Gold Rate Today: ವಾರಾಂತ್ಯದಲ್ಲೂ ಚಿನ್ನದ ಬೆಲೆ ಭರ್ಜರಿ ಇಳಿಕೆ! ದಿಢೀರ್‌ 10,300 ರೂ. ಕುಸಿತ

ಚಿನ್ನದ ಮೇಲಿನ ಹೂಡಿಕೆ ಸುರಕ್ಷಿತ ಎಂದು ಹಲವರು ಭಾವಿಸುತ್ತಾರೆ. ಆದ್ರೆ ಅತ್ತ ಯುದ್ಧ ತೀವ್ರವಾಗುತ್ತಿದ್ದಂತೆ, ಇತ್ತ ಹೂಡಿಕೆದಾರರು ಕೂಡಾ ಅಮೂಲ್ಯ ಲೋಹಗಳ ಮೇಲೆ ಹೂಡಿಕೆ ಮಾಡಲು ಮುಂದಾಗಿದ್ದಾರೆ. ಕಳೆದೆರಡು ದಿನಗಳಿಂದ ಚಿನ್ನದ ಬೆಲೆ ಇಳಿಕೆಯಾಗುತ್ತಲೇ (Gold Rate Down) ಇದೆ. ಇದೀಗ ಸತತ ಮೂರನೇ ದಿನವೂ ಚಿನ್ನದ ಬೆಲೆ ಭಾರೀ ಇಳಿಕೆ ಕಂಡಿದ್ದು, ಇಂದು ಚಿನ್ನದ ದರ ಎಷ್ಟಿದೆ ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ವಾರಾಂತ್ಯದಲ್ಲೂ ಚಿನ್ನದ ಬೆಲೆ ಭರ್ಜರಿ ಇಳಿಕೆ! 10,300 ರೂ. ಕುಸಿತ

ಭಾರತದಲ್ಲಿ 24K ಚಿನ್ನದ ಬೆಲೆ:

24K ಚಿನ್ನದ 1 ಗ್ರಾಂ ಬೆಲೆ ಇಂದು ₹15,966 ರೂ. ಆಗಿದ್ದು, ನಿನ್ನೆ 16,069 ರೂ. ಇತ್ತು. ನಿನ್ನೆಗಿಂತ ಇಂದು ₹103 ರೂ. ಕುಸಿತ ಕಂಡಿದೆ. 8 ಗ್ರಾಂ ಚಿನ್ನದ ಬೆಲೆ ಇಂದು ₹1,27,728 ರೂ. ಆಗಿದ್ದು, ನಿನ್ನೆ ₹1,28,552 ರೂ. ಇತ್ತು. ನಿನ್ನೆಗಿಂತ ಇಂದು ₹824 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,59,660 ರೂ. ಆಗಿದ್ದು, ನಿನ್ನೆ ₹1,60,690 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 1,030 ರೂ. ಇಳಿಕೆಯಾಗಿದೆ. 100 ಗ್ರಾಂ ಚಿನ್ನದ ದರ 15,96,600 ರೂ. ಆಗಿದ್ದು, ನಿನ್ನೆ 16,06,900 ರೂ. ಇತ್ತು. ನಿನ್ನೆಗಿಂತ ಇಂದು ಬರೋಬ್ಬರಿ ₹10,300 ರೂ. ಇಳಿಕೆಯಾಗಿದೆ.

ಭಾರತದಲ್ಲಿ 22K ಚಿನ್ನದ ಬೆಲೆ:

22K ಚಿನ್ನದ 1 ಗ್ರಾಂ ಬೆಲೆ ಇಂದು ₹14,635 ರೂ. ಆಗಿದ್ದು, ನಿನ್ನೆ 14,730 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಪ್ರತೀ ಗ್ರಾಂನಲ್ಲಿ ಇಂದು ₹95 ರೂ. ಕುಸಿತ ಕಂಡಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 1,17,080 ರೂ. ಆಗಿದ್ದು, ನಿನ್ನೆ 1,17,840 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹760 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ದರ ಇಂದು ₹1,46,350 ರೂ. ಆಗಿದ್ದು, ನಿನ್ನೆ ₹1,47,300 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ₹950 ರೂ. ವ್ಯತ್ಯಾಸವಾಗಿದೆ. 100 ಗ್ರಾಂ ಚಿನ್ನದ ದರ ಇಂದು ₹14,63,500 ರೂ. ಆಗಿದ್ದು, ನಿನ್ನೆ 14,73,000 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ಒಂದೇ ದಿನ ₹9,500 ರೂ. ಇಳಿಕೆಯಾಗಿದೆ.

ಭಾರತದಲ್ಲಿ 18K ಚಿನ್ನದ ಬೆಲೆ:

18K ಚಿನ್ನದ 1 ಗ್ರಾಂ ಚಿನ್ನದ ಬೆಲೆ ₹11,974 ರೂ. ಆಗಿದ್ದು, ನಿನ್ನೆ 12,052 ರೂ. ಇತ್ತು. ನಿನ್ನೆಗಿಂತ ಇಂದು ಕೇವಲ 78 ರೂ. ಇಳಿಕೆಯಾಗಿದೆ. 8 ಗ್ರಾಂ ಚಿನ್ನದ ದರ ಇಂದು ₹95,792 ರೂ. ಆಗಿದ್ದು, ನಿನ್ನೆ 96,416 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ಬರೀ 624 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ದರ 1,19,740 ರೂ. ಆಗಿದ್ದು, ನಿನ್ನೆ 1,20,520 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 780 ರೂ. ಕುಸಿತ ಕಂಡಿದೆ. 100 ಗ್ರಾಂ ಚಿನ್ನದ ದರ ಇಂದು ₹11,97,400 ರೂ. ಆಗಿದ್ದು, ನಿನ್ನೆ ₹12,05,200 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ಒಂದೇ ದಿನ 7,800 ರೂ. ವ್ಯತ್ಯಾಸವಾಗಿದೆ.

ಭಾರತದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ:

ಚೆನ್ನೈ: 24K ರೂ. 16,102, 22K ರೂ. 14,760, 18K ರೂ. 12,400
ಮುಂಬೈ: 24K ರೂ. 15,966, 22K ರೂ. 14,635, 18K ರೂ. 11,974
ದೆಹಲಿ: 24K ರೂ. 15,981, 22K ರೂ. 14,650, 18K ರೂ. 11,989
ಕೋಲ್ಕತ್ತಾ: 24K ರೂ. 15,966, 22K ರೂ. 14,635, 18K ರೂ. 11,974
ಬೆಂಗಳೂರು: 24K ರೂ. 15,966, 22K ರೂ. 14,635, 18K ರೂ. 11,974
ಹೈದರಾಬಾದ್: 24K ರೂ. 15,966, 22K ರೂ. 14,635, 18K ರೂ. 11,974
ಕೇರಳ: 24K ರೂ. 15,966, 22K ರೂ. 14,635, 18K ರೂ. 11,974
ಪುಣೆ: 24K ರೂ. 15,966, 22K ರೂ. 14,635, 18K ರೂ. 11,974
ವಡೋದರಾ: 24K ರೂ. 15,971, 22K ರೂ. 14,640, 18K ರೂ. 11,979
ಅಹಮದಾಬಾದ್: 24K ರೂ. 15,971, 22K ರೂ. 14,640, 18K ರೂ. 11,979

ಭಾರತದಲ್ಲಿ ಬೆಳ್ಳಿ ದರ:

ಭಾರತದಲ್ಲಿ ಬೆಳ್ಳಿ ದರವೂ ನಿರಂತರವಾಗಿ ಇಳಿಕೆಯಾಗುತ್ತಲೇ ಇದೆ. 1 ಗ್ರಾಂ ಬೆಳ್ಳಿ ದರ ಇಂದು ₹275 ರೂ. ಆಗಿದ್ದು, ನಿನ್ನೆ ₹279.90 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ₹4.90 ರೂ. ಇಳಿಕೆಯಾಗಿದೆ. ಇನ್ನು 8 ಗ್ರಾಂ ಬೆಳ್ಳಿ ಬೆಲೆ ₹2,200 ರೂ. ಆಗಿದ್ದು, ನಿನ್ನೆ ₹2,239.20 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹39.20 ರೂ. ಕುಸಿತ ಕಂಡಿದೆ. 10 ಗ್ರಾಂ ಬೆಳ್ಳಿ ಬೆಲೆ ₹2,750 ರೂ. ಆಗಿದ್ದು, ನಿನ್ನೆ ₹2,799 ರೂ. ಇತ್ತು. 100 ಗ್ರಾಂ ಬೆಳ್ಳಿ ಬೆಲೆ ₹27,500 ರೂ. ಆಗಿದ್ದು, 1000 ಗ್ರಾಂ ಬೆಳ್ಳಿ ದರ ₹2,75,000 ರೂ. ತಲುಪಿದೆ.

ಸ್ಪಾಟ್‌ ಗೋಲ್ಡ್‌ ವಿವರ:

ಮಾರ್ಚ್‌ 14, 2026 ರ ವರದಿ ಪ್ರಕಾರ, ಸತತ ಎರಡನೇ ವಾರವು ಚಿನ್ನದ ಬೆಲೆ ಕುಸಿತದ ಹಾದಿಯಲ್ಲಿದೆ. ಇದೀಗ ಸ್ಪಾಟ್‌ ಚಿನ್ನದ ದರ ಪ್ರತೀ ಔನ್ಸ್‌ಗೆ 0.5% ರಷ್ಟು ಕುಸಿತ ಕಂಡು %5,052.15 ಕ್ಕೆ ತಲುಪಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+