ಒಂದು ದಿನ ಇಳಿಕೆ ಕಂಡರೆ ಸಾಕು, ಮರುದಿನ ಚಿನ್ನದ ಬೆಲೆ (Gold Rate) ಭಾರೀ ಪ್ರಮಾಣದಲ್ಲಿ ಏರಿಕೆ ಕಾಣುತ್ತೆ. ಅದೇ ಪರಿಸ್ಥಿತಿ ಇಂದು ಮುಂದುವರೆದಿದೆ. ಮಂಗಳವಾರವಷ್ಟೇ ಚಿನ್ನದ ಬೆಲೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಇಳಿಕೆ ಕಂಡಿತ್ತು. ಆದ್ರೆ ಇಂದು ಮತ್ತೆ ಏರಿಕೆಯ ಹಾದಿ ಹಿಡಿದಿದೆ. ಹಾಗಿದ್ರೆ ಇಂದು ಭಾರತದಲ್ಲಿ ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಓದಿ.

ಭಾರತದಲ್ಲಿ 24K ಚಿನ್ನದ ಬೆಲೆ:
24K ಚಿನ್ನದ ಒಂದು ಗ್ರಾಂ ಬೆಲೆ ಇಂದು ಸ್ವಲ್ಪ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಅಂದರೆ ಇಂದು ಒಂದು ಗ್ರಾಂ ಚಿನ್ನದ ಬೆಲೆ 13,058 ರೂ. ಆಗಿದ್ದು, ನಿನ್ನೆ 12,987 ರೂ. ಇತ್ತು. ನಿನ್ನೆಗಿಂತ ಇಂದು ಚಿನ್ನದ ಪ್ರತೀ ಗ್ರಾಂನಲ್ಲಿ ₹71 ರೂ. ಏರಿಕೆ ಕಂಡಿದೆ. ಹಾಗೆಯೇ 8 ಗ್ರಾಂ ಚಿನ್ನದ ಬೆಲೆ ಇಂದು 1,04,464 ರೂ. ಆಗಿದ್ದು, ನಿನ್ನೆ 1,03,896 ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹568 ರೂ. ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,30,580 ರೂ. ಆಗಿದ್ದು, ನಿನ್ನೆ 1,29,870 ರೂ. ಇತ್ತು. ನಿನ್ನೆಗಿಂತ ಇಂದು ₹710 ರೂ. ಏರಿಕೆ ಕಂಡಿದೆ. ಅದೇ ರೀತಿ 100 ಗ್ರಾಂ ಚಿನ್ನದ ಬೆಲೆ ಇಂದು ₹13,05,800 ರೂ. ಆಗಿದ್ದು, ನಿನ್ನೆ 12,98,700 ರೂ. ಇತ್ತು.
ಭಾರತದಲ್ಲಿ 22K ಚಿನ್ನದ ಬೆಲೆ:
22K ಚಿನ್ನದ 1 ಗ್ರಾಂ ಬೆಲೆ 11,970 ರೂ. ಆಗಿದ್ದು, ನಿನ್ನೆ 11,905 ರೂ. ಇತ್ತು. ನಿನ್ನೆಗಿಂತ ಇಂದು ಚಿನ್ನದ ಬೆಲೆಯಲ್ಲಿ ಒಟ್ಟು ₹65 ರೂ. ವ್ಯತ್ಯಾಸವಾಗಿದೆ. ಅದೇ ರೀತಿ 8 ಗ್ರಾಂ ಚಿನ್ನದ ಬೆಲೆ ಇಂದು 95,760 ರೂ. ಆಗಿದೆ. ನಿನ್ನೆಗಿಂತ ಇಂದು ₹520 ರೂ. ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,19,700 ರೂ ಆಗಿದ್ದು, ನಿನ್ನೆ 1,19,050 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹650 ರೂ ಹೆಚ್ಚಳವಾಗಿದೆ. ಇನ್ನು 100 ಗ್ರಾಂ ಚಿನ್ನದ ಬೆಲೆ ಇಂದು 11,97,000 ರೂ. ಆಗಿದ್ದು, ನಿನ್ನೆ ₹11,90,500 ರೂ. ಇತ್ತು. ಒಟ್ಟು 6,500 ರೂ ಏರಿಕೆಯಾಗಿದೆ.
ಭಾರತದಲ್ಲಿ 18K ಚಿನ್ನದ ಬೆಲೆ:
18K ಚಿನ್ನದ 1 ಗ್ರಾಂ ಬೆಲೆ ₹9,794 ರೂ. ಆಗಿದ್ದು, ನಿನ್ನೆ 9,741 ರೂ. ಇತ್ತು. ಇಂದು ಒಟ್ಟು ₹53 ರೂ. ಏರಿಕೆಯಾಗಿದೆ. 8 ಗ್ರಾಂ ಚಿನ್ನದ ಬೆಲೆ ಇಂದು ₹78,352 ರೂ. ಆಗಿದ್ದು, ನಿನ್ನೆ 77,928 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ಚಿನ್ನದ ಬೆಲೆ ₹424 ರೂ. ಏರಿಕೆ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 97,940 ರೂ. ಆಗಿದ್ದು, ನಿನ್ನೆ 97,410 ರೂ. ಇತ್ತು. ನಿನ್ನೆಗಿಂತ ಇಂದು ಒಟ್ಟು ₹530 ರೂ. ಏರಿಕೆ ಕಂಡಿದೆ.
ಭಾರತದ ವಿವಿಧ ನಗರಗಳ ಚಿನ್ನದ ಬೆಲೆ:
ಚೆನ್ನೈ: 24K ರೂ. 12,157, 22K ರೂ. 11,060, 18K ರೂ. 9,055
ಮುಂಬೈ: 24K ರೂ. 12,058, 22K ರೂ. 11,970, 18K ರೂ. 9,794
ದೆಹಲಿ: 24K ರೂ. 12,073, 22K ರೂ. 11,985, 18K ರೂ. 9,809
ಕೋಲ್ಕತ್ತಾ: 24K ರೂ. 12,058, 22K ರೂ. 11,970, 18K ರೂ. 9,794
ಬೆಂಗಳೂರು: 24K ರೂ. 12,058, 22K ರೂ. 11,970, 18K ರೂ. 9,794
ಹೈದರಾಬಾದ್: 24K ರೂ. 12,058, 22K ರೂ. 11,970, 18K ರೂ. 9,794
ಕೇರಳ: 24K ರೂ. 12,058, 22K ರೂ. 11,970, 18K ರೂ. 9,794
ಪುಣೆ: 24K ರೂ. 12,058, 22K ರೂ. 11,970, 18K ರೂ. 9,794
ವಡೋದರಾ: 24K ರೂ. 12,063, 22K ರೂ. 11,975, 18K ರೂ. 9,799
ಅಹಮದಾಬಾದ್: 24K ರೂ. 12,063, 22K ರೂ. 11,975, 18K ರೂ. 9,799
ಬೆಳ್ಳಿ ಬೆಲೆ:
ಚಿನ್ನದ ಬೆಲೆ ಏರಿಕೆಯಾಗುತ್ತಿದ್ದಂತೆ, ಅತ್ತ ಬೆಳ್ಳಿ ಬೆಲೆಯೂ ಏರಿಕೆ ಕಂಡಿದೆ. ಅದರರಲ್ಲೂ ಕಳೆದೊಂದು ತಿಂಗಳಿಂದ ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆಯಾಗುತ್ತಿದೆ. 1 ಗ್ರಾಂ ಬೆಳ್ಳಿ ದರ ₹191 ರೂ. ಆಗಿದ್ದು, ನಿನ್ನೆ ₹188 ರೂ. ಇತ್ತು. ನಿನ್ನೆಗಿಂತ ಇಂದು ಪ್ರತೀ ಗ್ರಾಂನಲ್ಲಿ ₹3 ರೂ. ಹೆಚ್ಚಳವಾಗಿದೆ. ಇನ್ನು 8 ಗ್ರಾಂ ಬೆಳ್ಳಿದರ ₹1,528 ರೂ., 10 ಗ್ರಾಂ ಬೆಳ್ಳಿ ದರ ₹1,910 ರೂ., 100 ಬೆಳ್ಳಿ ದರ ₹19,100 ರೂ., 1000 ಗ್ರಾಂ ಬೆಳ್ಳಿ ಬೆಲೆ ₹1,91,000 ರೂ. ಆಗಿದೆ.
ಸ್ಪಾಟ್ ಗೋಲ್ಡ್ ವಿವರ:
ಡಿಸೆಂಬರ್ 03ರ ರಾಯಿಟರ್ಸ್ ವರದಿ ಪ್ರಕಾರ, ಹೂಡಿಕೆದಾರರು ಫೆಡ್ ದರ ಕಡಿತದ ಬಗ್ಗೆ ನಿರೀಕ್ಷೆಯಲ್ಲಿದ್ದಾರೆ, ಅಲ್ಲದೇ ಈ ವಾರ ಅಮೆರಿಕದ ಆರ್ಥಿಕ ವರದಿಗಾಗಿ ಕಾಯುತ್ತಿದ್ದಾರೆ. ಇದೇ ಕಾರಣದಿಂದ ಬಂಗಾರದ ಬೆಲೆ ಸ್ವಲ್ಪ ಮಟ್ಟಿಗೆ ಏರಿಕೆಯಾಗಿದೆ. ಆದತೆ ಬೆಳ್ಳಿ ಬೆಲೆ ದಾಖಲೆಯಲ್ಲಿ ಏರಿಕೆ ಕಂಡಿದೆ.
ಹಿಂದಿನ ವಹಿವಾಟಿನಲ್ಲಿ ಸುಮಾರು 1% ಕುಸಿತ ಕಂಡ ನಂತರ, 0358 GMT ವೇಳೆಗೆ ಸ್ಪಾಟ್ ಚಿನ್ನದ ದರವು ಪ್ರತೀ ಔನ್ಸ್‌ಗೆ 0.4% ಏರಿಕೆಯಾಗಿ $4,222.19 ಕ್ಕೆ ರೀಚ್ ಆಗಿದೆ.


Click it and Unblock the Notifications