ಭೌಗೋಳಿಕವಾಗಿ ರಾಜಕೀಯ ಉದ್ವಿಗ್ನತೆ, ಹೂಡಿಕೆದಾರರ ಆಸಕ್ತಿ ಚಿನ್ನದ ಬೆಲೆ ಮೇಲೆ ಭಾರೀ ಪ್ರಭಾವ ಬೀರುತ್ತಿದೆ. ದಿನ ಹೋದಂತೆ ಅಮೂಲ್ಯ ಲೋಹಗಳೆಂದು ಪರಿಗಣಿಸಲ್ಪಟ್ಟಿರುವ ಚಿನ್ನ, ಬೆಳ್ಳಿ ಬೆಲೆ ದಾಖಲೆಯಲ್ಲಿ ಏರಿಕೆ ಕಾಣುತ್ತಿದೆ. ಭಾರತದಲ್ಲಿ ಚಿನ್ನದ ಬೆಲೆಯಂತೂ (Gold Rate India) ಇತ್ತೀಚೆಗೆ ಭಾರೀ ಏರಿಕೆ ಕಂಡಿದೆ. ಹಾಗಿದ್ರೆ ಇಂದು ಚಿನ್ನ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಭಾರತದಲ್ಲಿ 24K ಚಿನ್ನದ ಬೆಲೆ:
ಭಾರತದಲ್ಲಿ ಇಂದು ಚಿನ್ನದ ಬೆಲೆಯಲ್ಲಿ ಶೂನ್ಯ ಬದಲಾವಣೆಯಾಗಿದೆ. ಅಂದರೆ ನಿನ್ನೆಯ ಬೆಲೆಯಲ್ಲೇ ಇಂದು ಮುಂದುವರೆದಿದೆ. 24 ಕ್ಯಾರಟ್ ಚಿನ್ನದ 1 ಗ್ರಾಂ ಬೆಲೆ ₹16,195 ರೂ. ಆಗಿದ್ದು, ನಿನ್ನೆಯೂ ಅಷ್ಟೇ ಬೆಲೆ ಇತ್ತು. 8 ಗ್ರಾಂ ಬೆಲೆ ಇಂದು ₹1,29,560 ರೂ. ಆಗಿದ್ದು, 10 ಗ್ರಾಂ ಚಿನ್ನದ ಬೆಲೆ ಇಂದು ₹1,61,950 ರೂ. ಆಗಿದೆ. 100 ಗ್ರಾಂ ಚಿನ್ನದ ಬೆಲೆ ಇಂದು ₹16,19,500 ರೂ. ಆಗಿದೆ.
ಭಾರತದಲ್ಲಿ 22K ಚಿನ್ನದ ಬೆಲೆ:
22K ಚಿನ್ನದ ಬೆಲೆ ಇಂದು ಒಂದು ಗ್ರಾಂ ಚಿನ್ನದ ಬೆಲೆ 14,845 ರೂ. ಇದೆ. 8 ಗ್ರಾಂ ಚಿನ್ನದ ಬೆಲೆ ಇಂದು 1,18,760 ರೂ. ಆಗಿದೆ. ಅದೇ ರೀತಿ 10 ಗ್ರಾಂ ಚಿನ್ನದ ಬೆಲೆ ಇಂದು ₹1,48,450 ರೂ. ಆಗಿದೆ. 100 ಗ್ರಾಂ ಚಿನ್ನದ ಬೆಲೆ 14,84,500 ರೂ. ಆಗಿದೆ. ನಿನ್ನೆಗೆ ಹೋಲಿಸಿದ್ರೆ, ಇಂದು ಯಾವುದೇ ಬದಲಾವಣೆಗಳಾಗಿಲ್ಲ.
ಭಾರತದಲ್ಲಿ 18K ಚಿನ್ನದ ಬೆಲೆ:
ಭಾರತದಲ್ಲಿ 18K ಚಿನ್ನ ಕಡಿಮೆ ಬೆಲೆಯಲ್ಲೂ ಇಂದು ಯಾವುದೇ ಏರಿಳಿತಗಳು ಆಗಿಲ್ಲ. ಇಂದು 1 ಗ್ರಾಂ ಚಿನ್ನದ ಬೆಲೆ 12,146 ರೂ. ಇದೆ. 8 ಗ್ರಾಂ ಚಿನ್ನದ ಬೆಲೆ ಇಂದು ₹97,168 ರೂ. ಆಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 1,21,460 ರೂ. ಆಗಿದ್ದು, 100 ಗ್ರಾಂ ಚಿನ್ನದ ಬೆಲೆ 12,14,600 ರೂ. ಆಗಿದೆ.
ಭಾರತದ ವಿವಿಧ ನಗರಗಳ ಚಿನ್ನದ ಬೆಲೆ ಎಷ್ಷಿದೆ?
ಚೆನ್ನೈ: 24K ರೂ. 16,320, 22K ರೂ. 14,960, 18K ರೂ. 12,475
ಮುಂಬೈ: 24K ರೂ. 16,195, 22K ರೂ. 14,845, 18K ರೂ. 12,146
ದೆಹಲಿ: 24K ರೂ. 16,210, 22K ರೂ. 14,860, 18K ರೂ. 12,161
ಕೋಲ್ಕತ್ತಾ: 24K ರೂ. 16,195, 22K ರೂ. 14,845, 18K ರೂ. 12,146
ಬೆಂಗಳೂರು: 24K ರೂ. 16,195, 22K ರೂ. 14,845, 18K ರೂ. 12,146
ಹೈದರಾಬಾದ್: 24K ರೂ. 16,195, 22K ರೂ. 14,845, 18K ರೂ. 12,146
ಕೇರಳ: 24K ರೂ. 16,195, 22K ರೂ. 14,845, 18K ರೂ. 12,146
ಪುಣೆ: 24K ರೂ. 16,195, 22K ರೂ. 14,845, 18K ರೂ. 12,146
ವಡೋದರಾ: 24K ರೂ. 16,200, 22K ರೂ. 14,850, 18K ರೂ. 12,151
ಅಹಮದಾಬಾದ್: 24K ರೂ. 16,200, 22K ರೂ. 14,850, 18K ರೂ. 12,151
ಭಾರತದಲ್ಲಿ ಬೆಳ್ಳಿ ದರ:
ಅತ್ತ ಬಂಗಾರದ ಬೆಲೆ ಭಾರತದಲ್ಲಿ ಸ್ಥಿರವಾಗಿದ್ದರೂ, ಬೆಳ್ಳಿ ದರ ಮಾತ್ರ ದಿಢೀರ್ ಏರಿಕೆ ಕಂಡಿದೆ. ಇಂದು 1 ಗ್ರಾಂ ಬೆಳ್ಳಿ ಬೆಲೆ ₹370 ರೂ. ಆಗಿದ್ದು, ನಿನ್ನೆ ₹360 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 10 ರೂ. ಏರಿಕೆಯಾಗಿದೆ. ಇನ್ನು 8 ಗ್ರಾಂ ಬೆಳ್ಳಿ ದರ ₹2,960 ರೂ. ಆಗಿದೆ. ಅದೇ ರೀತಿ 10 ಗ್ರಾಂ ಬೆಳ್ಳಿ ಬೆಲೆ ₹3,700 ರೂ., 100 ಗ್ರಾಂ ಬೆಳ್ಳಿ ದರ ₹37,000 ರೂ., 1000 ಗ್ರಾಂ ಬೆಳ್ಳಿ ನೆಲೆ ₹3,70,000 ರೂ. ಆಗಿದೆ.
ಸ್ಪಾಟ್ ಗೋಲ್ಡ್ ವಿವರ:
ಜನವರಿ 27ರ ರಾಯಿಟರ್ಸ್ ವರದಿ ಪ್ರಕಾರ, ಭೌಗೋಳಿಕವಾಗಿ ರಾಜಕೀಯ ಉದ್ವಿಗ್ನತೆ ನಡುವೆ ಹೂಡಿಕೆದಾರರು ಸುರಕ್ಷಿತ ಹೂಡಿಕೆಗಳ ಮೇಲೆ ಬೇಡಿಕೆ ಇಟ್ಟಿದ್ದರಿಂದ, ಚಿನ್ನದ ಬೆಲೆ ಏರಿಕೆ ಕಾಣುತ್ತಿದೆ. ಅಲ್ಲದೇ ಬೆಳ್ಳಿ ಕೂಡಾ ಏರಿಕೆ ಕಂಡಿದೆ.
ಹಿಂದಿನ ದಿನ ದಾಖಲೆಯ $5,110.50 ರಷ್ಟು ಏರಿಕೆ ಕಂಡ ನಂತರ, GMT 0329ರ ವೇಳೆಗೆ ಸ್ಪಾಟ್ ಚಿನ್ನವು ಪ್ರತೀ ಔನ್ಸ್‌ಗೆ 1% ಏರಿಕೆಯಾಗಿ $5,065.07 ಕ್ಕೆ ತಲುಪಿದೆ.


Click it and Unblock the Notifications