ಕಳೆದೆರಡು ದಿನಗಳಿಂದ ಭಾರೀ ಏರಿಕೆಯಲ್ಲಿದ್ದ ಚಿನ್ನದ ಬೆಲೆ ಇದೀಗ ದಿಢೀರ್ ಕುಸಿತ ಕಂಡಿದೆ. ಅತ್ತ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನರಿಗೆ ಇದೀಗ ಜಾಕ್‌ಪಾಟ್ ಹೊಡೆದಂತಾಗಿದೆ. ಹೌದು, ಇಂದು (ಫೆ.26) ಭಾರತದಲ್ಲಿ ಚಿನ್ನದ ಬೆಲೆ (Gold Rate india) ಭಾರೀ ಇಳಿಕೆಯಾಗಿದ್ದು ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಭಾರತದಲ್ಲಿ 24K ಚಿನ್ನದ ಬೆಲೆ:
ಭಾರತದಲ್ಲಿ 24K ಚಿನ್ನದ 1 ಗ್ರಾಂ ಬೆಲೆ ಇಂದು ₹16,168 ರೂ. ನಿನ್ನೆ 16,189 ರೂ. ಇತ್ತು. ನಿನ್ನೆಗಿಂತಲೂ ಇಂದು ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗಿದ್ದು, ಒಟ್ಟು ₹21 ರೂ. ಕುಸಿತ ಕಂಡಿದೆ. 8 ಗ್ರಾಂ ಚಿನ್ನದ ಬೆಲೆ ಇಂದು ₹1,29,344 ರೂ. ಆಗಿದ್ದು, ನಿನ್ನೆ ₹1,29,512 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ₹168 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ದರ ಇಂದು ₹1,61,680 ರೂ. ಆಗಿದ್ದು, ನಿನ್ನೆ ₹1,61,890 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ₹210 ರೂ. ಇಳಿಕೆಯಾಗಿದೆ. ಅದೇ ರೀತಿ 100 ಗ್ರಾಂ ಚಿನ್ನದ ದರ 16,16,800 ರೂ. ಆಗಿದ್ದು, ನಿನ್ನೆ 16,18,900 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ದಿಢೀರ್ 2,100 ರೂ. ಇಳಿಕೆಯಾಗಿದೆ.
ಭಾರತದಲ್ಲಿ 22K ಚಿನ್ನದ ಬೆಲೆ:
22K ಚಿನ್ನದ 1 ಗ್ರಾಂ ಬೆಲೆ ಇಂದು ₹14,820 ರೂ. ಆಗಿದ್ದು, ನಿನ್ನೆ ₹14,840 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ಕೇವಲ 20 ರೂ. ಇಳಿಕೆಯಾಗಿದೆ. 8 ಗ್ರಾಂ ಚಿನ್ನದ ದರ ಇಂದು 1,18,560 ರೂ. ಆಗಿದ್ದು, ನಿನ್ನೆ 1,18,720 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡದ್ರೆ ಇಂದು ದಿಢೀರ್ ₹160 ರೂ. ಕುಸಿತ ಕಂಡಿದೆ. 10 ಗ್ರಾಂ ಚಿನ್ನದ ದರ ಇಂದು ₹1,48,200 ರೂ. ಆಗಿದ್ದು, ನಿನ್ನೆ ₹1,48,400 ರೂ. ಇತ್ತು. ನಿನ್ನೆಗಿಂತ ಇಂದು ₹200 ರೂ. ಕಮ್ಮಿಯಾಗಿದೆ. 100 ಗ್ರಾಂ ಚಿನ್ನದ ದರ ಇಂದು ₹14,82,000 ರೂ. ಆಗಿದ್ದು, ನಿನ್ನೆ ₹14,84,000 ರೂ. ಇತ್ತು. ಒಟ್ಟು ₹2,000 ರೂ. ಇಳಿಕೆಯಾಗಿದೆ..
ಭಾರತದಲ್ಲಿ 18K ಚಿನ್ನದ ಬೆಲೆ:
18K ಚಿನ್ನದ 1 ಗ್ರಾಂ ಚಿನ್ನದ ಬೆಲೆ ₹12,126 ರೂ. ಆಗಿದ್ದು, ನಿನ್ನೆ 12,142 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 16 ರೂ. ಇಳಿಕೆ ಕಂಡಿದೆ. 8 ಗ್ರಾಂ ಚಿನ್ನದ ದರ ಇಂದು ₹97,008 ರೂ. ಆಗಿದ್ದು, ನಿನ್ನೆ 97,136 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 128 ರೂ. ಕುಸಿತ ಕಂಡಿದೆ. 10 ಗ್ರಾಂ ಚಿನ್ನದ ದರ 1,21,260 ರೂ. ಆಗಿದ್ದು, ನಿನ್ನೆ 1,21,420 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ 160 ರೂ. ಕುಸಿತ ಕಂಡಿದೆ. ಇನ್ನು 100 ಗ್ರಾಂ ಚಿನ್ನದ ಬೆಲೆ ಇಂದು 12,12,600 ರೂ. ಆಗಿದ್ದು, ನಿನ್ನೆ 12,14,200 ರೂ. ಇತ್ತು. ಒಂದೇ ದಿನದಲ್ಲಿ 1,600 ರೂ. ಕಮ್ಮಿಯಾಗಿದೆ.
ಭಾರತದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ:
ಚೆನ್ನೈ: 24K ರೂ. 16,277, 22K ರೂ. 14,920, 18K ರೂ. 12,765
ಮುಂಬೈ: 24K ರೂ. 16,168, 22K ರೂ. 14,820, 18K ರೂ. 12,126
ದೆಹಲಿ: 24K ರೂ. 16,183, 22K ರೂ. 14,835, 18K ರೂ. 12,141
ಕೋಲ್ಕತ್ತಾ: 24K ರೂ. 16,168, 22K ರೂ. 14,835, 18K ರೂ. 12,126
ಬೆಂಗಳೂರು: 24K ರೂ. 16,168, 22K ರೂ. 14,835, 18K ರೂ. 12,126
ಹೈದರಾಬಾದ್: 24K ರೂ. 16,168, 22K ರೂ. 14,835, 18K ರೂ. 12,126
ಕೇರಳ: 24K ರೂ. 16,168, 22K ರೂ. 14,835, 18K ರೂ. 12,126
ಪುಣೆ: 24K ರೂ. 16,168, 22K ರೂ. 14,835, 18K ರೂ. 12,126
ವಡೋದರಾ: 24K ರೂ. 16,173, 22K ರೂ. 14,825, 18K ರೂ. 12,131
ಅಹಮದಾಬಾದ್: 24K ರೂ. 16,173, 22K ರೂ. 14,825, 18K ರೂ. 12,131
ಭಾರತದಲ್ಲಿ ಬೆಳ್ಳಿ ದರ ಎಷ್ಟಿದೆ?
ದಾಖಲೆ ಬೆಲೆಯಲ್ಲಿ ಏರಿಕೆ ಕಂಡಿದ್ದ ಬೆಳ್ಳಿ ದರ, ಇದೀಗ ನಿಂತಲ್ಲೇ ನಿಂತಿದೆ. 1 ಗ್ರಾಂ ಬೆಳ್ಳಿ ದರ ಇಂದು ₹285 ರೂ. ಆಗಿದ್ದು, ನಿನ್ನೆಗೆ ಹೋಲಿಸಿದ್ರೆ ಇಂದು ಬೆಲೆಯಲ್ಲಿ ಶೂನ್ಯ ಬದಲಾವಣೆಯಾಗಿದೆ. 8 ಗ್ರಾಂ ಬೆಳ್ಳಿ ಬೆಲೆ ₹2,280 ರೂ. ಆಗಿದ್ದು, 10 ಗ್ರಾಂ ಬೆಳ್ಳಿ ದರ ₹2,850 ರೂ., 100 ಗ್ರಾಂ ಬೆಳ್ಳಿ ದರ ₹28,500 ರೂ., 1000 ಗ್ರಾಂ ಬೆಳ್ಳಿ ದರ ₹2,85,000 ರೂ. ಆಗಿದೆ.
ಸ್ಪಾಟ್ ಗೋಲ್ಡ್ ವಿವರ:
ಫೆಬ್ರವರಿ 26, 2026 ರ ವರದಿ ಪ್ರಕಾರ, ಅಮೆರಿಕ ಸುಂಕ ನೀತಿ ಮತ್ತು ಅಮೆರಿಕ-ಇರಾನ್ ಮಾತುಕತೆಗಳ ಬೆನ್ನಲ್ಲೇ ಡಾಲರ್ ಕುಸಿತ ಕಂಡಿದೆ. ಈ ಹಿನ್ನೆಲೆ ಗುರುವಾ ಚಿನ್ನದ ಬೆಲೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರಿಕೆ ಕಂಡಿದೆ.


Click it and Unblock the Notifications