ಚಿನ್ನ (Gold) ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ತಾನು ದುಡಿದ ಹಣದಲ್ಲಿ ಸ್ವಲ್ಪವಾದ್ರೂ ಚಿನ್ನ ಮಾಡಿಟ್ಟುಕೊಳ್ಳಬೇಕೆಂಬ ಆಸೆ ಬಹುತೇಕರಿಗೆ ಇರುತ್ತೆ. ಅದರಲ್ಲೂ ಹುಡುಗಿಯರಂತೂ ಚಿನ್ನಾಭರಣಗಳನ್ನು ತುಂಬಾನೇ ಇಷ್ಟಪಡುತ್ತಾರೆ. ಆದ್ರೆ ಇತ್ತೀಚೆಗೆ ಭಾರತದಲ್ಲಿ ಚಿನ್ನದ ಬೆಲೆ ಭಾರೀ ಏರಿಕೆ ಕಂಡಿದೆ. ದಿನ ಹೋದಂತೆ ಚಿನ್ನದ ಬೆಲೆ ಏರಿಕೆಯಾಗುತ್ತಲೇ (Gold Rate Hike) ಇದೆ ಹೊರತು, ಕಮ್ಮಿಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಹಾಗಿದ್ರೆ ಇಂದು (ಜನವರಿ 11) ಭಾರತದಲ್ಲಿ ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಈ ಲೇಖನದಲ್ಲಿದೆ ಓದಿ.

ಭಾರತದಲ್ಲಿ 24K ಚಿನ್ನದ ಬೆಲೆ:
ಭಾರತದಲ್ಲಿ ಇಂದು 24 ಕ್ಯಾರಟ್ ಚಿನ್ನದ 1 ಗ್ರಾಂ ಬೆಲೆ ಸ್ಥಿರವಾಗಿಬಿಟ್ಟಿದೆ ಅತ್ತ ಏರಿಕೆಯೂ ಆಗದೆ, ಇತ್ತ ಇಳಿಕೆಯೂ ಕಾಣದೆ ಚಿನ್ನದ ಬೆಲೆ ಸ್ಥಿರವಾಗಿಬಿಟ್ಟಿದೆ. ಅಂದರೆ ನಿನ್ನೆಯ ಬೆಲೆಯನ್ನೇ ಇಂದು ಕಾಯ್ದುಕೊಂಡಿದೆ.. ಇಂದು 24 ಕ್ಯಾರಟ್ ಚಿನ್ನದ ಒಂದು ಗ್ರಾಂ ಬೆಲೆ ₹14,046 ರೂ. ಆಗಿದ್ದು, ನಿನ್ನೆಯೂ ಅಷ್ಟೇ ಬೆಲೆ ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ಶೂನ್ಯ ಬದಲಾವಣೆಯಾಗಿದೆ. ಇನ್ನು 8 ಗ್ರಾಂ ಬೆಲೆ ಇಂದು ₹1,12,368 ರೂ. ಆಗಿದ್ದು, 10 ಗ್ರಾಂ ಚಿನ್ನದ ಬೆಲೆ ಇಂದು ₹1,40,460 ರೂ. ಆಗಿದೆ. 100 ಗ್ರಾಂ ಚಿನ್ನದ ಬೆಲೆ ಇಂದು ₹14,04,600 ರೂ. ಆಗಿದೆ.
ಭಾರತದಲ್ಲಿ 22K ಚಿನ್ನದ ಬೆಲೆ:
22K ಚಿನ್ನದ ಬೆಲೆ ಕೂಡಾ ಇಂದು ನಿಂತ ನೀರಾಗಿ ಬಿಟ್ಟಿದೆ. ಅಂದರೆ ಒಂದು ಗ್ರಾಂ ಚಿನ್ನದ ಬೆಲೆ ಇಂದು 12,875 ರೂ. ಇದೆ. 8 ಗ್ರಾಂ ಚಿನ್ನದ ಬೆಲೆ ಇಂದು 1,03,000 ರೂ. ಆಗಿದೆ. ಅದೇ ರೀತಿ 10 ಗ್ರಾಂ ಚಿನ್ನದ ಬೆಲೆ ಇಂದು ₹1,28,750 ರೂ. ಆಗಿದೆ. 100 ಗ್ರಾಂ ಚಿನ್ನದ ಬೆಲೆ 12,87,500 ರೂ. ಆಗಿದೆ. ಆ ಮೂಲಕ ಕೆಟ್ಟು ಹೋದ ಗಾಡಿಯಂತೆ ಚಿನ್ನದ ದರ ಸ್ಥಿರವಾಗಿದೆ.
ಭಾರತದಲ್ಲಿ 18K ಚಿನ್ನದ ಬೆಲೆ ಎಷ್ಟಿದೆ?
ಭಾರತದಲ್ಲಿ 24K, 22K ಚಿನ್ನಕ್ಕೆ ಹೋಲಿಸಿದ್ರೆ 18K ಚಿನ್ನ ಕಮ್ಮಿ ಬೆಲೆಗೆ ಸಿಗುತ್ತದೆ. ಆದ್ರೆ ಇಂದು 18 ಕ್ಯಾರಟ್ ಚಿನ್ನದ ಬೆಲೆಯಲ್ಲೂ ಯಾವುದೇ ಏರಿಳಿತಗಳಾಗಿಲ್ಲ. ಅಂದರೆ ಇಂದು 1 ಗ್ರಾಂ ಚಿನ್ನದ ಬೆಲೆ 10,534 ರೂ., 8 ಗ್ರಾಂ ಚಿನ್ನದ ಬೆಲೆ ಇಂದು ₹84,272 ರೂ. ಆಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 1,05,340 ರೂ. ಆಗಿದ್ದು, 100 ಗ್ರಾಂ ಚಿನ್ನದ ಬೆಲೆ 10,53,400 ರೂ. ಆಗಿದೆ. ಅಂದರೆ ನಿನ್ನೆಯೂ ಅಷ್ಟೇ ಬೆಲೆ ಇತ್ತು.
ಭಾರತದ ವಿವಿಧ ನಗರಗಳ ಚಿನ್ನದ ಬೆಲೆ ಎಷ್ಷಿದೆ?
ಚೆನ್ನೈ: 24K ರೂ. 13,965, 22K ರೂ. 12,900, 18K ರೂ. 10,765
ಮುಂಬೈ: 24K ರೂ. 14,046, 22K ರೂ. 12,875, 18K ರೂ. 10,534
ದೆಹಲಿ: 24K ರೂ. 14,061, 22K ರೂ. 12,890, 18K ರೂ. 10,549
ಕೋಲ್ಕತ್ತಾ: 24K ರೂ. 14,046, 22K ರೂ. 12,875, 18K ರೂ. 10,534
ಬೆಂಗಳೂರು: 24K ರೂ. 14,046, 22K ರೂ. 12,875, 18K ರೂ. 10,534
ಹೈದರಾಬಾದ್: 24K ರೂ. 14,046, 22K ರೂ. 12,875, 18K ರೂ. 10,534
ಕೇರಳ: 24K ರೂ. 14,046, 22K ರೂ. 12,875, 18K ರೂ. 10,534
ಪುಣೆ: 24K ರೂ. 14,046, 22K ರೂ. 12,875, 18K ರೂ. 10,534
ವಡೋದರಾ: 24K ರೂ. 14,051, 22K ರೂ. 12,880, 18K ರೂ. 10,539
ಅಹಮದಾಬಾದ್: 24K ರೂ. 14,051, 22K ರೂ. 12,880, 18K ರೂ. 10,539
ಭಾರತದಲ್ಲಿ ಬೆಳ್ಳಿ ದರ:
ಭಾರತದಲ್ಲಿ ಚಿನ್ನದಂತೆ ಬೆಳ್ಳಿ ಬೆಲೆ ಕೂಡಾ ಸ್ಥಿರ ಕಂಡಿದೆ. ಇಂದು 1 ಗ್ರಾಂ ಬೆಳ್ಳಿ ಬೆಲೆ ₹260 ರೂ. ಆಗಿದ್ದು, ನಿನ್ನೆಯೂ ಅಷ್ಟೇ ಇತ್ತು. ಇನ್ನು 8 ಗ್ರಾಂ ಬೆಳ್ಳಿ ದರ ₹2,080 ರೂ. ಆಗಿದೆ. ಅದೇ ರೀತಿ 10 ಗ್ರಾಂ ಬೆಳ್ಳಿ ಬೆಲೆ ₹2,600 ರೂ., 100 ಗ್ರಾಂ ಬೆಳ್ಳಿ ದರ ₹26,000 ರೂ., 1000 ಗ್ರಾಂ ಬೆಳ್ಳಿ ನೆಲೆ ₹2,60,000 ರೂ. ಆಗಿದೆ.
ಸ್ಪಾಟ್ ಗೋಲ್ಡ್ ವಿವರ:
ಜನವರಿ 9ರ ರಾಯಿಟರ್ಸ್ ವರದಿ ಪ್ರಕಾರ, 1618 GMT ಪ್ರಕಾರ, ಸ್ಪಾಟ್ ಚಿನ್ನದ ದರವು ಪ್ರತೀ ಔನ್ಸ್‌ಗೆ 0.5% ಏರಿಕೆಯಾಗಿ $4,496.09ಕ್ಕೆ ತಲುಪಿತ್ತು.


Click it and Unblock the Notifications