ಬೆಂಗಳೂರಿನಲ್ಲಿ ಚಿನ್ನದ ಬೆಲೆ, ಜನವರಿ 22: 100 ಗ್ರಾಂ 22k ಚಿನ್ನದ ಬೆಲೆ 7,500 ರೂ. ಏರಿಕೆ!

ಬೆಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಏರಿಕೆಯಾಗಿದೆ. ಬೆಂಗಳೂರಿಗರಿಗೆ ಮತ್ತೆ ನಿರಾಸೆಯಾಗಿದೆ. ನಿನ್ನೆ ಸ್ಥಿರವಾಗಿದ್ದ ಚಿನ್ನದ ದರ ಇಂದು ಒಂದೇ ಸಮನೆ ಏರಿಕೆಯಾಗಿದೆ. ಆಭರಣಪ್ರಿಯರಿಗೆ ಮತ್ತೆ ನಿರಾಸೆಯಾಗಿದೆ. ಜನವರಿ ಆರರಂಭದಿಂದಲೂ ಚಿನ್ನದ ಬೆಲೆ ಏರಿಕೆಯಾಗ್ತಾನೆ ಇದೆ. ಇನ್ನು ಚಿನ್ನದ ಬೆಲೆ ಕಂಡು ಜನರು ಕಂಗಾಲಾಗಿದ್ದಾರೆ. ಇದರಿಂದಾಗಿ ಚಿನ್ನದ ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಕಡಿಮೆಯಾಗ್ತಿದೆ. ಯುಎಸ್‌ ಡಾಲರ್‌ ಬಲವರ್ಧನೆ ಮತ್ತು ಜಾಗತಿಕ ಉದ್ವಿಗ್ನತೆಗಳಿಂದಾಗಿ ಚಿನ್ನದ ಬೆಲೆಯಲ್ಲಿ ಸಾಕಷ್ಟು ಏರಿಳಿತವನ್ನ ಕಾಣುವಂತಾಗಿದೆ.

ಜನವರಿ 22 ರಂದು, ಬೆಂಗಳೂರಿನಲ್ಲಿ ಚಿನ್ನದ ಬೆಲೆ ಏರಿಕೆಯಾಗಿದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 750 ಏರಿಕೆಯಾಗಿ 75,250 ರೂ. ಆಗಿದೆ. ಮತ್ತು 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 860 ರೂ. ಏರಿಕೆಯಾಗಿ 82,090ರೂ. ಆಗಿದೆ. ಬೆಂಗಳೂರಿನಲ್ಲಿ 18 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 570 ರೂ. ಏರಿಕೆಯಾಗಿ 61,570 ರೂ. ಆಗಿದೆ.

ಬೆಂಗಳೂರಿನಲ್ಲಿ ಮತ್ತೆ ಚಿನ್ನದ ಬೆಲೆ ಏರಿಕೆ! ಎಷ್ಟಿದೆ ತಿಳಿಯಿರಿ

ಹಾಗೆ 22 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ 7,500 ಏರಿಕೆಯಾಗಿ 7,52,500 ರೂ. ಆಗಿದೆ. ಮತ್ತು 24 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ 8,600 ರೂ. ಏರಿಕೆಯಾಗಿ 8,20,900 ರೂ. ಆಗಿದೆ. 18 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ 5,700 ರೂ. ಏರಿಕೆಯಾಗಿ 6,15,700 ರೂ. ಆಗಿದೆ.

ಬೆಂಗಳೂರಿನಲ್ಲಿ ಬೆಳ್ಳಿ ದರಗಳು

ಇಂದು ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಕೂಡ ಸ್ಥಿರವಾಗಿದೆ. ಪ್ರಸ್ತುತ, ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿ ಬೆಲೆ 96.50 ರೂ. ಆಗಿದೆ. ಹಾಗೆ 1 ಕಿಲೋ ಗ್ರಾಂ ಬೆಳ್ಳಿ ಬೆಲೆ 96,500 ರೂ. ಆಗಿದೆ. ಇಂದು ಬೆಳ್ಳಿ ಬೆಲೆ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ.

ಭಾರತದಲ್ಲೂ ಕೂಡ ಚಿನ್ನದ ದರ ಏರಿಕೆಯಾಗಿದೆ. ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಇಂದು ಏರಿಕೆಯಾಗಿದೆ. ಜಾಗತಿಕ ಉದ್ವಿಗ್ನತೆಗಳು, ರಾಜಕೀಯ ಮತ್ತು ಆರ್ಥಿಕ ಬೆಳವಣಿಗೆಗಳು ಚಿನ್ನದ ಮೇಲೆ ಹೆಚ್ಚು ಪರಿಣಾಮವನ್ನ ಬೀರಲಿವೆ.

ಭಾರತದ ಕೆಲವು ಮೆಟ್ರೋಪಾಲಿಟನ್ ನಗರಗಳಲ್ಲಿನ ಚಿನ್ನದ ಬೆಲೆಗಳ ವಿವರ:

ನಗರಗಳು24 ಕ್ಯಾರೆಟ್22 ಕ್ಯಾರೆಟ್
ದೆಹಲಿ82,24075,400
ಮುಂಬೈ82,09075,250
ಚೆನ್ನೈ82,09075,250
ಕೋಲ್ಕತ್ತಾ82,09075,250

ಸ್ಪಾಟ್‌ ಚಿನ್ನದ ಭವಿಷ್ಯ

ಸ್ಪಾಟ್‌ ಚಿನ್ನ ಮತ್ತು ಬೆಳ್ಳಿ ದರಗಳು ಕೂಡ ಇಂದು ಏರಿಕೆಯಾಗಿದೆ. ವರದಿ ಪ್ರಕಾರ ಸ್ಪಾಟ್‌ ಚಿನ್ನದ ಬೆಲೆಯು ಪ್ರತಿ ಔನ್ಸ್‌ಗೆ 1.22% ಏರಿಕೆಯಾಗಿ 2,742 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದೆ. ಇತ್ತ ಸ್ಪಾಟ್ ಬೆಳ್ಳಿ ಭವಿಷ್ಯವು ಪ್ರತಿ ಔನ್ಸ್‌ಗೆ 0.42% ಏರಿಕೆಯಾಗಿ 30.78 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದೆ. ಪ್ಲಾಟಿನಮ್‌ ಬೆಲೆಯು ಪ್ರತಿ ಔನ್ಸ್‌ಗೆ 0.32% ಏರಿಕೆಯಾಗಿ 950.25 ಡಾಲರ್‌ ತಲುಪಿದೆ. ಪಲ್ಲಾಡಿಯಂ ಬೆಲೆಯು ಪ್ರತಿ ಔನ್ಸ್‌ಗೆ 2.22% ಏರಿಕೆಯಾಗಿ 969.00 ಡಾಲರ್‌ ತಲುಪಿದೆ.

MCX ಗೋಲ್ಡ್ ಔಟ್‌ಲುಕ್ ಮತ್ತು ಸಿಲ್ವರ್‌ ಔಟ್‌ಲುಕ್

ಇಂದು MCX ಚಿನ್ನದ ಬೆಲೆಗಳು ಹಾಗು ಬೆಳ್ಳಿ ಬೆಲೆ ಎರಡೂ ಕೂಡ ಇಳಿಕೆಯಾಗಿದೆ. ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX), ಫೆಬ್ರವರಿ 5, 2025 ರ ವಿತರಣೆಯ ಚಿನ್ನದ ಭವಿಷ್ಯ ನೋಡೋದಾದ್ರೆ, 10 ಗ್ರಾಂ ಚಿನ್ನಕ್ಕೆ 0.22%ನಷ್ಟು ಇಳಿಕೆಯಾಗಿ 79,395 ರೂ. ಆಗಿದೆ. ಮಾರ್ಚ್ 5, 2025ರ ಬೆಳ್ಳಿ ಭವಿಷ್ಯವು 0.37% ನಷ್ಟು ಏರಿಕೆಯಾಗಿ 92,430 ರೂಪಾಯಿ ವಹಿವಾಟು ನಡೆಸುತ್ತಿದೆ. ಈ ತಿಂಗಳು ಚಿನ್ನದ ಬೆಲೆಗಳು ಏರಿಕೆಯಾಗುತ್ತಲೇ ಇದೆ. ಇದು ಹೂಡಿಕೆದಾರರಿಗೆ ಆತಂಕವನ್ನ ಸೃಷ್ಟಿ ಮಾಡಿದೆ. ಬೌಗೋಳಿಕ ಜಾಗತಿಕ ಉದ್ವಿಗ್ನತೆಗಳು, ಬಡ್ಡಿ ದರಗಳು, ಸರ್ಕಾರಿ ನೀತಿಗಳು, ಕರೆನ್ಸಿ ವಿನಿಮಯ ದರಗಳು ಮತ್ತು ದೇಶೀಯ ಮತ್ತು ಅಂತರರಾಷ್ಟ್ರೀಯ ಎರಡೂ ಅಸ್ಥಿರಗಳಿಂದ ಚಿನ್ನದ ಬೆಲೆಗಳು ವರ್ಷದ ಮೊದಲ ತಿಂಗಳಿನಲ್ಲಿ ಸಾಕಷ್ಟು ಏರಿಳಿತಗಳನ್ನ ಗಮನಿಸುವಂತಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+