Gold Rate Today: ಶುಕ್ರವಾರ ಚಿನ್ನ ಪ್ರಿಯರಿಗೆ ಒಲಿದ ಲಕ್ಷ್ಮಿ! 7,000 ರೂ. ಇಳಿಕೆ

ಇಸ್ರೇಲ್‌, ಅಮೆರಿಕಾ ಮತ್ತು ಇರಾನ್‌ (Israel, America, Iran) ನಡುವಿನ ವೈಮನಸ್ಸು ಇನ್ನೂ ಕಮ್ಮಿಯಾಗಿಲ್ಲ. ಅತ್ತ ಜಾಗತಿಕ ಮಾರುಕಟ್ಟೆ ಮೇಲೂ ಭಾರೀ ಪರಿಣಾಮ ಬಿದ್ದಿದೆ. ಇನ್ನು ಕಚ್ಚಾ ತೈಲ ಬೆಲೆ, ಡಾಲರ್‌-ರೂಪಾಯಿ ಮೌಲ್ಯದ ಮೇಲೂ ಪ್ರಭಾವ ಬೀರಿದೆ. ಅತ್ತ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಆರಂಭವಾಗುತ್ತಿದ್ದಂತೆ, ಇತ್ತ ಅಮೂಲ್ಯ ಲೋಹಗಳ ದರದಲ್ಲಿ ಭಾರೀ ಏರಿಳಿತಗಳಾಗುತ್ತಿದೆ. ಹಾಗಿದ್ರೆ ಇಂದು ಭಾರತದಲ್ಲಿ ಚಿನ್ನದ ಬೆಲೆ ಎಷ್ಟಿದೆ ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಶುಕ್ರವಾರ ಚಿನ್ನ ಪ್ರಿಯರಿಗೆ ಒಲಿದ ಲಕ್ಷ್ಮಿ! 7,000 ರೂ. ಇಳಿಕೆ

ಭಾರತದಲ್ಲಿ 24K ಚಿನ್ನದ ಬೆಲೆ:
24K ಚಿನ್ನದ 1 ಗ್ರಾಂ ಬೆಲೆಯಲ್ಲಿ ಇಂದು ಭಾರೀ ಇಳಿಕೆಯಾಗಿದೆ. ಇಂದು ಪ್ರತೀ ಗ್ರಾಂ ಬೆಲೆ ₹16,211 ರೂ. ಆಗಿದ್ದು, ನಿನ್ನೆ 16,288 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ದಿಢೀರ್‌ ₹77 ರೂ. ಕುಸಿತ ಕಂಡಿದೆ. 8 ಗ್ರಾಂ ಚಿನ್ನದ ಬೆಲೆ ಇಂದು ₹1,29,688 ರೂ. ಆಗಿದ್ದು, ನಿನ್ನೆ ₹1,30,304 ರೂ. ಇತ್ತು. ನಿನ್ನೆಗಿಂತ ಇಂದು ಒಂದೇ ದಿನ ₹616 ರೂ. ಇಳಿಕೆ ಕಂಡಿದೆ. ಇನ್ನು 10 ಗ್ರಾಂ ಚಿನ್ನದ ಬೆಲೆ ಇಂದು ₹1,62,110 ರೂ. ಆಗಿದ್ದು, ನಿನ್ನೆ ₹1,62,880 ರೂ. ಇತ್ತು. ನಿನ್ನೆಗಿಂತ ಇಂದು ₹770 ರೂ. ಬದಲಾವಣೆಯಾಗಿದೆ. 100 ಗ್ರಾಂ ಚಿನ್ನದ ದರ 16,21,100 ರೂ. ಆಗಿದ್ದು, ನಿನ್ನೆ 16,28,800 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ಒಂದೇ ದಿನ ₹7,700 ರೂ. ಕಮ್ಮಿಯಾಗಿದೆ.

ಭಾರತದಲ್ಲಿ 22K ಚಿನ್ನದ ಬೆಲೆ:
22K ಚಿನ್ನದ 1 ಗ್ರಾಂ ಬೆಲೆ ಇಂದು ₹14,860 ರೂ. ಆಗಿದ್ದು, ನಿನ್ನೆ 14,930 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ದಿಢೀರ್‌ 70 ರೂ. ಇಳಿಕೆ ಕಂಡಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 1,18,880 ರೂ. ಆಗಿದ್ದು, ನಿನ್ನೆ 1,19,440 ರೂ. ಇತ್ತು. ನಿನ್ನೆಗಿಂತ ಇಂದು ಕೇವಲ ₹560 ರೂ. ಕಡಿಮೆಯಾಗಿದೆ. 10 ಗ್ರಾಂ ಚಿನ್ನದ ದರ ಇಂದು ₹1,48,600 ರೂ. ಆಗಿದ್ದು, ನಿನ್ನೆ ₹1,49,300 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ₹700 ರೂ. ವ್ಯತ್ಯಾಸ ಕಂಡುಬಂದಿದೆ. 100 ಗ್ರಾಂ ಚಿನ್ನದ ದರ ಇಂದು ₹14,86,000 ರೂ. ಆಗಿದ್ದು, ನಿನ್ನೆ ₹14,86,000 ರೂ. ಇತ್ತು. ನಿನ್ನೆಗಿಂತ ಇಂದು ಬರೋಬ್ಬರಿ 7,000 ರೂ. ಇಳಿಕೆ ಕಂಡಿದೆ.

ಭಾರತದಲ್ಲಿ 18K ಚಿನ್ನದ ಬೆಲೆ:
18K ಚಿನ್ನದ 1 ಗ್ರಾಂ ಚಿನ್ನದ ಬೆಲೆ ₹12,158 ರೂ. ಆಗಿದ್ದು, ನಿನ್ನೆ 12,216 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 58 ರೂ. ಕುಸಿತ ಕಂಡಿದೆ. 8 ಗ್ರಾಂ ಚಿನ್ನದ ದರ ಇಂದು ₹97,264 ರೂ. ಆಗಿದ್ದು, ನಿನ್ನೆ 97,728 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 464 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ದರ 1,21,580 ರೂ. ಆಗಿದ್ದು, ನಿನ್ನೆ 1,22,160 ರೂ. ಇತ್ತು. ನಿನ್ನೆಗಿಂತ ಇಂದು 580 ರೂ. ಇಳಿಕೆಯಾಗಿದೆ. ಅದೇ ರೀತಿ 100 ಗ್ರಾಂ ಚಿನ್ನದ ಬೆಲೆ ಇಂದು 12,15,800 ರೂ. ಆಗಿದ್ದು, ನಿನ್ನೆ 12,21,600 ರೂ. ಇತ್ತು.

ಭಾರತದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ:
ಚೆನ್ನೈ: 24K ರೂ. 16,320, 22K ರೂ. 14,960, 18K ರೂ. 13,030
ಮುಂಬೈ: 24K ರೂ. 16,211, 22K ರೂ. 14,860, 18K ರೂ. 12,158
ದೆಹಲಿ: 24K ರೂ. 16,226, 22K ರೂ. 14,875, 18K ರೂ. 12,173
ಕೋಲ್ಕತ್ತಾ: 24K ರೂ. 16,211, 22K ರೂ. 14,860, 18K ರೂ. 12,158
ಬೆಂಗಳೂರು: 24K ರೂ. 16,211, 22K ರೂ. 14,860, 18K ರೂ. 12,158
ಹೈದರಾಬಾದ್: 24K ರೂ. 16,211, 22K ರೂ. 14,860, 18K ರೂ. 12,158
ಕೇರಳ: 24K ರೂ. 16,211, 22K ರೂ. 14,860, 18K ರೂ. 12,158
ಪುಣೆ: 24K ರೂ. 16,211, 22K ರೂ. 14,860, 18K ರೂ. 12,158
ವಡೋದರಾ: 24K ರೂ. 16,216, 22K ರೂ. 14,865, 18K ರೂ. 12,163
ಅಹಮದಾಬಾದ್: 24K ರೂ. 16,216, 22K ರೂ. 14,865, 18K ರೂ. 12,163

ಭಾರತದಲ್ಲಿ ಬೆಳ್ಳಿ ದರ:
ಇನ್ನು ಬೆಳ್ಳಿದರ ಕಳೆದ ಕೆಲವು ದಿನಗಳಿಂದ ನಿಂತಲ್ಲೇ ನಿಂತಿದೆ. ಭಾರತದಲ್ಲಿ 1 ಗ್ರಾಂ ಬೆಳ್ಳಿ ದರ ₹285 ರೂ. ಆಗಿದ್ದು, ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಸ್ಪಾಟ್‌ ಗೋಲ್ಡ್‌ ವಿವರ:
ಮಾರ್ಚ್‌ 06, 2026 ರ ರಾಯಿಟರ್ಸ್‌ ವರದಿ ಪ್ರಕಾರ, ಮಧ್ಯಪ್ರಾಚ್ಯದಲ್ಲಿ ಹೆಚ್ಚಾಗುತ್ತಿರುವ ಸಂಘರ್ಷದ ಹಿನ್ನೆಲೆ ಹೂಡಿಕೆದಾರರು ಸುರಕ್ಷಿತ ಆಸ್ತಿಯತ್ತ ಗಮನ ಹರಿಸುತ್ತಿದ್ದಾರೆ. ಹಿಂದಿನ ವಹಿವಾಟಿನಲ್ಲಿ ಶೇ. 1 ಕ್ಕಿಂತ ಹೆಚ್ಚಿನ ಕುಸಿತ ಕಂಡಿದ್ದ ಚಿನ್ನದ ದರ, ಇದೀಗ ಮತ್ತೆ ಏರಿಕೆ ಕಂಡಿದೆ.

GMT 0506 ಸುಮಾರಿಗೆ ಸ್ಪಾಟ್‌ ಚಿನ್ನದ ದರವು 1% ಏರಿಕೆ ಕಂಡು, ಪ್ರತೀ ಔನ್ಸ್‌ಗೆ $5,128.39 ಕ್ಕೆ ತಲುಪಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+