ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ದಿನೇ ದಿನೆ ಹೆಚ್ಚಾಗುತ್ತಿದೆ. ಚಿನ್ನ ಕೊಲ್ಳುವುದೆಂದರೆ ದೊಡ್ಡ ಸಂಪತ್ತನ್ನೇ ಕೊಳ್ಳುವಷ್ಟು ಭಾರವಾಗಿದೆ. ಎಷ್ಟೇ ಹಣ ಬಂದರೂ ನಾರಿಮಣಿಯರು ಅತಿಹೆಚ್ಚಾಗಿ ಇಷ್ಟ ಪಡುವುದೇ ಬಂಗಾರ. ಈ ಚಿನ್ನ ಎಲ್ಲದ್ದಕ್ಕಿಂತ ದೊಡ್ಡ ಆಸ್ತಿ ಎಂದರೂ ತಪ್ಪಾಗಲ್ಲ. ಪ್ರತಿಷ್ಠೆಯ ಸಂಕೇತವಾಗಿರು ಈ ಚಿನ್ನ ಮಹಿಳೆಯರ ಪಾಲಿಗೆ ಅಚ್ಚು-ಮೆಚ್ಚು. ಈ ಚಿನ್ನ ಎನ್ನುವ ಸಂಪತ್ತು ಕಷ್ಟ ಬಂದಾಗ ಕಷ್ಟ ಬಂದಾಗ ಚಿನ್ನ ನೆರವಿಗೆ ಬರುವ ಸಾಧನವೂ ಹೌದು. ಆದ್ರೆ ಇತ್ತೀಚಿನ ವರ್ಷಗಳಲ್ಲಿ ಚಿನ್ನ ಅಷ್ಟೇ ದುಬಾರಿಯೂ ಆಗಿದೆ. ಭಾರತದಲ್ಲಿ ಚಿನ್ನದ ಬೆಲೆ ನಿನ್ನೆಗಿಂತ ಇಂದು ಹೆಚ್ಚಾಗಿದೆ. ಇದರಿಂದ ಮಹಿಳೆಯರಿಗೆ ಕಹಿ ಸುದ್ದಿ ಸಿಕ್ಕಂತಾಗಿದೆ. ಹಾಗಾದರೆ ಇಂದು ಚಿನ್ನದ ಬೆಲೆಯಲ್ಲಿ ಎಷ್ಟು ಏರಿಕೆಯಾಗಿದೆ ಎಂದು ತಿಳಿಯೋಣ ಬನ್ನಿ.
ಭಾರತದಲ್ಲಿ ಇಂದಿನ ಚಿನ್ನದ ಬೆಲೆ
22 ಕ್ಯಾರಟ್ ಚಿನ್ನದ ಬೆಲೆ
ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿಇಂದಿನ ಚಿನ್ನದ ಬೆಲೆ ಏರಿಕೆಯಾಗಿದೆ, 22 ಕ್ಯಾರಟ್‌ನ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,055 ಇದೆ. ಅಂದರೆ ನಿನ್ನೆ ₹8,045 ಆಗಿದ್ದು ಇಂದು ₹10 ಹೆಚ್ಚಳವಾಗಿದೆ. 22 ಕ್ಯಾರಟ್‌ನ ಚಿನ್ನದ ಬೆಲೆ 10 ಗ್ರಾಂಗೆ 80 ಸಾವಿರದ 550 ರೂ. ಇದೆ. ಅಂದರೆ ನಿನ್ನೆ 80 ಸಾವಿರದ 450 ರೂ. ಆಗಿದ್ದು ಇಂದು ₹100 ಹೆಚ್ಚಳವಾಗಿದೆ. ಹಾಗೆಯೇ 22 ಕ್ಯಾರಟ್‌ನ ಚಿನ್ನದ ಬೆಲೆ 100 ಗ್ರಾಂಗೆ 8 ಲಕ್ಷ 5 ಸಾವಿರದ 500 ರೂ. ಇದೆ. ಅಂದರೆ ನಿನ್ನೆ 8 ಲಕ್ಷ 4 ಸಾವಿರದ 500 ರೂ. ಆಗಿದ್ದು ಇಂದು ₹1,000 ಹೆಚ್ಚಳವಾಗಿದೆ.

24 ಕ್ಯಾರಟ್ ಚಿನ್ನದ ಬೆಲೆ
24 ಕ್ಯಾರಟ್‌ನ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,787 ಇದೆ. ಅಂದರೆ ನಿನ್ನೆಯ ಬೆಲೆ ₹8,777 ಆಗಿದ್ದು ಇಂದು ಪ್ರತಿ ಗ್ರಾಂಗೆ ₹10 ಏರಿಕೆಯಾಗಿದೆ. 24 ಕ್ಯಾರಟ್‌ನ ಚಿನ್ನದ ಬೆಲೆ 10 ಗ್ರಾಂಗೆ 87 ಸಾವಿರದ 870 ರೂ. ಇದೆ. ಅಂದರೆ ನಿನ್ನೆಯ ಬೆಲೆ 87 ಸಾವಿರದ 770 ರೂ. ಆಗಿದ್ದು ಇಂದು ಪ್ರತಿ ಗ್ರಾಂಗೆ ₹100 ಏರಿಕೆಯಾಗಿದೆ. ಹಾಗೆಯೇ 24 ಕ್ಯಾರಟ್‌ನ ಚಿನ್ನದ ಬೆಲೆ 100 ಗ್ರಾಂಗೆ 8 ಲಕ್ಷ 78 ಸಾವಿರದ 700 ರೂ. ಆಗಿದೆ. ಅಂದರೆ ನಿನ್ನೆಯ ಬೆಲೆ 8 ಲಕ್ಷದ 77 ಸಾವಿರದ 700 ರೂ. ಆಗಿದ್ದು ಇಂದು ₹1,000 ಏರಿಕೆಯಾಗಿದೆ.
18 ಕ್ಯಾರಟ್ ಚಿನ್ನದ ಬೆಲೆ
18 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹6,591 ಇದೆ. ಅಂದರೆ ನಿನ್ನೆಯ ಬೆಲೆ ₹6,582 ಆಗಿದ್ದು ಇಂದು ಪ್ರತಿ ಗ್ರಾಂಗೆ ₹9 ಏರಿಕೆಯಾಗಿದೆ. 18 ಕ್ಯಾರಟ್‌ನ ಚಿನ್ನದ ಬೆಲೆ 10 ಗ್ರಾಂಗೆ 65 ಸಾವಿರದ 910 ರೂ. ಇದೆ. ಅಂದರೆ ನಿನ್ನೆಯ ಬೆಲೆ 65 ಸಾವಿರದ 820 ರೂ. ಆಗಿದ್ದು ಇಂದು ಪ್ರತಿ ಗ್ರಾಂಗೆ ₹90 ಏರಿಕೆಯಾಗಿದೆ. ಹಾಗೆಯೇ ಕ್ಯಾರಟ್‌ನ ಚಿನ್ನದ ಬೆಲೆ 100 ಗ್ರಾಂಗೆ 6 ಲಕ್ಷ 59 ಸಾವಿರದ 100 ರೂ. ಆಗಿದೆ. ಅಂದರೆ ನಿನ್ನೆಯ ಬೆಲೆ 6 ಲಕ್ಷದ 58 ಸಾವಿರದ 200 ರೂ. ಆಗಿದ್ದು ಇಂದು ₹900 ಏರಿಕೆಯಾಗಿದೆ.
ವಿವಿಧ ನಗರಗಳಲ್ಲಿ ಚಿನ್ನದ ಬೆಲೆ
ನಗರ 22K ಚಿನ್ನ 24K ಚಿನ್ನ 18K ಚಿನ್ನ
ಚೆನೈ ₹8,055 ₹8,787 ₹6,625
ಮುಂಬೈ ₹8,055 ₹8,787 ₹6,591
ದೆಹಲಿ ₹8,069 ₹8,802 ₹6,602
ಕೋಲ್ಕತಾ ₹8,055 ₹8,787 ₹6,591
ಬೆಂಗಳೂರು ₹8,055 ₹8,787 ₹6,591
ಹೈದರಾಬಾದ್ ₹8,055 ₹8,787 ₹6,591
ಕೇರಳ ₹8,055 ₹8,787 ₹6,591
ಪುಣೆ ₹8,055 ₹8,787 ₹6,591
ಬರೋಡಾ ₹8,059 ₹8,792 ₹6,594
ಅಹಮದಾಬಾದ್ ₹8,059 ₹8,792 ₹6,594
ಭಾರತದಲ್ಲಿ ಇಂದು ಬೆಳ್ಳಿ ಬೆಲೆ ಹೇಗಿದೆ..?
ಭಾರತದಲ್ಲಿ ಇಂದು ಬೆಳ್ಳಿಯ ಬೆಲೆ ಪ್ರತಿ ಗ್ರಾಂಗೆ 101 ರೂ. ಇದೆ. 10 ಗ್ರಾಂ ಬೆಳ್ಳಿಯ ಬೆಲೆ 1,010 ರೂ. ಇದೆ. ಹಾಗೆಯೇ 100 ಗ್ರಾಂ ಬೆಳ್ಳಿ ಬೆಲೆ 10,100 ರೂ. ಆಗಿದ್ದು, 1000 ಗ್ರಾಂ ( ಒಂದು ಕೆ.ಜಿ) ಬೆಳ್ಳಿ ಬೆಲೆ 1 ಲಕ್ಷದ 1000 ರೂ. ಆಗಿದೆ. ನಿನ್ನೆಗೆ ಹೋಲಿಕೆ ಮಾಡಿದರೆ ಬೆಳ್ಳಿ ಬೆಲೆಯಲ್ಲಿ ಕೊಂಚ ಏರಿಕೆಯಾಗಿದೆ. ಅಂದರೆ ನಿನ್ನೆಗಿಂತ ಇಂದು ಬೆಳ್ಳಿಯಲ್ಲಿ ಪ್ರತಿ ಗ್ರಾಂಗೆ 0.50 ಏರಿಕೆಯಾಗಿದೆ. ಅಂದರೆ ಒಂದು ಕೆ.ಜಿ ಬೆಳ್ಳಿಗೆ 500 ರೂ. ಏರಿಕೆಯಾಗಿದೆ ಎಂದರ್ಥ.
ಸ್ಪಾಟ್ ಗೋಲ್ಡ್ ಬೆಲೆ
ಚಿನ್ನದ ಬೆಲೆಯಲ್ಲಿ ಇಂದು ಕೊಂಚ ಏರಿಕೆ ಕಂಡು ಬಂದಿದೆ. ಸ್ಪಾಟ್ ಗೋಲ್ಡ್ ಬೆಲೆಯು 0204 GMT ವೇಳೆಗೆ, ಚಿನ್ನದ ಸ್ಥಳೀಯ ಬೆಲೆ 0.4% ಇಳಿಕೆ ನೋಡಿದ್ದು ಪ್ರತಿ ಔನ್ಸ್‌ಗೆ ಸ್ಪಾಟ್ ಚಿನ್ನದ ದರ $2,925.63 ಆಗಿತ್ತು. ಇನ್ನು ಗುರುವಾರ ಚಿನ್ನದ ಗರಿಷ್ಠ ಸ್ಥಾನ ಇತಿಹಾಸದಲ್ಲೇ ದೊಡ್ಡದಾಗಿತ್ತು. ಅಂದರೆ $2,954.69 ಗೆ ಏರಿತ್ತು.


Click it and Unblock the Notifications