ನಿನ್ನೆಯಷ್ಟೇ ಇಳಿಕೆ ಕಂಡಿದ್ದ ಭಾರತದಲ್ಲಿ ಚಿನ್ನದ ಬೆಲೆ (Gold Rate), ಇಂದು ಭಾರೀ ಏರಿಕೆಯಾಗಿದೆ. ಚಿನ್ನದ ಮೇಲೆ ಹೂಡಿಕೆ ಮಾಡುವುದು ಸೇಫ್ಟಿ ಎಂದು ಹೇಳಲಾಗುತ್ತದೆ. ಆದ್ರೆ ಇತ್ತೀಚೆಗೆ ಬೆಲೆ ಏರಿಕೆಯಿಂದಾಗಿ ಹೆಚ್ಚಿನ ಹೂಡಿಕೆದಾರರು, ಖರೀದಿದಾರರು ಹಿಂದೇಟು ಹಾಕುತ್ತಿದ್ದಾರೆ. ಇದೀಗ ಇಂದೂ (ಡಿ.05) ಕೂಡಾ ಚಿನ್ನದ ಬೆಲೆ ಏರಿಕೆ ಕಂಡಿದ್ದು, ಎಷ್ಟಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಭಾರತದಲ್ಲಿ 24K ಚಿನ್ನದ ಬೆಲೆ ಎಷ್ಟಿದೆ?
24K ಚಿನ್ನದ ಒಂದು ಗ್ರಾಂ ಬೆಲೆ ಇಂದು ದಿಢೀರ್ ಏರಿಕೆ ಕಂಡಿದೆ. ನಿನ್ನೆಯಷ್ಟೇ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ಹೆಚ್ಚಾಗಿದೆ. ಇಂದು ಒಂದು ಗ್ರಾಂ ಚಿನ್ನದ ಬೆಲೆ 12,993 ರೂ. ಆಗಿದ್ದು, ನಿನ್ನೆ 12,966 ರೂ. ಇತ್ತು. ನಿನ್ನೆಗಿಂತ ಇಂದು ಚಿನ್ನದ ಪ್ರತೀ ಗ್ರಾಂನಲ್ಲಿ ₹27 ರೂ. ಏರಿಕೆ ಕಂಡಿದೆ. ಹಾಗೆಯೇ 8 ಗ್ರಾಂ ಚಿನ್ನದ ಬೆಲೆ ಇಂದು 1,03,944 ರೂ. ಆಗಿದ್ದು, ನಿನ್ನೆ 1,03,728 ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹216 ರೂ. ಹೆಚ್ಚಳವಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,29,930 ರೂ. ಆಗಿದ್ದು, ನಿನ್ನೆ 1,29,660 ರೂ. ಇತ್ತು. ನಿನ್ನೆಗಿಂತ ಇಂದು ₹270 ರೂ. ಏರಿಕೆ ಕಂಡಿದೆ. ಅದೇ ರೀತಿ 100 ಗ್ರಾಂ ಚಿನ್ನದ ಬೆಲೆ ಇಂದು ₹12,99,300 ರೂ. ಆಗಿದ್ದು, ನಿನ್ನೆ 12,96,600 ರೂ. ಇತ್ತು. ನಿನ್ನೆಗಿಂತ ಇಂದು 2,700 ರೂ. ಬದಲಾವಣೆಯಾಗಿದೆ.
ಭಾರತದಲ್ಲಿ 22K ಚಿನ್ನದ ಬೆಲೆ ಎಷ್ಟಿದೆ?
22K ಚಿನ್ನದ 1 ಗ್ರಾಂ ಬೆಲೆ 11,910 ರೂ. ಆಗಿದ್ದು, ನಿನ್ನೆ 11,885 ರೂ. ಇತ್ತು. ನಿನ್ನೆಗಿಂತ ಇಂದು ಚಿನ್ನದ ಬೆಲೆಯಲ್ಲಿ ಒಟ್ಟು ₹25 ರೂ. ಏರಿಕೆಯಾಗಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ಇಂದು 95,280 ರೂ. ಆಗಿದೆ. ನಿನ್ನೆಗಿಂತ ಇಂದು ₹200 ರೂ. ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,19,100 ರೂ ಆಗಿದ್ದು, ನಿನ್ನೆ 1,18,850 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹250 ರೂ ಹೆಚ್ಚಳ ಕಂಡಿದೆ. ಇನ್ನು 100 ಗ್ರಾಂ ಚಿನ್ನದ ಬೆಲೆ ಇಂದು 11,91,000 ರೂ. ಆಗಿದ್ದು, ನಿನ್ನೆ ₹11,88,500 ರೂ. ಇತ್ತು. ಒಟ್ಟು 2,500 ರೂ ಹೆಚ್ಚಳವಾಗಿದೆ.
ಭಾರತದಲ್ಲಿ 18K ಚಿನ್ನದ ಬೆಲೆ ಎಷ್ಟಿದೆ?
18K ಚಿನ್ನದ 1 ಗ್ರಾಂ ಬೆಲೆ ₹9,745 ರೂ. ಆಗಿದ್ದು, ನಿನ್ನೆ 9,724 ರೂ. ಇತ್ತು. ನಿನ್ನಗಿಂತ ಇಂದು ₹21 ರೂ. ಏರಿಕೆ ಕಂಡಿದೆ. 8 ಗ್ರಾಂ ಚಿನ್ನದ ಬೆಲೆ ಇಂದು ₹77,960 ರೂ. ಆಗಿದ್ದು, ನಿನ್ನೆ 77,792 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ಚಿನ್ನದ ಬೆಲೆ ₹168 ರೂ. ಏರಿಕೆ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 97,450 ರೂ. ಆಗಿದ್ದು, ನಿನ್ನೆ 97,240 ರೂ. ಇತ್ತು. ನಿನ್ನೆಗಿಂತ ಇಂದು ಒಟ್ಟು ₹210 ರೂ. ಏರಿಕೆ ಕಂಡಿದೆ. ಇನ್ನು 100 ಗ್ರಾಂ ಚಿನ್ನದ ಬೆಲೆಯಲ್ಲೂ ಭಾರೀ ಏರಿಕೆಯಾಗಿದೆ.
ಭಾರತದ ವಿವಿಧ ನಗರಗಳ ಚಿನ್ನದ ಬೆಲೆ ಎಷ್ಟಿದೆ?
ಚೆನ್ನೈ: 24K ರೂ. 13,091, 22K ರೂ. 12,000, 18K ರೂ. 10,015
ಮುಂಬೈ: 24K ರೂ. 12,993, 22K ರೂ. 11,910, 18K ರೂ. 9,745
ದೆಹಲಿ: 24K ರೂ. 13,008, 22K ರೂ. 11,925, 18K ರೂ. 9,760
ಕೋಲ್ಕತ್ತಾ: 24K ರೂ. 12,993, 22K ರೂ. 11,910, 18K ರೂ. 9,745
ಬೆಂಗಳೂರು: 24K ರೂ. 12,993, 22K ರೂ. 11,910, 18K ರೂ. 9,745
ಹೈದರಾಬಾದ್: 24K ರೂ. 12,993, 22K ರೂ. 11,910, 18K ರೂ. 9,745
ಕೇರಳ: 24K ರೂ. 12,993, 22K ರೂ. 11,910, 18K ರೂ. 9,745
ಪುಣೆ: 24K ರೂ. 12,993, 22K ರೂ. 11,910, 18K ರೂ. 9,745
ವಡೋದರಾ: 24K ರೂ. 12,998, 22K ರೂ. 11,915, 18K ರೂ. 9,750
ಅಹಮದಾಬಾದ್: 24K ರೂ. 12,998, 22K ರೂ. 11,915, 18K ರೂ. 9,750
ಬೆಳ್ಳಿ ಬೆಲೆ ಎಷ್ಷಿದೆ?
ಚಿನ್ನದ ಬೆಲೆ ಇಂದು ಭಾರೀ ದುಬಾರಿಯಾಗಿದ್ದು, ಆದರೆ ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಹಲವು ದಿನಗಳ ನಂತರ ಇಂದು ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ ಕಂಡಿದೆ. ಪ್ರತೀ ಗ್ರಾಂ ಬೆಳ್ಳಿಯಲ್ಲಿ 4 ರೂ. ಇಳಿಕೆಯಾಗಿದೆ. ಅಂದರೆ ಒಂದು ಗ್ರಾಂ ಬೆಳ್ಳಿ ದರ ಇಂದು 187 ರೂ. ಆಗಿದೆ. ಇನ್ನು 8 ಗ್ರಾಂ ಬೆಳ್ಳಿ ದರ ₹1,496 ರೂ., 10 ಗ್ರಾಂ ಬೆಳ್ಳಿ ದರ ₹1,870 ರೂ., 100 ಗ್ರಾಂ ಬೆಳ್ಳಿ ಬೆಲೆ ₹18,700 ರೂ., 1000 ಗ್ರಾಂ ಬೆಳ್ಳಿ ದರ ₹1,87,000 ರೂ. ಆಗಿದೆ.
ಸ್ಪಾಟ್ ಗೋಲ್ಡ್ ವಿವರ:
ಡಿಸೆಂಬರ್ 5ರ ರಾಯಿಟರ್ಸ್ ವರದಿ ಪ್ರಕಾರ, GMT 0358 ರ ಸಮಯದಲ್ಲಿ ಸ್ಪಾಟ್ ಚಿನ್ನದ ದರವು ಪ್ರತೀ ಔನ್ಸ್‌ಗೆ $4,208.46 ನಲ್ಲಿ ಸ್ಥಿರವಾಗಿತ್ತು ಮತ್ತು ವಾರದ 0.5% ದಷ್ಟು ಕುಸಿತದ ಹಾದಿಯಲ್ಲಿದೆ.


Click it and Unblock the Notifications