಾರಿ ಇಳಿಕೆಯನ್ನೇ ನೋಡುತ್ತಿದೆ. ಇಂದಿನ ದಿನಗಳಲ್ಲಿ ಚಿನ್ನ ಕೊಳ್ಳುವುದಕ್ಕಿಂತ ಬೆಲೆ ಕೇಳಿದರೇನೆ ಬೆವರಿಳಿಯುತ್ತದೆ. ಅಷ್ಟರ ಮಟ್ಟಕ್ಕೆ ಏರುತ್ತಿದೆ ಚಿನ್ನದ ಬೆಲೆ. ಹೀಗಿರುವಾಗ ಹತ್ತು ರೂ. ಇಳಿಕೆಯಾದರು ಮಾರುಕಟ್ಟೆಯಲ್ಲಿ ಅದು ದೊಡ್ಡ ವಿಚಾರವೇ ಎನ್ನಬಹುದು.

Gold Price: ಭಾರತದಲ್ಲಿ ಇಂದೂ ಚಿನ್ನದ ಬೆಲೆ ಇಳಿಕೆ..!

ಇದು ಹೂಡಿಕೆದಾರರು ಹಾಗೂ ಚಿನ್ನ ಖರೀದಿದಾರರಿಗೂ ಬಹಳ ದೊಡ್ಡ ಖುಷಿಸುದ್ದಿ ಎನ್ನಬಹುದಾಗಿದೆ. ಚಿನ್ನದ ಬೆಲೆ ಕೇಳಿದರೆ ಕೈ ಸುಡುವಂತಹ ಕಾಲದಲ್ಲಿ, ಬೆಲೆಯಲ್ಲಿ ಒಂದು ರೂಪಾಯಿ ಇಳಿಕೆಯಾದರೂ ಅದು ದೊಡ್ಡ ಸುದ್ದಿಯೇ. ಏಕೆಂದರೆ ಜಾಗತಿಕವಾಗಿ ನೋಡಿದಾಗ ಚಿನ್ನದ ಬೆಲೆಯ ಒಂದೊಂದು ರೂಪಾಯಿಯ ಏರಿಕೆ-ಇಳಿಕೆಯೂ ದೊಡ್ಡ ಬದಲಾವಣೆಯಾಗುತ್ತದೆ. ಜಾಗತಿಕ ಮಾರುಕಟ್ಟೆಯ ಸನ್ನಿವೇಷದಲ್ಲಿ ಚಿನ್ನವು ದೊಡ್ಡ ಹೂಡಿಕೆಯ ಸಾಧನವಾಗಿದೆ. ಹೀಗಾಗಿ ಇಳಿಕೆ-ಏರಿಕೆಯು ದೊಡ್ಡ ಸುದ್ದಿಯಾಗಿರುತ್ತದೆ. ಹಾಗಾದರೆ ಇಂದು ಬೆಲೆಯಲ್ಲಿ ಎಷ್ಟು ಇಳಿಕೆಯಾಗಿದೆ ಎಂದು ನೋಡುವುದಾದರೆ..

ಭಾರತದಲ್ಲಿ 24 ಕ್ಯಾರಟ್ ಚಿನ್ನದ ಬೆಲೆ:

1 ಗ್ರಾಂ ಚಿನ್ನ: ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಇಂದು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು, ₹9,758 ಆಗಿದೆ. ನಿನ್ನೆ ಇದರ ಬೆಲೆ ₹9,769 ಆಗಿದ್ದು ನಿನ್ನೆಗಿಂತ ಇಂದು, ₹11 ಇಳಿಕೆಯಾಗಿದೆ.

10 ಗ್ರಾಂ ಚಿನ್ನ: 24 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆಯು, ₹97,580 ಆಗಿದೆ. ನಿನ್ನೆ ಇದರ ಬೆಲೆ ₹97,690 ಆಗಿದ್ದು ನಿನ್ನೆಗಿಂತ ಇಂದು, ₹110 ಇಳಿಕೆಯಾಗಿದೆ.

100 ಗ್ರಾಂ ಚಿನ್ನ: 24 ಕ್ಯಾರಟ್‌ನ 100 ಗ್ರಾಂ ಚಿನ್ನದ ಬೆಲೆಯು, ₹9,75,800 ಆಗಿದೆ. ನಿನ್ನೆ ಇದರ ಬೆಲೆ ₹9,76,900 ಆಗಿದ್ದು ನಿನ್ನೆಗಿಂತ ಇಂದು, ₹1,100 ಇಳಿಕೆಯಾಗಿದೆ.

ಭಾರತದಲ್ಲಿ 22 ಕ್ಯಾರಟ್ ಚಿನ್ನದ ಬೆಲೆ:

1 ಗ್ರಾಂ ಚಿನ್ನ: ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಇಂದು 22 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು, ₹8,945 ಆಗಿದೆ. ನಿನ್ನೆ ಇದರ ಬೆಲೆ ₹8,955 ಆಗಿದ್ದು ನಿನ್ನೆಗಿಂತ ಇಂದು, ₹10 ಇಳಿಕೆಯಾಗಿದೆ.

10 ಗ್ರಾಂ ಚಿನ್ನ: 22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆಯು, ₹89,450 ಆಗಿದೆ. ನಿನ್ನೆ ಇದರ ಬೆಲೆ ₹89,550 ಆಗಿದ್ದು ನಿನ್ನೆಗಿಂತ ಇಂದು, ₹100 ಇಳಿಕೆಯಾಗಿದೆ.

100 ಗ್ರಾಂ ಚಿನ್ನ: 22 ಕ್ಯಾರಟ್‌ನ 100 ಗ್ರಾಂ ಚಿನ್ನದ ಬೆಲೆಯು, ₹8,94,500 ಆಗಿದೆ. ನಿನ್ನೆ ಇದರ ಬೆಲೆ ₹8,95,500 ಆಗಿದ್ದು ನಿನ್ನೆಗಿಂತ ಇಂದು ₹1,000 ಇಳಿಕೆಯಾಗಿದೆ.

ಭಾರತದಲ್ಲಿ 18 ಕ್ಯಾರಟ್ ಚಿನ್ನದ ಬೆಲೆ:

1 ಗ್ರಾಂ ಚಿನ್ನ: ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಇಂದು 18 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹7,319 ಆಗಿದೆ. ನಿನ್ನೆ ಇದರ ಬೆಲೆ ₹7,327 ಆಗಿದ್ದು ನಿನ್ನೆಗಿಂತ ಇಂದು, 8 ಇಳಿಕೆಯಾಗಿದೆ.

10 ಗ್ರಾಂ ಚಿನ್ನ: 18 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆಯು, ₹73,190 ಆಗಿದೆ. ನಿನ್ನೆ ಇದರ ಬೆಲೆ ₹73,270 ಆಗಿದ್ದು ನಿನ್ನೆಗಿಂತ ಇಂದು, 80 ರೂ. ಇಳಿಕೆಯಾಗಿದೆ.

100 ಗ್ರಾಂ ಚಿನ್ನ: 18 ಕ್ಯಾರಟ್‌ನ 100 ಗ್ರಾಂ ಚಿನ್ನದ ಬೆಲೆಯು, ₹7,31,900 ಆಗಿದೆ. ನಿನ್ನೆ ಇದರ ಬೆಲೆ ₹7,32,700 ಆಗಿದ್ದು ನಿನ್ನೆಗಿಂತ ಇಂದು, 800 ರೂ. ಇಳಿಕೆಯಾಗಿದೆ.

ಭಾರತದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ (1 ಗ್ರಾಂ)

ಚೆನ್ನೈ: ಚೆನ್ನೈನಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,758 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹8,945 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,360 ಆಗಿದೆ.

ಮುಂಬೈ: ಮುಂಬೈನಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,758 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹8,945 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,319 ಆಗಿದೆ.

ದೆಹಲಿ: ದೆಹಲಿಯಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,784 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹8,970 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,339 ಆಗಿದೆ.

ಕೋಲ್ಕತಾ: ಕೋಲ್ಕತ್ತಾದಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,758 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹8,945 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,319 ಆಗಿದೆ.

ಬೆಂಗಳೂರು: ಬೆಂಗಳೂರಿನಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,758 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹8,945 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,319 ಆಗಿದೆ.

ಹೈದರಾಬಾದ್: ಹೈದರಾಬಾದ್‌ನಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,758 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹8,945 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,319 ಆಗಿದೆ.

ಕೇರಳ: ಕೇರಳದಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,758 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹8,945 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,319 ಆಗಿದೆ.

ಪುಣೆ: ಪುಣೆಯಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,758 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹8,945 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,319 ಆಗಿದೆ.

ಬರೋಡಾ: ಬರೋಡಾದಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,763 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹8,950 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,323 ಆಗಿದೆ.

ಅಹಮದಾಬಾದ್: ಅಹಮದಾಬಾದ್‌ನಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,763 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹8,950 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,323 ಆಗಿದೆ.

ಭಾರತದಲ್ಲಿ ಇಂದು ಬೆಳ್ಳಿ ಬೆಲೆ:

ಇನ್ನು ಭಾರತದಲ್ಲಿ ಇಂದು ಬೆಳ್ಳಿ ಬೆಲೆಯಲ್ಲೂ ಏರಿಕೆ ನೋಡಬಹುದು. ಪ್ರತಿ ಗ್ರಾಂ ಬೆಳ್ಳಿ ಬೆಲೆಗೆ ಇಂದು ₹109 ಇದೆ. ನಿನ್ನೆ ಬೆಳ್ಳಿ ಬೆಲೆ ₹108 ಆಗಿದ್ದು ಇಂದು ₹1 ಹೆಚ್ಚಳವಾಗಿದೆ. 10 ಗ್ರಾಂ ಬೆಳ್ಳಿ ಬೆಲೆಗೆ ಇಂದು ₹1,090 ಇದೆ. ನಿನ್ನೆ ಬೆಳ್ಳಿ ಬೆಲೆ ₹1,080 ಆಗಿದ್ದು ಇಂದು ₹10 ಹೆಚ್ಚಳವಾಗಿದೆ. 100 ಗ್ರಾಂ ಬೆಳ್ಳಿ ಬೆಲೆಗೆ ಇಂದು ₹10,900 ಇದೆ. ನಿನ್ನೆ ಬೆಳ್ಳಿ ಬೆಲೆ ₹10,800 ಆಗಿದ್ದು ಇಂದು ₹100 ಹೆಚ್ಚಳವಾಗಿದೆ. ಹಾಗೆಯೇ ಇಂದು 100 ಗ್ರಾಂ ಬೆಳ್ಳಿ ಬೆಲೆಗೆ ಇಂದು ₹1,09,000 ಇದೆ. ನಿನ್ನೆ ಬೆಳ್ಳಿ ಬೆಲೆ ₹1,08,000 ಆಗಿದ್ದು ಇಂದು ₹1,000 ಹೆಚ್ಚಳವಾಗಿದೆ.

ಸ್ಪಾಟ್ ಗೋಲ್ಡ್ ವಿವರ:

2025ರ ಜೂನ್ 10ರಂದು ಮಂಗಳವಾರದಂದು ಸ್ಪಾಟ್ ಚಿನ್ನದ ಬೆಲೆ ಪ್ರತಿಔನ್ಸ್‌ಗೆ $3,307.72 ಆಗಿದ್ದು, 0.6% ಇಳಿಕೆಯನ್ನು ದಾಖಲಿಸಿದೆ. ಫ್ಯೂಚರ್ ಗೋಲ್ಡ್ ವಹಿವಾಟು ಬೆಲೆ $3,327.50 ಆಗಿದ್ದು, ಇದೂ ಸಹ 0.8% ಇಳಿಕೆಯಲ್ಲಿತ್ತು. ಈ ಇಳಿಕೆಗೆ ಪ್ರಮುಖ ಕಾರಣವೆಂದರೆ ಅಮೆರಿಕನ್ ಡಾಲರ್ ಮೌಲ್ಯದಲ್ಲಿ ಕಂಡು ಬಂದ ಬಲವಾದ ಏರಿಕೆ. ಡಾಲರ್ ಮೌಲ್ಯವು ಹೆಚ್ಚಾದಾಗ, ಇತರ ಕರೆನ್ಸಿಗಳಲ್ಲಿ ಚಿನ್ನ ಖರೀದಿಸುವ ಖರ್ಚು ಏರಿದಂತೆ ಆಗುತ್ತದೆ. ಈ ಪರಿಸ್ಥಿತಿಯಲ್ಲಿ ಬಂಗಾರದ ಮೇಲಿನ ಬೇಡಿಕೆ ಸ್ವಲ್ಪ ಇಳಿದಿರುವುದು ಕಂಡುಬಂದಿದೆ.

ಹೂಡಿಕೆಯ ಸಾಧನವಾಗಿರುವ ಚಿನ್ನ:

ಹೂಡಿಕೆಯ ಸಾಧನವಾಗಿರುವ ಚಿನ್ನವು ಭಾರತದಲ್ಲಿ ಹಲವು ರೀತಿಯ ಮಹತ್ವದ ಸ್ಥಾನ ಪಡೆದುಕೊಂಡಿದೆ. ಮಹಿಳೆಯರಿಗೆ ಒಡವೆ ರೂಪದಲ್ಲಿ ಇದು ಖುಷಿ ನೀಡುತ್ತದೆ. ಹಾಗೆಯೇ ಪ್ರತಿಷ್ಠೆಯ ಸಂಕೇತವಾಗಿ ಗೌರವ ತಂದುಕೊಡುತ್ತದೆ. ಇನ್ನು ಕಷ್ಟ ಅಂತ ಬಂದಾಗ ಆರ್ಥಿಕ ಸಹಾಯ ಮಾಡುವ ಮಿತ್ರನಾಗಿರುತ್ತದೆ. ಹೂಡಿಕೆಯ ರೂಪದಲ್ಲಿ ನೋಡುವುದಾದರೆ, ಚಿನ್ನವು ಭವಿಷ್ಯದ ದೊಡ್ಡ ಸಂಪತ್ತಾಗಿ ಪಾತ್ರ ನಿರ್ವಹಿಸುತ್ತದೆ. ಒಂದೇ ಲೋಹ ಹಲವು ರೀತಿಯಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಹೀಗಾಗಿಯೇ ಭಾರತದಲ್ಲಿ ಚಿನ್ನಕ್ಕೆ ಒಂದು ಮಹತ್ವದ ಸ್ಥಾನವಿದೆ. ಚಿನ್ನವನ್ನು ಪೂಜೆ-ಪುನಸ್ಕಾರ, ಮದುವೆ-ಸಮಾರಂಭಗಳಲ್ಲಿ ಇರಿಸದೇ ಏನೂ ನೆರವೇರುವುದಿಲ್ಲ. ಅದರಲ್ಲೂ ಮಹಿಳೆಯರಿಗೆ ಚಿನ್ನವೆಂದರೆ ಅಚ್ಚು-ಮೆಚ್ಚು. ಏನು ಕೊಟ್ಟರೂ ಮನಸೋಲದ ನಾರಿಯರಿಗೆ ಚಿನ್ನವೇ ದೊಡ್ಡ ಮಟ್ಟದ ಉಡುಗೊರೆ. ಅವರಿಗೆ ಚಿನ್ನವೇ ಭೂಷಣ.

ಚಿನ್ನದ ಬೆಲೆ ಏರಿಕೆ-ಇಳಿಕೆಗೆ ಕಾರಣವೇನು?

ಚಿನ್ನದ ಬೆಲೆಯ ಏರಿಕೆ ಹಾಗೂ ಇಳಿಕೆಗೆ ನಾನಾ ಕಾರಣಗಳಿರುತ್ತವೆ. ಚಿನ್ನದ ಬೆಲೆಯಲ್ಲಿ ಏರಿಕೆ ವಿವಿಧ ಆರ್ಥಿಕ, ರಾಜಕೀಯ ಮತ್ತು ಜಾಗತಿಕ ಅಂಶಗಳಿಂದ ಪ್ರೇರಿತವಾಗಿರುತ್ತದೆ. ನಾಣ್ಯ ಮೌಲ್ಯ ಕುಸಿದಾಗ ಹೂಡಿಕೆದಾರರು ಚಿನ್ನವನ್ನು ಸುರಕ್ಷಿತ ಹೂಡಿಕೆ ಎಂದು ಪರಿಗಣಿಸುತ್ತಾರೆ. ಇದರ ಫಲಿತಾಂಶವಾಗಿ ಚಿನ್ನದ ಬೇಡಿಕೆ ಹೆಚ್ಚಾಗಿ ಬೆಲೆ ಏರುತ್ತದೆ. ಯುದ್ಧಗಳು, ವ್ಯಾಪಾರ ತಕರಾರುಗಳು, ಜಾಗತಿಕ ರಾಜಕೀಯ ಸಮಸ್ಯೆಗಳು ಚಿನ್ನದ ಬೆಲೆಯ ಮೇಲೆ ನೇರ ಪರಿಣಾಮ ಬೀರುತ್ತವೆ. ಹೂಡಿಕೆದಾರರು ಭದ್ರತೆಯ ಹೂಡಿಕೆ ಎಂದು ಚಿನ್ನವನ್ನು ಖರೀದಿಸುತ್ತಾರೆ, ಇದರಿಂದ ಬೇಡಿಕೆ ಹೆಚ್ಚಾಗಿ ಬೆಲೆ ಏರಿಕೆಯಾಗುತ್ತದೆ.

ಅಮೆರಿಕದ ಫೆಡೆರಲ್ ರಿಸರ್ವ್ ಅಥವಾ ಭಾರತದ RBI ಬಡ್ಡಿದರಗಳನ್ನು ಇಳಿಸಿದರೆ, ಹೂಡಿಕೆದಾರರು ಚಿನ್ನದತ್ತ ಮುಖ ಮಾಡುತ್ತಾರೆ. ಇದು ಚಿನ್ನದ ಬೆಲೆಯನ್ನು ಹೆಚ್ಚಿಸುತ್ತದೆ. ಚಿನ್ನದ ಉತ್ಪಾದನೆ ಕಡಿಮೆಯಾದರೆ ಅಥವಾ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಹೆಚ್ಚಾದರೆ, ಬೆಲೆ ತಾನಾಗಿಯೇ ಏರಿಕೆಯಾಗುತ್ತದೆ. ಚಿನ್ನದ ಬೆಲೆಯ ಏರಿಕೆ ಬಹುಪಾಲು ಆರ್ಥಿಕ ಅಸ್ಥಿರತೆ, ಇನ್‌ಫ್ಲೇಶನ್, ರಾಜಕೀಯ ಅಶಾಂತಿ, ಮಾರುಕಟ್ಟೆ ತಾಣಮೌಲ್ಯಗಳು, ಹಾಗೂ ಹೂಡಿಕೆದಾರರ ಮನೋಭಾವ ಇತ್ಯಾದಿ ಅಂಶಗಳಿಂದ ನಿರ್ಧಾರವಾಗುತ್ತದೆ. ಚಿನ್ನದ ಬೆಲೆಯ ಈ ಬದಲಾವಣೆಗಳಿಗೆ ಆಂತರಾಷ್ಟ್ರೀಯ ಮಾರುಕಟ್ಟೆಯ ಪ್ರಭಾವ, ಕರೆನ್ಸಿ ವಿನಿಮಯ ದರಗಳು, ದೇಶೀಯ ಬೇಡಿಕೆ, ಹೂಡಿಕೆದಾರರ ನಂಬಿಕೆ ಮತ್ತು ಆರ್ಥಿಕ ಪರಿಸ್ಥಿತಿಗಳು ಪ್ರಮುಖವಾಗಿರಬಹುದು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+