ಫೆಬ್ರವರಿ ಎರಡನೇ ವಾರ ಬರುತ್ತಿದ್ದಂತೆ ಭಾರತದಲ್ಲಿ ಚಿನ್ನ-ಬೆಳ್ಳಿ ದರ (Gold-Silver Rate India) ಭಾರೀ ಕುಸಿತ ಕಂಡಿತ್ತು. ದಾಖಲೆ ಬೆಲೆಯಲ್ಲಿ ಏರಿಕೆಯಾಗಿದ್ದ ಚಿನ್ನ-ಬೆಳ್ಳಿ ದರ, ಇದೀಗ ಭಾರೀ ಇಳಿಕೆಯ ಹಾದಿಯಲ್ಲಿದೆ. ಇದೀಗ ವಾರಾಂತ್ಯ, ಭಾನುವಾರ ಬರುತ್ತಿದ್ದಂತೆ ಚಿನ್ನ ಪ್ರಿಯರಲ್ಲಿ ಮತ್ತಷ್ಟು ಕುತೂಹಲ ಮೂಡಿದೆ. ಇಂದು ಚಿನ್ನದ ಬೆಲೆ ಇಳಿಕೆಯಾಗುತ್ತಾ? ಏರಿಕೆಯಾಗುತ್ತಾ? ಎಂಬ ಪ್ರಶ್ನೆ ಎದ್ದಿದೆ. ಹಾಗಿದ್ರೆ ಇಂದು ಭಾರತದಲ್ಲಿ ಚಿನ್ನದ ಬೆಲೆ ಎಷ್ಟಿದೆ ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಭಾರತದಲ್ಲಿ 24K ಚಿನ್ನದ ಬೆಲೆ ಎಷ್ಟಿದೆ?
24K ಚಿನ್ನದ ಬೆಲೆ ಇಂದು ನಿಂತ ನೀರಾಗಿಬಿಟ್ಟಿದೆ. ಅತ್ತ 24K ಚಿನ್ನದ ಪ್ರತೀ ಗ್ರಾಂ ಬೆಲೆ ₹15,775 ರೂ. ಆಗಿದ್ದು, ನಿನ್ನೆಯ ಬೆಲೆಯಲ್ಲೇ ಇಂದು ಮುಂದುವರೆದಿದ್ದು, ಶೂನ್ಯ ಬದಲಾವಣೆಯಾಗಿದೆ. 8 ಗ್ರಾಂ ಬೆಳ್ಳಿ ದರ ಇಂದು ₹1,26,200 ರೂ. ಆಗಿದ್ದು, ನಿನ್ನೆಗೂ ಇಂದಿಗೂ ಚಿನ್ನದ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇನ್ನು 10 ಗ್ರಾಂ ಚಿನ್ನದ ದರ ₹1,57,750 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ಬೆಲೆ ₹15,77,500 ರೂ. ಆಗಿದ್ದು, ಯಾವುದೇ ಬದಲಾವಣೆಗಳಾಗಿಲ್ಲ.
ಭಾರತದಲ್ಲಿ 22K ಚಿನ್ನದ ಬೆಲೆ ಎಷ್ಟಿದೆ?
22K ಚಿನ್ನದ ಒಂದು ಗ್ರಾಂ ಬೆಲೆ 14,460 ರೂ. ಇದೆ. ನಿನ್ನೆಗೆ ಹೋಲಿಸಿದ್ರೆ ಇಂದು ಯಾವುದೇ ಬದಲಾವಣೆಯಾಗಿಲ್ಲ. ಇನ್ನು 8 ಗ್ರಾಂ ಚಿನ್ನದ ಬೆಲೆ ಇಂದು 1,15,680 ರೂ. ಆಗಿದ್ದು, ಇಂದು ಶೂನ್ಯ ಬದಲಾವಣೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,44,600 ರೂ. ಆಗಿದೆ. 100 ಗ್ರಾಂ ಚಿನ್ನದ ಬೆಲೆ 14,46,000 ರೂ. ಆಗಿದೆ. ನಿನ್ನೆಗೆ ಹೋಲಿಸಿದ್ರೆ, ಇಂದು ಯಾವುದೇ ಬದಲಾವಣೆಯಾಗಿಲ್ಲ.
ಭಾರತದಲ್ಲಿ 18K ಚಿನ್ನದ ಬೆಲೆ ಎಷ್ಟಿದೆ?
ಭಾರತದಲ್ಲಿ 18K ಚಿನ್ನದ ಬೆಲೆಯಲ್ಲೂ ಇಂದು ಯಾವುದೇ ಬದಲಾವಣೆಯಾಗಿಲ್ಲ. ಅಂದರೆ ಇಂದು 1 ಗ್ರಾಂ ಚಿನ್ನದ ಬೆಲೆ 11,831 ರೂ. ಆಗಿದ್ದು, 8 ಗ್ರಾಂ ಚಿನ್ನದ ಬೆಲೆ ಇಂದು ₹94,648 ರೂ. ಆಗಿದೆ. ನಿನ್ನೆಗೆ ಹೋಲಿಸಿದ್ರೆ ಇಂದು ಯಾವುದೇ ಬದಲಾವಣೆಯಾಗಿಲ್ಲ. 10 ಗ್ರಾಂ ಚಿನ್ನದ ಬೆಲೆ ಇಂದು 1,18,310 ರೂ. ಆಗಿದ್ದು, 100 ಗ್ರಾಂ ಚಿನ್ನದ ಬೆಲೆ 11,83,100 ರೂ. ಆಗಿದೆ.
ಭಾರತದ ವಿವಿಧ ನಗರಗಳ ಚಿನ್ನದ ಬೆಲೆ ಎಷ್ಟಿದೆ?
ಚೆನ್ನೈ: 24K ರೂ. 15,884, 22K ರೂ. 14,560, 18K ರೂ. 12,450
ಮುಂಬೈ: 24K ರೂ. 15,775, 22K ರೂ. 14,460, 18K ರೂ. 11,831
ದೆಹಲಿ: 24K ರೂ. 15,790, 22K ರೂ. 14,475, 18K ರೂ. 11,846
ಕೋಲ್ಕತ್ತಾ: 24K ರೂ. 15,775, 22K ರೂ. 14,460, 18K ರೂ. 11,831
ಬೆಂಗಳೂರು: 24K ರೂ. 15,775, 22K ರೂ. 14,460, 18K ರೂ. 11,831
ಹೈದರಾಬಾದ್: 24K ರೂ. 15,775, 22K ರೂ. 14,460, 18K ರೂ. 11,831
ಕೇರಳ: 24K ರೂ. 15,775, 22K ರೂ. 14,460, 18K ರೂ. 11,831
ಪುಣೆ: 24K ರೂ. 15,775, 22K ರೂ. 14,460, 18K ರೂ. 11,831
ವಡೋದರಾ: 24K ರೂ. 15,780, 22K ರೂ. 14,465, 18K ರೂ. 11,836
ಅಹಮದಾಬಾದ್: 24K ರೂ. 15,780, 22K ರೂ. 14,465, 18K ರೂ. 11,836
ಭಾರತದಲ್ಲಿ ಬೆಳ್ಳಿ ದರ ಎಷ್ಟಿದೆ?
ಚಿನ್ನದ ಬೆಲೆ ಸ್ಥಿರವಾದಂತೆ, ಇತ್ತ ಬೆಳ್ಳಿ ದರವೂ ಸ್ಥಿರವಾಗಿಬಿಟ್ಟಿದೆ. ಬೆಳ್ಳಿಯ ಪ್ರತೀ ಗ್ರಾಂ ಬೆಲೆ ಇಂದು ₹275 ರೂ. ಆಗಿದೆ. ಇನ್ನು 8 ಗ್ರಾಂ ಬೆಳ್ಳಿ ಬೆಲೆ ₹2,200 ರೂ. ಆಗಿದೆ. ಇನ್ನು 10 ಗ್ರಾಂ ಬೆಳ್ಳಿ ದರ ಇಂದು ₹2,750 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ದರ ₹27,500 ರೂ., 1000 ಗ್ರಾಂ ಬೆಳ್ಳಿ ಬೆಲೆ ₹2,75,000 ರೂ. ಆಗಿದೆ.
ಸ್ಪಾಟ್ ಗೋಲ್ಡ್ ವಿವರ:
ಫೆಬ್ರವರಿ 14 ರ ರಾಯಿಟರ್ಸ್ ವರದಿ ಪ್ರಕಾರ, ಸ್ಪಾಟ್ ಚಿನ್ನದ ಬೆಲೆ ಮಧಾಹ್ನ 1:30 ರ ವೇಳೆಗೆ (GMT 1830) ಪ್ರತೀ ಔನ್ಸ್ ಚಿನ್ನದ ಬೆಲೆ $5,022.06 ಆಗಿದ್ದು, ಒಂದೇ ದಿನ 2.1% ಹೆಚ್ಚಳವಾಗಿತ್ತು. ಆದರೆ ಇಂದು ನಿನ್ನೆಯ ಬೆಲೆಯಲ್ಲೇ ಮುಂದುವರೆದಿದೆ.


Click it and Unblock the Notifications