ಭಾರತದ ಎಂಸಿಎಕ್ಸ್ ನಲ್ಲಿ ಬುಧವಾರ (11, 2020) ಬೆಳಗ್ಗೆ ಆರಂಭದ ವಹಿವಾಟಿನಲ್ಲಿ ಚಿನ್ನದ ಫ್ಯೂಚರ್ಸ್ ಡಿಸೆಂಬರ್ ಡೆಲಿವರಿ 0.21 ಪರ್ಸೆಂಟ್ ಇಳಿಕೆ ಕಂಡು, 50,395 ರುಪಾಯಿಯಲ್ಲಿ ಇದೆ. ಫೆಬ್ರವರಿ ಡೆಲಿವರಿ 0.18% ಕುಸಿತ ಆಗಿದ್ದು, 50,400 ರುಪಾಯಿಯನ್ನು ತಲುಪಿದೆ. ಮಂಗಳವಾರದಂದು ಚಿನ್ನದ ಫ್ಯೂಚರ್ಸ್ ಡಿಸೆಂಬರ್ ಡೆಲಿವರಿ 50,501 ರುಪಾಯಿಯೊಂದಿಗೆ ಮುಕ್ತಾಯ ಆಗಿತ್ತು.
ಜಾಗತಿಕ ಮಾರ್ಕೆಟ್ ನಲ್ಲಿ ಸ್ಪಾಟ್ ಗೋಲ್ಡ್ ಸ್ವಲ್ಪ ಮಟ್ಟಿಗೆ ಬದಲಾವಣೆ ಆಗಿದ್ದು, ಪ್ರತಿ ಔನ್ಸ್ ಗೆ (28.3495) $ 1866 ಇದೆ. ಈ ವಾರ ಚಿನ್ನದ ದರವು ಭಾರೀ ಏರಿಳಿತವಾಗುತ್ತಿದೆ. ಸೋಮವಾರ ರಾತ್ರಿ ಕೊರೊನಾ ಲಸಿಕೆ ಬಗ್ಗೆ ಪಿಫೈಜರ್ ಘೋಷಣೆ ಆದ ಮೇಲೆ ಚಿನ್ನದ ಬೆಲೆ ಭಾರೀ ಕುಸಿತ ಆಗಿತ್ತು. ಜರ್ಮನಿಯ ಬಯೋನ್ ಟೆಕ್ ಸಹಭಾಗಿತ್ವದಲ್ಲಿ ಪಿಫೈಜರ್ ಸಿದ್ಧಪಡಿಸುತ್ತಿರುವ ಕೊರೊನಾ ಲಸಿಕೆ ಶೇಕಡಾ ತೊಂಬತ್ತರಷ್ಟು ಪರಿಣಾಮಕಾರಿ ಆಗಿದೆ ಎಂದು ಘೋಷಿಸಿದ ಮೇಲೆ ಚಿನ್ನ, ಬೆಳ್ಳಿ ಬೆಲೆಯಲ್ಲಿ ಭಾರೀ ಕುಸಿತವಾಗಿತ್ತು.
ಭಾರತದಲ್ಲಿ ಸ್ಪಾಟ್ ಗೋಲ್ಡ್ ಬೆಲೆ ಪ್ರತಿ ಹತ್ತು ಗ್ರಾಮ್ ಗೆ 4972 ರುಪಾಯಿಯಲ್ಲಿ ವ್ಯವಹಾರ ನಡೆಸುತ್ತಿತ್ತು. ಚಿನ್ನದ ದರವು ಸ್ಥಳೀಯ ಜ್ಯುವೆಲ್ಲರ್ ಗಳಲ್ಲಿ ಅಲ್ಪ ಪ್ರಮಾಣದಲ್ಲಿ ಇಳಿಕೆಯೊಂದಿಗೆ ಆರಂಭವಾಗಿತ್ತು. ಎಂಸಿಎಕ್ಸ್ ದರವು ಇಳಿಕೆಯಾದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಆಗಿದೆ.

ಚಿನ್ನದ ಬಹುತೇಕ ಚಲನೆಯು ಮುಂಬರುವ ದಿನಗಳಲ್ಲಿ ಡಾಲರ್ ಚಲನೆ ಹಾಗೂ ಆರ್ಥಿಕ ಉತ್ತೇಜನ ಕ್ರಮದ ಮೇಲೆ ಅವಲಂಬನೆ ಆಗಿದೆ. ಒಂದು ವೇಳೆ ಯುಎಸ್ ಅಧ್ಯಕ್ಷ ಜೋ ಬಿಡೆನ್ ಆರ್ಥಿಕ ಉತ್ತೇಜನಕ್ಕೆ ಒತ್ತು ನೀಡಿದಲ್ಲಿ ಚಿನ್ನದ ಬೆಲೆ ಎತ್ತರಕ್ಕೆ ಏರುವುದಕ್ಕೆ ಅನುಕೂಲ ಆಗುತ್ತದೆ. ಅಂದ ಹಾಗೆ ಕಳೆದ ಒಂದು ವರ್ಷದಲ್ಲಿ ಚಿನ್ನದ ಬೆಲೆ ಮಹತ್ತರವಾದ ಗಳಿಕೆ ಕಂಡಿದೆ. ಅಲ್ಪಾವಧಿಯಲ್ಲಿ ಚಿನ್ನದ ದರದಲ್ಲಿ ತೀಕ್ಷ್ಣ ಏರಿಕೆ ಕಾಣಲು ಸಾಧ್ಯವಿಲ್ಲ ಎನ್ನಲಾಗುತ್ತಿದೆ.


Click it and Unblock the Notifications