ಭಾರತದಲ್ಲಿ ಚಿನ್ನದ ಬೆಲೆ (Gold Rate India) ನೋಡಿದ್ರೆ ಅಯ್ಯಯ್ಯೋ ಎಂಬಂತಾಗಿದೆ. ಕೆಲವು ದಿನಗಳಿಂದ ಇಳಿಕೆಯಲ್ಲಿದ್ದ ಚಿನ್ನ ದರ ಇದೀಗ ದಿಢೀರ್ ಏರಿಕೆ ಕಂಡಿದೆ. ಮತ್ತೆ ಇದೀಗ ಚಿನ್ನ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದೆ. ಕೆಲವೇ ದಿನಗಳಲ್ಲಿ ಚಿನ್ನದ ಬೆಲೆ 1 ಲಕ್ಷಕ್ಕೆ ತಲುಪಬಹುದು ಎಂದು ನಿರೀಕ್ಷೆಯಲ್ಲಿದ್ದವರಿಗೆ, ಇಂದು ನಿರಾಸೆಯಾಗಿದೆ. ಹಾಗಿದ್ರೆ ಇಂದು ಚಿನ್ನದ ಬೆಲೆ ಎಷ್ಟಿದೆ? ಎಷ್ಟು ಹೆಚ್ಚಾಗಿದೆ? ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಭಾರತದಲ್ಲಿ 24K ಚಿನ್ನದ ಬೆಲೆ ಎಷ್ಟಿದೆ?
24K ಚಿನ್ನದ ಬೆಲೆಯಲ್ಲಿ ಭಾರೀ ಹೆಚ್ಚಳ ಕಂಡಿದೆ. 1 ಗ್ರಾಂ ಬೆಲೆ 15,649 ರೂ. ಆಗಿದ್ದು, ನಿನ್ನೆ 15,420 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ದೀಢೀರ್ ₹229 ರೂ. ಏರಿಕೆ ಕಂಡಿದೆ. ಇನ್ನು 8 ಗ್ರಾಂ ಚಿನ್ನದ ಬೆಲೆ ಇಂದು 1,5,192 ರೂ. ಆಗಿದ್ದು, ನಿನ್ನೆ 1,23,360 ರೂ. ಇತ್ತು. ನಿನ್ನೆಗಿಂತ ಇಂದು 1,832 ರೂ. ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,56,490 ರೂ. ಆಗಿದ್ದು, ನಿನ್ನೆ 1,54,200 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 2,290 ರೂ. ಹೆಚ್ಚಳವಾಗಿದೆ. ಇನ್ನು 100 ಗ್ರಾಂ ಚಿನ್ನದ ಬೆಲೆ ಇಂದು ₹15,64,900 ರೂ. ಆಗಿದ್ದು, ನಿನ್ನೆ 15,66,000 ರೂ. ಇತ್ತು. ನಿನ್ನೆಗಿಂತ ಇಂದು ದಿಢೀರ್ 22,900 ರೂ. ಏರಿಕೆಯಾಗಿದೆ.
ಭಾರತದಲ್ಲಿ 22K ಚಿನ್ನದ ಬೆಲೆ ಎಷ್ಟಿದೆ?
22K ಚಿನ್ನದ 1 ಗ್ರಾಂ ಬೆಲೆ ಇಂದು 14,345 ರೂ. ಆಗಿದ್ದು, ನಿನ್ನೆ 14,135 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ಒಂದೇ ದಿನ ₹210 ರೂ. ಏರಿಕೆಯಾಗಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 1,14,760 ರೂ. ಆಗಿದ್ದು, ನಿನ್ನೆ 1,13,080 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ₹1,680 ರೂ. ಏರಿಕೆ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,43,450 ರೂ. ಆಗಿದ್ದು, ನಿನ್ನೆ 1,41,350 ರೂ. ಇತ್ತು. ಒಟ್ಟು 2,100 ರೂ. ಹೆಚ್ಚಳವಾಗಿದೆ. 100 ಗ್ರಾಂ ಚಿನ್ನದ ದರ ಇಂದು 14,34,500 ರೂ. ಆಗಿದ್ದು, ನಿನ್ನೆ 14,13,500 ರೂ. ಇತ್ತು. ಒಂದೇ ದಿನದಲ್ಲಿ 21,000 ರೂ. ಹೆಚ್ಚಳವಾಗಿದೆ.
ಭಾರತದಲ್ಲಿ 18K ಚಿನ್ನದ ಬೆಲೆ ಎಷ್ಟಿದೆ?
18K ಚಿನ್ನದ 1 ಗ್ರಾಂ ಬೆಲೆ ಇಂದು 11,737 ರೂ. ಆಗಿದ್ದು, ನಿನ್ನೆ 11,565 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ₹172 ರೂ. ಹೆಚ್ಚಳ ಕಂಡಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 93,896 ರೂ. ಆಗಿದ್ದು, ನಿನ್ನೆ 92,520 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 1,376 ರೂ. ಹೆಚ್ಚಳವಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 1,17,370 ರೂ. ಆಗಿದ್ದು, ನಿನ್ನೆ 1,15,650 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 1,720 ರೂ. ಏರಿಕೆಯಾಗಿದೆ. 100 ಗ್ರಾಂ ಚಿನ್ನದ ದರ ಇಂದು ₹11,73,700 ರೂ. ಆಗಿದ್ದು, ನಿನ್ನೆ ₹11,56,500 ರೂ. ಇತ್ತು. 17,200 ರೂ. ಏರಿಕೆ ಕಂಡಿದೆ.
ಭಾರತದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ?
ಚೆನ್ನೈ: 24K ರೂ. 15,818, 22K ರೂ. 14,500, 18K ರೂ. 12,400
ಮುಂಬೈ: 24K ರೂ. 15,649, 22K ರೂ. 14,345, 18K ರೂ. 11,737
ದೆಹಲಿ: 24K ರೂ. 15,664, 22K ರೂ. 14,360, 18K ರೂ. 11,752
ಕೋಲ್ಕತ್ತಾ: 24K ರೂ. 15,649, 22K ರೂ. 14,345, 18K ರೂ. 11,737
ಬೆಂಗಳೂರು: 24K ರೂ. 15,649, 22K ರೂ. 14,345, 18K ರೂ. 11,737
ಹೈದರಾಬಾದ್: 24K ರೂ. 15,649, 22K ರೂ. 14,345, 18K ರೂ. 11,737
ಕೇರಳ: 24K ರೂ. 15,649, 22K ರೂ. 14,345, 18K ರೂ. 11,737
ಪುಣೆ: 24K ರೂ. 15,649, 22K ರೂ. 14,345, 18K ರೂ. 11,737
ವಡೋದರಾ: 24K ರೂ. 15,649, 22K ರೂ. 14,345, 18K ರೂ. 11,737
ಅಹಮದಾಬಾದ್: 24K ರೂ. 15,649, 22K ರೂ. 14,345, 18K ರೂ. 11,737
ಬೆಳ್ಳಿ ಬೆಲೆ:
ಚಿನ್ನ-ಬೆಳ್ಳಿ ದರ ಇತ್ತೀಚೆಗೆ ಭಾರೀ ಇಳಿಕೆ ಕಂಡಿತ್ತು. ಆದ್ರೆ ಇದೀಗ ಬೆಳ್ಳಿ ದರ ಭಾರೀ ಹೆಚ್ಚಳವಾಗಿದೆ. 1 ಗ್ರಾಂ ಬೆಳ್ಳಿ ದರ ಇಂದು ₹270 ರೂ. ಆಗಿದ್ದು, ನಿನ್ನೆ ₹255 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹15 ರೂ. ಏರಿಕೆಯಾಗಿದೆ. 8 ಗ್ರಾಂ ಬೆಳ್ಳಿ ದರ ಇಂದು ₹2,160 ರೂ. ಆಗಿದ್ದು, ನಿನ್ನೆ ₹2,040 ರೂ. ಇತ್ತು. 10 ಗ್ರಾಂ ಬೆಳ್ಳಿ ಬೆಲೆ ₹2,700 ರೂ., 100 ಗ್ರಾಂ ಬೆಳ್ಳಿ ದರ ₹27,000 ರೂ., 1000 ಗ್ರಾಂ ಬೆಳ್ಳಿ ದರ ₹2,70,000 ರೂ. ಏರಿಕೆಯಾಗಿದೆ.
ಸ್ಪಾಟ್ ಗೋಲ್ಡ್ ವಿವರ:
ಫೆಬ್ರವರಿ 19 ರ ರಾಯಿಟರ್ಸ್ ವರದಿ ಪ್ರಕಾರ, ಅಮೆರಿಕದ ಪ್ರಮುಖ ಹಣದುಬ್ಬರ ದತ್ತಾಂಶವು, ಫೆಡರಲ್ ರಿಸರ್ವ್ ಬಡ್ಡಿದರ ಕಡಿತದ ಮೇಲೆ ಪ್ರಭಾವ ಬೀರಲಿದೆ. ಇನ್ನು GMT 0315 ರ ವೇಳೆಗೆ ಸ್ಪಾಟ್ ಚಿನ್ನದ ದರವು ಪ್ರತೀ ಔನ್ಸ್‌ಗೆ 0.2% ಇಳಿಕೆ ಕಂಡು $4,968.10 ಕ್ಕೆ ತಲುಪಿದೆ.


Click it and Unblock the Notifications