Gold-Silver Rate Today: ಹೊಸ ವರ್ಷದ ಮೊದಲ ದಿನವೇ ಚಿನ್ನದ ಬೆಲೆ ಏರಿಕೆ, ಬೆಳ್ಳಿ ಬೆಲೆ ಇಳಿಕೆ! ಎಷ್ಟಿದೆ ಗೊತ್ತಾ?

ಕಳೆದ ಮೂರು ದಿನ ಏರಿಕೆಯ ಹಾದಿಯಲ್ಲಿದ್ದ ಚಿನ್ನದ ಬೆಲೆ, ಹೊಸ ವರ್ಷದ ಮೊದಲ ದಿನವೇ ದಿಢೀರ್‌ ಏರಿಕೆ ಕಂಡಿದೆ. ಹೊಸ ವರ್ಷದಲ್ಲಾದರೂ ಭಾರತದಲ್ಲಿ ಚಿನ್ನದ ಬೆಲೆ ಇಳಿಕೆಯಾಗಬಹುದು ಎಂದು ನಿರೀಕ್ಷೆಯಲ್ಲಿದ್ದವರಿಗೆ, ಮತ್ತೆ ನಿರಾಸೆಯಾಗಿದೆ. ಇಂದು ಮತ್ತೆ ಚಿನ್ನದ ಬೆಲೆ ಏರಿಕೆ (Gold Price Hike) ಕಂಡಿದ್ದು, ಪ್ರತೀ ಗ್ರಾಂನಲ್ಲಿ ಎಷ್ಟು ಏರಿಕೆಯಾಗಿದೆ? ಒಟ್ಟು ಚಿನ್ನದ ಬೆಲೆ ಇಂದು (ಜನವರಿ 1) ಎಷ್ಟಿದೆ ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಹೊಸ ವರ್ಷದ ಮೊದಲ ದಿನವೇ ಚಿನ್ನದ ಬೆಲೆ ಏರಿಕೆ, ಬೆಳ್ಳಿ ಬೆಲೆ ಇಳಿಕೆ!

ಭಾರತದಲ್ಲಿ 24K ಚಿನ್ನದ ಬೆಲೆ ಎಷ್ಟಿದೆ?
24K ಚಿನ್ನದ 1 ಗ್ರಾಂ ಬೆಲೆ ಇಂದು 13,506 ರೂ. ಆಗಿದ್ದು, ನಿನ್ನೆ 13,489 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹17 ರೂ. ಏರಿಕೆ ಕಂಡಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 1,08,048 ರೂ. ಆಗಿದ್ದು, ನಿನ್ನೆ 1,07,912 ರೂ. ಇತ್ತು. ನಿನ್ನೆಗಿಂತ ಇಂದು ₹136 ರೂ. ಹೆಚ್ಚಳವಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,35,060 ರೂ. ಆಗಿದ್ದು, ನಿನ್ನೆ 1,34,890 ರೂ. ಇತ್ತು. ಒಟ್ಟು ₹170 ರೂ. ಬದಲಾವಣೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ ಇಂದು ₹13,50,600 ರೂ. ಆಗಿದ್ದು, ನಿನ್ನೆ 13,48,900 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 1,700 ರೂ. ಹೆಚ್ಚಳವಾಗಿದೆ.

ಭಾರತದಲ್ಲಿ 22K ಚಿನ್ನದ ಬೆಲೆ ಎಷ್ಟಿದೆ?
22K ಚಿನ್ನದ 1 ಗ್ರಾಂ ಬೆಲೆ ಇಂದು 12,380 ರೂ. ಆಗಿದ್ದು, ನಿನ್ನೆ 12,365 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹15 ರೂ. ಏರಿಕೆ ಕಂಡಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 99,040ರೂ. ಆಗಿದ್ದು, ನಿನ್ನೆ 98,920 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹120 ರೂ. ವ್ಯತ್ಯಾಸವಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,23,800 ರೂ. ಆಗಿದ್ದು, ನಿನ್ನೆ 1,23,650 ರೂ. ಇತ್ತು. ನಿನ್ನೆಗಿಂತ ಇಂದು ₹150 ರೂ. ಹೆಚ್ಚಳ ಕಂಡಿದೆ. ಅದೇ ರೀತಿ 100 ಗ್ರಾಂ ಚಿನ್ನದ ದರ ಇಂದು 12,38,000 ರೂ. ಆಗಿದ್ದು, ನಿನ್ನೆ 12,36,500 ರೂ. ಇತ್ತು. ಕೇವಲ 1,500 ರೂ. ಹೆಚ್ಚಳವಾಗಿದೆ.

ಭಾರತದಲ್ಲಿ 18K ಚಿನ್ನದ ಬೆಲೆ ಎಷ್ಟಿದೆ?
18K ಚಿನ್ನದ ಬೆಲೆ 1 ಗ್ರಾಂ ಬೆಲೆ ಇಂದು 10,129 ರೂ. ಆಗಿದ್ದು, ನಿನ್ನೆ 10,117 ರೂ. ಇತ್ತು. ನಿನ್ನೆಗಿಂತ ಇಂದು ಪ್ರತೀ ಗ್ರಾಂ ಚಿನ್ನದಲ್ಲಿ ₹12 ರೂ. ಏರಿಕೆಯಾಗಿದೆ. 8 ಗ್ರಾಂ ಚಿನ್ನದ ಬೆಲೆ ಇಂದು ₹81,032 ರೂ. ಆಗಿದ್ದು, ನಿನ್ನೆ 80,936 ರೂ. ಇತ್ತು. ನಿನ್ನೆಗಿಂತ ಇಂದು ಒಟ್ಟು ₹96 ರೂ. ಹೆಚ್ಚಳ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 1,01,290 ರೂ. ಆಗಿದ್ದು, ನಿನ್ನೆ 1,01,170 ರೂ. ಇತ್ತು. ನಿನ್ನೆಗಿಂತ ಇಂದು ₹120 ರೂ. ಹೆಚ್ಚಳವಾಗಿದೆ. ಅದೇ ರೀತಿ 100 ಗ್ರಾಂ ಚಿನ್ನದ ಬೆಲೆ ಇಂದು 10,12,900 ರೂ. ಆಗಿದ್ದು, ನಿನ್ನೆ 10,11,700 ರೂ. ಇತ್ತು. ಒಟ್ಟು 1,200 ರೂ. ಹೆಚ್ಚಳವಾಗಿದೆ

ಭಾರತದ ವಿವಿಧ ನಗರಗಳ ಚಿನ್ನದ ಬೆಲೆ:
ಚೆನ್ನೈ: 24K ರೂ. 13,614, 22K ರೂ. 12,440, 18K ರೂ. 10,375
ಮುಂಬೈ: 24K ರೂ. 13,506, 22K ರೂ. 12,380, 18K ರೂ. 10,129
ದೆಹಲಿ: 24K ರೂ. 13,521, 22K ರೂ. 12,395, 18K ರೂ. 10,144
ಕೋಲ್ಕತ್ತಾ: 24K ರೂ. 13,506, 22K ರೂ. 12,380, 18K ರೂ. 10,129
ಬೆಂಗಳೂರು: 24K ರೂ. 13,506, 22K ರೂ. 12,380, 18K ರೂ. 10,129
ಹೈದರಾಬಾದ್: 24K ರೂ. 13,506, 22K ರೂ. 12,380, 18K ರೂ. 10,129
ಕೇರಳ: 24K ರೂ. 13,506, 22K ರೂ. 12,380, 18K ರೂ. 10,129
ಪುಣೆ: 24K ರೂ. 13,506, 22K ರೂ. 12,380, 18K ರೂ. 10,129
ವಡೋದರಾ: 24K ರೂ. 13,511, 22K ರೂ. 12,385, 18K ರೂ. 10,134
ಅಹಮದಾಬಾದ್: 24K ರೂ. 13,511, 22K ರೂ. 12,385, 18K ರೂ. 10,134

ಬೆಳ್ಳಿ ಬೆಲೆ:
ಅತ್ತ ಚಿನ್ನದ ಬೆಲೆ ಹೆಚ್ಚಳವಾದ್ರೆ, ಇತ್ತ ಬೆಳ್ಳಿ ಬೆಲೆ ಇಳಿಕೆ ಕಂಡಿದೆ. ಇಂದು ಪ್ರತೀ ಗ್ರಾಂ ಬೆಳ್ಳಿ ದರ ₹238 ರೂ. ಆಗಿದ್ದು, ನಿನ್ನೆ ₹239 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹1 ರೂ. ಏರಿಕೆ ಕಂಡಿದೆ. 8 ಗ್ರಾಂ ಬೆಳ್ಳಿ ದರ ₹1,904 ರೂ. ಆಗಿದ್ದು, ನಿನ್ನೆ ₹1,912 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹8 ರೂ. ಕುಸಿತವಾಗಿದೆ. ಅದೇ ರೀತಿ 10 ಗ್ರಾಂ ಬೆಳ್ಳಿ ದರ ₹2,380, 100 ಗ್ರಾಂ ಬೆಳ್ಳಿ ಬೆಲೆ ₹23,800 ರೂ., 1000 ಗ್ರಾಂ ಬೆಳ್ಳಿ ದರ ₹2,38,000 ರೂ. ಹೆಚ್ಚಳ ಕಂಡಿದೆ.

ಸ್ಪಾಟ್‌ ಗೋಲ್ಡ್‌ ವಿವರ:
ಸ್ಪಾಟ್‌ ಚಿನ್ನದ ಬೆಲೆ ಪ್ರತೀ ಔನ್ಸ್‌ಗೆ $4,312.39 ಆಗಿತ್ತು. ಹೊಸ ವರ್ಷದ ರಜೆಯಿಂದಾಗಿ ಜಾಗತಿಕ ಮಾರುಕಟ್ಟೆಗಳು ಮುಚ್ಚಿರುವುದರಿಂದ ಚಿನ್ನವು ಏರಿಕೆಯಾಗುವ ನಿರೀಕ್ಷೆಯಯಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+