Gold Rate India: ಚಿನ್ನದ ಬೆಲೆ ದಿಢೀರ್‌ 8,700 ರೂ. ಏರಿಕೆ! ಗೋಲ್ಡ್‌ ಪ್ರಿಯರಿಗೆ ಶಾಕ್‌

ಚಿನ್ನದ ಮೇಲಿನ ಹೂಡಿಕೆ (Gold Investment) ಸುರಕ್ಷಿತ ಮತ್ತು ದೀರ್ಘಾವಧಿಯಲ್ಲಿ ಹೆಚ್ಚಿನ ಆದಾಯ ನೀಡುತ್ತೆ ಎಂದು ಹೇಳಲಾಗುತ್ತದೆ. ಆದ್ರೆ ಇತ್ತೀಚೆಗೆ ಬೆಲೆ ಏರಿಕೆಯಿಂದಾಗಿ ಚಿನ್ನದ ಹೂಡಿಕೆದಾರರು, ಖರೀದಿದಾರರ ಸಂಖ್ಯೆ ಕೂಡಾ ಇಳಿಕೆಯಾಗಿದೆ. ಆದ್ರೂ ಕೆಲವೊಮ್ಮೆ ಇಳಿಕೆಯಾದಾಗ ಚಿನ್ನದ ಬೇಡಿಕೆಗಳು ಹೆಚ್ಚಾಗುತ್ತದೆ. ಆದ್ರೆ ಇಂದು (ಡಿ.10) ಭಾರತದಲ್ಲಿ ಚಿನ್ನದ ಬೆಲೆ ಭಾರೀ ಏರಿಕೆಯಾಗಿದೆ. ಹಾಗಿದ್ರೆ 24K, 22K, 18K ಚಿನ್ನದ 1 ಗ್ರಾಂ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಓದಿ.

 ಚಿನ್ನದ ಬೆಲೆ ದಿಢೀರ್‌ 8,700 ರೂ. ಏರಿಕೆ! ಗೋಲ್ಡ್‌ ಪ್ರಿಯರಿಗೆ ಶಾಕ್

ಭಾರತದಲ್ಲಿ 24K ಚಿನ್ನದ ಬೆಲೆ ಎಷ್ಟಿದೆ?
24K ಚಿನ್ನದ ಒಂದು ಗ್ರಾಂ ಬೆಲೆ ಇಂದು 13,031 ರೂ. ಆಗಿದೆ. ನಿನ್ನೆಗಿಂತ ಇಂದು ಒಟ್ಟು ₹87 ರೂ. ಹೆಚ್ಚಳವಾಗಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ಇಂದು 1,04,248 ರೂ. ಆಗಿದ್ದು, ನಿನ್ನೆ 1,03,552 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹696 ರೂ. ಏರಿಕೆಯಾಗಿದೆ. ಹಾಗೆಯೇ 10 ಗ್ರಾಂ ಚಿನ್ನದ ಬೆಲೆ ಇಂದು ₹1,30,310 ರೂ. ಆಗಿದ್ದು, ನಿನ್ನೆ 1,29,440 ರೂ. ಇತ್ತು. ನಿನ್ನೆಗಿಂತ ಇಂದು ₹870 ರೂ. ಬದಲಾವಣೆಯಾಗಿದೆ. ಇನ್ನು 100 ಗ್ರಾಂ ಚಿನ್ನದ ಬೆಲೆ ಇಂದು ₹13,03,100 ರೂ. ಆಗಿದ್ದು, ನಿನ್ನೆ 12,94,400 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 8,700 ರೂ. ಆಗಿದೆ.

ಭಾರತದಲ್ಲಿ 22K ಚಿನ್ನದ ಬೆಲೆ ಎಷ್ಟಿದೆ?
22K ಚಿನ್ನದ 1 ಗ್ರಾಂ ಬೆಲೆಯಲ್ಲೂ ಇಂದು ಏರಿಕೆಯಾಗಿದೆ. ಅಂದರೆ ಇಂದು ಪ್ರತೀ ಗ್ರಾಂ ಬೆಲೆ 11,945 ರೂ. ಆಗಿದ್ದು, ನಿನ್ನೆ 11,865 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹80 ರೂ. ಹೆಚ್ಚಳವಾಗಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 95,560 ರೂ. ಆಗಿದ್ದು, ನಿನ್ನೆ 94,920 ರೂ. ಇತ್ತು. ನಿನ್ನೆಗಿಂತ ಇಂದು ₹640 ರೂ. ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,19,450 ರೂ ಆಗಿದ್ದು, ನಿನ್ನೆ 1,18,650 ರೂ. ಇತ್ತು. ಅದೇ ರೀತಿ 100 ಗ್ರಾಂ ಚಿನ್ನದ ಬೆಲೆ ಇಂದು 11,94,500 ರೂ. ಆಗಿದ್ದು, ನಿನ್ನೆ ₹11,86,500 ರೂ. ಇತ್ತು. .

ಭಾರತದಲ್ಲಿ 18K ಚಿನ್ನದ ಬೆಲೆ ಎಷ್ಟಿದೆ?
18K ಚಿನ್ನದ 1 ಗ್ರಾಂ ಬೆಲೆ ₹9,773 ರೂ. ಆಗಿದ್ದು, ನಿನ್ನೆ 9,708 ರೂ. ಇತ್ತು. ನಿನ್ನೆಗಿಂತ ಇಂದು ₹65 ರೂ. ಏರಿಕೆ ಕಂಡಿದೆ. 8 ಗ್ರಾಂ ಚಿನ್ನದ ಬೆಲೆ ಇಂದು ₹78,184 ರೂ. ಆಗಿದ್ದು, ನಿನ್ನೆ 77,664 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ಚಿನ್ನದ ಬೆಲೆ ₹520 ರೂ. ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 97,730 ರೂ. ಆಗಿದ್ದು, ನಿನ್ನೆ 97,080 ರೂ. ಇತ್ತು. ಒಟ್ಟು ₹650 ರೂ. ಹೆಚ್ಚಳವಾಗಿದೆ. ಇನ್ನು 100 ಗ್ರಾಂ ಚಿನ್ನದ ಬೆಲೆ 9,77,300 ರೂ. ಆಗಿದ್ದು, ನಿನ್ನೆ 9,70,800 ರೂ. ಇತ್ತು.

ಭಾರತದ ವಿವಿಧ ನಗರಗಳ ಚಿನ್ನದ ಬೆಲೆ ಎಷ್ಟಿದೆ?
ಚೆನ್ನೈ: 24K ರೂ. 13,124, 22K ರೂ. 12,030, 18K ರೂ. 10,030
ಮುಂಬೈ: 24K ರೂ. 13,031, 22K ರೂ. 11,945, 18K ರೂ. 9,773
ದೆಹಲಿ: 24K ರೂ. 12,958, 22K ರೂ. 11,879, 18K ರೂ. 9,722
ಕೋಲ್ಕತ್ತಾ: 24K ರೂ. 13,031, 22K ರೂ. 11,945, 18K ರೂ. 9,773
ಬೆಂಗಳೂರು: 24K ರೂ. 13,031, 22K ರೂ. 11,945, 18K ರೂ. 9,773
ಹೈದರಾಬಾದ್: 24K ರೂ. 13,031, 22K ರೂ. 11,945, 18K ರೂ. 9,773
ಕೇರಳ: 24K ರೂ. 13,031, 22K ರೂ. 11,945, 18K ರೂ. 9,773
ಪುಣೆ: 24K ರೂ. 13,031, 22K ರೂ. 11,945, 18K ರೂ. 9,773
ವಡೋದರಾ: 24K ರೂ. 13,948, 22K ರೂ. 11,869, 18K ರೂ. 9,712
ಅಹಮದಾಬಾದ್: 24K ರೂ. 13,948, 22K ರೂ. 11,869, 18K ರೂ. 9,712

ಬೆಳ್ಳಿ ಬೆಲೆ ಎಷ್ಷಿದೆ?
ಅತ್ತ ಚಿನ್ನದ ಬೆಲೆ ಏರಿಕೆಯಾಗುತ್ತಿದ್ದಂತೆ, ಇತ್ತ ಬೆಳ್ಳಿ ಬೆಲೆ ಕೂಡಾ ಏರಿಕೆಯಾಗಿದೆ. ದಾಖಲೆ ಮಟ್ಟದಲ್ಲಿ ಬೆಳ್ಳಿ ಬೆಲೆ ಏರಿಕೆ ಕಂಡಿದೆ. ಇಂದು 1 ಗ್ರಾಂ ಬೆಳ್ಳಿ ಬೆಲೆ ₹199 ರೂ. ಆಗಿದೆ. ನಿನ್ನೆ ₹190 ರೂ. ಇತ್ತು. ನಿನ್ನೆಗಿಂತ ಇಂದು ಪ್ರತೀ ಗ್ರಾಂ ಬೆಳ್ಳಿಯಲ್ಲಿ ₹9 ರೂ. ಹೆಚ್ಚಳವಾಗಿದೆ. ಇನ್ನು 8 ಗ್ರಾಂ ಬೆಳ್ಳಿ ದರ ₹1,592, 10 ಗ್ರಾಂ ಬೆಳ್ಳಿ ಬೆಲೆ ₹1,990 ರೂ., 100 ಗ್ರಾಂ ಬೆಳ್ಳಿ ದರ ₹19,900 ರೂ., 1000 ಗ್ರಾಂ ಬೆಳ್ಳಿ ಬೆಲೆ ₹1,99,000 ರೂ. ಆಗಿದೆ.

ಸ್ಪಾಟ್‌ ಗೋಲ್ಡ್‌ ವಿವರ:
ಡಿಸೆಂಬರ್‌ 10ರ ರಾಯಿಟರ್ಸ್‌ ವರದಿ ಪ್ರಕಾರ, ಅಮೆರಿಕ ಫೆಡ್‌ ದರ ಕಡಿತದ ನಿರೀಕ್ಷೆಯೂ ಹೆಚ್ಚಾಗಿದ್ದು, ಅಲ್ಲದೇ ಫೆಡರಲ್‌ ರಿಸರ್ವ್‌ ಅಧ್ಯಕ್ಷ ಜೆರೋಮ್‌ ಪೋವೆಲ್‌ ಅವರ ಪ್ರೆಸ್‌ಮೀಟ್‌ ನೋಡಲು ಹೂಡಿಕೆದಾರರು ಕಾತುರದಲ್ಲಿದ್ದು, ಬುಧವಾರ ಚಿನ್ನದ ಬೆಲೆ ಏರಿಕೆ ಕಂಡಿದೆ. ಅಲ್ಲದೇ ಬೆಳ್ಳಿ ದರವೂ ಏರಿಕೆ ಕಂಡಿದೆ.

0309 GMT ವೇಳೆ ಸ್ಪಾಟ್‌ ಚಿನ್ನದ ದರವು 0.2% ಏರಿಕೆಯಾಗಿ ಪ್ರತೀ ಔನ್ಸ್‌ಗೆ $4,215.61 ಕ್ಕೆ ತಲುಪಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+