ಕಳೆದ ವಾರವಿಡೀ ಭಾರೀ ಕುಸಿತದಲ್ಲಿದ್ದ ಚಿನ್ನದ ದರ (Gold Rate), ಇದೀಗ ಫೆಬ್ರವರಿ ಕೊನೆಯ ವಾರದ ಆರಂಭದಲ್ಲೇ ಭಾರೀ ಏರಿಕೆ ಕಂಡಿದೆ. ಅಂತೂ ಚಿನ್ನದ ಬೆಲೆ ಇಳಿಕೆ ಬಗ್ಗೆ ಭಾರೀ ನಿರೀಕ್ಷೆಯಲ್ಲಿದ್ದವರಿಗೆ ಕೊನೆಗೂ ನಿರಾಸೆ ಮೂಡಿದೆ. ಭಾರತದಲ್ಲಿ ಚಿನ್ನದ ದರ (Gold Rate India) ಇಂದು (ಫೆ.23) ಭಾರೀ ಏರಿಕೆಯಾಗಿದೆ. ಹಾಗಿದ್ರೆ 24K, 22K, 18K ಚಿನ್ನದ ಬೆಲೆ ಎಷ್ಟಿದೆ ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಭಾರತದಲ್ಲಿ 24K ಚಿನ್ನದ ಬೆಲೆ:
24K ಚಿನ್ನದ 1 ಗ್ರಾಂ ಬೆಲೆ 16,135 ರೂ. ಆಗಿದ್ದು, ನಿನ್ನೆ 15,928 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ₹207 ರೂ. ಏರಿಕೆಯಾಗಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 1,29,080 ರೂ. ಆಗಿದ್ದು, ನಿನ್ನೆ 1,27,424 ರೂ. ಇತ್ತು. ನಿನ್ನೆಗಿಂತ ಇಂದು 1,656 ರೂ. ಹೆಚ್ಚಳವಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,61,350 ರೂ. ಆಗಿದ್ದು, ನಿನ್ನೆ 1,59,280 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 2,070 ರೂ. ಏರಿಕೆ ಕಂಡಿದೆ. ಇನ್ನು 100 ಗ್ರಾಂ ಚಿನ್ನದ ಬೆಲೆ ಇಂದು ₹16,13,500 ರೂ. ಆಗಿದ್ದು, ನಿನ್ನೆ 15,92,800 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 20,700 ರೂ. ಹೆಚ್ಚಳವಾಗಿದೆ.
ಭಾರತದಲ್ಲಿ 22K ಚಿನ್ನದ ಬೆಲೆ:
22K ಚಿನ್ನದ 1 ಗ್ರಾಂ ಬೆಲೆ ಇಂದು 14,790 ರೂ. ಆಗಿದ್ದು, ನಿನ್ನೆ 14,600 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ದಿಢೀರ್ ₹190 ರೂ. ಏರಿಕೆಯಾಗಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 1,18,320 ರೂ. ಆಗಿದ್ದು, ನಿನ್ನೆ 1,16,800 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹1,520 ರೂ. ಏರಿಕೆ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,47,900 ರೂ. ಆಗಿದ್ದು, ನಿನ್ನೆ 1,46,000 ರೂ. ಇತ್ತು. ಒಂದೇ ದಿನ ದಿಢೀರ್ 1,900 ರೂ. ಏರಿಕೆ ಕಂಡಿದೆ. 100 ಗ್ರಾಂ ಚಿನ್ನದ ದರ ಇಂದು 14,79,000 ರೂ. ಆಗಿದ್ದು, ನಿನ್ನೆ 14,60,000 ರೂ. ಇತ್ತು. ಒಂದೇ ದಿನದಲ್ಲಿ ₹19,000 ರೂ. ಏರಿಕೆಯಾಗಿದೆ.
ಭಾರತದಲ್ಲಿ 18K ಚಿನ್ನದ ಬೆಲೆ:
18K ಚಿನ್ನದ 1 ಗ್ರಾಂ ಬೆಲೆ ಇಂದು 12,101 ರೂ. ಆಗಿದ್ದು, ನಿನ್ನೆ 11,946 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ₹155 ರೂ. ಏರಿಕೆಯಾಗಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 96,808 ರೂ. ಆಗಿದ್ದು, ನಿನ್ನೆ 95,568 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 1,240 ರೂ. ಏರಿಕೆ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 1,21,010 ರೂ. ಆಗಿದ್ದು, ನಿನ್ನೆ 1,19,460 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 1,550 ರೂ. ಹೆಚ್ಚಳ ಕಂಡಿದೆ. 100 ಗ್ರಾಂ ಚಿನ್ನದ ದರ ಇಂದು ₹12,10,100 ರೂ. ಆಗಿದ್ದು, ನಿನ್ನೆ ₹11,94,600 ರೂ. ಇತ್ತು. ದಿಢೀರ್ 15,500 ರೂ. ಏರಿಕೆಯಾಗಿದೆ.
ಭಾರತದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ?
ಚೆನ್ನೈ: 24K ರೂ. 16,211, 22K ರೂ. 14,860, 18K ರೂ. 12,720
ಮುಂಬೈ: 24K ರೂ. 16,135, 22K ರೂ. 14,790, 18K ರೂ. 12,101
ದೆಹಲಿ: 24K ರೂ. 16,150, 22K ರೂ. 14,805, 18K ರೂ. 12,116
ಕೋಲ್ಕತ್ತಾ: 24K ರೂ. 16,135, 22K ರೂ. 14,790, 18K ರೂ. 12,101
ಬೆಂಗಳೂರು: 24K ರೂ. 16,135, 22K ರೂ. 14,790, 18K ರೂ. 12,101
ಹೈದರಾಬಾದ್: 24K ರೂ. 16,135, 22K ರೂ. 14,790, 18K ರೂ. 12,101
ಕೇರಳ: 24K ರೂ. 16,135, 22K ರೂ. 14,790, 18K ರೂ. 12,101
ಪುಣೆ: 24K ರೂ. 16,135, 22K ರೂ. 14,790, 18K ರೂ. 12,101
ವಡೋದರಾ: 24K ರೂ. 16,140, 22K ರೂ. 14,795, 18K ರೂ. 12,106
ಅಹಮದಾಬಾದ್: 24K ರೂ. 16,140, 22K ರೂ. 14,795, 18K ರೂ. 12,106
ಬೆಳ್ಳಿ ಬೆಲೆ:
ಅತ್ತ ಚಿನ್ನದ ದರ ಏರಿಕೆಯಾಗುತ್ತಿದ್ದಂತೆ, ಇತ್ತ ಬೆಳ್ಳಿ ದರವೂ ಭಾರೀ ಏರಿಕೆಯಾಗಿದೆ. ಒಂದೇ ದಿನದಲ್ಲಿ ಪ್ರತೀ ಗ್ರಾಂ ಬೆಳ್ಳಿಯಲ್ಲಿ 25 ರೂ. ಹೆಚ್ಚಳ ಕಂಡಿದ್ದು, ಒಟ್ಟು ಬೆಲೆ 300 ರೂ. ತಲುಪಿದೆ. ಅದೇ ರೀತಿ 8 ಗ್ರಾಂ ಬೆಳ್ಳಿ ಬೆಲೆ ₹2,400 ರೂ. ಆಗಿದ್ದು, ನಿನ್ನೆ ₹2,200 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ದಿಢೀರ್ ₹200 ರೂ. ಹೆಚ್ಚಳವಾಗಿದೆ. ಅದೇ ರೀತಿ 10 ಗ್ರಾಂ ಬೆಳ್ಳಿ ದರ ₹3,000 ರೂ., 100 ಗ್ರಾಂ ಬೆಳ್ಳಿ ಬೆಲೆ ₹30,000 ರೂ., 1000 ಗ್ರಾಂ ಬೆಳ್ಳಿ ದರ ₹3,00,000 ರೂ. ಆಗಿದೆ.
ಸ್ಪಾಟ್ ಗೋಲ್ಡ್ ವಿವರ:
ಫೆಬ್ರವರಿ 23ರ ವರದಿ ಪ್ರಕಾರ, ಡೊನಾಲ್ಡ್ ಟ್ರಂಪ್ ಅವರ ಸುಂಕದ ವಿರುದ್ಧ ಸುಪ್ರೀಂ ಕೋರ್ಟ್‌ನ ತೀರ್ಪು, ಡಾಲರ್ ಮೇಲಿನ ಒತ್ತಡಕ್ಕೆ ಕಾರಣವಾಯಿತು. ಅದೇ ಕಾರಣದಿಂದ ಸೋಮವಾರ ಚಿನ್ನದ ದರ ಏರಿಕೆಯಾಯ್ತು.
GMT 0419ರ ವೇಳೆಗೆ ಸ್ಪಾಟ್ ಚಿನ್ನದ ದರವು ಪ್ರತೀ ಔನ್ಸ್‌ಗೆ 1.1% ಏರಿಕೆಯಾಗಿ, $5,161.64 ಕ್ಕೆ ತಲುಪಿದೆ.


Click it and Unblock the Notifications