ಜುಲೈ 8 (ನಿನ್ನೆ) ಭಾರಿ ಏರಿಕೆಯನ್ನು ನೋಡಿ ತಲೆ ತಿರುಗಿಸಿದ್ದ ಬಂಗಾರ ಇಂದು, ಇಳಿಕೆಯ ಹಾದಿ ಹಿಡಿದಿದೆ. ಇದು ಭಾರತದ ಚಿನ್ನಪ್ರಿಯರು ಮತ್ತು ಹೂಡಿಕೆದಾರರಿಗೆ ಸಂತಸದ ಧಾರೆ ಎರೆದಿದೆ. 24 ಕ್ಯಾರೆಟ್ ಮತ್ತು 22 ಕ್ಯಾರೆಟ್ ಚಿನ್ನದ ದರಗಳಲ್ಲಿ ಶೇ. 0.6ರಷ್ಟು ಇಳಿಕೆಯಾಗಿದ್ದು, ಖರೀದಿ ಹಾಗೂ ಹೂಡಿಕೆಗೆ ಇದೇ ಬೆಸ್ಟ್ ಸಮಯ ಎನ್ನಲಾಗ್ತಿದೆ.

ಜೂನ್ ತಿಂಗಳಿನಲ್ಲಿ ಹತ್ತು ಲಕ್ಷ ಗಡಿ ದಾಟಿದ್ದ ಚಿನ್ನದ ಬೆಲೆ, ಇನ್ನೂ ಹೆಚ್ಚಾಗುತ್ತದೇನೋ ಎಂಬ ಭಯ ಮೂಡಿಸಿತ್ತು. ಆದರೆ ಜುಲೈ ತಿಂಗಳ ಬೆಲೆ ಇಳಿಕೆಗಳು ಕೊಂಚ ಸಮಾಧಾನ ನೀಡುತ್ತಿವೆ. ಚಿನ್ನದ ಬೆಲೆ ಇಳಿಕೆಯಾಗುತ್ತದೆ ಎಂಬ ಭರವಸೆಯನ್ನೂ ನೀಡುತ್ತಿದೆ. ಹಾಗಾದ್ರೆ ಭಾರತದ ವಿವಿಧ ನಗರಗಳು ಸೇರಿದಂತೆ ಚಿನ್ನದ ಬೆಲೆ ಎಷ್ಟು ಇಳಿಕೆಯಾಗಿದೆ ಎಂದು ಇಲ್ಲಿ ತಿಳಿಯಿರಿ.
ಭಾರತದಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ?
24 ಕ್ಯಾರೆಟ್ ಚಿನ್ನದ ಬೆಲೆ:
ಇಂದು 24 ಕ್ಯಾರೆಟ್ ಚಿನ್ನದ ದರಗಳಲ್ಲಿ ಸ್ಪಷ್ಟವಾದ ಇಳಿಕೆ ದಾಖಲಾಗಿದೆ. ಇಂದು 1 ಗ್ರಾಂ ಚಿನ್ನದ ಬೆಲೆ 9,818 ರೂ. 10 ಗ್ರಾಂಗೆ 98,180 ರೂ. ಹಾಗೆಯೇ 100 ಗ್ರಾಂಗೆ 9,81,800 ರೂ. ಆಗಿದೆ. ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ 9,884 ರೂ. ಆಗಿದ್ದು, ಇಂದಿಗೆ 66 ರೂ. ಕಡಿಮೆಯಾಗಿದೆ. ಅಂದರೆ 100 ಗ್ರಾಂ ಚಿನ್ನದಲ್ಲಿ ಇಂದು 6,600 ರೂ. ಕಡಿಮೆಯಾಗಿದೆ.
22 ಕ್ಯಾರೆಟ್ ಚಿನ್ನದ ದರ:
ಇನ್ನು ಆಭರಣಕ್ಕಾಗಿ ಹೆಚ್ಚಾಗಿ ಬಳಸುವಂತಹ 22 ಕ್ಯಾರೆಟ್ ಚಿನ್ನವು ಸಹ ಇಳಿಕೆಯ ಹಾದಿ ಹಿಡಿದಿದೆ. ಇಂದು 22 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನಕ್ಕೆ 9,000 ರೂ. ಆದರೆ, 10 ಗ್ರಾಂಗೆ 90,000 ರೂ. 100 ಗ್ರಾಂ 9 ಲಕ್ಷ ರೂ. ಆಗಿದೆ. ನಿನ್ನೆ 22 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನ, 9,060 ರಷ್ಟಾಗಿದ್ದು, ಇಂದಿಗೆ 60 ರೂ. ಇಳಿಕೆ ನೋಡಿದೆ. ಅಂದರೆ 100 ಗ್ರಾಂ ಚಿನ್ನದಲ್ಲಿ ಲೆಕ್ಕ ಹಾಕಿ ನೋಡಿದರೆ ನಿನ್ನೆಗಿಂತ ಇಂದು ₹6,000 ಇಳಿಕೆಯಾಗಿದೆ.
18K ಚಿನ್ನದ ಬೆಲೆಯಲ್ಲೂ ಇಳಿಕೆ:
24K, 22K ಚಿನ್ನದ ಬೆಲೆಯಂತೆಯೇ 18K ಚಿನ್ನದ ಬೆಲೆಯಲ್ಲೂ ಇಳಿಕೆಯಾಗಿದೆ. ಇಂದು ಒಂದು ಗ್ರಾಂ ಚಿನ್ನದ ಬೆಲೆ ₹7,364 , 10 ಗ್ರಾಂ ಚಿನ್ನದ ಬೆಲೆ ₹73,640 , 100 ಗ್ರಾಂ ಚಿನ್ನದ ಬೆಲೆ ₹7,36,400 ಆಗಿದೆ. ಒಂದು ಗ್ರಾಂ ಚಿನ್ನ ನಿನ್ನೆ ದಿನ ₹7,413 ಆಗಿದ್ದು, ಇಂದು 49 ರೂ. ಇಳಿಕೆಯಾಗಿದೆ.. ಅಂದರೆ ನೂರು ಗ್ರಾಂ ಚಿನ್ನದಲ್ಲಿ 4,900 ರೂ. ಇಳಿಕೆಯಾಗಿದೆ.
ಭಾರತದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ (1 ಗ್ರಾಂ)
ಚೆನ್ನೈ: ಚೆನ್ನೈನಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,818 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,000 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,425 ಆಗಿದೆ.
ಮುಂಬೈ: ಮುಂಬೈನಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,818 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,000 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,364 ಆಗಿದೆ.
ದೆಹಲಿ: ದೆಹಲಿಯಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,833 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,015 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,376 ಆಗಿದೆ.
ಕೋಲ್ಕತಾ: ಕೋಲ್ಕತ್ತಾದಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,818 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,000 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,364 ಆಗಿದೆ.
ಬೆಂಗಳೂರು: ಬೆಂಗಳೂರಿನಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,818 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,000 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,364 ಆಗಿದೆ.
ಹೈದರಾಬಾದ್: ಹೈದರಾಬಾದ್‌ನಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,818 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,000 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,364 ಆಗಿದೆ.
ಕೇರಳ: ಕೇರಳದಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,818 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,000 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,364 ಆಗಿದೆ.
ಪುಣೆ: ಪುಣೆಯಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,818 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,000 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,364 ಆಗಿದೆ.
ಬರೋಡಾ: ಬರೋಡಾದಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,823 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,005 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,368 ಆಗಿದೆ.
ಅಹಮದಾಬಾದ್: ಅಹಮದಾಬಾದ್‌ನಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,823 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,005 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,368 ಆಗಿದೆ.
ಭಾರತದಲ್ಲಿ ಬೆಳ್ಳೆ ಬೆಲೆ:
ಚಿನ್ನದಲ್ಲಿ ಏರಿಕೆಯಾದರೂ ಬೆಳ್ಳಿ ಕೊಳ್ಳುವವರಿಗೆ ಮಾತ್ರ ಯಾವುದೇ ನಿರಾಸೆಯಿಲ್ಲ. ಏಕೆಂದರೆ ಇಂದು ಬೆಳ್ಳಿ ಬೆಲೆಯಲ್ಲಿ ಯಾವುದೇ ರೀತಿಯ ಏರಿಕೆಯಾಗಿಲ್ಲ. ಒಂದು ಗ್ರಾಂ ಬೆಳ್ಳಿಗೆ₹110, 10 ಗ್ರಾಂ ಬೆಳ್ಳಿಗೆ ₹1,100 , 100 ಗ್ರಾಂ ಬೆಳ್ಳಿಗೆ ₹11,000 , ಹಾಗೆಯೇ ಒಂದು ಕೆ.ಜಿ ಬೆಳ್ಳಿಗೆ ₹1,10,000 ಬೆಲೆ ಇದೆ.
ಸ್ಪಾಟ್ ಗೋಲ್ಡ್ ವಿವರ:
ಜುಲೈ 9ರಂದು ಸ್ಪಾಟ್ ಚಿನ್ನದ ದರ 0.2% ರಷ್ಟು ಇಳಿದು ಪ್ರತಿ ಔನ್ಸ್‌ಗೆ $3,295.03 ತಲುಪಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಇಳಿಕೆಯ ಹಿಂದೆ ಪ್ರಮುಖ ಕಾರಣವೆಂದರೆ ಅಮೆರಿಕನ್ ಡಾಲರ್ ಶಕ್ತಿಶಾಲಿಯಾಗಿ ಮೌಲ್ಯವರ್ಧನೆಗೊಳ್ಳುತ್ತಿರುವುದು ಮತ್ತು ಅಮೆರಿಕದ ಶ್ರೇಯೋಭದ್ರತಾ ಬಾಂಡ್‌ಗಳ ಮೇಲಿನ ಆದಾಯ (Treasury Yields) ಹೆಚ್ಚುತ್ತಿರುವುದು.
ಒಟ್ಟಿನಲ್ಲಿ ನಿನ್ನೆ ಇಳಿಕೆಯ ಹಾದಿ ಹಿಡಿದಿದ್ದ ಚಿನ್ನ ಇಂದು, ಏರಿಕೆಯತ್ತ ಮುಖ ಮಾಡಿದೆ. ಈ ಬೆಳವಣಿಗೆಯಿಂದ ಹೂಡಿಕೆದಾರರು ಮತ್ತು ಖರೀದಿದಾರರಿಗೆ ಗೊಂದಲ ಉಂಟಾಗಿದೆ.


Click it and Unblock the Notifications