ಹೊಸ ವರ್ಷದ ಆರಂಭದಲ್ಲೇ ಏರಿಕೆಯನ್ನ ಕಂಡಿದ್ದ ಚಿನ್ನದ ದರ ಇಂದು ಸ್ಥಿರವಾಗಿದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ ಏರಿಕೆಯಿಂದ ನಿರಾಸೆಗೊಂಡಿದ್ದ ಜನರಿಗೆ ಸಿಹಿ ಸುದ್ದಿ ಸಿಕ್ಕಿದೆ. ಬಹುದಿನಗಳಿಂದ ಚಿನ್ನವನ್ನ ಕೊಳ್ಳಲು ಕಾಯುತ್ತಿದ್ದ ಜನರಿಗೆ ಸಂತಸವನ್ನ ತಂದಿದೆ. ನಿನ್ನೆ ಇಳಿಕೆಯಾಗಿದ್ದ ಚಿನ್ನದ ಬೆಲೆ ಇಂದು ಸ್ಥಿರವಾಗಿರುವುದರಿಂದ ಹಬ್ಬದ ಸಮಯದಲ್ಲಿ ಚಿನ್ನವನ್ನ ಖರೀದಿ ಮಾಡಲು ಬಯಸುವವರಿಗೆ ಇದು ಒಳ್ಳೆ ಸಮಯವಾಗಿದೆ.
ಯುಎಸ್ ಡಾಲರ್ ದುರ್ಭಲತೆಯಿಂದ ಇಳಿಕೆಯಾಗಿದ್ದ ಚಿನ್ನದ ದರ ಇಂದು ಸ್ಥಿರವಾಗಿದೆ. ಹಲವು ದಿಗಳಿಂದ ಹಾವುಏಣಿಆಟವನ್ನ ನಡೆಸುತ್ತಿದ್ದ ಚಿನ್ನದ ಬೆಲೆ ಇಂದು ಸ್ಥಿರವಾಗಿದೆ. ಅಲ್ಲದೆ ಆರ್ಥಿಕ ದತ್ತಾಂಶಗಳ ಪ್ರಕಾರ ಈ ವಾರ ಚಿನ್ನದ ದರದಲ್ಲಿ ಸಾಕಷ್ಟು ಏರಿಳಿತಗಳಾಗಬಹುದು ಎನ್ನಲಾಗ್ತಿದೆ. ಅಲ್ಲದೆ ರಿಚ್ಮಂಡ್ ಫೆಡ್ ಅಧ್ಯಕ್ಷ ಬಾರ್ಕಿನ್ ಚಿನ್ನದ ದರವು ನಿರ್ಭಂದಿತವಾಗಿರಲಿದೆ ಎಂದು ಹೇಳಿದ್ದಾರೆ.

ಜನವರಿ 6 ರಂದು, ಬೆಂಗಳೂರಿನಲ್ಲಿ ಚಿನ್ನದ ದರ ಸ್ಥಿರವಾಗಿದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 72,150 ರೂ. ಇದೆ. ಮತ್ತು 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 78,710 ಇದೆ. ಬೆಂಗಳೂರಿನಲ್ಲಿ 18 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 59,030 ಇದೆ.
ಹಾಗೆ 22 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ 7,21,500 ಇದೆ. ಮತ್ತು 24 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ 7,87,100 ಇದೆ. 18 ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ 100 ಇಳಿಕೆಯಾಗಿ 5,90,300 ಇದೆ.
ಬೆಂಗಳೂರಿನಲ್ಲಿ ಬೆಳ್ಳಿ ದರಗಳು
ಇಂದು ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಸ್ಥಿರವಾಗಿದೆ . ಪ್ರಸ್ತುತ, ಬೆಂಗಳೂರಿನಲ್ಲಿ 1 ಗ್ರಾಂ ಚಿನ್ನದ ಬೆಲೆ 91.50 ರೂ. ಇದೆ. ಹಾಗೆ 1 ಕಿಲೋ ಗ್ರಾಂ ಬೆಳ್ಳಿ ಬೆಲೆ 100 ರೂ ಇಳಿಕೆಯಾಗಿ 91,500ರೂ. ಇದೆ. ನಿನ್ನೆ ಇಳಿಕೆಯಾಗಿದ್ದ ಬೆಳ್ಳಿ ಬೆಲೆ ಇಂದು ಸ್ಥಿರವಾಗಿದೆ.
ಭಾರತದ ಕೆಲವು ಮೆಟ್ರೋಪಾಲಿಟನ್ ನಗರಗಳಲ್ಲಿನ ಚಿನ್ನದ ಬೆಲೆಗಳ ವಿವರ:
| ನಗರಗಳು | 24 ಕ್ಯಾರೆಟ್ | 22 ಕ್ಯಾರೆಟ್ |
| ದೆಹಲಿ | 78,860 | 72,300 |
| ಮುಂಬೈ | 78,710 | 72,150 |
| ಚೆನ್ನೈ | 78,710 | 72,150 |
| ಕೋಲ್ಕತ್ತಾ | 78,710 | 72,150 |
ಸ್ಪಾಟ್ ಚಿನ್ನದ ಭವಿಷ್ಯ
ಸ್ಪಾಟ್ ಚಿನ್ನದ ಬೆಲೆ ಏರಿಕೆಯಾಗುವ ನಿರೀಕ್ಷೆ ಇದೆ. ಯುಎಸ್ ಡಾಲರ್ ಏರಿಕೆಯಿಂದಾಗಿ ಇದು ಸ್ಪಾಟ್ ಚಿನ್ನದ ಮೇಲೆ ಹೆಚ್ಚು ಪ್ರಭಾವ ಬೀರಲಿದೆ. ಇನ್ನು ವರದಿ ಪ್ರಕಾರ 0229 GMT.ಯಲ್ಲಿ ಸ್ಪಾಟ್ ಚಿನ್ನದ ಬೆಲೆಯು ಪ್ರತಿ ಔನ್ಸ್‌ಗೆ 0.2%ರಷ್ಟು ಏರಿಕೆಯಾಗಿ 2,643.69 ಡಾಲರ್ ತಲುಪಿದೆ. ಹಾಗೆ ಯುಎಸ್ ಬೆಳ್ಳಿ ಭವಿಷ್ಯವು ಪ್ರತಿ ಔನ್ಸ್‌ಗೆ 0.1% ಏರಿಕೆಯಾಗಿ 2,656.80 ಡಾಲರ್ ತಲುಪಿದೆ. ಇತ್ತ ಸ್ಪಾಟ್ ಬೆಳ್ಳಿ ಪ್ರತಿ ಔನ್ಸ್‌ಗೆ 0.2% ಏರಿಕೆಯಾಗಿ 29.67 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದೆ. ಪ್ಲಾಟಿನಮ್ ಬೆಲೆಯು ಪ್ರತಿ ಔನ್ಸ್‌ಗೆ 0.5%ರಷ್ಟು ಏರಿಕೆಯಾಗಿ 933.60ಡಾಲರ್ ತಲುಪಿದೆ. ಪಲ್ಲಾಡಿಯಂ ಬೆಲೆಯು ಪ್ರತಿ ಔನ್ಸ್‌ಗೆ 0.9%ರಷ್ಟು ಏರಿಕೆಯಾಗಿ 920.09 ಡಾಲರ್ ತಲುಪಿದೆ ಮುಂಬರುವ ವರ್ಷದಲ್ಲಿ ಚಿನ್ನದ ಬೆಲೆಯಲ್ಲಿ ಸಾಕಷ್ಟು ಏರಿಳಿತಗಳು ಉಂಟಾಗಲಿದೆ ಎನ್ನಲಾಗ್ತಿದೆ.
MCX ಗೋಲ್ಡ್ ಔಟ್‌ಲುಕ್
ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX), ಫೆಬ್ರವರಿ 5, 2025 ರ ವಿತರಣೆಯ ಚಿನ್ನದ ಭವಿಷ್ಯ ನೋಡೋದಾದ್ರೆ, 10 ಗ್ರಾಂ ಚಿನ್ನಕ್ಕೆ 0.21%ನಷ್ಟು ಇಳಿಕೆಯಾಗಿ 77,155ರೂ. ಆಗಿದೆ. ಅದೇ ರೀತಿ, ಮಾರ್ಚ್ 5, 2025ರ ಬೆಳ್ಳಿ ಭವಿಷ್ಯವು 0.04%ನಷ್ಟು ಇಳಿಕೆಯಾಗಿ 89,188 ರೂಪಾಯಿ ವಹಿವಾಟು ನಡೆಸುತ್ತಿದೆ. ಜಾಗತಿಕ ಬೇಡಿಕೆ, ಬಡ್ಡಿ ದರಗಳು, ಕರೆನ್ಸಿ ವಿನಿಮಯ ದರಗಳು, ಸರ್ಕಾರಿ ನೀತಿಗಳು ಮತ್ತು ಜಾಗತಿಕ ಘಟನೆಗಳಂತಹ ದೇಶೀಯ ಮತ್ತು ಅಂತರರಾಷ್ಟ್ರೀಯ ಎರಡೂ ಅಸ್ಥಿರಗಳಿಂದ ಚಿನ್ನದ ಬೆಲೆಗಳು ಹೆಚ್ಚು ಪರಿಣಾಮ ಬೀರಬಹುದು.
ರಾಯಿಟರ್ಸ್ ವರದಿ ಪ್ರಕಾರ ಈ ವಾರ ಫೆಡರಲ್ ರಿಸರ್ವ್‌ನ ಬಡ್ಡಿದರದ ನಿಲುವಿನ ಕುರಿತು ಹೆಚ್ಚಿನ ಮಾರ್ಗದರ್ಶಕ್ಕಾಗಿ ಹೂಡಿಕೆದಾರರು ಡಿಸೆಂಬರ್ ನಾನ್ ಫಾರ್ಮ್ ವೇತನದಾರರ ವರದಿ ಹಾಗೆ ಯುಎಸ್ ಆರ್ಥಿಕ ದತ್ತಾಂಶವನ್ನು ನಿರೀಕ್ಷಿಸುತ್ತಿದ್ದಾರೆ. ಈ ವೇಳೆಯೆ ಸೋಮವಾರ ಚಿನ್ನ ಬೆಂಬಲ ಬೆಲೆಗಳು ಏರಿಕೆಯಾಗಿವೆ.
ಇನ್ನು ಕಳೆದ ತಿಂಗಳು, ಯುಎಸ್ ಸೆಂಟ್ರಲ್ ಬ್ಯಾಂಕ್ ಮೂರನೇ ಸತತ ದರ ಕಡಿತದ ವರದಿಯನ್ನ ನೀಡಿತ್ತು ಆದರೆ ಈಗ 2025 ರಲ್ಲಿ ಕೇವಲ ಎರಡು ಕಡಿತಗಳನ್ನು ಯೋಜಿಸಿದೆ. ಹಾಗೆ ಮಾರುಕಟ್ಟೆಗಳು ಈಗ US ಉದ್ಯೋಗಾವಕಾಶಗಳ ಡೇಟಾ, ADP ಉದ್ಯೋಗ ವರದಿ, ಫೆಡ್ ಸಭೆ ಮತ್ತು ಉದ್ಯೋಗದ ವರದಿ, ಮುಂದಿನ ವಾರದ ಎಲ್ಲಾ ಮುಂದಿನ ನಿರ್ದೇಶನಕ್ಕಾಗಿ ಕಾಯುತ್ತಿವೆ.
ಬೌಗೋಳಿಕ ರಾಜಕೀಯ ಅನಿಶ್ಚಿತತರಗಳು ಮತ್ತು ಹಣದುಬ್ಬರದ ಹಿನ್ನೆಲೆ ಚಿನ್ನದ ಬೆಲೆ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ. ಇತ್ತ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಜನವರಿ 20 ರಂದು ಕಚೇರಿಗೆ ಹಿಂತಿರುಗಲಿದ್ದು, ಅವರ ಉದ್ದೇಶಿತ ಸುಂಕಗಳು ಮತ್ತು ರಕ್ಷಣಾ ನೀತಿಗಳು ಹಣದುಬ್ಬರವನ್ನು ಉತ್ತೇಜಿಸುವ ನಿರೀಕ್ಷೆಯಿದೆ.


Click it and Unblock the Notifications