ಮಧ್ಯಪ್ರಾಚ್ಯದಲ್ಲಿ ಉಂಟಾದ ಸಂಘರ್ಷ, ಇಸ್ರೇಲ್, ಅಮೆರಿಕಾ ಮತ್ತು ಇರಾನ್ ನಡುವಿನ ಪ್ರತಿದಾಳಿಗಳು ನಡೆಯುತ್ತಲೇ ಇದೆ. ಅತ್ತ ಯುದ್ಧದ ಭೀಕರತೆಯಿಂದಾಗಿ, ಜಾಗತಿಕ ಮಾರುಕಟ್ಟೆಯಲ್ಲೂ ತಲ್ಲಣ ಸೃಷ್ಟಿಯಾಗಿದೆ. ಇದೀಗ ಭಾರತದ ಚಿನ್ನದ ಬೆಲೆ (Gold Rate India) ಮೇಲೂ, ಮಧ್ಯಪ್ರಾಚ್ಯದ ಉದ್ವಿಗ್ನತೆ ಭಾರೀ ಪ್ರಭಾವ ಬೀರಿದೆ. ಕಳೆದ ವಾರದಲ್ಲಂತೂ ಚಿನ್ನದ ಬೆಲೆಯಲ್ಲಿ ಏರಿಳಿತವಾಗಿತ್ತು. ಇದೀಗ ವಾರದ ಆರಂಭದಲ್ಲೇ ಚಿನ್ನದ ಬೆಲೆ ಭಾರೀ ಕುಸಿತ ಕಂಡಿದೆ. ಹಾಗಿದ್ರೆ ಇಂದು ಭಾರತದಲ್ಲಿ ಚಿನ್ನದ ಬೆಲೆ ಎಷ್ಟಿದೆ ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಭಾರತದಲ್ಲಿ 24K ಚಿನ್ನದ ಬೆಲೆ ಎಷ್ಟಿದೆ?
24K ಚಿನ್ನದ 1 ಗ್ರಾಂ ಬೆಲೆ ಇಂದು ಭಾರೀ ಇಳಿಕೆ ಕಂಡಿದೆ. ಪ್ರತೀ ಗ್ರಾಂ ಬೆಲೆಯಲ್ಲಿ ಇಂದು ₹196 ರೂ. ಕಮ್ಮಿಯಾಗಿದ್ದು, ಒಟ್ಟು ₹16,168 ರೂ. ಆಗಿದ್ದು, ನಿನ್ನೆ 16,364 ರೂ. ಇತ್ತು. 8 ಗ್ರಾಂ ಚಿನ್ನದ ಬೆಲೆ ಇಂದು ₹1,29,344 ರೂ. ಆಗಿದ್ದು, ನಿನ್ನೆ ₹1,30,912 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ದಿಢೀರ್ 1,568 ರೂ. ಕಮ್ಮಿಯಾಗಿದೆ. ಇನ್ನು 10 ಗ್ರಾಂ ಚಿನ್ನದ ಬೆಲೆ ಇಂದು ₹1,61,680 ರೂ. ಆಗಿದ್ದು, ನಿನ್ನೆ ₹1,63,640 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 1,960 ರೂ. ಕಡಿಮೆಯಾಗಿದೆ. 100 ಗ್ರಾಂ ಚಿನ್ನದ ದರ 16,16,800 ರೂ. ಆಗಿದ್ದು, ನಿನ್ನೆ 16,36,400 ರೂ. ಇತ್ತು. ನಿನ್ನೆಗಿಂತ ಇಂದು ಬರೋಬ್ಬರಿ 19,6000 ರೂ. ಇಳಿಕೆ ಕಂಡಿದೆ.
ಭಾರತದಲ್ಲಿ 22K ಚಿನ್ನದ ಬೆಲೆ:
22K ಚಿನ್ನದ 1 ಗ್ರಾಂ ಬೆಲೆ ಇಂದು ₹14,820 ರೂ. ಆಗಿದ್ದು, ನಿನ್ನೆ 15,000 ರೂ. ಇತ್ತು. ನಿನ್ನೆಗಿಂತ ಇಂದು ದಿಢೀರ್ ₹180 ರೂ. ಇಳಿಕೆಯಾಗಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 1,18,560 ರೂ. ಆಗಿದ್ದು, ನಿನ್ನೆ 1,20,000 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 1,440 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ದರ ಇಂದು ₹1,48,200 ರೂ. ಆಗಿದ್ದು, ನಿನ್ನೆ ₹1,50,000 ರೂ. ಇತ್ತು. ನಿನ್ನೆಗಿಂತ ಇಂದು 1,800 ರೂ. ಕಮ್ಮಿಯಾಗಿದೆ. 100 ಗ್ರಾಂ ಚಿನ್ನದ ದರ ಇಂದು ₹14,82,000 ರೂ. ಆಗಿದ್ದು, ನಿನ್ನೆ 15,00,000 ರೂ. ಇತ್ತು. ಒಂದೇ ದಿನದಲ್ಲಿ 18,000 ರೂ. ಇಳಿಕೆಯಾಗಿದೆ.
ಭಾರತದಲ್ಲಿ 18K ಚಿನ್ನದ ಬೆಲೆ ಎಷ್ಟಿದೆ?
18K ಚಿನ್ನದ 1 ಗ್ರಾಂ ಚಿನ್ನದ ಬೆಲೆ ₹12,126 ರೂ. ಆಗಿದ್ದು, ನಿನ್ನೆ 12,273 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ಕೇವಲ 147 ರೂ. ಇಳಿಕೆ ಕಂಡಿದೆ. 8 ಗ್ರಾಂ ಚಿನ್ನದ ದರ ಇಂದು ₹97,008 ರೂ. ಆಗಿದ್ದು, ನಿನ್ನೆ 98,184 ರೂ. ಇತ್ತು. ನಿನ್ನೆಗಿಂತ ಇಂದು 1,176 ರೂ. ಕಮ್ಮಿಯಾಗಿದೆ. 10 ಗ್ರಾಂ ಚಿನ್ನದ ದರ 1,21,260 ರೂ. ಆಗಿದ್ದು, ನಿನ್ನೆ 1,22,730 ರೂ. ಇತ್ತು. ಅದೇ ರೀತಿ 100 ಗ್ರಾಂ ಚಿನ್ನದ ಬೆಲೆ ಇಂದು 12,12,600 ರೂ. ಆಗಿದ್ದು, ನಿನ್ನೆ 12,27,300 ರೂ. ಇತ್ತು. ಒಂದೇ ದಿನದಲ್ಲಿ 14,700 ರೂ. ಇಳಿಕೆಯಾಗಿದೆ.
ಭಾರತದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ:
ಚೆನ್ನೈ: 24K ರೂ. 16,309, 22K ರೂ. 14,950, 18K ರೂ. 13,000
ಮುಂಬೈ: 24K ರೂ. 16,168, 22K ರೂ. 14,820, 18K ರೂ. 12,126
ದೆಹಲಿ: 24K ರೂ. 16,183, 22K ರೂ. 14,835, 18K ರೂ. 12,141
ಕೋಲ್ಕತ್ತಾ: 24K ರೂ. 16,168, 22K ರೂ. 14,820, 18K ರೂ. 12,126
ಬೆಂಗಳೂರು: 24K ರೂ. 16,168, 22K ರೂ. 14,820, 18K ರೂ. 12,126
ಹೈದರಾಬಾದ್: 24K ರೂ. 16,168, 22K ರೂ. 14,820, 18K ರೂ. 12,126
ಕೇರಳ: 24K ರೂ. 16,168, 22K ರೂ. 14,820, 18K ರೂ. 12,126
ಪುಣೆ: 24K ರೂ. 16,168, 22K ರೂ. 14,820, 18K ರೂ. 12,126
ವಡೋದರಾ: 24K ರೂ. 16,173, 22K ರೂ. 14,825, 18K ರೂ. 12,131
ಅಹಮದಾಬಾದ್: 24K ರೂ. 16,173, 22K ರೂ. 14,825, 18K ರೂ. 12,131
ಭಾರತದಲ್ಲಿ ಬೆಳ್ಳಿ ದರ ಎಷ್ಟಿದೆ?
ಚಿನ್ನದ ಬೆಲೆ ಇಳಿಕೆಯಾಗುತ್ತಿದ್ದಂತೆ, ಇತ್ತ ಬೆಳ್ಳಿ ದರವೂ ಭಾರೀ ಇಳಿಕೆ ಕಂಡಿದೆ. 1 ಗ್ರಾಂ ಬೆಳ್ಳಿ ಬೆಲೆ ಇಂದು ₹280 ರೂ. ಆಗಿದ್ದು, ನಿನ್ನೆ ₹285 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹5 ರೂ. ಇಳಿಕೆ ಕಂಡಿದೆ. 8 ಗ್ರಾಂ ಬೆಳ್ಳಿ ಬೆಲೆ ಇಂದು ₹2,240 ರೂ. ಆಗಿದ್ದು, ನಿನ್ನೆ ₹2,280 ರೂ. ಇತ್ತು. ನಿನ್ನೆಗಿಂತ ಇಂದು ₹40 ರೂ. ಇಳಿಕೆ ಕಂಡಿದೆ. ಇನ್ನು 10 ಗ್ರಾಂ ಬೆಳ್ಳಿ ಬೆಲೆ ₹2,800 ರೂ., 100 ಗ್ರಾಂ ಬೆಳ್ಳಿ ದರ ₹28,000 ರೂ., 1000 ಗ್ರಾಂ ಬೆಳ್ಳಿ ಬೆಲೆ ₹2,80,000 ರೂ. ತಲುಪಿದೆ.
ಸ್ಪಾಟ್ ಗೋಲ್ಡ್ ವಿವರ:
ಮಾರ್ಚ್ 09, 2026 ರ ರಾಯಿಟರ್ಸ್ ವರದಿ ಪ್ರಕಾರ, ಸೋಮವಾರ ಚಿನ್ನ ಕುಸಿತ ಕಂಡಿದ್ದು, ಅಲ್ಲದೇ ಇಂಧನ ವೆಚ್ಚಗಳು ಹಣದುಬ್ಬರದ ಕಳವಳ ಹುಟ್ಟುಹಾಕಿದೆ. ಇನ್ನು GMT 0233 ವೇಳೆಗೆ ಸ್ಪಾಟ್ ಚಿನ್ನದ ದರವು ಪ್ರತೀ ಔನ್ಸ್‌ಗೆ 1.5% ಇಳಿಕೆ ಕಂಡು $5,091.02 ಗೆ ತಲುಪಿದೆ.


Click it and Unblock the Notifications