ಭಾರತದಲ್ಲಿ ಚಿನ್ನದ ಬೆಲೆ ನೋಡಿದ್ರೆ ಖರೀದಿಸೋದೆ ಬೇಡವೆಂಬಂತಾಗಿದೆ. ಜನಸಾಮಾನ್ಯರಂತೂ ಚಿನ್ನದ ಬೆಲೆ ಏರಿಕೆಯಿಂದಾಗಿ, ಹೇಗಪ್ಪಾ ಖರೀದಿಸೋದು ಎಂಬ ಚಿಂತೆಯಲ್ಲಿದ್ದಾರೆ. ದಿನ ಹೋದಂತೆ ಚಿನ್ನದ ಬೆಲೆ ಏರಿಕೆಯಾಗುತ್ತಿದೆಯೇ ಹೊರತು ಕಮ್ಮಿಯಾಗುತ್ತಿಲ್ಲ. ಇಂದು ಕಮ್ಮಿಯಾಗಬಹುದು, ನಾಳೆ ಕಮ್ಮಿಯಾಗಬಹುದು ಎಂಬ ನಿರೀಕ್ಷೆಯಲ್ಲಿದ್ದವರಿಗೆ, ದಿನೇ ದಿನೇ ನಿರಾಸೆಯಾಗುತ್ತಿದೆ. ಇದೀಗ ಇಂದೂ (ನ.26) ಕೂಡಾ ಚಿನ್ನದ ಬೆಲೆ ಭಾರೀ ಏರಿಕೆಯಾಗಿದೆ. ಹಾಗಿದ್ರೆ ಇಂದು ಭಾರತದಲ್ಲಿ ಚಿನ್ನದ ಬೆಲೆ (Gold Rate India) ಎಷ್ಟಿದೆ ಗೊತ್ತಾ? ಇಲ್ಲಿದೆ ಓದಿ.

ಭಾರತದಲ್ಲಿ 24K ಚಿನ್ನದ ಬೆಲೆ:
ಬೇರೆ ಚಿನ್ನಕ್ಕೆ ಹೋಲಿಸಿದ್ರೆ, 24K ಚಿನ್ನ ಶುದ್ಧತೆಗೂ ಪ್ರಸಿದ್ಧಿ, ಬೆಲೆಯೂ ದುಬಾರಿ. ಇದೀಗ ಚಿನ್ನದ ಮಾರುಕಟ್ಟೆಯಲ್ಲಾಗುತ್ತಿರುವ ಬೆಲೆ ಏರಿಕೆಯಿಂದಾಗಿ, 24K ಚಿನ್ನದ ಬೆಲೆಯೂ ಏರಿಕೆಯಾಗಿದ್ದು, ಇಂದು ಒಂದು ಗ್ರಾಂ ಬೆಲೆ 12,791 ರೂ. ಆಗಿದೆ. ನಿನ್ನೆಗಿಂತ ಇಂದು ₹87 ರೂ. ಹೆಚ್ಚಳವಾಗಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ಇಂದು 1,02,328 ರೂ. ಆಗಿದ್ದು, ನಿನ್ನೆ 1,01,632 ಇತ್ತು. ಒಟ್ಟು ₹696 ರೂ. ಏರಿಕೆ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,27,910 ರೂ. ಆಗಿದ್ದು, ನಿನ್ನೆ 1,27,040 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ಚಿನ್ನದ ಬೆಲೆ ₹870 ರೂ. ಏರಿಕೆಯಾಗಿದೆ. ಅದೇ ರೀತಿ 100 ಗ್ರಾಂ ಚಿನ್ನದ ಬೆಲೆ ಇಂದು ₹12,79,100 ರೂ. ಆಗಿದ್ದು, ನಿನ್ನೆ 12,70,400 ರೂ. ಇತ್ತು. ನಿನ್ನೆಗಿಂತಯ ಇಂದು ₹8,700 ರೂ. ವ್ಯತ್ಯಾಸವಾಗಿದೆ.
ಭಾರತದಲ್ಲಿ 22K ಚಿನ್ನದ ಬೆಲೆ:
22K ಚಿನ್ನದ 1 ಗ್ರಾಂ ಬೆಲೆ ಇಂದು 11,725 ರೂ. ಆಗಿದ್ದು, ನಿನ್ನೆ ಒಂದು ಗ್ರಾಂ ಚಿನ್ನದ ಬೆಲೆ 11,645 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹80 ರೂ. ಏರಿಕೆಯಾಗಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ಇಂದು 93,800 ರೂ. ಆಗಿದ್ದು, ನಿನ್ನೆ 93,160 ರೂಪಾಯಿ ಆಗಿತ್ತು. ನಿನ್ನೆಗಿಂತ ಇಂದು ₹640 ರೂ. ಹೆಚ್ಚಳವಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,17,250 ರೂ ಆಗಿದ್ದು, ನಿನ್ನೆ 1,16,450 ರೂ. ಇತ್ತು. ಇಂದು ಒಟ್ಟು ₹800 ರೂ ಹೆಚ್ಚಳ ಕಂಡಿದೆ. 100 ಗ್ರಾಂ ಚಿನ್ನದ ಬೆಲೆ ಇಂದು 11,72,500 ರೂ. ಆಗಿದ್ದು, ನಿನ್ನೆ ₹11,64,500 ರೂ. ಇತ್ತು. ನಿನ್ನೆಯ ಬೆಲೆಗೂ ಇಂದಿಗೂ ಒಟ್ಟು 8,000 ರೂ. ಬದಲಾವಣೆಯಾಗಿದೆ.
ಭಾರತದಲ್ಲಿ 18K ಚಿನ್ನದ ಬೆಲೆ:
ಸಾಮಾನ್ಯವಾಗಿ 18K ಚಿನ್ನ ಕಡಿಮೆ ಬೆಲೆಯಲ್ಲೇ ಇರುತ್ತದೆ. ಆದ್ರೆ ಇಂದು 1 ಗ್ರಾಂ ಬೆಲೆ ₹9,593 ರೂ. ಆಗಿದ್ದು, ನಿನ್ನೆ 9,528 ರೂ. ಇತ್ತು. ನಿನ್ನೆಗಿಂತ ಇಂದು ಒಟ್ಟು ₹65 ರೂ. ಏರಿಕೆಯಾಗಿದೆ. 8 ಗ್ರಾಂ ಚಿನ್ನದ ಬೆಲೆ ಇಂದು ₹76,744 ರೂ. ಆಗಿದ್ದು, ನಿನ್ನೆ 76,224 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹520 ರೂ. ಹೆಚ್ಚಳವಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 95,930 ರೂ. ಆಗಿದ್ದು, ನಿನ್ನೆ 95,280 ರೂ. ಆಗಿತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ಹತ್ತು ಗ್ರಾಂ ಚಿನ್ನದಲ್ಲಿ ₹650 ರೂ. ಏರಿಕೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ ಇಂದು 9,59,300 ರೂ. ಆಗಿದ್ದು, ನಿನ್ನೆ 9,52,800 ರೂ. ಇತ್ತು. ನಿನ್ನೆಗಿಂತ ಇಂದು 6,500 ರೂ. ಹೆಚ್ಚಳವಾಗಿದೆ.
ಭಾರತದ ವಿವಿಧ ನಗರಗಳ ಚಿನ್ನದ ಬೆಲೆ:
ಚೆನ್ನೈ: 24K ರೂ. 12,873, 22K ರೂ. 11,800, 18K ರೂ. 9,845
ಮುಂಬೈ: 24K ರೂ. 12,791, 22K ರೂ. 11,725, 18K ರೂ. 9,593
ದೆಹಲಿ: 24K ರೂ. 12,806, 22K ರೂ. 11,740, 18K ರೂ. 9,608
ಕೋಲ್ಕತ್ತಾ: 24K ರೂ. 12,791, 22K ರೂ. 11,725, 18K ರೂ. 9,593
ಬೆಂಗಳೂರು: 24K ರೂ. 12,791, 22K ರೂ. 11,725, 18K ರೂ. 9,593
ಹೈದರಾಬಾದ್: 24K ರೂ. 12,791, 22K ರೂ. 11,725, 18K ರೂ. 9,593
ಕೇರಳ: 24K ರೂ. 12,791, 22K ರೂ. 11,725, 18K ರೂ. 9,593
ಪುಣೆ: 24K ರೂ. 12,791, 22K ರೂ. 11,725, 18K ರೂ. 9,593
ವಡೋದರಾ: 24K ರೂ. 12,796, 22K ರೂ. 11,730, 18K ರೂ. 9,598
ಅಹಮದಾಬಾದ್: 24K ರೂ. 12,796, 22K ರೂ. 11,730, 18K ರೂ. 9,598
ಬೆಳ್ಳಿ ಬೆಲೆ ಎಷ್ಷಿದೆ?
ಚಿನ್ನದ ಬೆಲೆಯಲ್ಲಿ ಇಂದು ಊಹೆಯೂ ಮಾಡದ ರೀತಿಯಲ್ಲಿ ಏರಿಕೆ ಕಂಡಿದೆ. ಚಿನ್ನದ ಬೆಲೆ ಏರಿಕೆಯಾಗುತ್ತಿದ್ದಂತೆ, ಇತ್ತ ಬೆಳ್ಳಿ ಬೆಲೆಯೂ ಭಾರೀ ಏರಿಕೆ ಕಂಡಿದೆ. ಇಂದು 1 ಗ್ರಾಂ ಬೆಳ್ಳಿ ದರ ₹169 ರೂ. ಆಗಿದ್ದು, ನಿನ್ನೆ ₹167 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹2 ರೂ. ಹೆಚ್ಚಳವಾಗಿದೆ. ಅದೇ ರೀತಿ 8 ಗ್ರಾಂ ಬೆಳ್ಳಿದರ ಇಂದು 1,352 ರೂ. ಆಗಿದ್ದು, ನಿನ್ನೆ ₹1,336 ರೂ. ಇತ್ತು. ನಿನ್ನೆಗಿಂತ ಇಂದು 16 ರೂ. ಹೆಚ್ಚಳವಾಗಿದೆ. ಹಾಗೆಯೇ 10 ಗ್ರಾಂ ಬೆಳ್ಳಿ ದರ ₹1,690, 100 ಗ್ರಾಂ ಬೆಳ್ಳಿ ಬೆಲೆ ₹16,900 ರೂ., 1000 ಗ್ರಾಂ ಬೆಳ್ಳಿ ಬೆಲೆ ₹1,69,000 ರೂ. ಆಗಿದೆ.
ಸ್ಪಾಟ್ ಗೋಲ್ಡ್ ವಿವರ:
ನವೆಂಬರ್ 26ರ ರಾಯಿಟರ್ಸ್ ವರದಿ ಪ್ರಕಾರ, ಯುಎಸ್‌ನ ಹೊಸ ಆರ್ಥಿಕ ದತ್ತಾಂಶ, ಫೆಡ್ ದರ ಕಡಿತದ ನಿರೀಕ್ಷೆ ಹೆಚ್ಚಾದ ಕಾರಣ ಮತ್ತು ಡಾಲರ್ ಮೌಲ್ಯ ಏರಿಕೆಯಾಗಿದ್ದರಿಂದ ಬುಧವಾರ ಚಿನ್ನದ ಬೆಲೆ ಎರಡು ವಾರಗಳ ನಂತರ ಗರಿಷ್ಠ ಮಟ್ಟಕ್ಕೆ ತಲುಪಿತು.
ಇನ್ನು GMT 0241ರ ಹೊತ್ತಿಗೆ ಸ್ಪಾಟ್ ಚಿನ್ನದ ದರವು ಪ್ರತೀ ಔನ್ಸ್‌ಗೆ 0.8% ಏರಿಕೆಯಾಗಿ, $4,161.10 ಕ್ಕೆ ತಲುಪಿದೆ. ಇದು ನವೆಂಬರ್ 14ರ ನಂತರ ಅತೀ ಹೆಚ್ಚಿನ ಏರಿಕೆಯಾಗಿದೆ.
More From GoodReturns

Gold Price Today India: ಯುಗಾದಿ ಬಳಿಕ ಏರಿಕೆ ಹಾದಿ ಹಿಡಿದ ಚಿನ್ನದ ಬೆಲೆ-24K/100gನಲ್ಲಿ 6,500 ರೂ. ಜಿಗಿತ!

Gold Rates & Silver Rates Today Live: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಏರಿಕೆ-ಮಾರುಕಟ್ಟೆಯ ಲೈವ್ ಅಪ್ಡೇಟ್ ತಿಳಿಯಿರಿ

Karnataka Rain: ರಾಜ್ಯದಲ್ಲಿ ಸದ್ಯಕ್ಕೆ ನಿಲ್ಲಲ್ಲ ವರುಣಾರ್ಭಟ; ಎಷ್ಟು ದಿನ ಈ ಮಳೆ ಎಂದು ತಿಳಿಯಿರಿ

Bank Holiday: ನಾಳೆ ಕರ್ನಾಟಕದಲ್ಲಿ ಬ್ಯಾಂಕ್ ತೆರೆದಿರುತ್ತೋ, ಇಲ್ಲವೋ? ಸ್ಪಷ್ಟ ಮಾಹಿತಿ ತಿಳಿಯಿರಿ

Silver Price Today: ಬೆಳ್ಳಿ ದರದಲ್ಲಿ ಇಂದು 5,000 ಕುಸಿತ; ಭಾರತದಲ್ಲಿ ಇಂದಿನ ಬೆಲೆ ತಿಳಿಯಿರಿ

LPG Crisis Bengaluru: ಕೋಳಿ ವ್ಯಾಪಾರಕ್ಕೂ ತಟ್ಟಿದ LPG ಕೊರತೆ ಬಿಸಿ; ಬೆಂಗಳೂರಲ್ಲಿ ಮಾರಾಟ ಭಾರಿ ಕುಸಿತ

Bengaluru: ಬೀದಿ ಬದಿ ವ್ಯಾಪಾರಕ್ಕೆ ಅವಕಾಶವಿಲ್ಲ; ಈ ರಸ್ತೆಯ ವ್ಯಾಪಾರಿಗಳಿಗೆ ದೊಡ್ಡ ಸಂಕಷ್ಟ

Eid-ul-Fitr 2026: ರಂಜಾನ್ ಹಬ್ಬ ಇಂದೋ, ನಾಳೆಯೋ; ಕೇರಳದಲ್ಲಿ ಮಾತ್ರ ಇಂದು ಆಚರಣೆ ಯಾಕೆ?

Oil Price Tension: ಮದ್ಯಪ್ರಾಚ್ಯ ಉದ್ವಿಗ್ನತೆ ನಡುವೆ ತೈಲ ಮಾರುಕಟ್ಟೆ ತಲ್ಲಣ, ಭಾರತಕ್ಕೆ ಸವಾಲು; ಎಚ್ಚರಿಕೆ ಸೂಚನೆ

Petrol Price Hike: ಪ್ರೀಮಿಯಂ ಪೆಟ್ರೋಲ್ ದರ ಏರಿಕೆ-ಲೀಟರ್ಗೆ 2 ಹೆಚ್ಚಳ, ಸಾಮಾನ್ಯ ಇಂಧನ ದರ ಸ್ಥಿರ

Good Friday 2026: ಈ ವರ್ಷ ಗುಡ್ ಫ್ರೈಡೇ ಯಾವಾಗ? ಈಸ್ಟರ್ ದಿನಾಂಕ ಮತ್ತು ಸಂಪೂರ್ಣ ಮಾಹಿತಿ ತಿಳಿಯಿರಿ



Click it and Unblock the Notifications