ಭಾರತೀಯರು ಚಿನ್ನ ಪ್ರಿಯರು. ಚಿನ್ನದ ಮೇಲಿನ ಹೂಡಿಕೆ (Investment) ಜೊತೆಗೆ, ಚಿನ್ನದ ಜೊತೆಗೆ ಭಾವನಾತ್ಮಕ ಬಂಧವನ್ನೂ ಹೊಂದಿದ್ದಾರೆ. ಅದೇ ಕಾರಣದಿಂದ ಇತ್ತೀಚಿನ ಚಿನ್ನದ ಬೆಲೆ ವರದಿಗಳ ಬಗ್ಗೆ ನಿರಂತರ ಪರಿಶೀಲಿಸುತ್ತಲೇ ಇದ್ದಾರೆ. ಈ ವಾರವಿಡೀ ಚಿನ್ನ ಮತ್ತು ಬೆಳ್ಳಿ ದರ (Gold-Silver Rate) ಭಾರೀ ಇಳಿಕೆಯಾಗಿತ್ತು. ಶನಿವಾರ ಸ್ವಲ್ಪ ಮಟ್ಟಿಗೆ ಏರಿಕೆ ಕಂಡರೂ, ಈ ವಾರ ಯಾಕೆ ಚಿನ್ನದ ಬೆಲೆ ಇಳಿಕೆಯಾಗಿದೆ? ಮುಂದಿನ ವಾರ ಮತ್ತಷ್ಟು ಇಳಿಕೆಯಾಗಬಹುದಾ? ಎಂಬ ಪ್ರಶ್ನೆ ಜನರಲ್ಲಿ, ಹೂಡಿಕೆದಾರರಲ್ಲಿ ಮೂಡಿದೆ. ಇದಕ್ಕೆ ಉತ್ತರ ಇಲ್ಲಿದೆ ಓದಿ.

ಅಮೆರಿಕನ್ ಡಾಲರ್‌ನ ಮೌಲ್ಯ ಮತ್ತು ಜಾಗತಿಕ ಷೇರು ಮಾರುಕಟ್ಟೆಗಳ ಕುಸಿತದಿಂದ ಚಿನ್ನದ ಬೆಲೆ ಗುರುವಾರ ಭಾರೀ ಇಳಿಕೆಯಾಗಿತ್ತು. ಹೂಡಿಕೆದಾರರು ಷೇರುಪೇಟೆಯಲ್ಲಿನ ನಷ್ಟವನ್ನು ಸರಿದೂಗಿಸಲು ಮತ್ತು ಹೆಚ್ಚಿದ ಅನಿಶ್ಚಿತತೆಯ ನಡುವೆ ಅಪಾಯವನ್ನು ತಗ್ಗಿಸಲು ಇದೀಗ ಪ್ಲಾನ್ ಮಾಡುತ್ತಿದ್ದಾರೆ. ಕಳೆದ ಗುರುವಾರ (ಫೆ.5) ಚಿನ್ನದ ಬೆಲೆ 3.9% ರಷ್ಟು ಇಳಿಕೆಯಾಗಿದೆ.
ಚಿನ್ನದ ಬೆಲೆ ಇಳಿಕೆಯಾಗಲು ಕಾರಣವೇನು?
ಗುರುವಾರದ ವಹಿವಾಟಿನಲ್ಲಿ ಸ್ಪಾಟ್ ಚಿನ್ನದ ಬೆಲೆ ಪ್ರತಿ ಔನ್ಸ್‌ಗೆ $4,768.50ಕ್ಕೆ ತಲುಪಿ, 3.9% ಕುಸಿತ ಕಂಡಿತ್ತು. ನಂತರ ಕೊಂಚ ಚೇತರಿಕೆ ಕಂಡು, ರಾತ್ರಿ 01:31ಕ್ಕೆ (ET) ಪ್ರತಿ ಔನ್ಸ್‌ಗೆ $4,872.83ಕ್ಕೆ ತಲುಪಿ, 1.8% ಇಳಿಕೆಯಾಗಿತ್ತು.
ಚಿನ್ನದ ಬೆಲೆಯ ಈ ಕುಸಿತಕ್ಕೆ ಪ್ರಮುಖವಾಗಿ ಅಮೆರಿಕನ್ ಡಾಲರ್‌ನ ಬಲವರ್ಧನೆ ಕಾರಣವಾಗಿದೆ. ಡಾಲರ್ ಮೌಲ್ಯ ಎರಡು ವಾರಗಳ ಗರಿಷ್ಠ ಮಟ್ಟಕ್ಕೆ ಏರಿದ ಕಾರಣ, ಇತರ ಕರೆನ್ಸಿಗಳನ್ನು ಬಳಸುವ ಖರೀದಿದಾರರಿಗೆ ಚಿನ್ನವು ದುಬಾರಿಯಾಗಲು ಕಾರಣವಾಯಿತು.
- ಬಲವಾದ ಯುಎಸ್ ಡಾಲರ್: ಡಾಲರ್ ಇಂಡೆಕ್ಸ್ ಎರಡು ವಾರಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿ, ಚಿನ್ನವನ್ನು ವಿದೇಶಿ ಖರೀದಿದಾರರಿಗೆ ದುಬಾರಿಯಾಗಿಸಿತು.
- ಸ್ಟಾಕ್ ಮಾರ್ಕೆಟ್ ಕುಸಿತ ಮತ್ತು ರಿಸ್ಕ್ ಆಫ್ ಟ್ರೇಡಿಂಗ್: ಗ್ಲೋಬಲ್ ಈಕ್ವಿಟಿ ಇಂಡೆಕ್ಸ್‌ಗಳು ಕುಸಿತ ಕಂಡಿದ್ದರಿಂದ ಹೂಡಿಕೆದಾರರು ಲಾಸ್ ಕವರ್ ಮಾಡಲು, ಚಿನ್ನದ ಪೊಸಿಷನ್‌ಗಳನ್ನು ಸೆಲ್ ಮಾಡಿದರು.
ಮತ್ತೆ ಚಿನ್ನ ಇಳಿಕೆಯಾಗುತ್ತಾ? ಏರಿಕೆಯಾಗುತ್ತಾ?
ಇದೀಗ ಚಿನ್ನದ ಬೆಲೆ $4,768 ಡಾಲರ್‌ಗಿಂತಲೂ ಕಡಿಮೆಯಾಗುತ್ತಾ? ಅಥವಾ ಏರಿಕೆಯಾಗುತ್ತಾ? ಎಂಬ ಪ್ರಶ್ನೆ ಮೂಡಿದೆ. ಕೆಲವು ತಜ್ಞರು ಶಾರ್ಟ್ ಟರ್ಮ್‌ನಲ್ಲಿ ಇದಕ್ಕಿಂತಲೂ ಇಳಿಕೆ ಕಾಣಬಹುದು ಎಂದು ನಿರೀಕ್ಷಿಸಿದ್ದಾರೆ. ಆದರೆ ಲಾಂಗ್ ಟರ್ಮ್‌ನಲ್ಲಿ ಹೆಚ್ಚಿನ ವಿಶ್ಲೇಷಕರು ಏರಿಕೆಯ ಸೂಚನೆ ನೀಡಿದ್ದಾರೆ. ರಿಯಾಟರ್ಸ್ ಪೋಲ್‌ನ ತಜ್ಞರು, 2026 ರಲ್ಲಿ ಸರಾಸರಿ $4,746.50 ಕ್ಕೆ ತಲುಪಬಹುದು ಎನ್ನಲಾಗಿದೆ. ಜೆಪಿ ಮಾರ್ಗನ್, ಗೋಲ್ಡ್‌ಮ್ಯಾನ್ ಸ್ಯಾಚ್ ಏರಿಕೆ ಕಾಣಬಹುದು ಎಂದು ಹೇಳಲಾಗಿದೆ.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited ನ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).


Click it and Unblock the Notifications