Gold Rate: ಒಂದೇ ದಿನ ಚಿನ್ನದ ಬೆಲೆ 5,020 ರೂ. ಇಳಿಕೆ! ಎಷ್ಟಿದೆ ಇಂದಿನ ದರ?

ಚಿನ್ನದ ಮೇಲಿನ ಹೂಡಿಕೆಯನ್ನು (Gold Investment) ಸುರಕ್ಷಿತ ಆಸ್ತಿಯೆಂದು ಕರೆಯುತ್ತಾರೆ. ಆದ್ರೆ ಇತ್ತೀಚೆಗೆ ಚಿನ್ನದ ಬೆಲೆಯಿಂದ ಹೂಡಿಕೆದಾರರಂತೂ ಕಂಗಾಲಾಗಿ ಹೋಗಿದ್ದರು. ಆದ್ರೆ ಇದೀಗ ಚಿನ್ನ ಪ್ರಿಯರಿಗೆ ಗುಡ್‌ ನ್ಯೂಸ್‌ ಸಿಕ್ಕಿದೆ. ಭಾರತದಲ್ಲಿ ಚಿನ್ನದ ಬೆಲೆಯಲ್ಲಿ (Gold Rate India) ಇಂದು (ಫೆ. 5) ಭಾರೀ ಇಳಿಕೆ ಕಂಡಿದೆ. ಹಾಗಿದ್ರೆ ಇಂದು ಚಿನ್ನದ ಬೆಲೆ ಎಷ್ಟು ಇಳಿಕೆಯಾಗಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಒಂದೇ ದಿನ ಚಿನ್ನದ ಬೆಲೆ 5,020 ರೂ. ಇಳಿಕೆ! ಎಷ್ಟಿದೆ ಇಂದಿನ ದರ?

ಭಾರತದಲ್ಲಿ 24K ಚಿನ್ನದ ಬೆಲೆ:
ಭಾರತದಲ್ಲಿ 24K ಚಿನ್ನದಲ್ಲಿ ಇಂದು ಭಾರೀ ಇಳಿಕೆಯಾಗಿದೆ. ಪ್ರತೀ ಗ್ರಾಂ ಚಿನ್ನದಲ್ಲಿ ₹502 ರೂ. ಇಳಿಕೆ ಕಂಡಿದೆ. ಅಂದರೆ ಒಂದು ಗ್ರಾಂ ಚಿನ್ನದ ಬೆಲೆ ₹15,442 ರೂ. ಆಗಿದ್ದು, ನಿನ್ನೆ ₹15,944 ರೂ. ಇತ್ತು. 8 ಗ್ರಾಂ ಚಿನ್ನದ ಬೆಲೆ ಇಂದು ₹1,23,536 ರೂ. ಆಗಿದ್ದು, ನಿನ್ನೆ ₹1,27,552 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 1,136 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ದರ ಇಂದು ₹1,54,420 ರೂ. ಆಗಿದ್ದು, ನಿನ್ನೆ ₹1,59,440 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 5,020 ರೂ. ಕುಸಿತವಾಗಿದೆ. ಇನ್ನು 100 ಗ್ರಾಂ ಚಿನ್ನದ ದರ 15,44,200 ರೂ. ಆಗಿದ್ದು, ನಿನ್ನೆ 15,94,400 ರೂ. ಇತ್ತು. ಒಟ್ಟು 50,200 ರೂ. ಇಳಿಕೆಯಾಗಿದೆ.

ಭಾರತದಲ್ಲಿ 22K ಚಿನ್ನದ ಬೆಲೆ:
22K ಚಿನ್ನದ 1 ಗ್ರಾಂ ಬೆಲೆ ₹14,155 ರೂ. ಆಗಿದ್ದು, ನಿನ್ನೆ ₹14,615 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ₹460 ರೂ. ಇಳಿಕೆ ಕಂಡಿದೆ. ಇನ್ನು 8 ಗ್ರಾಂ ಚಿನ್ನದ ದರ ಇಂದು 1,13,240 ರೂ. ಆಗಿದ್ದು, ನಿನ್ನೆ 1,16,920 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ದಿಢೀರ್‌ ₹3,680 ರೂ. ಇಳಿಕೆ ಕಂಡಿದೆ. 10 ಗ್ರಾಂ ಚಿನ್ನದ ದರ ಇಂದು ₹1,41,550 ರೂ. ಆಗಿದ್ದು, ನಿನ್ನೆ ₹1,46,150 ರೂ. ಇತ್ತು. ಒಂದೇ ದಿನದಲ್ಲಿ ಬರೋಬ್ಬರಿ 4,600 ರೂ. ಇಳಿಕೆ ಕಂಡಿದೆ. 100 ಗ್ರಾಂ ಚಿನ್ನದ ದರ ಇಂದು ₹14,15,500 ರೂ. ಆಗಿದ್ದು, ನಿನ್ನೆ ₹14,61,500 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ದಿಢೀರ್‌ 46,000 ರೂ. ಇಳಿಕೆ ಕಂಡಿದೆ.

ಭಾರತದಲ್ಲಿ 18K ಚಿನ್ನದ ಬೆಲೆ ಎಷ್ಟಿದೆ?
18K ಚಿನ್ನದ 1 ಗ್ರಾಂ ಚಿನ್ನದ ಬೆಲೆ ₹11,582 ರೂ. ಆಗಿದ್ದು, ನಿನ್ನೆ ₹11,958 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 376 ರೂ. ಇಳಿಕೆ ಕಂಡಿದೆ. ಹಾಗೆಯೇ 8 ಗ್ರಾಂ ಚಿನ್ನದ ದರ ಇಂದು ₹92,656 ರೂ. ಆಗಿದ್ದು, ನಿನ್ನೆ 95,664 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ 3,008 ರೂ. ಇಳಿಕೆ ಕಂಡಿದೆ. 10 ಗ್ರಾಂ ಚಿನ್ನದ ದರ 1,15,820 ರೂ. ಆಗಿದ್ದು, ನಿನ್ನೆ 1,19,580 ರೂ. ಇತ್ತು. ದಿಢೀರ್‌ ಒಂದೇ ದಿನದಲ್ಲಿ 3,760 ರೂ. ಇಳಿಕೆಯಾಗಿದೆ. ಇನ್ನು 100 ಗ್ರಾಂ ಚಿನ್ನದ ಬೆಲೆ ಇಂದು 11,58,200 ರೂ. ಆಗಿದ್ದು, ನಿನ್ನೆ 11,95,800 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 37,600 ರೂ. ಕುಸಿತವಾಗಿದೆ.

ಭಾರತದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ:
ಚೆನ್ನೈ: 24K ರೂ. 15,622, 22K ರೂ. 14,320, 18K ರೂ. 12,250
ಮುಂಬೈ: 24K ರೂ. 15,442, 22K ರೂ. 14,155, 18K ರೂ. 11,582
ದೆಹಲಿ: 24K ರೂ. 15,457, 22K ರೂ. 14,170, 18K ರೂ. 11,597
ಕೋಲ್ಕತ್ತಾ: 24K ರೂ. 15,442, 22K ರೂ. 14,155, 18K ರೂ. 11,582
ಬೆಂಗಳೂರು: 24K ರೂ. 15,442, 22K ರೂ. 14,155, 18K ರೂ. 11,582
ಹೈದರಾಬಾದ್: 24K ರೂ. 15,442, 22K ರೂ. 14,155, 18K ರೂ. 11,582
ಕೇರಳ: 24K ರೂ. 15,442, 22K ರೂ. 14,155, 18K ರೂ. 11,582
ಪುಣೆ: 24K ರೂ. 15,442, 22K ರೂ. 14,155, 18K ರೂ. 11,582
ವಡೋದರಾ: 24K ರೂ. 15,447, 22K ರೂ. 14,160, 18K ರೂ. 11,587
ಅಹಮದಾಬಾದ್: 24K ರೂ. 15,447, 22K ರೂ. 14,160, 18K ರೂ. 11,587

ಭಾರತದಲ್ಲಿ ಬೆಳ್ಳಿ ದರ:
ಭಾರತದಲ್ಲಿ ಇಂದು ಬೆಳ್ಳಿ ದರ ಕೂಡಾ ದಿಢೀರ್‌ ಕುಸಿತ ಕಂಡಿದೆ. 1 ಗ್ರಾಂ ಬೆಳ್ಳಿ ದರ ಇಂದು ₹300 ರೂ. ಆಗಿದ್ದು, ನಿನ್ನೆ ₹320 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹20 ರೂ. ಇಳಿಕೆಯಾಗಿದೆ. 8 ಗ್ರಾಂ ಬೆಳ್ಳಿ ದರ ₹2,400 ರೂ. ಆಗಿದ್ದು, ನಿನ್ನೆ ₹2,560 ರೂ. ಆಗಿದೆ. ನಿನ್ನೆಗೆ ಹೋಲಿಸಿದ್ರೆ ಇಂದು ₹160 ಕುಸಿತ ಕಂಡಿದೆ. 10 ಗ್ರಾಂ ಬೆಳ್ಳಿ ಬೆಲೆ ಇಂದು ₹3,000 ರೂ. ಆಗಿದ್ದು, ನಿನ್ನೆ ₹3,200 ರೂ. ಇತ್ತು. ನಿನ್ನೆಗಿಂತ ಇಂದು ₹200 ರೂ. ಕುಸಿತವಾಗಿದೆ. 100 ಗ್ರಾಂ ಬೆಳ್ಳಿ ದರ ₹30,000 ರೂ. ಆಗಿದ್ದು, 1000 ಗ್ರಾಂ ಬೆಳ್ಳಿ ಬೆಲೆ ₹3,00,000 ರೂ. ಆಗಿದೆ.

ಸ್ಪಾಟ್‌ ಗೋಲ್ಡ್‌ ವಿವರ:
ಫೆಬ್ರವರಿ 2, 2026 ರ ರಾಯಿಟರ್ಸ್‌ ವರದಿ ಪ್ರಕಾರ, ಭೌಗೋಳಿಕವಾಗಿ ರಾಜಕೀಯ ಮತ್ತು ಆರ್ಥಿಕತೆಯಲ್ಲಿ ಬದಲಾವಣೆಗಳಾಗುತ್ತಿರುವುದರಿಂದ ಹಣದುಬ್ಬರ ಸಮಸ್ಯೆ ಎದುರಾಗುತ್ತಲೇ ಇದೆ. 0039 GMT ವೇಳೆಗೆ ಸ್ಪಾಟ್‌ ಚಿನ್ನದ ದರವು ಪ್ರತೀ ಔನ್ಸ್‌ಗೆ 1.1% ಏರಿಕೆಯಾಗಿ $5,016.89 ಕ್ಕೆ ತಲುಪಿದೆ. ಆದರೆ ಕಳೆದ ಗುರುವಾರ ಬುಲಿಯನ್‌ ಮಾರುಕಟ್ಟೆಯಲ್ಲಿ $5,594.82 ರ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+