ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಇಂದು (ಜುಲೈ 9) ಚಿನ್ನದ ಬೆಲೆಯಲ್ಲಿ ಸ್ಪಷ್ಟ ಏರಿಕೆ ಕಂಡುಬಂದಿದೆ. ಜುಲೈ ಮೊದಲ ವಾರದಲ್ಲಿ ಗಣನೀಯ ಏರಿಕೆ ನೋಡಿದ್ದ ಬಂಗಾರದ ಬೆಲೆ, ನಿನ್ನೆ ಒಂದು ದಿನ ಇಳಿಕೆ ನೋಡಿತ್ತು. ಮತ್ತಷ್ಟು ಬೆಲೆ ಇಳಿಯುವ ಸಾಧ್ಯತೆ ಇದೆ ಎಂದು ಕಾದಿದ್ದವರಿಗೆ ಈಗ ದೊಡ್ಡ ಶಾಕ್ ಎದುರಾಗಿದೆ. ಏಕೆಂದರೆ ಇಂದಿನ ಚಿನ್ನದ ಬೆಲೆಯು ನಿನ್ನೆಗಿಂತಲೂ ದುಬಾರಿಯಾಗಿದೆ.

24 ಕ್ಯಾರೆಟ್‌ರಿಂದ ಹಿಡಿದು 18 ಕ್ಯಾರೆಟ್ ವರೆಗೆ ಎಲ್ಲಾ ಶ್ರೇಣಿಯ ಚಿನ್ನದ ದರ ಇತ್ತೀಚೆಗೆ ಏರಿಕೆಯ ಹಾದಿಯಲ್ಲಿದೆ. ಹೂಡಿಕೆದಾರರು, ವಿವಾಹ ಶಾಪಿಂಗ್ ಅಥವಾ ಉಡುಗೊರೆಗಾಗಿ ಚಿನ್ನ ಖರೀದಿಸಲು ಯೋಚಿಸುತ್ತಿರುವವರು, ಇಂದು ಮಾರುಕಟ್ಟೆ ಸ್ಥಿತಿಗೆ ವಿಶೇಷ ಗಮನ ಹರಿಸಬೇಕು. ದಿನದಿಂದ ದಿನಕ್ಕೆ ಚಿನ್ನದ ದರ ಏರುತ್ತಿರುವುದು ಹೂಡಿಕೆ ದೃಷ್ಠಿಯಿಂದ ಗಂಭೀರ ಎಚ್ಚರಿಕೆಗೆ ಕಾರಣವಾಗಿದೆ.
ಭಾರತದಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ?
24 ಕ್ಯಾರೆಟ್ ಚಿನ್ನದ ಬೆಲೆ:
ಇಂದು 24 ಕ್ಯಾರೆಟ್ ಚಿನ್ನದ ದರಗಳಲ್ಲಿ ಸ್ಪಷ್ಟವಾದ ಏರಿಕೆ ದಾಖಲಾಗಿದೆ. ಇಂದು 1 ಗ್ರಾಂ ಚಿನ್ನದ ಬೆಲೆ 9,884 ರೂ. 10 ಗ್ರಾಂಗೆ 98,840 ರೂ. ಹಾಗೆಯೇ 100 ಗ್ರಾಂಗೆ 9,88,400 ರೂ. ಆಗಿದೆ. ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ 9,829 ರೂ. ಆಗಿದ್ದು, ಇಂದಿಗೆ 55 ರೂ. ಹೆಚ್ಚಾಗಿದೆ. ಅಂದರೆ 100 ಗ್ರಾಂ ಚಿನ್ನದಲ್ಲಿ ಇಂದು 5,500 ರೂ. ಹೆಚ್ಚಾಗಿದೆ.
22 ಕ್ಯಾರೆಟ್ ಚಿನ್ನದ ದರ:
ಇನ್ನು ಆಭರಣಕ್ಕಾಗಿ ಹೆಚ್ಚಾಗಿ ಬಳಸುವಂತಹ 22 ಕ್ಯಾರೆಟ್ ಚಿನ್ನವು ಸಹ ಏರಿಕೆಯ ಹಾದಿ ಹಿಡಿದಿದೆ. ಇಂದು 22 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನಕ್ಕೆ 9,060 ರೂ. ಆದರೆ, 10 ಗ್ರಾಂಗೆ 90,600 ರೂ. 100 ಗ್ರಾಂ 9,06,000 ರೂ. ಆಗಿದೆ. ನಿನ್ನೆ 22 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನ, 9,010 ರಷ್ಟಾಗಿದ್ದು, ಇಂದಿಗೆ 50 ರೂ. ಹೆಚ್ಚಳ ನೋಡಿದೆ. ಅಂದರೆ 100 ಗ್ರಾಂ ಚಿನ್ನದಲ್ಲಿ ಲೆಕ್ಕ ಹಾಕಿ ನೋಡಿದರೆ ನಿನ್ನೆಗಿಂತ ಇಂದು ₹5,000 ಹೆಚ್ಚಳವಾಗಿದೆ.
18K ಚಿನ್ನದ ಬೆಲೆಯಲ್ಲೂ ಏರಿಕೆ:
24K, 22K ಚಿನ್ನದ ಬೆಲೆಯಂತೆಯೇ 18K ಚಿನ್ನದ ಬೆಲೆಯಲ್ಲೂ ಏರಿಕೆಯಾಗಿದೆ. ಇಂದು ಒಂದು ಗ್ರಾಂ ಚಿನ್ನದ ಬೆಲೆ ₹7,413, 10 ಗ್ರಾಂ ಚಿನ್ನದ ಬೆಲೆ ₹74,130, 100 ಗ್ರಾಂ ಚಿನ್ನದ ಬೆಲೆ ₹74,130 ಆಗಿದೆ. ಒಂದು ಗ್ರಾಂ ಚಿನ್ನ ನಿನ್ನೆ ದಿನ ₹7,372 ಆಗಿದ್ದು, ಇಂದು ₹41 ಹೆಚ್ಚಾಗಿದೆ. ಅಂದರೆ ನೂರು ಗ್ರಾಂ ಚಿನ್ನದಲ್ಲಿ ₹4,100 ರಷ್ಟು ಏರಿಕೆಯಾಗಿದೆ.
ಭಾರತದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ (1 ಗ್ರಾಂ)
ಚೆನ್ನೈ: ಚೆನ್ನೈನಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,884 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,060 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,475 ಆಗಿದೆ.
ಮುಂಬೈ: ಮುಂಬೈನಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,884 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,060 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,413 ಆಗಿದೆ.
ದೆಹಲಿ: ದೆಹಲಿಯಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,899 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,075 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,425 ಆಗಿದೆ.
ಕೋಲ್ಕತಾ: ಕೋಲ್ಕತ್ತಾದಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,884 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,060 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,413 ಆಗಿದೆ.
ಬೆಂಗಳೂರು: ಬೆಂಗಳೂರಿನಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,884 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,060 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,413 ಆಗಿದೆ.
ಹೈದರಾಬಾದ್: ಹೈದರಾಬಾದ್‌ನಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,884 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,060 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,413 ಆಗಿದೆ.
ಕೇರಳ: ಕೇರಳದಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,884 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,060 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,413 ಆಗಿದೆ.
ಪುಣೆ: ಪುಣೆಯಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,884 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,060 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,413 ಆಗಿದೆ.
ಬರೋಡಾ: ಬರೋಡಾದಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,889 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,065 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,417 ಆಗಿದೆ.
ಅಹಮದಾಬಾದ್: ಅಹಮದಾಬಾದ್‌ನಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹9,889 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,065 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,417 ಆಗಿದೆ.
ಭಾರತದಲ್ಲಿ ಬೆಳ್ಳೆ ಬೆಲೆ:
ಚಿನ್ನದಲ್ಲಿ ಏರಿಕೆಯಾದರೂ ಬೆಳ್ಳಿ ಕೊಳ್ಳುವವರಿಗೆ ಮಾತ್ರ ಯಾವುದೇ ನಿರಾಸೆಯಿಲ್ಲ. ಏಕೆಂದರೆ ಇಂದು ಬೆಳ್ಳಿ ಬೆಲೆಯಲ್ಲಿ ಯಾವುದೇ ರೀತಿಯ ಏರಿಕೆಯಾಗಿಲ್ಲ. ಒಂದು ಗ್ರಾಂ ಬೆಳ್ಳಿಗೆ₹110, 10 ಗ್ರಾಂ ಬೆಳ್ಳಿಗೆ ₹1,100 , 100 ಗ್ರಾಂ ಬೆಳ್ಳಿಗೆ ₹11,000 , ಹಾಗೆಯೇ ಒಂದು ಕೆ.ಜಿ ಬೆಳ್ಳಿಗೆ ₹1,10,000 ಬೆಲೆ ಇದೆ.
ಸ್ಪಾಟ್ ಗೋಲ್ಡ್ ವಿವರ:
ಜುಲೈ 9ರಂದು ಸ್ಪಾಟ್ ಚಿನ್ನದ ದರ ಶೇ. 0.7 ರಷ್ಟು ಇಳಿದು ಪ್ರತಿ ಔಂಸ್‌ಗೆ $3,311.09ಕ್ಕೆ ತಲುಪಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಇದೇ ಸಂದರ್ಭದಲ್ಲಿ, ಅಮೆರಿಕದ ಚಿನ್ನದ ಭವಿಷ್ಯ ಒಪ್ಪಂದಗಳ ದರವೂ ಕಡಿಮೆಯಾಗಿದ್ದು, ಪ್ರತಿ ಔಂಸ್‌ಗೆ $3,320.30ಕ್ಕೆ ಇಳಿದಿದೆ ಎಂದು ವರದಿಯಾಗಿದೆ.
ಒಟ್ಟಿನಲ್ಲಿ ನಿನ್ನೆ ಇಳಿಕೆಯ ಹಾದಿ ಹಿಡಿದಿದ್ದ ಚಿನ್ನ ಇಂದು, ಏರಿಕೆಯತ್ತ ಮುಖ ಮಾಡಿದೆ. ಈ ಬೆಳವಣಿಗೆಯಿಂದ ಹೂಡಿಕೆದಾರರು ಮತ್ತು ಖರೀದಿದಾರರಿಗೆ ಗೊಂದಲ ಉಂಟಾಗಿದೆ.


Click it and Unblock the Notifications