ಜೂನ್ 16, ಭಾರತದಲ್ಲಿ ಚಿನ್ನದ ಬೆಲೆ: ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಇಂದು ಚಿನ್ನದ ಬೆಲೆ ಇಳಿಕೆಯಾಗಿದೆ. ಹೂಡಿಕೆದಾರರು ಹಾಗೂ ಚಿನ್ನಪ್ರಿಯರಿಗೆ ಇದು ಖುಷಿಸುದ್ದಿಯಾಗಿದೆ. ಕಳೆದ ಎರಡ್ಮೂರು ದಿನಗಳಲ್ಲಿ ಭಾರಿ ಏರಿಕೆಯನ್ನು ನೋಡಿ, 10 ಲಕ್ಷ ರೂ ದಾಟಿದ್ದ ಚಿನ್ನ, ಭಾರಿ ಶಾಕ್ ನೀಡಿತ್ತು. ಆದರೆ ಇಂದು ಕೊಂಚವಾದರೂ ಕಡಿಮೆಯಾಗಿರುವ ಕಾರಣದಿಂದ, ಚಿನ್ನಪ್ರಿಯರು ನಿಟ್ಟುಸಿರು ಬಿಡಬಹುದು. ಚಿನ್ನವು ಹೂಡಿಕೆಯ ಸಾಧನ, ಜಾಗತಿಕ ಮಾರುಕಟ್ಟೆಯಲ್ಲಿ ಅತಿ ಮೌಲ್ಯಯುತ ಸಾಧನವಾಗಿರುವುದರಿಂದ ಒಂದು ರೂ. ಬೆಲೆ ಇಳಿಕೆ, ಏರಿಕೆಯಾದರೂ ದೊಡ್ಡ ಸುದ್ದಿಯೇ ಆಗಿರುತ್ತದೆ.

ಇನ್ನು ಚೆನ್ನೈ, ಮುಂಬೈ, ದಿಲ್ಲಿ, ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಚಿನ್ನದ ದರ ಈ ಹೊಸ ಮಟ್ಟದಲ್ಲಿ ವ್ಯವಹಾರವಾಗುತ್ತಿದೆ. ಬದಲಾವಣೆಯ ಪ್ರಮುಖ ಕಾರಣವೆಂದರೆ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಕಡಿಮೆಯಾಗಿ, ಡಾಲರ್ ಬಲಿಷ್ಠಗೊಂಡ ಪರಿಣಾಮವಾಗಿದೆ. ಹೀಗಾಗಿ ಚಿನ್ನದ ದರ ಇಳಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಬದಲಾವಣೆಗಳಿಗೆ ನಿರೀಕ್ಷೆ ಇದೆ. ಪ್ರಮುಖ ನಗರಗಳಲ್ಲಿ ದರ ಇಳಿಕೆಯಿಂದ ಖರೀದಿ ಚಟುವಟಿಕೆ ಮೃದುವಾಗಿದ್ದು, ಮುಂದಿನ ದಿನಗಳಲ್ಲಿ ಮಾರುಕಟ್ಟೆಯ ಪ್ರತಿಕ್ರಿಯೆ ನಿರೀಕ್ಷೆಯಾಗಿದೆ. ಹಾಗಾದರೆ ಇಂದು ಚಿನ್ನದ ಬೆಲೆ ಎಷ್ಟು ಗ್ರಾಂಗೆ ಎಷ್ಟೆಷ್ಟು ಎಂದು ಈ ಲೇಖನದಲ್ಲಿ ತಿಳಿಯಿರಿ.
ಭಾರತದಲ್ಲಿ 24 ಕ್ಯಾರಟ್ ಚಿನ್ನದ ಬೆಲೆ:
1 ಗ್ರಾಂ ಚಿನ್ನ: ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಇಂದು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು, ₹10,151ಆಗಿದೆ. ನಿನ್ನೆ ಇದರ ಬೆಲೆ ₹10,168ಆಗಿದ್ದು ನಿನ್ನೆಗಿಂತ ಇಂದು, ₹17 ಇಳಿಕೆಯಾಗಿದೆ. -
10 ಗ್ರಾಂ ಚಿನ್ನ: 24 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆಯು, ₹1,01,510 ಆಗಿದೆ. ನಿನ್ನೆ ಇದರ ಬೆಲೆ ₹1,01,680 ಆಗಿದ್ದು ನಿನ್ನೆಗಿಂತ ಇಂದು, ₹170 ಇಳಿಕೆಯಾಗಿದೆ.
100 ಗ್ರಾಂ ಚಿನ್ನ: 24 ಕ್ಯಾರಟ್‌ನ 100 ಗ್ರಾಂ ಚಿನ್ನದ ಬೆಲೆಯು, ₹10,15,100 ಆಗಿದೆ. ನಿನ್ನೆ ಇದರ ಬೆಲೆ ₹10,16,800 ಆಗಿದ್ದು ನಿನ್ನೆಗಿಂತ ಇಂದು, ₹1,700 ಇಳಿಕೆಯಾಗಿದೆ.
ಭಾರತದಲ್ಲಿ 22 ಕ್ಯಾರಟ್ ಚಿನ್ನದ ಬೆಲೆ:
1 ಗ್ರಾಂ ಚಿನ್ನ: ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಇಂದು 22 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು, ₹9,305 ಆಗಿದೆ. ನಿನ್ನೆ ಇದರ ಬೆಲೆ ₹9,320 ಆಗಿದ್ದು ನಿನ್ನೆಗಿಂತ ಇಂದು, ₹15 ಇಳಿಕೆಯಾಗಿದೆ.
10 ಗ್ರಾಂ ಚಿನ್ನ: 22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆಯು, ₹93,050 ಆಗಿದೆ. ನಿನ್ನೆ ಇದರ ಬೆಲೆ ₹93,200 ಆಗಿದ್ದು ನಿನ್ನೆಗಿಂತ ಇಂದು, ₹150 ಇಳಿಕೆಯಾಗಿದೆ.
100 ಗ್ರಾಂ ಚಿನ್ನ: 22 ಕ್ಯಾರಟ್‌ನ 100 ಗ್ರಾಂ ಚಿನ್ನದ ಬೆಲೆಯು, ₹9,30,500 ಆಗಿದೆ. ನಿನ್ನೆ ಇದರ ಬೆಲೆ ₹9,32,000 ಆಗಿದ್ದು ನಿನ್ನೆಗಿಂತ ಇಂದು ₹1,500 ಇಳಿಕೆಯಾಗಿದೆ.
ಭಾರತದಲ್ಲಿ 18 ಕ್ಯಾರಟ್ ಚಿನ್ನದ ಬೆಲೆ:
1 ಗ್ರಾಂ ಚಿನ್ನ: ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಇಂದು 18 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹7,614 ಆಗಿದೆ. ನಿನ್ನೆ ಇದರ ಬೆಲೆ ₹7,626 ಆಗಿದ್ದು ನಿನ್ನೆಗಿಂತ ಇಂದು, 12 ಇಳಿಕೆಯಾಗಿದೆ.
10 ಗ್ರಾಂ ಚಿನ್ನ: 18 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆಯು, ₹76,140 ಆಗಿದೆ. ನಿನ್ನೆ ಇದರ ಬೆಲೆ ₹76,260 ಆಗಿದ್ದು ನಿನ್ನೆಗಿಂತ ಇಂದು, 120 ರೂ. ಇಳಿಕೆಯಾಗಿದೆ.
100 ಗ್ರಾಂ ಚಿನ್ನ: 18 ಕ್ಯಾರಟ್‌ನ 100 ಗ್ರಾಂ ಚಿನ್ನದ ಬೆಲೆಯು, ₹7,61,400 ಆಗಿದೆ. ನಿನ್ನೆ ಇದರ ಬೆಲೆ ₹7,62,600 ಆಗಿದ್ದು ನಿನ್ನೆಗಿಂತ ಇಂದು, 1,200 ರೂ. ಇಳಿಕೆಯಾಗಿದೆ.
ಭಾರತದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ (1 ಗ್ರಾಂ)
ಚೆನ್ನೈ: ಚೆನ್ನೈನಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹10,151 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,305 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,660 ಆಗಿದೆ.
ಮುಂಬೈ: ಮುಂಬೈನಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹10,151 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,305 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,614 ಆಗಿದೆ.
ದೆಹಲಿ: ದೆಹಲಿಯಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹10,166 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,320 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,626 ಆಗಿದೆ.
ಕೋಲ್ಕತಾ: ಕೋಲ್ಕತ್ತಾದಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹10,151 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,305 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,614 ಆಗಿದೆ.
ಬೆಂಗಳೂರು: ಬೆಂಗಳೂರಿನಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹10,151 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,305 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,614 ಆಗಿದೆ.
ಹೈದರಾಬಾದ್: ಹೈದರಾಬಾದ್‌ನಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹10,151 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,305 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,614 ಆಗಿದೆ.
ಕೇರಳ: ಕೇರಳದಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹10,151 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,305 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,614 ಆಗಿದೆ.
ಪುಣೆ: ಪುಣೆಯಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹10,151 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,305 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,614 ಆಗಿದೆ.
ಬರೋಡಾ: ಬರೋಡಾದಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹10,156 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,310 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,618 ಆಗಿದೆ.
ಅಹಮದಾಬಾದ್: ಅಹಮದಾಬಾದ್‌ನಲ್ಲಿ ಇಂದು 1 ಗ್ರಾಂನ 24 ಕ್ಯಾರಟ್ ಚಿನ್ನದ ಬೆಲೆ ₹10,156 ಆಗಿದೆ. 22 ಕ್ಯಾರಟ್ ಚಿನ್ನದ ಬೆಲೆ ₹9,310 ಹಾಗೆಯೇ 18 ಕ್ಯಾರಟ್‌ನ ಚಿನ್ನದ ಬೆಲೆ ₹7,618 ಆಗಿದೆ.
ಭಾರತದಲ್ಲಿ ಇಂದು ಬೆಳ್ಳಿ ಬೆಲೆ:
ಇನ್ನು ಭಾರತದಲ್ಲಿ ಇಂದು ಬೆಳ್ಳಿ ಬೆಲೆಯಲ್ಲೂ ಇಳಿಕೆ ನೋಡಬಹುದು. ಪ್ರತಿ ಗ್ರಾಂ ಬೆಳ್ಳಿ ಬೆಲೆಗೆ ಇಂದು ₹109.90 ಇದೆ. ನಿನ್ನೆ ಬೆಳ್ಳಿ ಬೆಲೆ ₹110 ಆಗಿದ್ದು ಇಂದು ₹0.10 ಇಳಿಕೆಯಾಗಿದೆ. 10 ಗ್ರಾಂ ಬೆಳ್ಳಿ ಬೆಲೆಗೆ ಇಂದು ₹1,099 ಇದೆ. ನಿನ್ನೆ ಬೆಳ್ಳಿ ಬೆಲೆ ₹1,100 ಆಗಿದ್ದು ಇಂದು ₹1 ಇಳಿಕೆಯಾಗಿದೆ. 100 ಗ್ರಾಂ ಬೆಳ್ಳಿ ಬೆಲೆಗೆ ಇಂದು ₹10,990 ಇದೆ. ನಿನ್ನೆ ಬೆಳ್ಳಿ ಬೆಲೆ ₹11,000 ಆಗಿದ್ದು ಇಂದು ₹10 ಇಳಿಕೆಯಾಗಿದೆ. ಹಾಗೆಯೇ ಇಂದು 100 ಗ್ರಾಂ ಬೆಳ್ಳಿ ಬೆಲೆಗೆ ಇಂದು ₹1,09,900 ಇದೆ. ನಿನ್ನೆ ಬೆಳ್ಳಿ ಬೆಲೆ ₹1,10,000 ಆಗಿದ್ದು ಇಂದು ₹100 ಇಳಿಕೆಯಾಗಿದೆ.
ಸ್ಪಾಟ್ ಗೋಲ್ಡ್ ವಿವರ:
ರಾಯಿಟರ್ಸ್ ನೀಡಿರುವ ವರದಿ ಪ್ರಕಾರ, ಜೂನ್ 16ರಂದು ಸ್ಪಾಟ್ ಗೋಲ್ಡ್ ಬೆಲೆಯು 0.3% ಏರಿಕೆಯಾಗಿದ್ದು, ಪ್ರತಿ ಔನ್ಸ್‌ಗೆ $3,442.09 ವಹಿವಾಟು ನಡೆಸುತ್ತಿದೆ. ಈ ಬೆಳವಣಿಗೆ ಇತ್ತೀಚಿನ ಮಧ್ಯಪ್ರಾಚ್ಯ ಸಂಘರ್ಷದಿಂದ ಜನಿಸಿರುವ ಆರ್ಥಿಕ ಅಸ್ಥಿರತೆಗೆ ಪ್ರತಿಕ್ರಿಯೆಯಾಗಿದೆ.
ಸ್ಪಾಟ್ ಗೋಲ್ಡ್ ವಿವರ:
2025ರ ಜೂನ್ 10ರಂದು ಮಂಗಳವಾರದಂದು ಸ್ಪಾಟ್ ಚಿನ್ನದ ಬೆಲೆ ಪ್ರತಿಔನ್ಸ್‌ಗೆ $3,307.72 ಆಗಿದ್ದು, 0.6% ಇಳಿಕೆಯನ್ನು ದಾಖಲಿಸಿದೆ. ಫ್ಯೂಚರ್ ಗೋಲ್ಡ್ ವಹಿವಾಟು ಬೆಲೆ $3,327.50 ಆಗಿದ್ದು, ಇದೂ ಸಹ 0.8% ಇಳಿಕೆಯಲ್ಲಿತ್ತು. ಈ ಇಳಿಕೆಗೆ ಪ್ರಮುಖ ಕಾರಣವೆಂದರೆ ಅಮೆರಿಕನ್ ಡಾಲರ್ ಮೌಲ್ಯದಲ್ಲಿ ಕಂಡು ಬಂದ ಬಲವಾದ ಏರಿಕೆ. ಡಾಲರ್ ಮೌಲ್ಯವು ಹೆಚ್ಚಾದಾಗ, ಇತರ ಕರೆನ್ಸಿಗಳಲ್ಲಿ ಚಿನ್ನ ಖರೀದಿಸುವ ಖರ್ಚು ಏರಿದಂತೆ ಆಗುತ್ತದೆ. ಈ ಪರಿಸ್ಥಿತಿಯಲ್ಲಿ ಬಂಗಾರದ ಮೇಲಿನ ಬೇಡಿಕೆ ಸ್ವಲ್ಪ ಇಳಿದಿರುವುದು ಕಂಡುಬಂದಿದೆ.
ಹೂಡಿಕೆಯ ಸಾಧನವಾಗಿರುವ ಚಿನ್ನ:
ಹೂಡಿಕೆಯ ಸಾಧನವಾಗಿರುವ ಚಿನ್ನವು ಭಾರತದಲ್ಲಿ ಹಲವು ರೀತಿಯ ಮಹತ್ವದ ಸ್ಥಾನ ಪಡೆದುಕೊಂಡಿದೆ. ಮಹಿಳೆಯರಿಗೆ ಒಡವೆ ರೂಪದಲ್ಲಿ ಇದು ಖುಷಿ ನೀಡುತ್ತದೆ. ಹಾಗೆಯೇ ಪ್ರತಿಷ್ಠೆಯ ಸಂಕೇತವಾಗಿ ಗೌರವ ತಂದುಕೊಡುತ್ತದೆ. ಇನ್ನು ಕಷ್ಟ ಅಂತ ಬಂದಾಗ ಆರ್ಥಿಕ ಸಹಾಯ ಮಾಡುವ ಮಿತ್ರನಾಗಿರುತ್ತದೆ. ಹೂಡಿಕೆಯ ರೂಪದಲ್ಲಿ ನೋಡುವುದಾದರೆ, ಚಿನ್ನವು ಭವಿಷ್ಯದ ದೊಡ್ಡ ಸಂಪತ್ತಾಗಿ ಪಾತ್ರ ನಿರ್ವಹಿಸುತ್ತದೆ. ಒಂದೇ ಲೋಹ ಹಲವು ರೀತಿಯಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಹೀಗಾಗಿಯೇ ಭಾರತದಲ್ಲಿ ಚಿನ್ನಕ್ಕೆ ಒಂದು ಮಹತ್ವದ ಸ್ಥಾನವಿದೆ. ಚಿನ್ನವನ್ನು ಪೂಜೆ-ಪುನಸ್ಕಾರ, ಮದುವೆ-ಸಮಾರಂಭಗಳಲ್ಲಿ ಇರಿಸದೇ ಏನೂ ನೆರವೇರುವುದಿಲ್ಲ. ಅದರಲ್ಲೂ ಮಹಿಳೆಯರಿಗೆ ಚಿನ್ನವೆಂದರೆ ಅಚ್ಚು-ಮೆಚ್ಚು. ಏನು ಕೊಟ್ಟರೂ ಮನಸೋಲದ ನಾರಿಯರಿಗೆ ಚಿನ್ನವೇ ದೊಡ್ಡ ಮಟ್ಟದ ಉಡುಗೊರೆ. ಅವರಿಗೆ ಚಿನ್ನವೇ ಭೂಷಣ.
ಚಿನ್ನದ ಬೆಲೆ ಏರಿಕೆ-ಇಳಿಕೆಗೆ ಕಾರಣವೇನು?
ಚಿನ್ನದ ಬೆಲೆಯ ಏರಿಕೆ ಹಾಗೂ ಇಳಿಕೆಗೆ ನಾನಾ ಕಾರಣಗಳಿರುತ್ತವೆ. ಚಿನ್ನದ ಬೆಲೆಯಲ್ಲಿ ಏರಿಕೆ ವಿವಿಧ ಆರ್ಥಿಕ, ರಾಜಕೀಯ ಮತ್ತು ಜಾಗತಿಕ ಅಂಶಗಳಿಂದ ಪ್ರೇರಿತವಾಗಿರುತ್ತದೆ. ನಾಣ್ಯ ಮೌಲ್ಯ ಕುಸಿದಾಗ ಹೂಡಿಕೆದಾರರು ಚಿನ್ನವನ್ನು ಸುರಕ್ಷಿತ ಹೂಡಿಕೆ ಎಂದು ಪರಿಗಣಿಸುತ್ತಾರೆ. ಇದರ ಫಲಿತಾಂಶವಾಗಿ ಚಿನ್ನದ ಬೇಡಿಕೆ ಹೆಚ್ಚಾಗಿ ಬೆಲೆ ಏರುತ್ತದೆ. ಯುದ್ಧಗಳು, ವ್ಯಾಪಾರ ತಕರಾರುಗಳು, ಜಾಗತಿಕ ರಾಜಕೀಯ ಸಮಸ್ಯೆಗಳು ಚಿನ್ನದ ಬೆಲೆಯ ಮೇಲೆ ನೇರ ಪರಿಣಾಮ ಬೀರುತ್ತವೆ. ಹೂಡಿಕೆದಾರರು ಭದ್ರತೆಯ ಹೂಡಿಕೆ ಎಂದು ಚಿನ್ನವನ್ನು ಖರೀದಿಸುತ್ತಾರೆ, ಇದರಿಂದ ಬೇಡಿಕೆ ಹೆಚ್ಚಾಗಿ ಬೆಲೆ ಏರಿಕೆಯಾಗುತ್ತದೆ.
ಅಮೆರಿಕದ ಫೆಡೆರಲ್ ರಿಸರ್ವ್ ಅಥವಾ ಭಾರತದ RBI ಬಡ್ಡಿದರಗಳನ್ನು ಇಳಿಸಿದರೆ, ಹೂಡಿಕೆದಾರರು ಚಿನ್ನದತ್ತ ಮುಖ ಮಾಡುತ್ತಾರೆ. ಇದು ಚಿನ್ನದ ಬೆಲೆಯನ್ನು ಹೆಚ್ಚಿಸುತ್ತದೆ. ಚಿನ್ನದ ಉತ್ಪಾದನೆ ಕಡಿಮೆಯಾದರೆ ಅಥವಾ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಹೆಚ್ಚಾದರೆ, ಬೆಲೆ ತಾನಾಗಿಯೇ ಏರಿಕೆಯಾಗುತ್ತದೆ. ಚಿನ್ನದ ಬೆಲೆಯ ಏರಿಕೆ ಬಹುಪಾಲು ಆರ್ಥಿಕ ಅಸ್ಥಿರತೆ, ಇನ್‌ಫ್ಲೇಶನ್, ರಾಜಕೀಯ ಅಶಾಂತಿ, ಮಾರುಕಟ್ಟೆ ತಾಣಮೌಲ್ಯಗಳು, ಹಾಗೂ ಹೂಡಿಕೆದಾರರ ಮನೋಭಾವ ಇತ್ಯಾದಿ ಅಂಶಗಳಿಂದ ನಿರ್ಧಾರವಾಗುತ್ತದೆ. ಚಿನ್ನದ ಬೆಲೆಯ ಈ ಬದಲಾವಣೆಗಳಿಗೆ ಆಂತರಾಷ್ಟ್ರೀಯ ಮಾರುಕಟ್ಟೆಯ ಪ್ರಭಾವ, ಕರೆನ್ಸಿ ವಿನಿಮಯ ದರಗಳು, ದೇಶೀಯ ಬೇಡಿಕೆ, ಹೂಡಿಕೆದಾರರ ನಂಬಿಕೆ ಮತ್ತು ಆರ್ಥಿಕ ಪರಿಸ್ಥಿತಿಗಳು ಪ್ರಮುಖವಾಗಿರಬಹುದು.
More From GoodReturns

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Alireza Arafi: ಇಸ್ರೇಲ್ ದಾಳಿಯಲ್ಲಿ ಖಮೇನಿ ನಿಧನ: ಅಲಿರೆಜಾ ಅರಾಫಿ ತಾತ್ಕಾಲಿಕ ಸುಪ್ರೀಂ ನಾಯಕನಾಗಿ ನೇಮಕ!

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?



Click it and Unblock the Notifications