ಅತ್ತ ದೇಶದಲ್ಲಿ ತೈಲ ಕೊರತೆ, ಇಂಧನ ಬೆಲೆ ಹೆಚ್ಚಳದ ನಡುವೆ, ಇದೀಗ ಚಿನ್ನ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದೆ. ಭಾರತದಲ್ಲಿ ಚಿನ್ನದ ಬೆಲೆ (Gold Rate India) ಕಳೆದ ವಾರದಲ್ಲಿ ಕೊಂಚ ಇಳಿಕೆ ಕಂಡಿತ್ತು. ಆದ್ರೆ ಮತ್ತೆ ಏರಿಕೆಯ ಹಾದಿ ಹಿಡಿದಿದೆ. ಇಂದು ಚಿನ್ನದ ಬೆಲೆ ಇಳಿಕೆಯಾಗಬಹುದು ಎಂದು ನಿರೀಕ್ಷೆಯಲ್ಲಿದ್ದವರಿಗೆ ಕೊನೆಗೂ ನಿರಾಸೆಯಾಗಿಬಿಟ್ಟಿದೆ. ಹಾಗಿದ್ರೆ ಭಾರತದಲ್ಲಿ ಇಂದು ಚಿನ್ನದ ಬೆಲೆ ಎಷ್ಟಿದೆ ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಭಾರತದಲ್ಲಿ 24K ಚಿನ್ನದ ಬೆಲೆ ಎಷ್ಟಿದೆ?
24K ಚಿನ್ನದ 1 ಗ್ರಾಂ ಬೆಲೆ ಇಂದು 16,331 ರೂ. ಆಗಿದ್ದು, ನಿನ್ನೆ 16,238 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ಚಿನ್ನದ ಬೆಲೆ ₹93 ರೂ. ಹೆಚ್ಚಳವಾಗಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 1,30,648 ರೂ. ಆಗಿದ್ದು, ನಿನ್ನೆ 1,29,904 ರೂ. ಇತ್ತು. ನಿನ್ನೆಗಿಂತ ಇಂದು ₹744 ರೂ. ಏರಿಕೆ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,63,310 ರೂ. ಆಗಿದ್ದು, ನಿನ್ನೆ 1,62,380 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹930 ರೂ. ದಿಢೀರ್ ಏರಿಕೆ ಕಂಡಿದೆ. 100 ಗ್ರಾಂ ಚಿನ್ನದ ಬೆಲೆ ಇಂದು ₹16,33,100 ರೂ. ಆಗಿದ್ದು, ನಿನ್ನೆ 16,23,800 ರೂ. ಇತ್ತು. ಒಂದೇ ದಿನದಲ್ಲಿ ₹9,300 ರೂ. ಹೆಚ್ಚಳವಾಗಿದೆ.
ಭಾರತದಲ್ಲಿ 22K ಚಿನ್ನದ ಬೆಲೆ ಎಷ್ಟಿದೆ?
22K ಚಿನ್ನದ 1 ಗ್ರಾಂ ಬೆಲೆ ಇಂದು 14,970 ರೂ. ಆಗಿದ್ದು, ನಿನ್ನೆ 14,885 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ಬರೀ ₹85 ರೂ. ಹೆಚ್ಚಳವಾಗಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 1,19,760 ರೂ. ಆಗಿದ್ದು, ನಿನ್ನೆ 1,19,080 ರೂ. ಇತ್ತು. ನಿನ್ನೆಗಿಂತ ಇಂದು ₹680 ರೂ. ಬದಲಾವಣೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,49,700 ರೂ. ಆಗಿದ್ದು, ನಿನ್ನೆ 1,48,850 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ₹850 ರೂ. ಏರಿಕೆ ಕಂಡಿದೆ. 100 ಗ್ರಾಂ ಚಿನ್ನದ ದರ ಇಂದು 14,97,000 ರೂ. ಆಗಿದ್ದು, ನಿನ್ನೆ 14,88,500 ರೂ. ಇತ್ತು. ನಿನ್ನೆಗಿಂತ ಇಂದು ₹8,500 ರೂ. ಏರಿಕೆಯಾಗಿದೆ.
ಭಾರತದಲ್ಲಿ 18K ಚಿನ್ನದ ಬೆಲೆ ಎಷ್ಟಿದೆ?
18K ಚಿನ್ನದ 1 ಗ್ರಾಂ ಬೆಲೆ ಇಂದು 12,248 ರೂ. ಆಗಿದ್ದು, ನಿನ್ನೆ 12,179 ರೂ. ಇತ್ತು. ನಿನ್ನೆಗಿಂತ ಇಂದು ₹69 ರೂ. ಹೆಚ್ಚಳವಾಗಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 97,984 ರೂ. ಆಗಿದ್ದು, ನಿನ್ನೆ 97,432 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ದಿಢೀರ್ ₹552 ರೂ. ವ್ಯತ್ಯಾಸವಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 1,22,480 ರೂ. ಆಗಿದ್ದು, ನಿನ್ನೆ 1,21,790 ರೂ. ಇತ್ತು. 100 ಗ್ರಾಂ ಚಿನ್ನದ ದರ ಇಂದು ₹12,24,800 ರೂ. ಆಗಿದ್ದು, ನಿನ್ನೆ ₹12,17,900 ರೂ. ಇತ್ತು. ಒಂದೇ ದಿನದಲ್ಲಿ 6,900 ರೂ. ಏರಿಕೆಯಾಗಿದೆ.
ಭಾರತದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ:
ಚೆನ್ನೈ: 24K ರೂ. 16,495, 22K ರೂ. 15,120, 18K ರೂ. 12,950
ಮುಂಬೈ: 24K ರೂ. 16,331, 22K ರೂ. 14,970, 18K ರೂ. 12,248
ದೆಹಲಿ: 24K ರೂ. 16,346, 22K ರೂ. 14,985, 18K ರೂ. 12,263
ಕೋಲ್ಕತ್ತಾ: 24K ರೂ. 16,331, 22K ರೂ. 14,970, 18K ರೂ. 12,248
ಬೆಂಗಳೂರು: 24K ರೂ. 16,331, 22K ರೂ. 14,970, 18K ರೂ. 12,248
ಹೈದರಾಬಾದ್: 24K ರೂ. 16,331, 22K ರೂ. 14,970, 18K ರೂ. 12,248
ಕೇರಳ: 24K ರೂ. 16,331, 22K ರೂ. 14,970, 18K ರೂ. 12,248
ಪುಣೆ: 24K ರೂ. 16,331, 22K ರೂ. 14,970, 18K ರೂ. 12,248
ವಡೋದರಾ: 24K ರೂ. 16,336, 22K ರೂ. 14,975, 18K ರೂ. 12,253
ಅಹಮದಾಬಾದ್: 24K ರೂ. 16,336, 22K ರೂ. 14,975, 18K ರೂ. 12,253
ಬೆಳ್ಳಿ ಬೆಲೆ:
ಭಾರತದಲ್ಲಿ ಚಿನ್ನದ ಬೆಲೆ ಏರಿಕೆ ಕಂಡರೂ, ಬೆಳ್ಳಿ ಬೆಲೆ ಮಾತ್ರ ನಿಂತಲ್ಲೇ ನಿಂತಿದೆ. ಅಂದರೆ ನಿನ್ನೆಯ ಬೆಲೆಯನ್ನೇ ಇಂದು ಕಾಯ್ದುಕೊಂಡಿದೆ. 1 ಗ್ರಾಂ ಬೆಳ್ಳಿ ಬೆಲೆ ₹290 ರೂ., 8 ಗ್ರಾಂ ಬೆಳ್ಳಿ ದರ ₹2,320 ರೂ., 10 ಗ್ರಾಂ ಬೆಳ್ಳಿ ಬೆಲೆ ₹2,900 ರೂ., 100 ಗ್ರಾಂ ಬೆಳ್ಳಿ ದರ ₹29,000 ರೂ., 1000 ಗ್ರಾಂ ಬೆಳ್ಳಿ ಬೆಲೆ ₹2,90,000 ರೂ. ಆಗಿದೆ.
ಸ್ಪಾಟ್ ಗೋಲ್ಡ್ ವಿವರ:
ಮಾರ್ಚ್ 11ರ ರಾಯಿಟರ್ಸ್ ವರದಿ ಪ್ರಕಾರ, ಹಣದುಬ್ಬರದ ಆತಂಕ ಕಡಿಮೆಯಾಗಿರುವ ಬೆನ್ನಲ್ಲೇ ಬುಧವಾರ ಚಿನ್ನದ ಬೆಲೆ ಮತ್ತೆ ಏರಿಕೆ ಕಂಡಿದೆ. ಇನ್ನು GMT 0243 ರ ವೇಳೆಗೆ ಸ್ಪಾಟ್ ಚಿನ್ನದ ದರವು ಪ್ರತೀ ಔನ್ಸ್‌ಗೆ 0.3% ಏರಿಕೆ ಕಂಡು $5,216.80 ಕ್ಕೆ ತಲುಪಿದೆ.


Click it and Unblock the Notifications