ಚಿನ್ನ ಖರೀದಿಸಬೇಕು, ಚಿನ್ನದ ಮೇಳೆ ಹೂಡಿಕೆ ಮಾಡ್ಬೇಕು ಎಂಬುದು ಹಲವರಿಗೆ ಆಸೆ ಇರುತ್ತದೆ. ಆದ್ರೆ ಜನಸಾಮಾನ್ಯರ ಕನಸಿಗೆ ದಿನ ಹೋದಂತೆ ನಿರಾಸೆಯೇ ಆಗುತ್ತಿದೆ. ಭಾರತದಲ್ಲಿ ಚಿನ್ನದ ಬೆಲೆ ಇತ್ತೀಚೆಗೆ ಏರಿಕೆಯೇ ಆಗುತ್ತಿದೆ ಹೊರತು ಕಮ್ಮಿಯಂತು ಆಗುತ್ತಿಲ್ಲ. ಕೆಲವೊಮ್ಮೆ ಇಳಿಕೆಯಾದರೂ, ಅದರ ನಂತರ ಎರಡು ಪಟ್ಟು ಹೆಚ್ಚಾಗುತ್ತದೆ. ಅದೇ ಪರಿಸ್ಥಿತಿ ಇಂದೂ ಕೂಡಾ ಆಗಿದೆ. ಗುರುವಾರ ಚಿನ್ನದ ಬೆಲೆ ಸ್ವಲ್ಪ ಇಳಿಕೆಯಾಗಿತ್ತು. ಆದ್ರೆ ಇಂದು ಮತ್ತೆ ಏರಿಕೆ ಕಂಡಿದೆ. ಹಾಗಿದ್ರೆ ಇಂದು ಭಾರತದಲ್ಲಿ ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಭಾರತದಲ್ಲಿ 24K ಚಿನ್ನದ ಬೆಲೆ:
ಇಂದು 24K ಚಿನ್ನದ ಬೆಲೆಯೂ ಏರಿಕೆಯಾಗಿದ್ದು, ಇಂದು ಒಂದು ಗ್ರಾಂ ಬೆಲೆ 12,846 ರೂ. ಆಗಿದೆ. ನಿನ್ನೆ 12,775 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹71 ರೂ. ಹೆಚ್ಚಳವಾಗಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ಇಂದು 1,02,768 ರೂ. ಆಗಿದ್ದು, ನಿನ್ನೆ 1,02,200 ಇತ್ತು. ಒಟ್ಟು ₹568 ರೂ. ಜಾಸ್ತಿಯಾಗಿದ. 10 ಗ್ರಾಂ ಚಿನ್ನದ ಬೆಲೆ ಇಂದು ₹1,28,460 ರೂ. ಆಗಿದ್ದು, ನಿನ್ನೆ 1,27,750 ರೂ. ಇತ್ತು. ನಿನ್ನೆಗಿಂತ ಇಂದು ಬೆಲೆಯಲ್ಲಿ ₹710 ರೂ. ಏರಿಕೆ ಕಂಡಿದೆ. ಅದೇ ರೀತಿ 100 ಗ್ರಾಂ ಚಿನ್ನದ ಬೆಲೆ ಇಂದು ₹12,84,600 ರೂ. ಆಗಿದ್ದು, ನಿನ್ನೆ 12,77,500 ರೂ. ಇತ್ತು. ನಿನ್ನೆಗಿಂತ ಇಂದು 7,100 ರೂ. ಏರಿಕೆಯಾಗಿದೆ.
ಭಾರತದಲ್ಲಿ 22K ಚಿನ್ನದ ಬೆಲೆ:
22K ಚಿನ್ನದ 1 ಗ್ರಾಂ ಬೆಲೆ ಇಂದು 11,775 ರೂ. ಆಗಿದ್ದು, ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ 11,710 ರೂ. ಇತ್ತು. ನಿನ್ನೆಗಿಂತ ಇಂದು ₹65 ರೂ. ಹೆಚ್ಚಳವಾಗಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ಇಂದು 94,200 ರೂ. ಆಗಿದ್ದು, ನಿನ್ನೆ 93,680 ರೂಪಾಯಿ ಆಗಿತ್ತು. ನಿನ್ನೆಗಿಂತ ಇಂದು ₹520 ರೂ. ಹೆಚ್ಚಳವಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,17,750 ರೂ ಆಗಿದ್ದು, ನಿನ್ನೆ 1,17,100 ರೂ. ಇತ್ತು. ನಿನ್ನೆಗಿಂತ ಇಂದು ₹650 ರೂ ಹೆಚ್ಚಳ ಕಂಡಿದೆ. 100 ಗ್ರಾಂ ಚಿನ್ನದ ಬೆಲೆ ಇಂದು 11,77,500 ರೂ. ಆಗಿದ್ದು, ನಿನ್ನೆ ₹11,71,000 ರೂ. ಇತ್ತು.
ಭಾರತದಲ್ಲಿ 18K ಚಿನ್ನದ ಬೆಲೆ:
18K ಚಿನ್ನದ 1 ಗ್ರಾಂ ಬೆಲೆ ₹9,634 ರೂ. ಆಗಿದ್ದು, ನಿನ್ನೆ 9,581 ರೂ. ಇತ್ತು. 8 ಗ್ರಾಂ ಚಿನ್ನದ ಬೆಲೆ ಇಂದು ₹77,072 ರೂ. ಆಗಿದ್ದು, ನಿನ್ನೆ 76,648 ರೂ. ಇತ್ತು. ನಿನ್ನೆಗಿಂತ ಇಂದು ₹424 ರೂ. ಹೆಚ್ಚಳವಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 96,340 ರೂ. ಆಗಿದ್ದು, ನಿನ್ನೆ 95,810 ರೂ. ಆಗಿತ್ತು. ನಿನ್ನೆಗಿಂತ ಇಂದು ಒಟ್ಟು ₹530 ರೂ. ಏರಿಕೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ ಇಂದು 9,63,400 ರೂ. ಆಗಿದೆ.
ಭಾರತದ ವಿವಿಧ ನಗರಗಳ ಚಿನ್ನದ ಬೆಲೆ:
ಚೆನ್ನೈ: 24K ರೂ. 12,916, 22K ರೂ. 11,840, 18K ರೂ. 9,875
ಮುಂಬೈ: 24K ರೂ. 12,846, 22K ರೂ. 11,775, 18K ರೂ. 9,634
ದೆಹಲಿ: 24K ರೂ. 12,861, 22K ರೂ. 11,790, 18K ರೂ. 9,649
ಕೋಲ್ಕತ್ತಾ: 24K ರೂ. 12,846, 22K ರೂ. 11,775, 18K ರೂ. 9,634
ಬೆಂಗಳೂರು: 24K ರೂ. 12,846, 22K ರೂ. 11,775, 18K ರೂ. 9,634
ಹೈದರಾಬಾದ್: 24K ರೂ. 12,846, 22K ರೂ. 11,775, 18K ರೂ. 9,634
ಕೇರಳ: 24K ರೂ. 12,846, 22K ರೂ. 11,775, 18K ರೂ. 9,634
ಪುಣೆ: 24K ರೂ. 12,846, 22K ರೂ. 11,775, 18K ರೂ. 9,634
ವಡೋದರಾ: 24K ರೂ. 12,851, 22K ರೂ. 11,780, 18K ರೂ. 9,639
ಅಹಮದಾಬಾದ್: 24K ರೂ. 12,851, 22K ರೂ. 11,780, 18K ರೂ. 9,639
ಬೆಳ್ಳಿ ಬೆಲೆ ಎಷ್ಷಿದೆ?
ಬೆಳ್ಳಿ ಬೆಲೆ ಮಾತ್ರ ಕಳೆದೊಂದು ವಾರದಿಂದ ಏರಿಕೆಯ ಮಟ್ಟದಲ್ಲೇ ಇದೆ. ಇಂದು ಒಂದು ಗ್ರಾಂ ಬೆಳ್ಳಿಯಲ್ಲಿ 3 ರೂ. ಹೆಚ್ಚಳವಾಗಿದ್ದು, ಒಟ್ಟು ಬೆಲೆ 176 ರೂ. ಆಗಿದೆ. ಅದೇ ರೀತಿ 8 ಗ್ರಾಂ ಬೆಳ್ಳಿ ದರ ಇಂದು ₹1,408 ರೂ. ಆಗಿದ್ದು, ನಿನ್ನೆ ₹1,384 ರೂ. ಇತ್ತು. ಅಂದರೆ ನಿನ್ನೆಗಿಂತ ₹24 ರೂ. ಏರಿಕೆಯಾಗಿದೆ. 10 ಗ್ರಾಂ ಬೆಳ್ಳಿ ಬೆಲೆ ₹1,760 ರೂ. ಆಗಿದ್ದು, ₹1,730 ರೂ. ಆಗಿತ್ತು. ನಿನ್ನೆಗಿಂತ ₹30 ರೂ. ವ್ಯತ್ಯಾಸವಾಗಿದೆ. 100 ಗ್ರಾಂ ಬೆಳ್ಳಿ ಬೆಲೆ ₹17,600 ರೂ. ಆಗಿದೆ.
ಸ್ಪಾಟ್ ಗೋಲ್ಡ್ ವಿವರ:
ನವೆಂಬರ್ 28ರ ರಾಯಿಟರ್ಸ್ ವರದಿ ಪ್ರಕಾರ, ಅಮೆರಿಕದ ಫೆಡ್ ದರ ಕಡಿತದ ನಿರೀಕ್ಷೆಯಿಂದಾಗಿ, ಶುಕ್ರವಾರ ಚಿನ್ನದ ಬೆಲೆಗಳು ಏರಿಕೆಯಾಗಿ ತಿಂಗಳಲ್ಲಿ ಸತತ ನಾಲ್ಕನೇ ವಾರವೂ ಏರಿಕೆಯ ಹಾದಿ ಹಿಡಿದಿದೆ.
ಇನ್ನು GMT 0303ರ ಹೊತ್ತಿಗೆ ಸ್ಪಾಟ್ ಚಿನ್ನದ ದರವು ಪ್ರತೀ ಔನ್ಸ್‌ಗೆ 0.8% ಏರಿಕೆಯಾಗಿ, $4,189.61 ಕ್ಕೆ ತಲುಪಿದೆ. ಇದು ನವೆಂಬರ್ 14ರ ನಂತರ ಅತೀ ಹೆಚ್ಚಿನ ಏರಿಕೆ ಮಟ್ಟವಾಗಿದೆ.


Click it and Unblock the Notifications