ಚಿನ್ನದ (Gold) ಮೇಲೆ ಬಹುತೇಕರು ಸಾಕಷ್ಟು ಹೂಡಿಕೆ ಮಾಡುತ್ತಾರೆ. ಆದರೆ ಕಳೆದ ತಿಂಗಳು ಕಂಡಂತಹ ಬೆಲೆ ಏರಿಕೆಯಿಂದಾಗಿ ಗ್ರಾಹಕರು ಕಂಗಾಲಾಗಿ ಹೋಗಿದ್ದರು. ಆದ್ರೆ ಇದೀಗ ದಿನಹೋದಂತೆ ಚಿನ್ನ ಪ್ರಿಯರಿಗೆ ಗುಡ್ ನ್ಯೂಸ್ ಸಿಗುತ್ತಲೇ ಇದೆ. ಏಕೆಂದರೆ ಚಿನ್ನ-ಬೆಳ್ಳಿ ದರ ದಿನೇ ದಿನೇ ಇಳಿಕೆಯಾಗುತ್ತಿದೆ. ಹಾಗಿದ್ರೆ ಇಂದು ಭಾರತದಲ್ಲಿ ಚಿನ್ನದ ಬೆಲೆ ಇಳಿಕೆಯಾಗಿದೆಯೇ? ಏರಿಕೆಯಾಗಿದೆಯೇ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಭಾರತದಲ್ಲಿ 24K ಚಿನ್ನದ ಬೆಲೆ ಎಷ್ಟಿದೆ?
ಭಾರತದಲ್ಲಿ ಇಂದು ಚಿನ್ನದ ಬೆಲೆ ನಿಂತ ನೀರಾಗಿಬಿಟ್ಟಿದೆ . 24K ಚಿನ್ನದ ಪ್ರತೀ ಗ್ರಾಂ ಬೆಲೆ ನಿನ್ನೆಯಷ್ಟೇ ಇದೆ. ಅಂದರೆ ಒಂದು ಗ್ರಾಂ ಬೆಲೆ ಇಂದು ₹15,420 ರೂ. ಆಗಿದ್ದು, ನಿನ್ನೆಗೆ ಹೋಲಿಸಿದ್ರೆ ಇಂದು ಶೂನ್ಯ ಬದಲಾವಣೆಯಾಗಿದೆ. 8 ಗ್ರಾಂ ಬೆಳ್ಳಿ ದರ ಇಂದು ₹1,23,360 ರೂ. ಆಗಿದ್ದು, ಯಾವುದೇ ಬದಲಾವಣೆಯಾಗಿಲ್ಲ. ಇನ್ನು 10 ಗ್ರಾಂ ಚಿನ್ನದ ದರ ₹1,54,200 ರೂ. ಆಗಿದ್ದು, 100 ಗ್ರಾಂ ಬೆಳ್ಳಿ ಬೆಲೆ ₹15,42,000 ರೂ. ಆಗಿದ್ದು, ನಿನ್ನೆಯ ಬೆಲೆಯಲ್ಲೇ ಮುಂದುವರೆದಿದೆ.
ಭಾರತದಲ್ಲಿ 22K ಚಿನ್ನದ ಬೆಲೆ:
22K ಚಿನ್ನದ ಒಂದು ಗ್ರಾಂ ಬೆಲೆ 14,135 ರೂ. ಇದೆ. ನಿನ್ನೆಯ ಬೆಲೆಯನ್ನೇ ಇಂದು ಕಾಯ್ದುಕೊಂಡಿದೆ. ಇನ್ನು 8 ಗ್ರಾಂ ಚಿನ್ನದ ಬೆಲೆ ಇಂದು 1,13,080 ರೂ. ಆಗಿದ್ದು, ಯಾವುದೇ ಬದಲಾವಣೆಯಾಗಿಲ್ಲ. 10 ಗ್ರಾಂ ಚಿನ್ನದ ಬೆಲೆ ಇಂದು ₹1,41,350 ರೂ. ಆಗಿದ್ದು, ನಿನ್ನೆಗೆ ಹೋಲಿಸಿದ್ರೆ ಇಂದು ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. 100 ಗ್ರಾಂ ಚಿನ್ನದ ಬೆಲೆ 14,13,500 ರೂ. ಆಗಿದೆ.
ಭಾರತದಲ್ಲಿ 18K ಚಿನ್ನದ ಬೆಲೆ:
ಭಾರತದಲ್ಲಿ 18K ಚಿನ್ನದ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇಂದು 1 ಗ್ರಾಂ ಚಿನ್ನದ ಬೆಲೆ 11,565 ರೂ. ಆಗಿದ್ದು, 8 ಗ್ರಾಂ ಚಿನ್ನದ ಬೆಲೆ ಇಂದು ₹92,520 ರೂ. ಆಗಿದೆ. ನಿನ್ನೆಯ ಬೆಲೆಯನ್ನೇ ಇಂದೂ ಕಾಯ್ದುಕೊಂಡಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 1,15,650 ರೂ. ಆಗಿದ್ದು, 100 ಗ್ರಾಂ ಚಿನ್ನದ ಬೆಲೆ 11,56,500 ರೂ. ಆಗಿದೆ.
ಭಾರತದ ವಿವಿಧ ನಗರಗಳ ಚಿನ್ನದ ಬೆಲೆ:
ಚೆನ್ನೈ: 24K ರೂ. 15,524, 22K ರೂ. 14,230, 18K ರೂ. 12,180
ಮುಂಬೈ: 24K ರೂ. 15,420, 22K ರೂ. 14,135, 18K ರೂ. 11,565
ದೆಹಲಿ: 24K ರೂ. 15,435, 22K ರೂ. 14,150, 18K ರೂ. 11,580
ಕೋಲ್ಕತ್ತಾ: 24K ರೂ. 15,420, 22K ರೂ. 14,135, 18K ರೂ. 11,565
ಬೆಂಗಳೂರು: 24K ರೂ. 15,420, 22K ರೂ. 14,135, 18K ರೂ. 11,565
ಹೈದರಾಬಾದ್: 24K ರೂ. 15,420, 22K ರೂ. 14,135, 18K ರೂ. 11,565
ಕೇರಳ: 24K ರೂ. 15,420, 22K ರೂ. 14,135, 18K ರೂ. 11,565
ಪುಣೆ: 24K ರೂ. 15,420, 22K ರೂ. 14,135, 18K ರೂ. 11,565
ವಡೋದರಾ: 24K ರೂ. 15,425, 22K ರೂ. 14,140, 18K ರೂ. 11,570
ಅಹಮದಾಬಾದ್: 24K ರೂ. 15,425, 22K ರೂ. 14,140, 18K ರೂ. 11,570
ಭಾರತದಲ್ಲಿ ಬೆಳ್ಳಿ ದರ:
ಅತ್ತ ಚಿನ್ನದ ಬೆಲೆ ಸ್ಥಿರವಾಗಿದ್ದರೂ, ಇತ್ತ ಬೆಳ್ಳಿ ದರ ಮಾತ್ರ ಭಾರೀ ಇಳಿಕೆ ಕಂಡಿದೆ. ಪ್ರತೀ ಗ್ರಾಂ ಬೆಳ್ಳಿಯಲ್ಲಿ 5 ರೂ. ಇಳಿಕೆ ಕಂಡಿದ್ದು, 1 ಗ್ರಾಂ ಬೆಲೆ ₹255 ರೂ. ಆಗಿದೆ. ಇನ್ನು 8 ಗ್ರಾಂ ಬೆಳ್ಳಿ ದರ ₹2,040 ರೂ. ಆಗಿದ್ದು, ನಿನ್ನೆ ₹2,080 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ದಿಢೀರ್ ₹40 ರೂ. ಇಳಿಕೆಯಾಗಿದೆ. 10 ಗ್ರಾಂ ಬೆಳ್ಳಿ ದರ ಇಂದು ₹2,550 ರೂ., 100 ಗ್ರಾಂ ಬೆಳ್ಳಿ ಬೆಲೆ ₹25,500 ರೂ., 1000 ಗ್ರಾಂ ಬೆಳ್ಳಿ ದರ ₹2,55,000 ರೂ. ಆಗಿದೆ.
ಸ್ಪಾಟ್ ಚಿನ್ನದ ವಿವರ:
ಫೆಬ್ರವರಿ 18 ರ ಮಿಂಟ್ ವರದಿ ಪ್ರಕಾರ, ಸತತ ಮೂರನೇ ದಿನ ಬುಧವಾರ ಚಿನ್ನ ಮತ್ತು ಬೆಳ್ಳಿ ದರ ವಹಿವಾಟಿನಲ್ಲಿ ಇಳಿಕೆ ಕಂಡಿದೆ. ಏಷ್ಯಾದ ಅನೇಕ ಮಾರುಕಟ್ಟೆಗಳು ಹೊಸ ವರ್ಷದ ರಜಾದಿನಗಳಿಂದಾಗಿ ಮುಚ್ಚಲ್ಪಟ್ಟಿರುವುದರಿಂದ, ಬೇಡಿಕೆ ಕಮ್ಮಿಯಾಗಿದೆ. ಅದೇ ಕಾರಣ ಚಿನ್ನದ ಬೆಲೆ ಕುಸಿತ ಕಂಡಿದೆ ಎನ್ನಲಾಗಿದೆ.
ಇಂದು ಸ್ಪಾಟ್ ಚಿನ್ನದ ದರ ಪ್ರತೀ ಔನ್ಸ್‌ಗೆ $4,901 ಕ್ಕೆ ವಹಿವಾಟು ನಡೆಸುತ್ತಿದ್ದರೆ, ಸ್ಪಾಟ್ ಬೆಳ್ಳಿ ಬೆಲೆಗಳು ಶೇ.1% ಕ್ಕಿಂತ ಹೆಚ್ಚು ಇಳಿಕೆ ಕಂಡು ಪ್ರತೀ ಔನ್ಸ್ $72.30 ಕ್ಕೆ ತಲುಪಿದೆ.


Click it and Unblock the Notifications