ಭಾರತದಲ್ಲಿ ಇಂದು ಮತ್ತೆ ಚಿನ್ನದ ಬೆಲೆ ಏರಿಕೆಯಾಗಿದೆ. ಮತ್ತೆ ಚಿನ್ನಪ್ರಿಯರಿಗೆ ಇಂದೂ ಕೂಡ ನಿರಾಸೆಯಾಗಿದೆ. ನಿನ್ನೆ ಒಂದೇ ಸಾರಿ ಏರಿಕೆಯಾಗಿದ್ದ ಚಿನ್ನದ ಬೆಲೆ ಮತ್ತೆ ಇಂದು ಕೂಡ ಅದೇ ಓಟವನ್ನ ನಡೆಸಿದೆ. ಜಾಗತಿಕವಾಗಿ ಹೆಚ್ಚುತ್ತಿರುವ ಉದ್ವಿಗ್ನತೆಗಳ ಮಧ್ಯೆ ಚಿನ್ನದ ಬೆಲೆ ಮಾತ್ರ ಏರಿಕೆಯಾಗ್ತಾನೆ ಇದೆ. ಇದರಿಂದಾಗಿ ಮುಂಬರುವ ಯುಎಸ್ ಹಣದುಬ್ಬರ ದತ್ತಾಂಶದಿಂದ ಪ್ರಭಾವಿತವಾಗುವ ಸಾಧ್ಯತೆ ಇದೆ. ಇನ್ನು ಮುಂದಿನ ವಾರ ಫೆಡ್ ಹಣಕಾಸು ನೀತಿಯನ್ನು ಪ್ರಕಟಿಸಲಾಗುವುದು. ECB, SNB, BoC ಮತ್ತು Fed ನಂತಹ ಜಾಗತಿಕ ಕೇಂದ್ರ ಬ್ಯಾಂಕ್‌ಗಳು ದರಗಳನ್ನು ಟ್ರಿಮ್ ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗ್ತಿದೆ.
ಡಿಸೆಂಬರ್ 11ರಂದು ಭಾರತದಲ್ಲಿ ಚಿನ್ನದ ಬೆಲೆ ಮತ್ತೆ ಏರಿಕೆಯಾಗಿದೆ. 22-ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 800 ರೂಪಾಯಿ ಏರಿಕೆಯಾಗಿ 72,850 ರೂ. ಆಗಿದೆ. ಅದೇ ರೀತಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 870 ರೂ. ಏರಿಕೆಯಾಗಿ, ಈಗ 79,470 ರೂ. ಆಗಿದೆ. ಹಾಗೆ 18 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 660ರೂ. ಏರಿಕೆಯಾಗಿ 59,610ರೂ. ಆಗಿದೆ.

ಇನ್ನು ಇತ್ತ 100 ಗ್ರಾಂನ ಚಿನ್ನದ ದರಗಳನ್ನ ಗಮನಿಸಿದ್ರೆ, 100 ಗ್ರಾಂ 24 ಕ್ಯಾರೆಟ್ ಚಿನ್ನ 8,700 ರೂ ಏರಿಕೆಯಾಗಿ ₹7,94,700 ರೂಪಾಯಿ ಆಗಿದೆ. 100 ಗ್ರಾಂ 22 ಕ್ಯಾರೆಟ್ ಚಿನ್ನ 8,000 ರೂ ಏರಿಕೆಯಾಗಿ 7,28,500 ರೂಪಾಯಿ ಆಗಿದೆ. ಹಾಗೆ 18 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ 6,600 ರೂ. ಏರಿಕೆಯಾಗಿ 5,96,100 ರೂ. ಆಗಿದೆ.
ಭಾರತದಲ್ಲಿ ಬೆಳ್ಳಿ ದರ
ನಿನ್ನೆ ಭಾರತದಲ್ಲಿ ಏರಿಕೆಯಾಗಿದ್ದ ಬೆಳ್ಳಿ ಬೆಲೆ ಇಂದು ಮತ್ತೆ ಇಳಿಕೆಯಾಗಿದೆ. ಪ್ರಸ್ತುತ, ಭರತದಲ್ಲಿ 1 ಕಿಲೋ ಗ್ರಾಂ ಬೆಳ್ಳಿ ಬೆಲೆ 1,000 ರೂ. ಇಳಿಕೆಯಾಗಿದೆ 95,500 ರೂ ಇದೆ. ಅದೇ ರೀತಿ 100 ಗ್ರಾಂ ಬೆಳ್ಳಿಯ ಬೆಲೆ 100 ರೂ. ಇಳಿಕೆಯಾಗಿ 9,550 ರೂಪಾಯಿ ಆಗಿದೆ. ಭಾರತದಲ್ಲಿ ಬೆಳ್ಳಿ ಬೆಲೆ ಯುಎಸ್ ಡಾಲರ್ ಮತ್ತು ರೂಪಾಯಿಯ ಚಲನೆಯ ಮೇಲೆ ಇದು ನಿರ್ಧಾರವಾಗುತ್ತದೆ. ಅಲ್ಲದೆ ಡಾಲರ್ ಎದುರು ರೂಪಾಯಿ ಕುಸಿದರೆ ಹಾಗೆ ಅಂತರಾಷ್ಟ್ರೀಯ ಬೆಲೆಗಳು ಸ್ಥಿರವಾಗಿದ್ದರೆ ಬೆಳ್ಳಿ ಬೆಲೆ ಕೂಡ ಹೆಚ್ಚು ಏರಿಕೆಯಾಗುತ್ತದೆ.
ಸ್ಪಾಟ್ ಚಿನ್ನದ ಬೆಲೆ
ಟ್ರೇಡಿಂಗ್ ಎಕನಾಮಿಕ್ಸ್ ವರದಿ ಪ್ರಕಾರ ಪ್ರಮುಖ ಕೇಂದ್ರ ಬ್ಯಾಂಕ್‌ಗಳಿಂದ ಸಡಿಲವಾದ ವಿತ್ತೀಯ ನೀತಿಗಳು ನಿರಿಕ್ಷೆಗಳು ಹಾಗು ಬೇಡಿಕೆಯಿಂದಾಗಿ ಎರಡು ವಾರಗಳಲ್ಲಿ ಚಿನ್ನ ಬೆಲೆ ಗರಿಷ್ಠ ಮಟ್ಟವನ್ನ ತಲುಪಿದೆ. ಅಲ್ಲದೆ ಮೂರನೇ ದಿನದ ಅಧಿವೇಶನದ ನಂತರ ಚಿನ್ನದ ಬೆಲೆ 2,700 ಡಾಲರ್‌ಗಿಂತ ಹೆಚ್ಚಾಗಿದೆ. ಇನ್ನು ಈ ವಾರ ಯುಎಸ್ ಡಾಲರ್‌ನ ಬಲವರ್ಧನೆಯಿಂದಾಗಿ ಚಿನ್ನದ ಬೆಲೆಯಲ್ಲಿ ಏರಿಕೆಯನ್ನ ಕಾಣುವಂತಾಗಿದೆ.
MCX ಚಿನ್ನ ಮತ್ತು ಬೆಳ್ಳಿ ಬೆಲೆಗಳು
ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX), ಚಿನ್ನದ ಭವಿಷ್ಯ ನೋಡೋದಾದ್ರೆ, 10 ಗ್ರಾಂ ಚಿನ್ನಕ್ಕೆ 0.04% ನಷ್ಟು ಏರಿಕೆಯಾಗಿ 78,367 ರೂ ಆಗಿದೆ. ಅದೇ ರೀತಿ, ಬೆಳ್ಳಿ ಭವಿಷ್ಯವು 0.32%.ರಷ್ಟು ಏರಿಕೆಯಾಗಿ, ಪ್ರತಿ ಕೆಜಿಗೆ 95,502 ರೂಪಾಯಿ ವಹಿವಾಟು ನಡೆಸುತ್ತಿದೆ.
ಜಾಗತಿಕವಾಗಿ ಚಿನ್ನದ ಬೆಲೆ ಏರಿಕೆಗೆ ಕಾರಣವೇನು?
ಟ್ರೇಡಿಂಗ್ ಎಕನಾಮಿಕ್ಸ್ ಡೇಟಾ ಪ್ರಕಾರಮುಂಬರುವ ಯುಎಸ್ ಹಣದುಬ್ಬರದ ಮೇಲೆ ವ್ಯಾಪಾರಿಗಳು ಕೇಂದ್ರಿಕರಿಸಿದ್ದಾರೆ. ಇದರಿಂದಾಗಿ ಮುಂಬರುವ ಯುಎಸ್ ಹಣದುಬ್ಬರ ದತ್ತಾಂಶದಿಂದ ಪ್ರಭಾವಿತವಾಗುವ ಸಾಧ್ಯತೆ ಇದೆ. ಇನ್ನು ಮುಂದಿನ ವಾರ ಫೆಡ್ ಹಣಕಾಸು ನೀತಿಯನ್ನು ಪ್ರಕಟಿಸಲಾಗುವುದು. ECB, SNB, BoC ಮತ್ತು Fed ನಂತಹ ಜಾಗತಿಕ ಕೇಂದ್ರ ಬ್ಯಾಂಕ್‌ಗಳು ದರಗಳನ್ನು ಟ್ರಿಮ್ ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗ್ತಿದೆ.
ಅಲ್ಲದೆ ಪ್ರಮುಖ ಅಂತರಾಷ್ಟ್ರೀಯ ಅಂಶಗಳು ಕೂಡ ಚಿನ್ನದ ಬೆಲೆ ಮೇಲೆ ಪ್ರಭಾವ ಬೀರುತ್ತಿವೆ, ವಿಶೇಷವಾಗಿ US ಡಾಲರ್‌ನ ದತ್ತಾಂಶಕ್ಕಾಗಿ ಮಾರುಕಟ್ಟೆ ನಿರೀಕ್ಷೆ ಮಾಡುತ್ತಿದೆ. ಹಾಗೆ, ಹೂಡಿಕೆದಾರರು ಸಂಭಾವ್ಯ ದರ ಬದಲಾವಣೆಗಳಿಗೆ ಸಂಬಂಧಿಸಿದಂತೆ ಫೆಡರಲ್ ರಿಸರ್ವ್‌ನಿಂದ ಅಪ್‌ಡೇಟ್‌ಗಳನ್ನ ಸ್ಪಷ್ಟವಾಗಿ ಪರಿಶೀಲನೆ ಮಾಡುತ್ತಿದ್ದಾರೆ. ಏಕೆಂದರೆ ಈ ನಿರ್ಧಾರಗಳು ಮಾರುಕಟ್ಟೆಯ ಭಾವನೆಯ ಮೇಲೆ ಮತ್ತಷ್ಟು ಪರಿಣಾಮ ಬೀರುವ ನಿರೀಕ್ಷೆಯಿದೆ. ಆರ್ಥಿಕ ದತ್ತಾಂಶಗಳ ನಡುವೆ ಫೆಡ್ ದರ ಕಡಿತಕ್ಕೆ ಎಚ್ಚರಿಕೆಯ ಕ್ರಮ ತೆಗೆದುಕೊಳ್ಳುವುದರಿಂದ ಜಾಗತಿಕವಾಗಿ ಚಿನ್ನದ ದರಗಳು ಹೆಚ್ಚಿನ ಬೆಂಬಲವನ್ನ ಪಡೆಯುವ ನಿರೀಕ್ಷೆ ಇದೆ.
ಚಿನ್ನದ ದರ ಇಂದು ಮತ್ತೆ ಏರಿಕೆಯಾಗಿದೆ. ಜಾಗತಿಕವಾಗಿ ಚಿನ್ನಕ್ಕೆ ಬೇಡಿಕೆ ಹೆಚ್ಚಾಗಿದ್ದು, ಇದು ಬೆಲೆ ಏರಿಕೆಗೆ ಮುಖ್ಯ ಕಾರಣವಾಗಿದೆ. ಚೀನಾದಲ್ಲಿ ಗಮನಾರ್ಹವಾಗಿ ಚಿನ್ನದ ಗ್ರಾಹಕರಿರುವುದರಿಂದ ಬಂಗಾರಕ್ಕೆ ಹೆಚ್ಚಿನ ಬೇಡಿಕೆ ಇದೆ ಹೀಗಾಗಿ ಚಿನ್ನದ ಬೆಲೆ ಮತ್ತೆ ಏರಿಕೆಯಾಗುವ ನಿರೀಕ್ಷೆ ಇದೆ. ಭೌಗೋಳಿಕ ರಾಜಕೀಯ ಅಪಾಯ ಮತ್ತು ಸುತ್ತಲಿನ ಸಂದಿಗ್ಧತೆಯಿಂದಾಗಿ ಚಿನ್ನದ ಬೇಡಿಕೆಯೂ ಕೂಡ ಹೆಚ್ಚಾಗಿದೆ ಎನ್ನಲಾಗ್ತಿದೆ.


Click it and Unblock the Notifications