‌Gold Rate Rise Today: 10 ಗ್ರಾಂ ಚಿನ್ನದ ಬೆಲೆ 5,020 ರೂ. ಏರಿಕೆ! ಬಂಗಾರ ಪ್ರಿಯರಿಗೆ ಶಾಕ್

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಗ್ರೀನ್‌ ಲ್ಯಾಂಡ್‌ ಮೇಲೆ ಇಟ್ಟಿರುವ ಗುರಿ, ಯುರೋಪ್‌ನೊಂದಿಗೆ ವ್ಯಾಪಾರ ಯುದ್ಧವನ್ನು ಹುಟ್ಟುಹಾಕುವಂತೆ ಮಾಡಿದೆ. ಇದೀಗ ಡಾಲರ್‌ ದುರ್ಬಲತೆಯಿಂದಾಗಿ ಬುಧವಾರ ಚಿನ್ನದ ಬೆಲೆ (Gold Rate) ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿದೆ. ಅಂತೂ ಚಿನ್ನ ಪ್ರಿಯರಿಗೆ ಶಾಕ್‌ ಆಗೋದಂತೂ ಗ್ಯಾರಂಟಿ. ಇಂದು ಕಮ್ಮಿಯಾಗುತ್ತೆ, ನಾಳೆ ಕಮ್ಮಿಯಾಗುತ್ತೆ ಎಂದು ನಿರೀಕ್ಷೆಯಲ್ಲಿದ್ದವರಿಗೆ, ದಿನೇ ದಿನೇ ನಿರಾಸಭಾವವ ವ್ಯಕ್ತವಾಗುತ್ತಿದೆ. ಇಂದು ಭಾರತದಲ್ಲಿ ಚಿನ್ನದ ಬೆಲೆ ಭಾರೀ ಏರಿಕೆ ಕಂಡಿದ್ದು, ಎಷ್ಟಿದೆ ಅನ್ನೋದರ ಮಾಹಿತಿ ಇಲ್ಲಿದೆ ಓದಿ.

10 ಗ್ರಾಂ ಚಿನ್ನದ ಬೆಲೆ 5,020 ರೂ. ಏರಿಕೆ! ಬಂಗಾರ ಪ್ರಿಯರಿಗೆ ಶಾಕ್

ಭಾರತದಲ್ಲಿ 24K ಚಿನ್ನದ ಬೆಲೆ ಎಷ್ಟಿದೆ?
24K ಚಿನ್ನದ ಒಂದು ಗ್ರಾಂ ಬೆಲೆ 15,480 ರೂ. ಆಗಿದ್ದು, ನಿನ್ನೆ 14,978 ರೂ. ಇತ್ತು. ನಿನ್ನೆಗಿಂತ ಇಂದು ಪ್ರತೀ ಗ್ರಾಂ ಚಿನ್ನದ ಬೆಲೆ ₹502 ರೂ. ಹೆಚ್ಚಳ ಕಂಡಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ಇಂದು 1,23,840 ರೂ. ಆಗಿದ್ದು, ನಿನ್ನೆ 1,19,824 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 4,016 ರೂ. ಹೆಚ್ಚಳ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,54,800 ರೂ. ಆಗಿದ್ದು, ನಿನ್ನೆ 1,49,780 ರೂ. ಇತ್ತು. ನಿನ್ನೆಗಿಂತ ಇಂದು 5,020 ರೂ. ಏರಿಕೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ ಇಂದು ₹15,48,000 ರೂ. ಆಗಿದ್ದು, ನಿನ್ನೆ 14,97,800 ರೂ. ಇತ್ತು. ಒಂದೇ ದಿನದಲ್ಲಿ 50,200 ರೂ. ಹೆಚ್ಚಳವಾಗಿದೆ.

ಭಾರತದಲ್ಲಿ 22K ಚಿನ್ನದ ಬೆಲೆ:
22K ಚಿನ್ನದ 1 ಗ್ರಾಂ ಬೆಲೆ ಇಂದು 14,190 ರೂ. ಆಗಿದ್ದು, ನಿನ್ನೆ 13,730 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ₹460 ರೂ. ಏರಿಕೆ ಕಂಡಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 1,13,520 ರೂ. ಆಗಿದ್ದು, ನಿನ್ನೆ 1,09,840 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 3,680 ರೂ. ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,41,900 ರೂ. ಆಗಿದ್ದು, ನಿನ್ನೆ 1,37,300 ರೂ. ಇತ್ತು. ಒಟ್ಟು 4,600 ರೂ. ಏರಿಕೆ ಕಂಡಿದೆ. ಅದೇ ರೀತಿ 100 ಗ್ರಾಂ ಚಿನ್ನದ ದರ ಇಂದು 14,19,000 ರೂ. ಆಗಿದ್ದು, ನಿನ್ನೆ 13,73,000 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 46,000 ರೂ. ಹೆಚ್ಚಳ ಕಂಡಿದೆ.

ಭಾರತದಲ್ಲಿ 18K ಚಿನ್ನದ ಬೆಲೆ:
18K ಚಿನ್ನದ 1 ಗ್ರಾಂ ಬೆಲೆ ಇಂದು 11,611 ರೂ. ಆಗಿದ್ದು, ನಿನ್ನೆ 11,234 ರೂ. ಇತ್ತು. ನಿನ್ನೆಗಿಂತ ಇಂದು ₹377 ರೂ. ಏರಿಕೆಯಾಗಿದೆ. 8 ಗ್ರಾಂ ಚಿನ್ನದ ಬೆಲೆ ಇಂದು ₹92,888 ರೂ. ಆಗಿದ್ದು, ನಿನ್ನೆ 89,872 ರೂ. ಇತ್ತು. ನಿನ್ನೆಗಿಂತ ಇಂದು 3,016 ರೂ. ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 1,16,110 ರೂ. ಆಗಿದ್ದು, ನಿನ್ನೆ 1,12,340 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 3,770 ರೂ. ಏರಿಕೆಯಾಗಿದೆ. ಇನ್ನು 100 ಗ್ರಾಂ ಚಿನ್ನದ ಬೆಲೆ ಇಂದು 11,61,100 ರೂ. ಆಗಿದ್ದು, ನಿನ್ನೆ 11,23,400 ರೂ. ಇತ್ತು. ಒಟ್ಟು 37,700 ರೂ. ಹೆಚ್ಚಳ ಕಂಡಿದೆ.

ಭಾರತದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ ಎಷ್ಷಿದೆ?
ಚೆನ್ನೈ: 24K ರೂ. 15,546, 22K ರೂ. 14,250, 18K ರೂ. 11,890
ಮುಂಬೈ: 24K ರೂ. 15,480, 22K ರೂ. 14,190, 18K ರೂ. 11,611
ದೆಹಲಿ: 24K ರೂ. 15,495, 22K ರೂ. 14,205, 18K ರೂ. 11,626
ಕೋಲ್ಕತ್ತಾ: 24K ರೂ. 15,480, 22K ರೂ. 14,190, 18K ರೂ. 11,611
ಬೆಂಗಳೂರು: 24K ರೂ. 15,480, 22K ರೂ. 14,190, 18K ರೂ. 11,611
ಹೈದರಾಬಾದ್: 24K ರೂ. 15,480, 22K ರೂ. 14,190, 18K ರೂ. 11,611
ಕೇರಳ: 24K ರೂ. 15,480, 22K ರೂ. 14,190, 18K ರೂ. 11,611
ಪುಣೆ: 24K ರೂ. 15,480, 22K ರೂ. 14,190, 18K ರೂ. 11,611
ವಡೋದರಾ: 24K ರೂ. 15,485, 22K ರೂ. 14,195, 18K ರೂ. 11,616
ಅಹಮದಾಬಾದ್: 24K ರೂ. 15,485, 22K ರೂ. 14,195, 18K ರೂ. 11,616

ಬೆಳ್ಳಿ ಬೆಲೆ:
ಗೋಲ್ಡ್‌ ರೇಟ್‌ನಂತೆ, ಬೆಳ್ಳಿ ದರ ಕೂಡಾ ಭಾರೀ ಏರಿಕೆ ಕಂಡಿದೆ. ಇದು 1 ಗ್ರಾಂ ಬೆಳ್ಳಿ ಬೆಲೆ ₹325 ರೂ. ಆಗಿದ್ದು, ನಿನ್ನೆ ₹320 ರೂ. ಇತ್ತು. ಒಂದೇ ದಿನದಲ್ಲಿ ದಿಢೀರ್‌ ₹5 ರೂ. ಏರಿಕೆಯಾಗಿದೆ. ಇನ್ನು 8 ಗ್ರಾಂ ಬೆಳ್ಳಿ ದರ ಇಂದು ₹2,600 ರೂ. ಆಗಿದ್ದು, ನಿನ್ನೆ ₹2,560 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹40 ರೂ. ಏರಿಕೆಯಾಗಿದೆ. ಇನ್ನು 10 ಗ್ರಾಂ ಬೆಳ್ಳಿ ದರ ₹3,250 ರೂ., 100 ಗ್ರಾಂ ಬೆಳ್ಳಿ ಬೆಲೆ ₹32,500 ರೂ., 1000 ಗ್ರಾಂ ಬೆಳ್ಳಿ ದರ ₹3,25,000 ರೂ. ಆಗಿದೆ.

ಸ್ಪಾಟ್‌ ಗೋಲ್ಡ್‌ ವಿವರ:
ಜನವರಿ 21ರ ರಾಯಿಟರ್ಸ್‌ ವರದಿ ಪ್ರಕಾರ, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಗ್ರೀನ್‌ಲ್ಯಾಂಡ್‌ನತ್ತ ಕಣ್ಣಿಟ್ಟಿದ್ದರಿಂದ, ಯುರೋಪ್‌ ರಾಷ್ಟ್ರಗಳೊಂದಿಗೆ ವ್ಯಾಪಾರ ಯುದ್ಧ ಶುರುವಾಗುವ ಭೀತಿ ಹುಟ್ಟಿದೆ. ಅಲ್ಲದೇ ಹೂಡಿಕೆದಾರರು ಚಿನ್ನದ ಮೇಲಿನ ಹೂಡಿಕೆ ಸುರಕ್ಷಿತವೆಂದೂ, ಡಾಲರ್‌ ದುರ್ಬಲತೆಯಿಂದಾಗಿ ಚಿನ್ನದ ಬೆಲೆ ಬುಧವಾರ ಪ್ರತೀ ಔನ್ಸ್‌ $4,800 ದಾಖಲೆಯ ಮಟ್ಟಕ್ಕೆ ಏರಿಕೆಯಾಗಿದೆ.

GMT 0226 ವೇಳೆಗೆ ಸ್ಪಾಟ್‌ ಚಿನ್ನದ ದರವೂ ಪ್ರತೀ ಔನ್ಸ್‌ಗೆ 1.2% ಏರಿಕೆಯಾಗಿ $4,821.6 ಕ್ಕೆ ತಲುಪಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+