ಚಿನ್ನದ ಬೆಲೆ ನೋಡಿದ್ರೆ ಅಯ್ಯಯ್ಯೋ ಎಂಬಂತಾಗಿದೆ. ಯಾವಾಗ ಚಿನ್ನದ ಬೆಲೆ ಇಳಿಕೆಯಾಗುತ್ತೆ ಎಂದು ಜನ ಕಾತುರದಲ್ಲಿದ್ದಾರೆ. ಆದ್ರೆ ದಿನೇ ದಿನೇ ಭಾರತದಲ್ಲಿ ಚಿನ್ನದ ಬೆಲೆ (Gold Rate India) ಏರಿಕೆಯಾಗುತ್ತಿದೆಯೇ ಹೊರತು, ಕಡಿಮೆಯಂತೂ ಆಗೋದು ಕಾಣುತ್ತಿಲ್ಲ. ಹಾಗಿದ್ರೆ ಗಣರಾಜ್ಯೋತ್ಸವದ ದಿನ (Republic Day) ಚಿನ್ನದ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ನೋಡಿ.

ಭಾರತದಲ್ಲಿ 24K ಚಿನ್ನದ ಬೆಲೆ:
24K ಚಿನ್ನದ ಬೆಲೆ ಒಂದು ಗ್ರಾಂ ಬೆಲೆ 16,271 ರೂ. ಆಗಿದೆ. ನಿನ್ನೆಯಷ್ಟೇ 16,026 ರೂ. ಇತ್ತು. ಆದ್ರೆ ಒಂದೇ ದಿನದಲ್ಲಿ ₹245 ರೂ. ಹೆಚ್ಚಳವಾಗಿದೆ. ಇನ್ನು 8 ಗ್ರಾಂ ಚಿನ್ನದ ಬೆಲೆ ಇಂದು 1,30,168 ರೂ. ಆಗಿದ್ದು, ನಿನ್ನೆ 1,28,208 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 1,960 ರೂ. ಹೆಚ್ಚಳ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,62,710 ರೂ. ಆಗಿದ್ದು, ನಿನ್ನೆ 1,60,260 ರೂ. ಇತ್ತು. ನಿನ್ನೆಗಿಂತ ಇಂದು 2,450 ರೂ. ಏರಿಕಯಾಗಿದೆ. 100 ಗ್ರಾಂ ಚಿನ್ನದ ಬೆಲೆ ಇಂದು ₹16,27,100 ರೂ. ಆಗಿದ್ದು, ನಿನ್ನೆ 16,02,600 ರೂ. ಇತ್ತು. ದಿಢೀರ್ 24,500 ರೂ. ಹೆಚ್ಚಳ ಕಂಡಿದೆ.
ಭಾರತದಲ್ಲಿ 22K ಚಿನ್ನದ ಬೆಲೆ:
22K ಚಿನ್ನದ 1 ಗ್ರಾಂ ಬೆಲೆ ಇಂದು 14,915 ರೂ. ಆಗಿದ್ದು, ನಿನ್ನೆ 14,690 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹225 ರೂ. ಏರಿಕೆ ಕಂಡಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 1,19,320 ರೂ. ಆಗಿದ್ದು, ನಿನ್ನೆ 1,17,520 ರೂ. ಇತ್ತು. ನಿನ್ನೆಗಿಂತ ಇಂದು 1,800 ರೂ. ಹೆಚ್ಚಳವಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,49,150 ರೂ. ಆಗಿದ್ದು, ನಿನ್ನೆ 1,46,900 ರೂ. ಇತ್ತು. ಒಟ್ಟು 2,250 ರೂ. ಏರಿಕೆಯಾಗಿದೆ. 100 ಗ್ರಾಂ ಚಿನ್ನದ ದರ ಇಂದು 14,91,50 ರೂ. ಆಗಿದ್ದು, ನಿನ್ನೆ 14,69,000 ರೂ. ಇತ್ತು. ನಿನ್ನೆಗಿಂತ ಇಂದು 22,500 ರೂ. ಹೆಚ್ಚಳ ಕಂಡಿದೆ.
ಭಾರತದಲ್ಲಿ 18K ಚಿನ್ನದ ಬೆಲೆ:
18K ಚಿನ್ನದ ಬೆಲೆ ಭಾರೀ ಏರಿಕೆಯಾಗಿದೆ. ಒಂದು ಗ್ರಾಂ ಚಿನ್ನದ ಬೆಲೆ ಇಂದು 12,203 ರೂ. ಆಗಿದ್ದು, ನಿನ್ನೆ 12,019 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹184 ರೂ. ಹೆಚ್ಚಳವಾಗಿದೆ. 8 ಗ್ರಾಂ ಚಿನ್ನದ ಬೆಲೆ ಇಂದು ₹97,624 ರೂ. ಆಗಿದ್ದು, ನಿನ್ನೆ 96,152 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 1,472 ರೂ. ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 1,22,030 ರೂ. ಆಗಿದ್ದು, ನಿನ್ನೆ 1,20,190 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 1,840 ರೂ. ಹೆಚ್ಚಳವಾಗಿದೆ. ಇನ್ನು 100 ಗ್ರಾಂ ಚಿನ್ನದ ಬೆಲೆ ಇಂದು 12,20,300 ರೂ. ಆಗಿದ್ದು, ನಿನ್ನೆ 12,01,900 ರೂ. ಇತ್ತು. ಒಟ್ಟು 18,400 ರೂ. ಏರಿಕೆ ಕಂಡಿದೆ.
ಭಾರತದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ ಎಷ್ಷಿದೆ?
ಚೆನ್ನೈ: 24K ರೂ. 16,391, 22K ರೂ. 15,025, 18K ರೂ. 12,500
ಮುಂಬೈ: 24K ರೂ. 16,271, 22K ರೂ. 14,915, 18K ರೂ. 12,203
ದೆಹಲಿ: 24K ರೂ. 16,286, 22K ರೂ. 14,930, 18K ರೂ. 12,218
ಕೋಲ್ಕತ್ತಾ: 24K ರೂ. 16,271, 22K ರೂ. 14,915, 18K ರೂ. 12,203
ಬೆಂಗಳೂರು: 24K ರೂ. 16,271, 22K ರೂ. 14,915, 18K ರೂ. 12,203
ಹೈದರಾಬಾದ್: 24K ರೂ. 16,271, 22K ರೂ. 14,915, 18K ರೂ. 12,203
ಕೇರಳ: 24K ರೂ. 16,271, 22K ರೂ. 14,915, 18K ರೂ. 12,203
ಪುಣೆ: 24K ರೂ. 16,271, 22K ರೂ. 14,915, 18K ರೂ. 12,203
ವಡೋದರಾ: 24K ರೂ. 16,276, 22K ರೂ. 14,920, 18K ರೂ. 12,208
ಅಹಮದಾಬಾದ್: 24K ರೂ. 16,276, 22K ರೂ. 14,920, 18K ರೂ. 12,208
ಬೆಳ್ಳಿ ಬೆಲೆ:
ಬೆಳ್ಳಿ ಕೂಡಾ ದಿನ ಹೋದಂತೆ ದುಬಾರಿಯಾಗುತ್ತಿದೆ. 1 ಗ್ರಾಂ ಬೆಳ್ಳಿ ಬೆಲೆ ₹340 ರೂ. ಆಗಿದ್ದು, ನಿನ್ನೆ ₹335 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹5 ರೂ. ಏರಿಕೆಯಾಗಿದೆ. ಇನ್ನು 8 ಗ್ರಾಂ ಬೆಳ್ಳಿ ದರ ಇಂದು ₹2,720 ರೂ. ಆಗಿದ್ದು, ನಿನ್ನೆ ₹2,680 ರೂ. ಇತ್ತು. ಒಟ್ಟು ₹40 ರೂ. ಏರಿದೆ. 10 ಗ್ರಾಂ ಬೆಳ್ಳಿ ದರ ₹3,400 ರೂ., 100 ಗ್ರಾಂ ಬೆಳ್ಳಿ ಬೆಲೆ ₹34,000 ರೂ., 1000 ಗ್ರಾಂ ಬೆಳ್ಳಿ ದರ ₹3,40,000 ರೂ. ಆಗಿದೆ.
ಸ್ಪಾಟ್ ಗೋಲ್ಡ್ ವಿವರ:
ಜನವರಿ 26ರ ರಾಯಿಟರ್ಸ್ ವರದಿ ಪ್ರಕಾರ, ಭೌಗೋಳಿಕವಾಗಿ ರಾಜಕೀಯ ಉದ್ವಿಗ್ನತೆ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆ ಹೂಡಿಕೆದಾರರು ಚಿನ್ನದ ಹೂಡಿಕೆ ಮೇಲೆ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಅದೇ ಕಾರಣದಿಂದ ಸೋಮವಾರ ಸ್ಪಾಟ್ ಚಿನ್ನವು ಪ್ರತೀ ಔನ್ಸ್‌ಗೆ $5,000 ಕ್ಕಿಂತ ದಾಖಲೆ ಮಟ್ಟದಲ್ಲಿ ಏರಿಕೆಯಾಗಿದೆ.
GMT 0323ರ ವೇಳೆಗೆ ಸ್ಪಾಟ್ ಚಿನ್ನದ ದರವು ಪ್ರತೀ ಔನ್ಸ್‌ಗೆ 1.98% ಏರಿಕೆಯಾಗಿ $5,081.18 ಕ್ಕೆ ತಲುಪಿದೆ.


Click it and Unblock the Notifications