ಭಾರತದಲ್ಲಿ ಇಂದಿನ ಚಿನ್ನದ ಬೆಲೆ: ಚಿನ್ನದ ಬೆಲೆ ಏರಿಕೆ..ಭಾರತದಲ್ಲಿ ಇಂದಿನ ಚಿನ್ನದ ಬೆಲೆ ಆಸೆ ಹೊತ್ತವರಿಗೆ ನಿರಾಸೆ ಉಣಿಸಿದೆ. ಇತ್ತೀಚಿನ ಚಿನ್ನದ ಬೆಲೆ ಹೇಗಿದೆ ಎಂದರೆ, ಚಿನ್ನ ಕೊಳ್ಳುವ ಬದಲು ಒಂದು ಜಾಗ ಖರೀದಿಸಬಹುದು ಎನ್ನುವಂತಾಗಿದೆ. ಏಕೆಂದರೆ ಚಿನ್ನದ ಬೆಲೆ ದಿನೇ ದಿನೆ ಏರಿಕೆಯಾಗುತ್ತಿದೆ. ಚಿನ್ನ ಪ್ರಿಯರ ಆಸೆ ನಿರಾಸೆಯಾಗುತ್ತಿದೆ. ಚಿನ್ನ ಒಂದು ಪ್ರತಿಷ್ಠೆಯ ಸಂಕೇತವಾಗಿರುವುದರಿಂದ, ಭಾರತದಲ್ಲಿ ಚಿನ್ನಕ್ಕೆ ಸಾಕಷ್ಟು ಬೇಡಿಕೆ ಇದೆ. ಆದರೆ ಬೆಲೆ ಮಾತ್ರ ಬರೆ ಹಾಕುವಷ್ಟಿದೆ. ಹಾಗೆಯೇ ನಿನ್ನೆ ಇಳಿಕೆಯಾಗಿದ್ದ ಚಿನ್ನದ ಬೆಲೆ ಇಂದು, ದಿಢೀರ್ ಏರಿಕೆಯಾಗಿದೆ. ಚಿನ್ನಪ್ರಿಯರ ಕನಸು ಭಗ್ನವಾಗಿದೆ. ಆಸೆ ನೀರಲ್ಲಿ ತೇಲಿ ಹೋದಂತಾಗಿದೆ.

ಮಹಿಳೆಯರಷ್ಟೇ ಅಲ್ಲ ಹೂಡಿಕೆದಾರರ ಪಾಲಿನ ಬೆಸ್ಟ್ ಆಯ್ಕೆಯೂ ಚಿನ್ನವೇ ಆಗಿರುತ್ತದೆ. ಆದರೆ ಈ ಚಿನ್ನ ಇತ್ತೀಚಿನ ದಿನಗಳಲ್ಲಿ ದುಬಾರಿಯಾಗುತ್ತಿದೆ. ಚಿನ್ನದ ಬೆಲೆ ಯಾವಾಗ ಇಳಿಕೆಯಾಗುತ್ತದೇ ಎಂದು ಹೂಡಿಕೆದಾರರು ಕಾದು ನೋಡುತ್ತಿರುತ್ತಾರೆ. ಆದರೆ ಇಂದು ಅವರಿಗೆ ನಿರಾಸೆಯಾಗಿದೆ. ಏಕೆಂದರೆ ಚಿನ್ನದ ಬೆಲೆಯು ಇಂದು ಏರಿಕೆಯಾಗಿದೆ. ಹಾಗಾದರೆ ಇಂದು ಯಾವ್ಯಾವ ಕ್ಯಾರಟ್ ಚಿನ್ನದ ಬೆಲೆ ಎಷ್ಟು ಏರಿಕೆಯಾಗಿದೆ ಎಂದು ತಿಳಿಯುವುದಾದರೆ.
ಭಾರತದಲ್ಲಿ 24 ಕ್ಯಾರಟ್ ಚಿನ್ನದ ಬೆಲೆ:
1 ಗ್ರಾಂ ಚಿನ್ನ: ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಇಂದು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು, ₹9,731 ಆಗಿದೆ. ನಿನ್ನೆ ಇದರ ಬೆಲೆ ₹9,704 ಆಗಿದ್ದು ನಿನ್ನೆಗಿಂತ ಇಂದು, ₹27 ಏರಿಕೆಯಾಗಿದೆ.
10 ಗ್ರಾಂ ಚಿನ್ನ: 24 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆಯು, ₹97,310 ಆಗಿದೆ. ನಿನ್ನೆ ಇದರ ಬೆಲೆ ₹97,040 ಆಗಿದ್ದು ನಿನ್ನೆಗಿಂತ ಇಂದು, ₹270 ಏರಿಕೆಯಾಗಿದೆ.
100 ಗ್ರಾಂ ಚಿನ್ನ: 24 ಕ್ಯಾರಟ್‌ನ 100 ಗ್ರಾಂ ಚಿನ್ನದ ಬೆಲೆಯು, ₹9,73,100 ಆಗಿದೆ. ನಿನ್ನೆ ಇದರ ಬೆಲೆ ₹9,70,400 ಆಗಿದ್ದು ನಿನ್ನೆಗಿಂತ ಇಂದು, ₹2,700 ಏರಿಕೆಯಾಗಿದೆ.
ಭಾರತದಲ್ಲಿ 22 ಕ್ಯಾರಟ್ ಚಿನ್ನದ ಬೆಲೆ:
1 ಗ್ರಾಂ ಚಿನ್ನ: ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಇಂದು 22 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು, ₹8,920 ಆಗಿದೆ. ನಿನ್ನೆ ಇದರ ಬೆಲೆ ₹8,895 ಆಗಿದ್ದು ನಿನ್ನೆಗಿಂತ ಇಂದು, ₹25 ಏರಿಕೆಯಾಗಿದೆ.
10 ಗ್ರಾಂ ಚಿನ್ನ: 22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆಯು, ₹89,200 ಆಗಿದೆ. ನಿನ್ನೆ ಇದರ ಬೆಲೆ ₹88,950 ಆಗಿದ್ದು ನಿನ್ನೆಗಿಂತ ಇಂದು, ₹250 ಏರಿಕೆಯಾಗಿದೆ.
100 ಗ್ರಾಂ ಚಿನ್ನ: 22 ಕ್ಯಾರಟ್‌ನ 100 ಗ್ರಾಂ ಚಿನ್ನದ ಬೆಲೆಯು, ₹8,92,000 ಆಗಿದೆ. ನಿನ್ನೆ ಇದರ ಬೆಲೆ ₹8,89,500 ಆಗಿದ್ದು ನಿನ್ನೆಗಿಂತ ಇಂದು, ₹2,500 ಏರಿಕೆಯಾಗಿದೆ.
ಭಾರತದಲ್ಲಿ 18 ಕ್ಯಾರಟ್ ಚಿನ್ನದ ಬೆಲೆ:
1 ಗ್ರಾಂ ಚಿನ್ನ: ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಇಂದು 18 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು, ₹7,299 ಆಗಿದೆ. ನಿನ್ನೆ ಇದರ ಬೆಲೆ ₹7,278 ಆಗಿದ್ದು ನಿನ್ನೆಗಿಂತ ಇಂದು, ₹21 ಏರಿಕೆಯಾಗಿದೆ.
10 ಗ್ರಾಂ ಚಿನ್ನ: 18 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆಯು, ₹72,990 ಆಗಿದೆ. ನಿನ್ನೆ ಇದರ ಬೆಲೆ ₹72,780 ಆಗಿದ್ದು ನಿನ್ನೆಗಿಂತ ಇಂದು, ₹210 ಏರಿಕೆಯಾಗಿದೆ.
100 ಗ್ರಾಂ ಚಿನ್ನ: 18 ಕ್ಯಾರಟ್‌ನ 100 ಗ್ರಾಂ ಚಿನ್ನದ ಬೆಲೆಯು, ₹7,29,900 ಆಗಿದೆ. ನಿನ್ನೆ ಇದರ ಬೆಲೆ ₹7,27,800 ಆಗಿದ್ದು ನಿನ್ನೆಗಿಂತ ಇಂದು, ₹2,100 ಏರಿಕೆಯಾಗಿದೆ.
ಭಾರತದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ (1 ಗ್ರಾಂ)
ಚೆನ್ನೈ: ಚೆನ್ನೈನಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,731 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹8,920 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,345 ಆಗಿದೆ.
ಮುಂಬೈ: ಮುಂಬೈನಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,731 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹8,920 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,299 ಆಗಿದೆ.
ದೆಹಲಿ: ದೆಹಲಿಯಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,746 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹8,935 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,311 ಆಗಿದೆ.
ಕೋಲ್ಕತಾ: ಕೋಲ್ಕತ್ತಾದಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,731 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹8,920 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,299 ಆಗಿದೆ.
ಬೆಂಗಳೂರು: ಬೆಂಗಳೂರಿನಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,731 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹8,920 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,299 ಆಗಿದೆ.
ಹೈದರಾಬಾದ್: ಹೈದರಾಬಾದ್‌ನಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,731 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹8,920 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,299 ಆಗಿದೆ.
ಕೇರಳ: ಕೇರಳದಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,731 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹8,920 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,299 ಆಗಿದೆ.
ಪುಣೆ: ಪುಣೆಯಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,731 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹8,920 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,299 ಆಗಿದೆ.
ಬರೋಡಾ: ಬರೋಡಾದಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,736 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹8,925 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,303 ಆಗಿದೆ.
ಅಹಮದಾಬಾದ್: ಅಹಮದಾಬಾದ್‌ನಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,736 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹8,925 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,303 ಆಗಿದೆ.
ಭಾರತದಲ್ಲಿ ಇಂದು ಬೆಳ್ಳಿ ಬೆಲೆ:
ಇನ್ನು ಭಾರತದಲ್ಲಿ ಬೆಳ್ಳಿ ಬೆಲೆಯಲ್ಲೂ ಯಾವುದೇ ಇಳಿಕೆಯಾಗಲಿ, ಏರಿಕೆಯಾಗಲೀ ಆಗಿಲ್ಲ. ಅಂದರೆ ಪ್ರತಿ ಗ್ರಾಂ ಬೆಳ್ಳಿಗೆ ₹99.90 ಇದೆ. ಪ್ರತಿ ಹತ್ತು ಗ್ರಾಂ ಬೆಳ್ಳಿ ಬೆಲೆಗೆ ₹999 ಆಗಿದೆ. ಹಾಗೆಯೇ ಪ್ರತಿ 100 ಗ್ರಾಂ ಬೆಳ್ಳಿಗೆ ₹9,990 ಆಗಿದ್ದು, ಒಂದು ಕೆ.ಜಿ ಬೆಳ್ಳಿಗೆ ₹99,900 ಆಗಿದೆ. ಬೆಳ್ಳಿ ಬೆಲೆಯಲ್ಲೂ ಯಾವುದೇ ಬದಲಾವಣೆಯಾಗಿಲ್ಲ.
ಸ್ಪಾಟ್ ಗೋಲ್ಡ್ ವಿವರ:
ರಾಯಿಟರ್ಸ್ ನೀಡಿರುವ ವರದಿ ಪ್ರಕಾರ, ಮೇ 30ರಂದು ಸ್ಪಾಟ್ ಚಿನ್ನದ ಬೆಲೆಯು ಹಿಂದಿನ ದಿನಕ್ಕೆ ಹೋಲಿಸಿದರೆ 0.60% , ಇಳಿಕೆಯಾಗಿದೆ. ಅಂದರೆ ಇದು ಇಂದು ಪ್ರತಿ ಔನ್ಸ್‌ಗೆ $3,296.05ರಷ್ಟು ವಹಿವಾಟು ನಡೆಸಿದೆ. ಈ ಇಳಿಕೆದ ತಾತ್ಕಾಲಿಕ ಕಾರಣಗಳ ನಡುವೆಯೂ ಚಿನ್ನದ ದರ ಉನ್ನತ ಮಟ್ಟದಲ್ಲಿಯೇ ಇದೆ. ಹೂಡಿಕೆದಾರರು ಮುಂದಿನ ಆರ್ಥಿಕ ಸೂಚನೆಗಳತ್ತ ಗಮನ ಹರಿಸುತ್ತಿರುವಂತೆ, ಚಿನ್ನದ ಮೌಲ್ಯದಲ್ಲಿ ಚಲನೆಗಳಾಗುವ ಸಾಧ್ಯತೆ ಇದೆ.
ಹೂಡಿಕೆಯ ಸಾಧನವಾಗಿರುವ ಚಿನ್ನ:
ಹೂಡಿಕೆಯ ಸಾಧನವಾಗಿರುವ ಚಿನ್ನವು ಭಾರತದಲ್ಲಿ ಹಲವು ರೀತಿಯ ಮಹತ್ವದ ಸ್ಥಾನ ಪಡೆದುಕೊಂಡಿದೆ. ಮಹಿಳೆಯರಿಗೆ ಒಡವೆ ರೂಪದಲ್ಲಿ ಇದು ಖುಷಿ ನೀಡುತ್ತದೆ. ಹಾಗೆಯೇ ಪ್ರತಿಷ್ಠೆಯ ಸಂಕೇತವಾಗಿ ಗೌರವ ತಂದುಕೊಡುತ್ತದೆ. ಇನ್ನು ಕಷ್ಟ ಅಂತ ಬಂದಾಗ ಆರ್ಥಿಕ ಸಹಾಯ ಮಾಡುವ ಮಿತ್ರನಾಗಿರುತ್ತದೆ. ಹೂಡಿಕೆಯ ರೂಪದಲ್ಲಿ ನೋಡುವುದಾದರೆ, ಚಿನ್ನವು ಭವಿಷ್ಯದ ದೊಡ್ಡ ಸಂಪತ್ತಾಗಿ ಪಾತ್ರ ನಿರ್ವಹಿಸುತ್ತದೆ. ಒಂದೇ ಲೋಹ ಹಲವು ರೀತಿಯಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಹೀಗಾಗಿಯೇ ಭಾರತದಲ್ಲಿ ಚಿನ್ನಕ್ಕೆ ಒಂದು ಮಹತ್ವದ ಸ್ಥಾನವಿದೆ. ಚಿನ್ನವನ್ನು ಪೂಜೆ-ಪುನಸ್ಕಾರ, ಮದುವೆ-ಸಮಾರಂಭಗಳಲ್ಲಿ ಇರಿಸದೇ ಏನೂ ನೆರವೇರುವುದಿಲ್ಲ. ಅದರಲ್ಲೂ ಮಹಿಳೆಯರಿಗೆ ಚಿನ್ನವೆಂದರೆ ಅಚ್ಚು-ಮೆಚ್ಚು. ಏನು ಕೊಟ್ಟರೂ ಮನಸೋಲದ ನಾರಿಯರಿಗೆ ಚಿನ್ನವೇ ದೊಡ್ಡ ಮಟ್ಟದ ಉಡುಗೊರೆ. ಅವರಿಗೆ ಚಿನ್ನವೇ ಭೂಷಣ.
ಚಿನ್ನದ ಬೆಲೆ ಏರಿಕೆ-ಇಳಿಕೆಗೆ ಕಾರಣವೇನು?
ಚಿನ್ನದ ಬೆಲೆಯ ಏರಿಕೆ ಹಾಗೂ ಇಳಿಕೆಗೆ ನಾನಾ ಕಾರಣಗಳಿರುತ್ತವೆ. ಚಿನ್ನದ ಬೆಲೆಯಲ್ಲಿ ಏರಿಕೆ ವಿವಿಧ ಆರ್ಥಿಕ, ರಾಜಕೀಯ ಮತ್ತು ಜಾಗತಿಕ ಅಂಶಗಳಿಂದ ಪ್ರೇರಿತವಾಗಿರುತ್ತದೆ. ನಾಣ್ಯ ಮೌಲ್ಯ ಕುಸಿದಾಗ ಹೂಡಿಕೆದಾರರು ಚಿನ್ನವನ್ನು ಸುರಕ್ಷಿತ ಹೂಡಿಕೆ ಎಂದು ಪರಿಗಣಿಸುತ್ತಾರೆ. ಇದರ ಫಲಿತಾಂಶವಾಗಿ ಚಿನ್ನದ ಬೇಡಿಕೆ ಹೆಚ್ಚಾಗಿ ಬೆಲೆ ಏರುತ್ತದೆ. ಯುದ್ಧಗಳು, ವ್ಯಾಪಾರ ತಕರಾರುಗಳು, ಜಾಗತಿಕ ರಾಜಕೀಯ ಸಮಸ್ಯೆಗಳು ಚಿನ್ನದ ಬೆಲೆಯ ಮೇಲೆ ನೇರ ಪರಿಣಾಮ ಬೀರುತ್ತವೆ. ಹೂಡಿಕೆದಾರರು ಭದ್ರತೆಯ ಹೂಡಿಕೆ ಎಂದು ಚಿನ್ನವನ್ನು ಖರೀದಿಸುತ್ತಾರೆ, ಇದರಿಂದ ಬೇಡಿಕೆ ಹೆಚ್ಚಾಗಿ ಬೆಲೆ ಏರಿಕೆಯಾಗುತ್ತದೆ.
ಅಮೆರಿಕದ ಫೆಡೆರಲ್ ರಿಸರ್ವ್ ಅಥವಾ ಭಾರತದ RBI ಬಡ್ಡಿದರಗಳನ್ನು ಇಳಿಸಿದರೆ, ಹೂಡಿಕೆದಾರರು ಚಿನ್ನದತ್ತ ಮುಖ ಮಾಡುತ್ತಾರೆ. ಇದು ಚಿನ್ನದ ಬೆಲೆಯನ್ನು ಹೆಚ್ಚಿಸುತ್ತದೆ. ಚಿನ್ನದ ಉತ್ಪಾದನೆ ಕಡಿಮೆಯಾದರೆ ಅಥವಾ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಹೆಚ್ಚಾದರೆ, ಬೆಲೆ ತಾನಾಗಿಯೇ ಏರಿಕೆಯಾಗುತ್ತದೆ. ಚಿನ್ನದ ಬೆಲೆಯ ಏರಿಕೆ ಬಹುಪಾಲು ಆರ್ಥಿಕ ಅಸ್ಥಿರತೆ, ಇನ್‌ಫ್ಲೇಶನ್, ರಾಜಕೀಯ ಅಶಾಂತಿ, ಮಾರುಕಟ್ಟೆ ತಾಣಮೌಲ್ಯಗಳು, ಹಾಗೂ ಹೂಡಿಕೆದಾರರ ಮನೋಭಾವ ಇತ್ಯಾದಿ ಅಂಶಗಳಿಂದ ನಿರ್ಧಾರವಾಗುತ್ತದೆ. ಚಿನ್ನದ ಬೆಲೆಯ ಈ ಬದಲಾವಣೆಗಳಿಗೆ ಆಂತರಾಷ್ಟ್ರೀಯ ಮಾರುಕಟ್ಟೆಯ ಪ್ರಭಾವ, ಕರೆನ್ಸಿ ವಿನಿಮಯ ದರಗಳು, ದೇಶೀಯ ಬೇಡಿಕೆ, ಹೂಡಿಕೆದಾರರ ನಂಬಿಕೆ ಮತ್ತು ಆರ್ಥಿಕ ಪರಿಸ್ಥಿತಿಗಳು ಪ್ರಮುಖವಾಗಿರಬಹುದು.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications