ಭಾರತೀಯರು ಚಿನ್ನ ಪ್ರಿಯರು. ಚಿನ್ನ ಖರೀದಿಸಬೇಕೆಂಬ ಆಸೆ ಯಾರಿಗಿರಲ್ಲ ಹೇಳಿ. ಅದರಲ್ಲೂ ಹುಡುಗಿಯರಿಗಂತೂ ಚಿನ್ನ ಅಂದ್ರೆ ಸಾಕು ತುಂಬಾ ಇಷ್ಟ. ಇನ್ನು ಹೂಡಿಕೆದಾರರಂತೆ ನೋಡಿದ್ರೆ, ಚಿನ್ನದ ಮೇಲಿನ ಹೂಡಿಕೆ ಸುರಕ್ಷಿತವಾಗಿದೆ. ಆದ್ದರಿಂದ ಬಹುತೇಕ ಹೂಡಿಕೆದಾರರು ಚಿನ್ನದ ಮೇಲೆ ಹೂಡಿಕೆ ಮಾಡಲು ಮುಂದಾಗುತ್ತಾರೆ. ಆದರೆ ಇತ್ತೀಚೆಗೆ ಚಿನ್ನದ ಬೆಲೆ ಭಾರೀ ಏರಿಕೆ ಕಾಣುತ್ತಿದೆ. ಅದರಿಂದ ಕೆಲ ಹೂಡಿಕೆದಾರರು ಕೂಡಾ ಚಿನ್ನದ ಮೇಲೆ ಹೂಡಿಕೆ ಮಾಡೋದನ್ನೇ ನಿಲ್ಲಿಸಿಬಿಟ್ಟಿದ್ದಾರೆ. ಇನ್ನು ಈ ವಾರವಂತೂ ಚಿನ್ನದ ಬೆಲೆ ಆಕಾಶಕ್ಕೇರಿದೆ. ದೇಶೀಯ ಮಾರುಕಟ್ಟೆಗಳಲ್ಲಿ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು ಹೊಸ ಮೈಲಿಗಲ್ಲಿನತ್ತ ಚಿನ್ನದ ಬೆಲೆ ಸಾಗುತ್ತಿದೆ. ಹಾಗಿದ್ರೆ ಮುಂದಿನ ಜನವರಿಯಲ್ಲಿ ಚಿನ್ನದ ದರ ಎಷ್ಟು ಏರಿಕೆ ಕಾಣುತ್ತೆ ಗೊತ್ತಾ? (Gold Price Prediction) ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಂಗಳೂರು ಮಾರುಕಟ್ಟೆಯಲ್ಲಿ, 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ಇದೀಗ ₹1,41,220 ಕ್ಕೆ ತಲುಪಿದೆ. ಅದೇ ರೀತಿ, 10 ಗ್ರಾಂ 22 ಕ್ಯಾರೆಟ್ ಚಿನ್ನ ₹1,29,450 ಮತ್ತು 18 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ ₹1,05,920 ರಷ್ಟಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಒಂದು ಔನ್ಸ್ ಚಿನ್ನದ ಬೆಲೆ $4,000 ಗಡಿ ದಾಟಿದರೆ, ಬೆಳ್ಳಿ $71.91 ಕ್ಕೆ ವಹಿವಾಟು ನಡೆಸುತ್ತಿದೆ.
ದಾಖಲೆ ಬೆಲೆಯಲ್ಲಿ ಚಿನ್ನದ ದರ!
1979 ರ ನಂತರ ಈ ವರ್ಷವೇ ಅತೀ ಹೆಚ್ಚು ಚಿನ್ನದ ಬೆಲೆ ಏರಿಕೆ ಕಂಡಿದೆ. ಬುಲಿಯನ್ ಮಾರುಕಟ್ಟೆಯ ವರದಿಯ ಪ್ರಕಾರ, ಡಿಸೆಂಬರ್ 23 ರಂದು ಚಿನ್ನದ ದರವು $4,500 (ಸುಮಾರು ₹1,38,000) ತಲುಪಿದೆ. ಜಾಗತಿಕ ಮಾರುಕಟ್ಟೆಯ ಬದಲಾವಣೆಗಳು ಮತ್ತು ಸುರಕ್ಷಿತ ಹೂಡಿಕೆಗಳ ಮೇಲೆ ಹೂಡಿಕೆದಾರರು ತೋರುತ್ತಿರುವ ಉತ್ಸಾಹವೇ ಇದಕ್ಕೆ ಪ್ರಮುಖ ಕಾರಣ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.
ಎಲ್‌ಕೆಪಿ ಸೆಕ್ಯುರಿಟೀಸ್‌ನ ಸಂಶೋಧನಾ ವಿಶ್ಲೇಷಕ ಜತಿನ್ ತ್ರಿವೇದಿ ಬೆಲೆ ಏರಿಕೆ ಕುರಿತು ಮಾತನಾಡಿ, "ಚಿನ್ನದ ದರವು ಬೆಲೆ ಏರಿಕೆಯಿಂದಾಗಿ ದಾಖಲೆ ಮಟ್ಟವನ್ನು ಪ್ರವೇಶಿಸಿದ್ದರೂ, ಪ್ರಮುಖ ಪ್ರವೃತ್ತಿ ಹಾಗೆಯೇ ಇದೆ. ಬೆಲೆಗಳು ₹1,32,000 ಕ್ಕಿಂತ ಹೆಚ್ಚಿದ್ದರೆ, ಚಿನ್ನವು ತನ್ನ ಬೇಡಿಕೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಯಿದೆ." ಎಂದಿದ್ದಾರೆ.
ಅಶಿಕಾ ಸ್ಟಾಕ್ ಸರ್ವಿಸಸ್‌ನ ಮುಖ್ಯ ವ್ಯವಹಾರ ಅಧಿಕಾರಿ ರಾಹುಲ್ ಗುಪ್ತಾ ಮಾತನಾಡುವಂತೆ, "ಚಿನ್ನದ ಏರಿಕೆ ಪ್ರಮಾಣವು, ಹೂಡಿಕೆದಾರರಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ. ಅಲ್ಲದೇ ಚಿನ್ನದ ಮೇಲಿನ ಹೂಡಿಕೆ ಸುರಕ್ಷಿತ ಹೂಡಿಕೆ ಎಂದು ಹೇಳಲಾಗಿದೆ. ಹೂಡಿಕೆದಾರರು ರಾಜಕೀಯ ಉದ್ವಿಗ್ನತೆ, ಹಣದುಬ್ಬರದ ಏರಿಕೆ ಮತ್ತು 2026 ರಲ್ಲಿ US ಸುಲಭ ಆರ್ಥಿಕ ನೀತಿಯ ನಿರೀಕ್ಷೆಗಳನ್ನು ಎದುರಿಸುತ್ತಿದ್ದಾರೆ. ಅಲ್ಲದೇ ಡಾಲರ್ ಮತ್ತು ಕೇಂದ್ರ ಬ್ಯಾಂಕ್‌ಗಳ ಖರೀದಿಗಳು ಸಹ ಈ ಏರಿಕೆಗೆ ಕಾರಣ." ಎಂದು ಹೇಳಿದ್ದಾರೆ.
ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರಗಳು ಬಹುತೇಕ ಒಂದೇ ಆಗಿವೆ. ಸ್ಥಳೀಯ ತೆರಿಗೆಗಳು, ಆಭರಣ ವ್ಯಾಪಾರಿಗಳ ಆದಾಯ ಮತ್ತು ಲಾಜಿಸ್ಟಿಕ್ಸ್ ವೆಚ್ಚಗಳ ಕಾರಣದಿಂದಾಗಿ ಚಿನ್ನದ ಬೆಲೆಗಳಲ್ಲಿ ಸ್ವಲ್ಪ ವ್ಯತ್ಯಾಸವಿರುತ್ತದೆ. 2025 ರ ಕೊನೆಯ ವಾರದಲ್ಲಿ ಚಿನ್ನದ ಏರಿಕೆ ಮುಂದುವರಿಯುತ್ತದೆಯೇ ಎಂಬ ಪ್ರಶ್ನೆಗೆ, ವಿಟಿ ಮಾರ್ಕೆಟ್ಸ್‌ನ APAC ಹಿರಿಯ ಮಾರುಕಟ್ಟೆ ವಿಶ್ಲೇಷಕ ಜಸ್ಟಿನ್ ಖೂ ಪ್ರತಿಕ್ರಿಯೆ ನೀಡಿದ್ದಾರೆ.
ವಿಟಿ ಮಾರ್ಕೆಟ್ಸ್‌ನ APAC ಹಿರಿಯ ಮಾರುಕಟ್ಟೆ ವಿಶ್ಲೇಷಕ ಜಸ್ಟಿನ್ ಖೂ ಅವರ ಪ್ರಕಾರ, "ಚಿನ್ನವು 2025 ಅನ್ನು ಸಾಮಾನ್ಯ ಬೆಲೆಯಲ್ಲಿ ನಿಲ್ಲದೆ, ಮ್ಯಾಕ್ರೋ-ಹೆಡ್ಜ್ ವಲಯದಲ್ಲಿ ಕೊನೆಗೊಳಿಸುತ್ತಿದೆ. ಚಿನ್ನದ ಬೆಲೆಯಲ್ಲಿ ತಾತ್ಕಾಲಿಕ ಕುಸಿತ ಕಂಡರೆ, ಖರೀದಿಸಲು ಮುಂದಾಗಬೇಕು ಎಂದು ಹೇಳಿದ್ದಾರೆ. 2026 ರಲ್ಲಿ ಬೆಳ್ಳಿ ಬೆಲೆಯೂ ಏರಿಕೆ ಕಾಣುವ ಸಾಧ್ಯತೆ ಇದೆ" ಎಂದು ಹೇಳಿದ್ದಾರೆ.
ಆಗಮೆಂಟ್ ವರದಿಯ ಪ್ರಕಾರ, ಚಿನ್ನವು ಕಳೆದ ಎರಡು ತಿಂಗಳಿಂದ $3,935 ರಿಂದ $4,400 ವ್ಯಾಪ್ತಿಯಲ್ಲಿ ಏರಿಕೆ ಕಂಡ ನಂತರ, ಮತ್ತೆ $4,400 ಅನ್ನು ಮೀರಿ ಏರಿದೆ. ಈ ಏರಿಕೆ ಮುಂದಿನ ಕೆಲವು ವಾರಗಳಲ್ಲಿ $4,575 (ಸುಮಾರು ₹1,40,000) ರಿಂದ $5,000 (ಸುಮಾರು ₹1,50,000) ವರೆಗೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಅಂದರೆ, ಜನವರಿಯಲ್ಲೇ ಚಿನ್ನದ ಬೆಲೆ ₹1,50,000 ಕ್ಕೆ ತಲುಪುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ.


Click it and Unblock the Notifications