2026-27ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಯತ್ತ (Union Budget 2026-27) ಇಡೀ ದೇಶವೇ ಕಾಯುತ್ತಿದೆ. ಅದರ ನಡುವೆಯೂ ಭಾರತದಲ್ಲಿ ಚಿನ್ನದ ಬೆಲೆ (ಫೆ.1) (Gold Rate India) ಏರಿಕೆಯಾಗುತ್ತಾ? ಇಳಿಕೆಯಾಗುತ್ತಾ ಎಂದು ಭಾರೀ ಕುತೂಹಲದಲ್ಲಿದ್ದಾರೆ. ಹಾಗಿದ್ರೆ ಇಂದು ಭಾರತದಲ್ಲಿ ಚಿನ್ನದ ಬೆಲೆ ಎಷ್ಟಿದೆ ಅನ್ನೋದರ ಸಂಫುರ್ಣ ಮಾಹಿತಿ ಇಲ್ಲಿದೆ.

ಭಾರತದಲ್ಲಿ 24K ಚಿನ್ನದ ಬೆಲೆ ಎಷ್ಟಿದೆ?
ಭಾರತದಲ್ಲಿ ಇಂದು ಚಿನ್ನದ ಬೆಲೆ ಬಗ್ಗೆ ಭಾರೀ ನಿರೀಕ್ಷೆಗಳಿದ್ದವು. ಆದ್ರೆ ಇಂದು ಚಿನ್ನದ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಅಂದರೆ ನಿನ್ನೆಯ ಬೆಲೆಯಲ್ಲೆ ಇಂದು ಚಿನ್ನದ ಬೆಲೆ ಮುಂದುವರೆದಿದೆ. 24 ಕ್ಯಾರಟ್ ಚಿನ್ನದ 1 ಗ್ರಾಂ ಬೆಲೆ ₹16,058 ರೂ. ಆಗಿದ್ದು, ನಿನ್ನೆಯ ಬೆಲೆಯನ್ನೇ ಕಾಯ್ದುಕೊಂಡಿದೆ. 8 ಗ್ರಾಂ ಬೆಲೆ ಇಂದು ₹1,28,464 ರೂ. ಆಗಿದ್ದು, 10 ಗ್ರಾಂ ಚಿನ್ನದ ಬೆಲೆ ಇಂದು ₹1,60,580 ರೂ. ಆಗಿದೆ. 100 ಗ್ರಾಂ ಚಿನ್ನದ ಬೆಲೆ ಇಂದು ₹16,05,800 ರೂ. ಆಗಿದೆ. ನಿನ್ನೆಗೆ ಹೋಲಿಕೆ ಮಾಡಿದ್ರೆ, ಇಂದು ಚಿನ್ನದ ಬೆಲೆಯಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ.
ಭಾರತದಲ್ಲಿ 22K ಚಿನ್ನದ ಬೆಲೆ ಎಷ್ಟಿದೆ?
22K ಚಿನ್ನದ ಒಂದು ಗ್ರಾಂ ಬೆಲೆ 14,720 ರೂ. ಇದೆ. ನಿನ್ನೆಯೂ ಅಷ್ಟೇ ಬೆಲೆ ಇತ್ತು. ಇನ್ನು 8 ಗ್ರಾಂ ಚಿನ್ನದ ಬೆಲೆ ಇಂದು 1,17,760 ರೂ. ಆಗಿದೆ. ಅದೇ ರೀತಿ 10 ಗ್ರಾಂ ಚಿನ್ನದ ಬೆಲೆ ಇಂದು ₹1,47,20 ರೂ. ಆಗಿದೆ. 100 ಗ್ರಾಂ ಚಿನ್ನದ ಬೆಲೆ 14,72,000 ರೂ. ಆಗಿದೆ.
ಭಾರತದಲ್ಲಿ 18K ಚಿನ್ನದ ಬೆಲೆ ಎಷ್ಟಿದೆ?
ಭಾರತದಲ್ಲಿ 18K ಚಿನ್ನದ ಬೆಲೆ ಬಜೆಟ್ ದಿನವಾದರೂ, ಯಾವುದೇ ರೀತಿಯಲ್ಲಿ ವ್ಯತ್ಯಾಸಗಳಾಗಿಲ್ಲ. ಇಂದು 1 ಗ್ರಾಂ ಚಿನ್ನದ ಬೆಲೆ 12,044 ರೂ. ಇದೆ. 8 ಗ್ರಾಂ ಚಿನ್ನದ ಬೆಲೆ ಇಂದು ₹96,352 ರೂ. ಆಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 1,20,440 ರೂ. ಆಗಿದ್ದು, 100 ಗ್ರಾಂ ಚಿನ್ನದ ಬೆಲೆ 12,04,400 ರೂ. ಆಗಿದೆ.
ಭಾರತದ ವಿವಿಧ ನಗರಗಳ ಚಿನ್ನದ ಬೆಲೆ ಎಷ್ಷಿದೆ?
ಚೆನ್ನೈ: 24K ರೂ. 16,255, 22K ರೂ. 14,900, 18K ರೂ. 12,800
ಮುಂಬೈ: 24K ರೂ. 16,058, 22K ರೂ. 14,720, 18K ರೂ. 12,044
ದೆಹಲಿ: 24K ರೂ. 16,073, 22K ರೂ. 14,735, 18K ರೂ. 12,059
ಕೋಲ್ಕತ್ತಾ: 24K ರೂ. 16,058, 22K ರೂ. 14,720, 18K ರೂ. 12,044
ಬೆಂಗಳೂರು: 24K ರೂ. 16,058, 22K ರೂ. 14,720, 18K ರೂ. 12,044
ಹೈದರಾಬಾದ್: 24K ರೂ. 16,058, 22K ರೂ. 14,720, 18K ರೂ. 12,044
ಕೇರಳ: 24K ರೂ. 16,058, 22K ರೂ. 14,720, 18K ರೂ. 12,044
ಪುಣೆ: 24K ರೂ. 16,058, 22K ರೂ. 14,720, 18K ರೂ. 12,044
ವಡೋದರಾ: 24K ರೂ. 16,058, 22K ರೂ. 14,720, 18K ರೂ. 12,044
ಅಹಮದಾಬಾದ್: 24K ರೂ. 16,058, 22K ರೂ. 14,720, 18K ರೂ. 12,044
ಭಾರತದಲ್ಲಿ ಬೆಳ್ಳಿ ದರ ಎಷ್ಟಿದೆ?
ಬಂಗಾರದ ಬೆಲೆಯಂತೂ ಇಂದು ನಿಂತ ನೀರಾಗಿ ಬಿಟ್ಟಿದೆ. ಅತ್ತ ಬೆಳ್ಳಿ ಬೆಲೆಯಲ್ಲೂ ಇಂದು ಯಾವುದೇ ವ್ಯತ್ಯಾಸಗಳಾಗಿಲ್ಲ. ಇಂದು 1 ಗ್ರಾಂ ಬೆಳ್ಳಿ ಬೆಲೆ ₹350 ರೂ. ಆಗಿದ್ದು, ನಿನ್ನೆಯೂ ಅಷ್ಟೇ ಇತ್ತು. ಅದೇ ರೀತಿ 8 ಗ್ರಾಂ ಬೆಳ್ಳಿ ದರ ₹2,800 ರೂ., 10 ಗ್ರಾಂ ಬೆಳ್ಳಿ ಬೆಲೆ ₹3,500 ರೂ., 100 ಗ್ರಾಂ ಬೆಳ್ಳಿ ದರ ₹35,000 ರೂ., 1000 ಗ್ರಾಂ ಬೆಳ್ಳಿ ದರ ₹3,50,000 ರೂ. ಆಗಿದೆ.


Click it and Unblock the Notifications