ಕಳೆದ ವಾರವಿಡೀ ಭಾರೀ ಇಳಿಕೆಯಲ್ಲಿದ್ದ ಚಿನ್ನದ ಬೆಲೆ (Gold Rate), ಇದೀಗ ದಿಢೀರ್ ಹೆಚ್ಚಳ ಕಂಡಿದೆ. ಮಧ್ಯಪ್ರಾಚ್ಯದ ಸಂಘರ್ಷದಿಂದಾಗಿ ಕಚ್ಚಾ ತೈಲ, ಎಲ್‌ಪಿಜಿ ಗ್ಯಾಸ್ ಎಲ್ಲವೂ ದುಬಾರಿಯಾಗಿಬಿಟ್ಟಿದೆ. ಇದೀಗ ಭಾರತದಲ್ಲಿ ಚಿನ್ನದ ಬೆಲೆ (Gold Rate India) ಕೂಡಾ ಇಂದು ಏರಿಕೆ ಕಂಡಿದ್ದು, ಎಷ್ಟಿದೆ ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಭಾರತದಲ್ಲಿ 24K ಚಿನ್ನದ ಬೆಲೆ:
24K ಚಿನ್ನದ 1 ಗ್ರಾಂ ಬೆಲೆ ಇಂದು 16,238 ರೂ. ಆಗಿದ್ದು, ನಿನ್ನೆ 16,168 ರೂ. ಇತ್ತು. ನಿನ್ನೆಯಷ್ಟೇ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ₹70 ರೂ.ನಷ್ಟು ಏರಿಕೆ ಕಂಡಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 1,29,904 ರೂ. ಆಗಿದ್ದು, ನಿನ್ನೆ 1,29,344 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ₹560 ರೂ. ಹೆಚ್ಚಳವಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,62,380 ರೂ. ಆಗಿದ್ದು, ನಿನ್ನೆ 1,61,680 ರೂ. ಇತ್ತು. ನಿನ್ನೆಗಿಂತ ಇಂದು ₹700 ರೂ. ಏರಿಕೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ ಇಂದು ₹16,23,800 ರೂ. ಆಗಿದ್ದು, ನಿನ್ನೆ 16,16,800 ರೂ. ಇತ್ತು. ನಿನ್ನೆಗಿಂತ ಇಂದು ದಿಢೀರ್ 7,000 ರೂ. ಹೆಚ್ಚಳ ಕಂಡಿದೆ.
ಭಾರತದಲ್ಲಿ 22K ಚಿನ್ನದ ಬೆಲೆ:
22K ಚಿನ್ನದ 1 ಗ್ರಾಂ ಬೆಲೆ ಇಂದು 14,885 ರೂ. ಆಗಿದ್ದು, ನಿನ್ನೆ 14,820 ರೂ. ಇತ್ತು. ನಿನ್ನೆಗಿಂತ ಇಂದು ಕೇವಲ ₹65 ರೂ. ಏರಿಕೆ ಕಂಡಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 1,19,080 ರೂ. ಆಗಿದ್ದು, ನಿನ್ನೆ 1,18,560 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ₹520 ರೂ. ಏರಿಕೆ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,48,850 ರೂ. ಆಗಿದ್ದು, ನಿನ್ನೆ 1,48,200 ರೂ. ಇತ್ತು. ನಿನ್ನೆಗಿಂತ ಇಂದು ಕೇವಲ ₹650 ರೂ. ಹೆಚ್ಚಳವಾಗಿದೆ. 100 ಗ್ರಾಂ ಚಿನ್ನದ ದರ ಇಂದು 14,88,500 ರೂ. ಆಗಿದ್ದು, ನಿನ್ನೆ 14,88,500 ರೂ. ಇತ್ತು. ನಿನ್ನೆಗಿಂತ ಇಂದು ₹6,500 ರೂ. ಹೆಚ್ಚಳವಾಗಿದೆ.
ಭಾರತದಲ್ಲಿ 18K ಚಿನ್ನದ ಬೆಲೆ
18K ಚಿನ್ನದ 1 ಗ್ರಾಂ ಬೆಲೆ ಇಂದು 12,179 ರೂ. ಆಗಿದ್ದು, ನಿನ್ನೆ 12,126 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹53 ರೂ. ಏರಿಕೆಯಾಗಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 97,432 ರೂ. ಆಗಿದ್ದು, ನಿನ್ನೆ 97,432 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ₹424 ರೂ. ಹೆಚ್ಚಳವಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 1,21,790 ರೂ. ಆಗಿದ್ದು, ನಿನ್ನೆ 1,21,260 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹530 ರೂ. ಹೆಚ್ಚಳವಾಗಿದೆ. 100 ಗ್ರಾಂ ಚಿನ್ನದ ದರ ಇಂದು ₹12,17,900 ರೂ. ಆಗಿದ್ದು, ನಿನ್ನೆ ₹12,12,600 ರೂ. ಇತ್ತು.
ಭಾರತದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ:
ಚೆನ್ನೈ: 24K ರೂ. 16,308, 22K ರೂ. 14,949, 18K ರೂ. 12,999
ಮುಂಬೈ: 24K ರೂ. 16,238, 22K ರೂ. 14,885, 18K ರೂ. 12,179
ದೆಹಲಿ: 24K ರೂ. 16,253, 22K ರೂ. 14,900, 18K ರೂ. 12,194
ಕೋಲ್ಕತ್ತಾ: 24K ರೂ. 16,238, 22K ರೂ. 14,885, 18K ರೂ. 12,179
ಬೆಂಗಳೂರು: 24K ರೂ. 16,238, 22K ರೂ. 14,885, 18K ರೂ. 12,179
ಹೈದರಾಬಾದ್: 24K ರೂ. 16,238, 22K ರೂ. 14,885, 18K ರೂ. 12,179
ಕೇರಳ: 24K ರೂ. 16,238, 22K ರೂ. 14,885, 18K ರೂ. 12,179
ಪುಣೆ: 24K ರೂ. 16,238, 22K ರೂ. 14,885, 18K ರೂ. 12,179
ವಡೋದರಾ: 24K ರೂ. 16,243, 22K ರೂ. 14,890, 18K ರೂ. 12,184
ಅಹಮದಾಬಾದ್: 24K ರೂ. 16,243, 22K ರೂ. 14,890, 18K ರೂ. 12,184
ಬೆಳ್ಳಿ ಬೆಲೆ:
ಅತ್ತ ಚಿನ್ನದ ಬೆಲೆ ಏರಿಕೆಯಾಗುತ್ತಿದ್ದಂತೆ, ಇತ್ತ ಬೆಳ್ಳಿ ಬೆಲೆ ನೋಡಿದ್ರೆ ಅಯ್ಯಯ್ಯೋ ಎಂಬಂತಿದೆ. ಬೆಳ್ಳಿ ದರದಲ್ಲೂ ಇಂದು ಭಾರೀ ಏರಿಕೆ ಕಂಡಿದೆ. ಪ್ರತೀ ಗ್ರಾಂ ಬೆಳ್ಳಿಯಲ್ಲಿ 10 ರೂ. ಏರಿಕೆಯಾಗಿದ್ದು, 1 ಗ್ರಾಂ ಬೆಲೆ ₹290 ರೂ. ಆಗಿದೆ. ಇನ್ನು 8 ಗ್ರಾಂ ಬೆಳ್ಳಿ ದರ ₹2,320 ರೂ. ಆಗಿದ್ದು, ನಿನ್ನೆ ₹2,240 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹80 ರೂ. ಏರಿಕೆಯಾಗಿದೆ. ಇನ್ನು 10 ಗ್ರಾಂ ಬೆಳ್ಳಿ ದರ ₹2,900 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ಬೆಲೆ ₹29,000 ರೂ. ಆಗಿದೆ. ಅದೇ ರೀತಿ 1000 ಗ್ರಾಂ ಬೆಳ್ಳಿ ದರ ₹2,90,000 ರೂ. ಆಗಿದೆ.
ಸ್ಪಾಟ್ ಗೋಲ್ಡ್ ವಿವರ:
ಮಾರ್ಚ್ 10ರ ರಾಯಿಟರ್ಸ್ ವರದಿ ಪ್ರಕಾರ, ಮಧ್ಯಪ್ರಾಚ್ಯದಲ್ಲಿ ಯುದ್ಧದ ಪರಿಸ್ಥಿತಿ ಶೀಘ್ರದಲ್ಲೇ ಅಂತ್ಯ ಕಾಣಬಹುದು ಎಂದು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೂಚಿಸಿದ ನಂತರ, ಡಾಲರ್ ದುರ್ಬಲತೆ ಕಂಡಿದ್ದು, ಮಂಗಳವಾರ ಚಿನ್ನದ ಬೆಲೆ ಏರಿಕೆ ಕಂಡಿದೆ.
GMT 0233 ವೇಳೆಗೆ ಸ್ಪಾಟ್ ಚಿನ್ನವು ಪ್ರತೀ ಔನ್ಸ್‌ಗೆ 0.8% ಏರಿಕೆ ಕಂಡು, $5,179.52 ಕ್ಕೆ ತಲುಪಿದೆ.


Click it and Unblock the Notifications